ತುಮಕೂರು : ಪ್ರೀತಿಸಿ ಮದುವೆಯಾದ ನಂತರ ಮೊದಲ ಪತಿಯ ಮಗುವನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿ, ಹಾವು ಕಚ್ಚಿದೆ ಎಂದು ಸುಳ್ಳು ಹೇಳಿ ಅಂತ್ಯ ಸಂಸ್ಕಾರ ಮಾಡಿರುವ ಘಟನೆ ನಡೆದಿದೆ.
ತುಮಕೂರಿನ ಸಿದ್ದಲಿಂಗಯ್ಯನ ಪಾಳ್ಯದ ಜಮೀನೊಂದರಲ್ಲಿ ಮಗುವಿನ ಶವ ತೆಗೆದು ಇಂದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಚಾಮರಾಜನಗರ ಮೂಲದ ಚಂದ್ರಶೇಖರ್, ಕಾವ್ಯ ಮಂಡ್ಯ ಜಿಲ್ಲೆ, ಬೆಳ್ಳೂರು ಕ್ರಾಸ್ ಮೂಲದವಳು ತುಮಕೂರು ತಾಲೂಕಿನ ಸಿದ್ಧಲಿಂಗಯ್ಯನಪಾಳ್ಯದಲ್ಲಿ ನೆಲೆಸಿದ್ದರು.
ಕಾವ್ಯಾಗೆ ಈಗಾಗಲೇ ಅಶೋಕ ಎಂಬುವರ ಜತೆ ಮದುವೆಯಾಗಿತ್ತು. ಪ್ರೆಗ್ನೆಂಟ್ ಇದ್ದಾಗಲೇ ಚಂದ್ರಶೇಖರ್ ಜೊತೆ ಓಡಿ ಬಂದಿದ್ದ ಕಾವ್ಯ, ಬಳಿಕ ಮಿಥುನ್ ಗೌಡಗೆ ಜನ್ಮ ನೀಡಿದ್ದಳು.
ಮಿಥುನ್ ವಿಚಾರದಲ್ಲಿ ಇಬ್ಬರ ಮಧ್ಯೆ ಕಲಹ ಉಂಟಾಗಿತ್ತು. ಚಂದ್ರಶೇಖರ್ ಕ್ರಷರ್ ನಲ್ಲಿ ಲಾರಿ ಡ್ರೈವರ್. ಕಾವ್ಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಮಾರ್ಚ್ 20ರಂದು ಕಾವ್ಯಾ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ ಮಗು ಮೇಲೆ ಚಂದ್ರಶೇಖರ್ ಹಲ್ಲೆ ಮಾಡಿದ್ದು, ಪ್ರಜ್ಞೆ ತಪ್ಪಿತ್ತು. ಅಕ್ಕಪಕ್ಕದ ಮನೆಯವರಿಗೆ ಮಗುವಿಗೆ ಹಾವು ಕಚ್ಚಿದೆ ಎಂದು ಹೇಳಿದ್ದ ಆರೋಪಿ ಚಂದ್ರಶೇಖರ್.
ಗ್ರಾಮಸ್ಥರು ಕೂಡಲೇ ಚಿಕಿತ್ಸೆಗೆ ಊರ್ಡಿಗೆರೆ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಪರೀಕ್ಷೆ ನಡೆಸಿ ಮಿಥುನ್ ಸಾವನ್ನಪ್ಪಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಳಿಕ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದ ಮಲತಂದೆ ಹಾಗೂ ತಾಯಿ. ಅಂತ್ಯಕ್ರಿಯೆಗೂ ಮುನ್ನ ಸಿದ್ಧಲಿಂಗಯ್ಯನಪಾಳ್ಯದ ಎಸ್.ಆರ್.ಗಂಗಾಧರಯ್ಯ ಎಂಬುವರು ಮಿಥುನ್ ಫೋಟೊ ತೆಗೆದುಕೊಂಡಿದ್ದರು. ಮಾರ್ಚ್ 22ರಂದು ಮತ್ತೊಮ್ಮೆ ಫೋಟೊ ನೋಡಿದಾಗ ಸಾವಿನ ಬಗ್ಗೆ ಅನುಮಾನ ಮೂಡಿದೆ.
ಈ ಕುರಿತು ಗ್ರಾಮಸ್ಥರು ಸೇರಿ ಚಂದ್ರಶೇಖರ್‌ರನ್ನು ವಿಚಾರಿಸಿದಾಗ ಕೊಲೆಯ ರಹಸ್ಯ ಬಾಯಿಬಿಟ್ಟಿದ್ದಾನೆಂದು ಆರೋಪವಾಗಿದೆ. ಗಂಗಾಧರಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಆಗಿದೆ.
ದಾಖಲಿಸಿಕೊಂಡ ಮಹಿಳಾ ಠಾಣೆ ಪೊಲೀಸರು. ಇಂದು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು.ಸಿದ್ದಲಿಂಗಯ್ಯನ ಪಾಳ್ಯದ ಜಮೀನೊಂದರಲ್ಲಿ ಮಗುವಿನ ಶವ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಇತ್ತ ತಾಯಿ ಕಾವ್ಯಾಳ ನಡವಳಿಕೆಯಲ್ಲಿ ಸಾಕಷ್ಟು ಅನುಮಾನ ಮೂಡಿದೆ. ಮೊದಲ ಪತಿಯನ್ನ ಬಿಟ್ಟು ಬಂದು ಚಂದ್ರಶೇಖರ್ ಜೊತೆ ಇದ್ದ ಕಾವ್ಯ. ಸ್ವಂತ ನೆಲೆಯಿಲ್ಲದೇ ಅಲ್ಲಲ್ಲಿ ವಾಸ ಮಾಡ್ತಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4