ತುಮಕೂರು: ಹೈಕಮಾಂಡ್ ಗೆ ಯಾವುದಾದರೂ ಸಿಡಿ ತೆಗೆದುಕೊಂಡು ಹೋಗಿ ಕೊಟ್ಟರೆ ಮೊದಲೇ ಅವರಿಗೆ ಗೊತ್ತಿರಬೇಕಲ್ಲ. ನಾನು ಯಾವ್ದೆ ರೀತಿಯ ಲೋಪ ಎಸಗಿಲ್ಲ. ದೂರು ಬಂದ್ರೆ ನಂಬಬಾರದು. ಮತ್ತು ನನ್ನ ಮೇಲೆ ಕ್ರಮ ತೆಗೆದುಕೊಳ್ಳುವ ಮುನ್ನ ನನ್ನನ್ನು ಒಮ್ಮೆ ಹೈಕಮಾಂಡ್ ಕೇಳಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ನನಗೆ ಯಾವತ್ತೂ ಕೂಡ ಕೆಟ್ಟದನ್ನು ಬಯಸಲ್ಲ. ಕೆಟ್ಟದನ್ನು ಬಯಸಿದವರು ಉದ್ದಾರ ಆಗಿಲ್ಲ. ನನಗೆ ಕೆಟ್ಟದು ಮಾಡಲು ಅವಶ್ಯಕತೆ ಇಲ್ಲ. ನನಗೆ ಆದ ರೀತಿ ಯಾರಿಗೂ ಆಗಬಾರದು ಎಂದರು.
ನಾನು ಯಾವ್ದೆ ರಾಜಕೀಯ ಹಿನ್ನೆಲೆವುಳ್ಳವನಲ್ಲ, ಕಷ್ಟಪಟ್ಟು ರಾಜಕೀಯವಾಗಿ ಬೆಳೆದು ಬಂದಿದ್ದೇನೆ. ಆದ್ರೆ ಈ ರೀತಿ ತೇಜೋವಧೆ ಮಾಡುವುದು ಭೂಷಣ ತರಲ್ಲ. ನನಗೆ ಮಾಟ ಮಂತ್ರ ಮಾಡಿಸೋದು ಎಲ್ಲಾ ಮಾಡಿದ್ದಾರೆ ನನಗೆ ಏನೂ ಆಗಲ್ಲ. ಆದ್ರೆ ಯಾರು ಇದ್ರಲ್ಲಿ ಭಾಗಿಯಾಗಿದ್ದಾರೆ ಎಂದರು.
ಅಧಿಕಾರದ ಆಸೆಗೆ, ಇನ್ನೊಬ್ಬನ ಮುಗಿಸಲು ವಿಷಕನ್ಯೆಯರನ್ನು ಬಳಸುತ್ತಿದ್ದಾರೆ. ಗುರುವಾರ ಸತೀಶ್ ಜಾರಕಿಹೊಳಿಯವರು ಸೇರಿದಂತೆ ಸಮಾನಮನಸ್ಕರೆಲ್ಲರೂ ಸೇರಿ ಅಂತಿಮ ನಿಣಯ ಮಾಡುತ್ತೇವೆ ಎಂದು ತಿಳಿಸಿದರು.
ಪಕ್ಷಕ್ಕೆ ಸಂಬಂಧಿಸಿದ ಮಾತಿಗೆ ನಾನು ಉತ್ತರ ಕೊಡಲ್ಲ. ಹೈ ಕಮಾಂಡ್ ಪಕ್ಷದ ವಿಚಾರ ಕುರಿತುಬಹಿರಂಗ ಹೇಳಿಕೆ ಕೊಡಬಾರದು ಎಂದಿದ್ದಾರೆ.ಯಾವುದೇ ತೀರ್ಮಾನ ಅಂತಿಮವಾಗಿ ಹೈ ಕಮಾಂಡ್ ಮಾಡಲಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಸಿಎಂ ಮತ್ತು ಗೃಹ ಸಚಿವರನ್ನು ಬುಧವಾರ ಅಥವಾ ಗುರುವಾರ ಭೇಟಿ ಮಾಡುತ್ತೇನೆ. ಸಿಎಂ ಯಾವತ್ತೂ ನನ್ನ ಜೊತೆ ಇರುತ್ತಾರೆ ಎಲ್ಲ ಒಳ್ಳೆ ಕೆಲಸಕ್ಕೂ ಮಂತ್ರಿಗಳೂ ಜೊತೆ ಇರುತ್ತಾರೆ.
ಸದನದಲ್ಲಿ ನಾನೊಂದು ಹೇಳಿಕೆ ಮಾಡಿದ್ದೇನೆ. ಅದಕ್ಕೆ ಬದ್ಧ ಇದ್ದೇನೆ. ಏನೇನು ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ ಅದಕ್ಕೆ ಗೃಹ ಮಂತ್ರಿಗಳನ್ನ ಭೇಟಿ ಮಾಡಿ ಲಿಖಿತ ರೂಪದಲ್ಲಿ ದೂರು ಕೊಡ್ತೀನಿ.
ಹನಿಟ್ರ್ಯಾಪ್ ವಿಚಾರವಾಗಿ ಸಿಎಂ ಅನ್ನು ಭೇಟಿ ಮಾಡಿಲ್ಲ. ಸಿಎಂ ಬಂದು 3 ಗಂಟೆಗೆ ಉತ್ತರ ಕೊಡ್ಬೇಕಿತ್ತಲ್ಲ, ಅದಕ್ಕೂ ಮೊದಲು ಭೇಟಿ ಮಾಡಿಲು ಹೋಗಿದ್ದೆ. ಅಲ್ಲಿ ಏನು ಚರ್ಚೆ ಆಗಲಿಲ್ಲ. 12.30ಕ್ಕೆ ಸಿಎಂ ಮನೆಗೆ ಹೋಗಿದೆ. ಅವರು ಏನೋ ಓದುತ್ತಿದ್ದರು. ದೇವರು ನಿನಗೆ ಏನು ಬುದ್ದಿ ಕೊಡುತ್ತೋ ಆ ರೀತಿ ಮಾಡು ಅಂತ ಹೇಳಿದ್ರು ಎಂದರು.
ತುಮಕೂರು ಬಜೆಟ್ ಅಧಿವೇಶನ ಮುಕ್ತಾಯವಾದ ರೀತಿಯ ಪ್ರಜಾಪ್ರಭುತ್ವಕ್ಕೆ ಅವಮಾನವಾದಂತಾಗಿದೆ. ಅದು ವಿಷಾದವಿದೆ ಎಂದು ಸಚಿವ ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಸ್ಪೀಕರ್ ಗೆ ಧಮಕಿ ಹಾಕೋದು, ಪೇಪರ್ ಎಸೆಯುವುದು , ಮುಖ್ಯಮಂತ್ರಿಗೆ ಅಗೌರವ ತೋರುವುದು ಇದು ಶೋಭೆ ತರುವಂತಹದ್ದಲ್ಲ. ಬಿಜೆಪಿ ಶಿಸ್ತಿನ ಪಕ್ಷ ಎನ್ನುತ್ತಾರೆ ಆದ್ರೆ ಹೈಕಮಾಂಡ್ ಅವರಿಗೆ ಬುದ್ದಿ ಹೇಳಬೇಕು ಎಂದಿದ್ದಾರೆ.
ಈ ರೀತಿ ಅಹಿತಕರ ಘಟನೆ ಸರಿಯಲ್ಲ. ವಿಧಾನಸಭೆಯಲ್ಲಿ ಮಾತನಾಡಿರುವುದಕ್ಕೆ ಬದ್ದನಾಗಿದ್ದೇನೆ. ಗೃಹ ಮಂತ್ರಿಗಳಿಗೆ ಲಿಖಿತ ದೂರು ಸಲ್ಲಿಸುತ್ತೇನೆ. ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಅವಶ್ಯಕತೆ ಇದ್ದರೆ ನೋಡುತ್ತೇನೆ. ಹನಿಟ್ರಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಲ್ಲ. ಸತೀಶ್ ಜಾರಕಿ ಹೊಳಿ ಅವರನ್ನು ತೀವ್ರವಾಗಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಹಾಸನದಲ್ಲಿ ರೇವಣ್ಣ, ಪ್ರಜ್ವಲ್ ರೈವಣ್ಣ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಅದು ತನಿಖೆಯಲ್ಲಿ ಬಹಿರಂಗವಾಗಬೇಕಿದೆ. ಗೃಹ ಸಚಿವ ತನಿಖೆ ನಡೆಸಿದರೆ ಸೂಕ್ತ . ಇದ್ರಲ್ಲಿ ಯಾರು ಸೇರಿದ್ದಾರೆ ಎಂಬುದು ಸತ್ಯ ಹೊರಬರಬೇಕು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4