ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪ್ರಯತ್ನಗಳನನು ನಡೆಸುತ್ತಿದ್ದರೆ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟದಲ್ಲಿ ಕನ್ನ ಬೀಳುವ ವಿದ್ಯಮಾನವೊಂದು ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿದೆ.
ಇಲ್ಲಿನ ವೈನ್ ಶಾಪ್, ಬಾರ್ ಗಳಲ್ಲಿ ಮದ್ಯದ ಖರೀದಿಯ ಬಿಲ್ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಬಕಾರಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದಾಗ ಈ ಸಂಗತಿ ತಿಳಿದು ಬಂದಿಲ್ಲ, ಚೆಕ್ ಮಾಡುವುದಾಗಿ ಆರಿಕೆ ಉತ್ತರ ನೀಡುತ್ತಾರೆ.
ತುಮಕೂರು ಪಟ್ಟಣದ ಅಂಗಡಿ ಹೆಸರು ಶ್ರೀನಿವಾಸ ವೈನ್ಸ್ Licence no EXE/ML TMK/CLl 2/47 ಸನ್ನದುದಾರರ ಹೆಸರು ಡಿ ಎಸ್ ಕುಮಾರ್ ಬಿನ್ ದಶರಥಯ್ಯ ಎಂಬುವ ಹೆಸರಿನಲ್ಲಿರುವ ವೈನ್ಸ್ ನಲ್ಲಿ ನಿಗದಿತ ಬೆಲೆಗಿಂತ ಹೆಚ್ಚು ಹಣ ಪಡೆಯುತ್ತಿರುವ ವಿಡಿಯೋ ಸಮೇತ ಅಬಕಾರಿ DC ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ತುಮಕೂರು ಜಿಲ್ಲೆಯ ಅಬಕಾರಿ ಅಧಿಕಾರಿಗಳು ಈ ದಂಧೆಯಲ್ಲಿ ಭಾಗಿಯಾಗಿ ಗ್ರಾಹಕರಿಂದ ಹೆಚ್ಚು ಹಣವನ್ನು ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ಹಲವು ಸಾಕ್ಷಿ ದಾಖಲೆಗಳು ಇವೆ ಮುಂದಿನಗಳಲ್ಲಿ ಉನ್ನತಮಟ್ಟದಲ್ಲಿ ಸಂವಿಧಾನ ಬದ್ಧ ಕಾನೂನು ಹೋರಾಟ ಮಾಡುವುದಾಗಿ ಜೆಟ್ಟಿ ಅಗ್ರಹಾರ ನಾಗರಾಜು ತಿಳಿಸಿದ್ದಾರೆ.
ಯಾವುದೇ ಅಂಗಡಿಯಲ್ಲಿ ಯಾವುದೇ ಪದಾರ್ಥ ಕೊಂಡರೂ ಬಿಲ್ ಕೊಡಬೇಕು ಎಂಬ ನಿಯಮವಿದೆ. ಅದರಂತೆ ಕೆಲ ಅಂಗಡಿ ಮಾಲೀಕರು ಬಿಲ್ ಕೊಟ್ಟು ಸರ್ಕಾರಕ್ಕೆ ಆದಾಯ ತರುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಆದಾಯ ತಂದುಕೊಡುವ ಅಬಕಾರಿ ಇಲಾಖೆ ತನ್ನ ವ್ಯಾಪ್ತಿಯ ವೈನ್ಸ್ ಬಾರ್‌ಗಳಲ್ಲಿ ಬಿಲ್ ಕೊಡದೇ ಮದ್ಯ ಮಾರಾಟ ಮಾಡುತ್ತಿದ್ದರೂ, ವೌನ ವಹಿಸಿದ್ದು, ಅಬಕಾರಿ ಡಿಸಿ ಏಕೆ ವೌನ ವಹಿಸಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ಪ್ರಶ್ನೆ ಎದ್ದಿದೆ. ತುಮಕೂರು ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರಿದ್ದರು ಇಂಥ ವಂಚನೆ ನಡೆಯುತ್ತಿರುವುದು ಅನೇಕರಿಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ತುಮಕೂರು ಜಿಲ್ಲಾ ವ್ಯಾಪ್ತಿಯ ಯಾವುದೇ ಮದ್ಯದ ಅಂಗಡಿಗಳು ಯಾವ ಬಾರ್ ಗಳಲ್ಲಿಯೂ ಬಿಲ್ ಕೊಡುತ್ತಿಲ್ಲ. ಗ್ರಾಹಕರು ಬಿಲ್ ಕೇಳಿದರೆ ದೌರ್ಜನ್ಯದಿಂದ ಬಾರ್ ಮಾಲೀಕರು ಕ್ಯಾಶಿಯರ್ ಗಳು ವರ್ತಿಸುತ್ತಾರೆ ನೇರವಾಗಿ ಬಿಲ್ ಕೊಡುವುದಿಲ್ಲ ಎಂದು ದಬ್ಬಾಳಿಕೆ ಮಾಡುತ್ತಾರೆ , ಈ ವಿಚಾರ ಸ್ಥಳೀಯ ಅಬಕಾರಿ ಇನ್ಸೆಪೆಕ್ಟರ್‌ಗೆ ಗೊತ್ತಿದ್ದು, ಮೌನ ವಹಿಸಿದ್ದಾರೆ. ಇನ್ನು ಅಬಕಾರಿ ಡಿಸಿ ಕೂಡ ವಿಷಯವೇ ಗೊತ್ತಿಲ್ಲದಂತೆ ಇರುವುದು ಯಾಕೆ ಎಂದು ಜನ ಚರ್ಚಿಸುತ್ತಿದ್ದಾರೆ.
ಮದ್ಯಪ್ರಿಯರು ಮದ್ಯಕೊಂಡ ಮೇಲೆ ಅಂಗಡಿ ಹೆಸರು ಇರುವ ಜಿಎಸ್ಟಿ ಬಿಲ್ ಕೊಡಬೇಕು, ಅಲ್ಲದೇ ಯಾವ ಮದ್ಯಕ್ಕೆ ಎಷ್ಟು ದರವೆಂದು ಬಿಲ್‌ನಲ್ಲಿ ನಮೂದಿಸಬೇಕು. ವೈನ್ಸ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶವಿರುವುದು ಅಲ್ಲದೆ ಎಂ ಆರ್ ಪಿ ದರಕ್ಕೆ ನೀಡಬೇಕು ಆದರೆ ಎಲ್ಲಾದಕ್ಕೂ ಇಲ್ಲಿ ಅಬಕಾರಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿರುವುದು ತುಮಕೂರು ಜಿಲ್ಲೆಯಾದ್ಯಂತ ಕಾಣುತ್ತದೆ ಇದಕ್ಕೆ ಕಾರಣ ವೈನ್ ಶಾಪ್ ನವರು ನೀಡುತ್ತಿರುವ ಕಮಿಷನ್, ಅಬಕಾರಿ ಅಧಿಕಾರಿಗಳು ಕಾಲಕಾಲಕ್ಕೆ ತಕ್ಕಂತೆ ಇದನ್ನು ಪರಿಶೀಲಿಸಬೇಕು. ಆದರೆ ಅಬಕಾರಿ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನಹರಿಸಿಲ್ಲ. ಇದು ಸಾರ್ವಜನಿಕರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಶಾಸಕರುಗಳು ಹಾಗೂ ಇಬ್ಬರು ಸಚಿವರುಗಳ ಹೆಸರಿನಲ್ಲೂ ಅಬಕಾರಿ ಅಧಿಕಾರಿಗಳು ಕಮಿಷನ್ ವಸೂಲಿ ಮಾಡುತ್ತಿದ್ದಾರೆ ಎಂಬವ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ, ಸಚಿವರುಗಳಾದ ಡಾಕ್ಟರ್ ಜಿ ಪರಮೇಶ್ವರ್ ಕೆಎನ್ ರಾಜಣ್ಣ ರವರು ಕಡಿವಾಣ ಹಾಕುವವರೇ ಅಬಕಾರಿ ಉಪ ಆಯುಕ್ತರ ಮೇಲೆ ಕ್ರಮ ಕೈಗೊಳ್ಳುವರೇ.. ಎಂಬ ಪ್ರಶ್ನೆ ಕೂಡ ಅನೇಕರಲ್ಲಿ ಮೂಡಿದೆ.
ಮದ್ಯಪ್ರಿಯರಿಯರಿಗೆ ಬಾರ್ ವೈನ್ಸ್ ಮಾಲೀಕರು ಮಹಾ ಮೋಸ ಮಾಡಿ ವಸೂಲಿಗಿಳಿದಿದ್ದು, ಸಾಕಷ್ಟು ಹಣ ಗಳಿಸುತ್ತಿದ್ದು, ಬಿಲ್ ಕೊಡದೇ ಸರ್ಕಾರಕ್ಕೆ ತೆರಿಗೆ ಕಟ್ಟದೇ ಮೋಸ ಮಾಡುತ್ತಿದ್ದಾರೆ. ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲ ಬಾರ್ ಗಳಲ್ಲಿ ಇದೇ ಪರಿಸ್ಥಿತಿ ಇದ್ದು, ಎಂಆರ್ ಪಿ ದರದ ಮೇಲೆ ಶೇ.30ರಷ್ಟು ಒಂದು ಬಾಟಲ್‌ಗೆ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಿ ಮದ್ಯಪ್ರಿಯರಿಗೆ ಮಹಾ ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಹೆಚ್ಚಿನ ದರಕ್ಕೆ ಮದ್ಯಮಾರಾಟದ ಹಿಂದೆ ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೂಡ ಇದ್ದು, ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಬಿಲ್ ಕೇಳಿದ್ರೆ ಮದ್ಯನೆ ಕೊಡಲ್ಲ ಎಂಬ ಆರೋಪ ಕೂಡ ಇದೆ.
ಅದೂ ಅಲ್ಲದೇ ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಲು ಅಬಕಾರಿ ಡಿಸಿ ಮನಸ್ಸು ಮಾಡುತ್ತಿಲ್ಲ. ಇದು ಅಧಿಕಾರಿಗಳ ಜಾಣ ಕುರುಡುತನಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಇಂತಹ ಅಕ್ರಮಕ್ಕೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಟೈಗರ್ ನಾಗ್ ಆಗ್ರಹಿಸಿದ್ದಾರೆ.
ನಾನಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಯೋಜನೆಗಳಿಗೆ ಹಣ ಜೋಡಿಸಲು ಒದ್ದಾಡುತ್ತಿದ್ದರೇ, ಇತ್ತ ಅಬಕಾರಿ ಇಲಾಖೆ ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯಕ್ಕೆ ಕೊಕ್ಕೆ ಹಾಕಿದ್ದಾರೆ. ಅಲ್ಲದೇ ಕುಡುಕರ ಜೇಬಿಗೆ ಕತ್ತರಿ ಹಾಕುತ್ತಿರುವ ಬಾರ್ ಮಾಲೀಕರಿಂದ ಅಬಕಾರಿ ಇಲಾಖೆಗೆ ಕಮಿಷನ್ ಹೋಗ್ತಿದ್ಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಹೆಚ್ಚುವರಿ ಹಣ ವಸೂಲಿ:
ಸಿಎಲ್ 2 ಬಾರ್ ಗಳಲ್ಲಿ ಡೇ ಅಂಡ್ ನೈಟ್ ಎಂ.ಆರ್.ಪಿ ದರಕ್ಕಿಂತ 30ರಿಂದ 40 ರೂಪಾಯಿ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿದ್ದಾರೆ. ಸಿಎಲ್ 2 ಬಾರ್‌ಗಳಲ್ಲಿ ಎಂ.ಆರ್.ಪಿ. ಬೆಲೆಗೆ ಮದ್ಯ ಮಾರಾಟ ಮಾಡಬೇಕು ಎಂಬ ಕಾನೂನೂ ಇದೆ. ಆದ್ರೆ ಅದಕ್ಕೆ ಯಾರೂ ಕೂಡ ಕ್ಯಾರೆ ಅಂತಿಲ್ಲ. ಯಾವೊಂದು ನಿಯಮವನ್ನು ಬಾರ್ ಮಾಲೀಕರು ಪಾಲಿಸುತ್ತಿಲ್ಲ. ಅಬಕಾರಿ ಅಧಿಕಾರಿಗಳಿಗೆ ಬಾರ್ ವೈನ್ಸ್ ಮಾಲೀಕರು ಕಮಿಷನ್ ಕೊಟ್ಟು ಎಲ್ಲ ಅಡ್ಜೆಸ್ಮೆಂಟ್ ಮಾಡಿಕೊಂಡು ದರ್ಬಾರ್ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ಬಾರ್ ಗಳಲ್ಲಿ ಕೌಂಟರ್ ನಲ್ಲಿ ಕುಡಿಯೋಕೂ ಅವಕಾಶ ಕೊಡ್ತಾರೆ. ಯಾವುದೇ ಬಿಲ್ ಕೊಡಲ್ಲ, ದರಪಟ್ಟಿ, ಸ್ವಚ್ಛತೆ ಅಂತೂ ಇಲ್ವೇ ಇಲ್ಲ. ಗ್ರಾಮೀಣ ಪ್ರದೇಶಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ ಎಂಬ ಆರೋಪವೂ ಇದೆ. ಇತ್ತ ಬಾರ್ ಮಾಲೀಕರ ಜೊತೆ ಸೇರಿ ಅಧಿಕಾರಿಗಳು ಸಿಕ್ಕಿದ್ದೇ ಚಾನ್ಸ್ ಅಂತಾ ಸಿಕ್ಕಾಪಟ್ಟೆ ಲೂಟಿ ಮಾಡುತ್ತಿದ್ದಾರೆ. ಇನ್ನು ಮನಸ್ಸಿಗೆ ಬಂದಂತೆ ಮದ್ಯ ಮಾರುತ್ತಿದ್ರೂ ಹೇಳೋರು ಕೇಳೋರು ಯಾರು ಇಲ್ಲ ಈ ಹಿಂದೆಯಿಂದ ಉಪ ಆಯುಕ್ತರು ಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಗ್ರಾಹಕರಿಂದ ಹೆಚ್ಚು ಹಣ ಪಡೆಯುತ್ತಿರುವ ವಿಡಿಯೋ ಸಮೇತ ದೂರು ಕೊಟ್ಟರು ಯಾವುದೇ ಲೈಸೆನ್ಸ್ ರದ್ದು ಮಾಡಿಲ್ಲ ಸಂಪೂರ್ಣ ಎಲ್ಲಾ ತಾಲೂಕಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಇದರಲ್ಲಿ ಸಂಪೂರ್ಣ ಭಾಗಿಯಾಗಿದೆ ಎಂಬುವುದರಲ್ಲಿ ಯಾವುದೇ ಅನುಮಾನ ಇಲ್ಲ ವೈನ್ ಶಾಪ್ ಗೆ ಹೋಗಿ ವಿಡಿಯೋ ಆನ್ ಮಾಡಿಕೊಂಡು ಕೇಳಿದರೆ ಎಲ್ಲಾ ಸತ್ಯವನ್ನು ವೈನ್ ಶಾಪ್ ಗಳು ಎಷ್ಟೆಷ್ಟು ವಸೂಲಿ ಮಾಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸುತ್ತಾರೆ ಕಂಡರೂ ಕಾಣದಂತೆ ಇರುವ ಮೇಲದಕಾರಿಗಳನ್ನ ಗಮನಿಸಿದರೆ ಅವರಿಗೂ ತೀರ್ಥ ಪ್ರಸಾದ ತಲುಪುತ್ತಿದೆ ಎಂಬ ಸಂಶಯ ನನಗೂ ಕೂಡ ಇದೆ ಈ ಹಿಂದೆ ಮಾಹಿತಿ ಹಕ್ಕು ಕಾಯ್ದೆ ಇಡಿ ಅರ್ಜಿ ಸಲ್ಲಿಸಿ ಪಡೆದಿರುವ ದಾಖಲೆಗಳು ನನ್ನ ಬಳಿ ಇವೆ ಈ ಹಿಂದೆ ಇದ್ದ ಅಬಕಾರಿ ಡಿಸಿ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಈಗ ಬಂದಿರುವ ಅಬಕಾರಿ ಡಿಸಿ ಅವರು ಕೂಡ ಕ್ರಮ ಕೈಗೊಳ್ಳದೆ ಇರುವುದು ದುರಾದೃಷ್ಟಕರ, ಇನ್ಮುಂದೆ ಆದರೂ ಕ್ರಮ ಕೈಗೊಳ್ಳದೆ ಹೋದರೆ ಸಂವಿಧಾನ ಬಂದ ಕಾನೂನು ಹೋರಾಟ ಅಬಕಾರಿ ಡಿಸಿಯಾಗು ಎಲ್ಲ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಎಂದು ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಟೈಗರ್ ನಾಗ್ ಅಸಮಾಧಾನ ಹೊರ ಹಾಕಿದ್ದಾರೆ.
ಒಟ್ಟಾರೆ ಅಬಕಾರಿ ನಿಯಮದ ಪ್ರಕಾರ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಯನ್ನು ಗ್ರಾಹಕರಿಂದ ಪಡೆಯಬಾರದು. ಇಂತಹ ಸನ್ನಿವೇಶ ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿರುವುದು ಅಬಕಾರಿ ಇಲಾಖೆ ಅಧಿಕಾರಿಗಳ ಕೆಲಸ. ಆದರೆ ಈ ಎಚ್ಚರಿಕೆಯನ್ನು ಕೇರ್ ಮಾಡದ ಬಾರ್ ವೈನ್ಸ್ ಮಾಲೀಕರು, ಸಿಕ್ಕಿದ್ದೇ ಚಾನ್ಸ್ ಎಂದು ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಈ ವಿಚಾರವಾಗಿ ಅಬಕಾರಿ ಡಿಸಿ ಅವರ ಸರ್ಕಾರಿ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಕೆರೆಯನ್ನು ಸ್ವೀಕರಿಸುತ್ತಿಲ್ಲ.
ಅಬಕಾರಿ ನಿಯಮಮಗಳು ಏನು ಹೇಳುತ್ತದೆ?:
* ಅಬಕಾರಿ ನಿಯಮದ ಪ್ರಕಾರ ಪ್ರತಿ ಮದ್ಯದ ಅಂಗಡಿ ಹಾಗೂ ಬಾರ್ ಗಳಲ್ಲಿ ಕಂಪ್ಯೂಟರ್ ಅಧಿಕೃತ ಜಿಎಸ್ಟಿ ಬಿಲ್ ನ್ನು ಗ್ರಾಹಕರಿಗೆ ಕೊಡಬೇಕು.
* ಅಬಕಾರಿ ಅಧಿಕಾರಿಗಳು ಪ್ರತಿ ದಿನ ಮದ್ಯದ ಸೇಲ್ ಬಗ್ಗೆ ಲಾಗ್ ಬುಕ್ ಮೆಂಟೇನ್ ಮಾಡಬೇಕು, ಅಂಗಡಿಯಲ್ಲಿ ಮದ್ಯ ಸ್ಟಾಕ್ ಎಷ್ಟಿದೆ, ಎಷ್ಟು ಖರ್ಚಾಗಿದೆ ಎಂದು ಲೆಕ್ಕ ನೋಡಬೇಕು.
* ಮದ್ಯದ ಅಂಗಡಿಗಳಿಗೆ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಆಗಾಗ ಪರಿಶೀಲನೆ ನಡೆಸಬೇಕು.
* ಕೌಂಟರ್ ನಲ್ಲಿ ಕುಡಿಯಲು ಅವಕಾಶವಿಲ್ಲ, ಆದರೆ ತುಮಕೂರು ಜಿಲ್ಲೆಯ ಬಹುತೇಕ ವೈನ್ಸ್ ಬಾರ್ ಗಳಲ್ಲಿ ಕೌಂಟರ್ ನಲ್ಲಿಯೇ ಜನ ಕುಡಿಯುತ್ತಿದ್ದಾರೆ.
* ಮದ್ಯ ಹಾಗೂ ಬಾರ್ ಗಳಲ್ಲಿ ಮದ್ಯ ತೆಗೆದುಕೊಂಡಾಗ ಬಿಲ್ ಕೊಡಬೇಕಾದದ್ದು ವೈನ್ಸ್, ಬಾರ್ ಮಾಲೀಕನ ಕರ್ತವ್ಯ.
* ಅಬಕಾರಿ ಅಧಿಕಾರಿಗಳು ಬಾರ್ ಮಾಲೀಕರ ಜತೆ ಶಾಮೀಲು ಆಗಿರುವ ಶಂಕೆ
* ಬಿಲ್‌ನೀಡಿದರೆ ಗ್ರಾಹಕರ ಜತೆ ಜಗಳ, ಹಾಗೂ ಅಬಕಾರಿ ಅಧಿಕಾರಿಗಳಿಗೆ ಲೆಕ್ಕ ಕೊಡಬೇಕೆಂದು ಬಾರ್ ಮಾಲೀಕರು ಬಿಲ್ ನೀಡುತ್ತಿಲ್ಲ.
* ಅಬಕಾರಿ ಡಿಸಿ ಈ ಬಗ್ಗೆ ಗಮನಹರಿಸಬೇಕಿದ್ದು, ಅವರೇ ಇದರಲ್ಲಿ ಶಾಮೀಲು ಆಗಿದ್ದಾರಾ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296