nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿಕ್ಕಮಗಳೂರು: ಆಟವಾಡುತ್ತಿದ್ದಾಗ ಸೀರೆ ಜೋಕಾಲಿ ಕೊರಳಿಗೆ ಬಿಗಿದು 10 ವರ್ಷದ ಬಾಲಕಿ ದುರ್ಮರಣ

    April 14, 2026

    ರಾಜ್ಯ ಒಕ್ಕಲಿಗರ ಸಂಘವು ಸಮುದಾಯಕ್ಕೆ ಶಕ್ತಿ ತುಂಬಲಿ: ನಿಶ್ಚಲಾನಂದನಾಥ ಸ್ವಾಮೀಜಿ

    April 14, 2026

    ಜೆಜೆಎಂ ಯೋಜನೆಯಿಂದಲೇ ನೀರಿನ ಸಮಸ್ಯೆ ಉಲ್ಬಣ: ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್

    April 14, 2026
    Facebook Twitter Instagram
    ಟ್ರೆಂಡಿಂಗ್
    • ಚಿಕ್ಕಮಗಳೂರು: ಆಟವಾಡುತ್ತಿದ್ದಾಗ ಸೀರೆ ಜೋಕಾಲಿ ಕೊರಳಿಗೆ ಬಿಗಿದು 10 ವರ್ಷದ ಬಾಲಕಿ ದುರ್ಮರಣ
    • ರಾಜ್ಯ ಒಕ್ಕಲಿಗರ ಸಂಘವು ಸಮುದಾಯಕ್ಕೆ ಶಕ್ತಿ ತುಂಬಲಿ: ನಿಶ್ಚಲಾನಂದನಾಥ ಸ್ವಾಮೀಜಿ
    • ಜೆಜೆಎಂ ಯೋಜನೆಯಿಂದಲೇ ನೀರಿನ ಸಮಸ್ಯೆ ಉಲ್ಬಣ: ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್
    • ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆ: ಬಡ ರೋಗಿಗಳ ಪರದಾಟ
    • “ನಾನ್ ನಾಳೆ ಇರ್ತೀನೋ ಇಲ್ವೋ ಗೊತ್ತಿಲ್ಲ”: ಬಾಯ್ ಫ್ರೆಂಡ್ ಸಾವಿನ ಬಗ್ಗೆ ಬಿಗ್ ಬಾಸ್ ಸೋನು ಗೌಡ ಕಣ್ಣೀರು!
    • ಸಚಿವ ಸ್ಥಾನಕ್ಕೆ ಪಟ್ಟು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ 25ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು
    • ಪುರುಷರಿಗೂ ‘ಶಕ್ತಿ’ ಟಿಕೆಟ್ ನೀಡಿ ಹಣ ಲೂಟಿ; ಐವರು ಕಂಡಕ್ಟರ್‌ ಗಳ ಅಮಾನತು
    • ಗುಬ್ಬಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಮರೋಪಾದಿ ಕ್ರಮ: ಶಾಸಕ ಎಸ್.ಆರ್.ಶ್ರೀನಿವಾಸ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಾಂಪ್ರದಾಯಿಕ ಕಲೆಗಳು ಸಮಕಾಲೀನ ವಿಚಾರಗಳಿಗೆ ಸ್ಪಂದಿಸಲಿ: ಡಾ.ಲಕ್ಷ್ಮಣದಾಸ್
    ತುಮಕೂರು February 9, 2025

    ಸಾಂಪ್ರದಾಯಿಕ ಕಲೆಗಳು ಸಮಕಾಲೀನ ವಿಚಾರಗಳಿಗೆ ಸ್ಪಂದಿಸಲಿ: ಡಾ.ಲಕ್ಷ್ಮಣದಾಸ್

    By adminFebruary 9, 2025No Comments2 Mins Read
    yaksha divige

    ತುಮಕೂರು: ಸಾಂಪ್ರದಾಯಿಕ ಕಲೆಗಳು ಸಮಕಾಲೀನ ವಿಚಾರಗಳಿಗೆ ಸ್ಪಂದಿಸಲಿ. ಅದು ಅವುಗಳ ಸಾಮಾಜಿಕ ಹೊಣೆಗಾರಿಕೆ. ಆಗ ಅವು ಮೌಲ್ಯಗಳ ಪ್ರಸಾರದೊಂದಿಗೆ ಸಾಮಾಜಿಕ ಅಭಿವೃದ್ಧಿಗೂ ಕೊಡುಗೆ ನೀಡಿದಂತಾಗುತ್ತದೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹರಿಕಥಾ ವಿದ್ವಾಂಸ ಡಾ. ಲಕ್ಷ್ಮಣದಾಸ್ ಹೇಳಿದರು.

    ಯಕ್ಷದೀವಿಗೆ ಸಂಸ್ಥೆಯು ಶನಿವಾರ ನಗರದ ಕನ್ನಡ ಭವನದಲ್ಲಿ ಪ್ರಸ್ತುತಪಡಿಸಿದ ವಿನೂತನ ಯಕ್ಷಗಾನ ಪ್ರಸಂಗ ‘ಚಂದ್ರಮಂಡಲಚರಿತೆ’ಯ ಪ್ರಥಮ ಪ್ರಯೋಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.


    Provided by
    Provided by

    ಭೂಮಿಯ ಸಂಪನ್ಮೂಲಗಳನ್ನು ನಾವು ಮಾತ್ರ ಬಳಸಿಕೊಂಡರೆ ಸಾಲದು. ಮುಂದಿನ ತಲೆಮಾರಿಗೆ ಸಂಪನ್ಮೂಲಗಳು ಉಳಿಯಬೇಕು. ಸುಸ್ಥಿರತೆಯನ್ನು ಸಾಧಿಸಬೇಕಾದರೆ ಪ್ರಗತಿಯ ಜೊತೆಜೊತೆಗೆ ಸಮಕಾಲೀನ ಚಿಂತನೆಗಳೂ ಮೇಳೈಸಬೇಕು ಎಂದರು.

    ಯಕ್ಷದೀವಿಗೆ ಸಂಸ್ಥೆಯು ಹೊಸದಾಗಿ ಸಂಯೋಜಿಸಿ ರಂಗಕ್ಕೆ ತಂದಿರುವ ‘ಚಂದ್ರಮಂಡಲಚರಿತೆ’ ಯಕ್ಷಗಾನವು ಸುಸ್ಥಿರ ಅಭಿವೃದ್ಧಿಯ ಅವಶ್ಯಕತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದೆ. ವಿಶಿಷ್ಟ, ವೈಚಾರಿಕ ಅಂಶಗಳು ಇದರ ಕಥಾಹಂದರದಲ್ಲಿವೆ. ‘ನಾಳೆಗೆ ಉಳಿಯಲಿ ನೆಲ, ಜಲ’ ಎಂಬ ಇದರ ಆಶಯವೇ ವಿನೂತನವಾಗಿದೆ ಎಂದರು.

    ಯಕ್ಷಗಾನ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾಗಿತ್ತು. ಅದನ್ನು ಬಯಲುಸೀಮೆಯಲ್ಲಿ ಪರಿಚಯಿಸುತ್ತಿರುವ ಯಕ್ಷದೀವಿಗೆ ತಂಡದ ಪ್ರಯತ್ನ ಪ್ರಶಂಸಾರ್ಹ ಎಂದರು.

    ಕೈಗಾರಿಕೋದ್ಯಮಿ ಡಾ. ಹೆಚ್. ಜಿ. ಚಂದ್ರಶೇಖರ್ ಮಾತನಾಡಿ, ಸಮಾಜದಲ್ಲಿ ಮೌಲ್ಯಪ್ರತಿಪಾದನೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಯಕ್ಷಗಾನ ಅಂತಹ ಕೆಲಸವನ್ನು ಶತಮಾನಗಳಿಂದ ಮಾಡಿಕೊಂಡು ಬರುತ್ತಿದೆ. ಈ ಕಲೆಯ ಮೂಲಕ ಸಮಕಾಲೀನ ಅಗತ್ಯದ ವಿಚಾರವನ್ನು ಸಮಾಜದಲ್ಲಿ ಪಸರಿಸಲು ಸಾಧ್ಯವಾಗಿರುವುದು ಅಭಿನಂದನೀಯ ಎಂದರು.

    ‘ಚಂದ್ರಮಂಡಲಚರಿತೆ’ಯನ್ನು ರಚಿಸಿದ ಹಿರಿಯ ಯಕ್ಷಗಾನ ಕಲಾವಿದ, ಸಾಹಿತಿ ಗಣರಾಜ ಕುಂಬ್ಳೆಯವರನ್ನು ಸನ್ಮಾನಿಸಲಾಯಿತು. ಯಕ್ಷದೀವಿಗೆ ಅಧ್ಯಕ್ಷೆ ಆರತಿ ಪಟ್ರಮೆಯವರ ನಿರ್ದೇಶನದ ಯಕ್ಷಗಾನ ಪ್ರದರ್ಶನವನ್ನು ಹ್ಯುಂಡೈ ಮೋಟಾರ್ ಇಂಡಿಯಾ ಫೌಂಡೇಶನ್‌ ನ ‘ಆರ್ಟ್ ಫಾರ್ ಹೋಪ್ 2025’ ಯೋಜನೆಯಡಿಯಲ್ಲಿ ಏರ್ಪಡಿಸಲಾಗಿತ್ತು.

    ತುಮಕೂರು ವಿಶ್ವವಿದ್ಯಾನಿಲಯದ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ. ಶೆಟ್ಟಿ, ಸಿಂಡಿಕೇಟ್ ಸದಸ್ಯ ಹಾಗೂ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ. ಜಿ. ಪರಶುರಾಮ ಯಕ್ಷಗಾನಕ್ಕೆ ಪ್ರತಿಕ್ರಿಯೆ ನೀಡಿದರು. ದಕ್ಷಿಣ ಕನ್ನಡ ಮಿತ್ರವೃಂದ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಮರನಾಥ ಶೆಟ್ಟ ಕೆಂಜೂರು ಮನೆ, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಪ್ರಿಯಾ ಪ್ರದೀಪ್ ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ‘ಸರ್ಕಾರದ ಖಜಾನೆ ಖಾಲಿ, ಸಿಬ್ಬಂದಿಗೆ ಸಂಬಳವಿಲ್ಲ’: ಕಾಂಗ್ರೆಸ್ ವಿರುದ್ಧ ವಿ.ಸೋಮಣ್ಣ ವಾಗ್ದಾಳಿ

    April 13, 2026

    ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಪರಮೇಶ್ವರ್ ಗೆ ನೇರ ಪ್ರಶ್ನೆ: ಕೆಆರ್‌ ಎಸ್ ಪಕ್ಷದ ವಿರುದ್ಧ ಕಾಂಗ್ರೆಸ್ ಮುಖಂಡರಿಂದ ಕಿಡಿ

    April 13, 2026

    ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಸಲ್ಲಿಸಿ

    April 12, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಚಿಕ್ಕಮಗಳೂರು: ಆಟವಾಡುತ್ತಿದ್ದಾಗ ಸೀರೆ ಜೋಕಾಲಿ ಕೊರಳಿಗೆ ಬಿಗಿದು 10 ವರ್ಷದ ಬಾಲಕಿ ದುರ್ಮರಣ

    April 14, 2026

    ಚಿಕ್ಕಮಗಳೂರು: ಜಿಲ್ಲೆಯ ಹೆಬ್ಬಳ್ಳಿ ಗ್ರಾಮದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಸೀರೆಯ ಜೋಕಾಲಿ ಆಕಸ್ಮಿಕವಾಗಿ ಕೊರಳಿಗೆ ಬಿಗಿದು 10 ವರ್ಷದ ಬಾಲಕಿ ಉಸಿರುಗಟ್ಟಿ…

    ರಾಜ್ಯ ಒಕ್ಕಲಿಗರ ಸಂಘವು ಸಮುದಾಯಕ್ಕೆ ಶಕ್ತಿ ತುಂಬಲಿ: ನಿಶ್ಚಲಾನಂದನಾಥ ಸ್ವಾಮೀಜಿ

    April 14, 2026

    ಜೆಜೆಎಂ ಯೋಜನೆಯಿಂದಲೇ ನೀರಿನ ಸಮಸ್ಯೆ ಉಲ್ಬಣ: ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್

    April 14, 2026

    ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆ: ಬಡ ರೋಗಿಗಳ ಪರದಾಟ

    April 14, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.