ಸರಗೂರು: ತಾಲೂಕಿನ ಹಾದನೂರು ಗ್ರಾಪಂ ವ್ಯಾಪ್ತಿಯ ಹಾದನೂರು ಗ್ರಾಮದಲ್ಲಿ ಕಾರ್ತಿಕ ಮಾಸದ ಜಾತ್ರೋತ್ಸವ ಅಂಗವಾಗಿ ಪ್ರತಿವರ್ಷ ಓಂಕಾರ ಸಿದ್ದೇಶ್ವರ ಸ್ವಾಮಿಯ 4 ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿರಥೋತ್ಸವ ಭಾನುವಾರದಿಂದ ಸೋಮವಾರವರೆಗೆ ವಿಜೃಂಭಣೆಯಿಂದ ನಡೆಯಿತು.
ದೇವರಿಗೆ ಎಣ್ಣೆ ಮಜ್ಜನ ಸೇವೆಯೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆತಿದ್ದು, ಹತ್ತಾರು ಗ್ರಾಮಗಳ ದೇವರನ್ನು ಕರೆತಂದು ಉತ್ಸವ ನಡೆಸಿ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ರಥೋತ್ಸವ ನಡೆಸಲಾಯಿತು.
ದೇವಾಲಯದ ಆವರಣದಿಂದ ವೀರಭದ್ರನ ಕುಣಿತ, ನಂದಿಧ್ವಜ ಕುಣಿತ, ವೀರಗಾಸೆ ಮತ್ತು ಡೊಳ್ಳು ಕುಣಿತ ಹಾಗೂ ಸೋಮನ ಕುಣಿತದೊಂದಿಗೆ ದೇವರ ಮೂರ್ತಿಗಳನ್ನು ಬೆಳ್ಳಿ ರಥದ ಕುರಿಸಿಕೊಂಡು ಉತ್ಸವದಲ್ಲಿ ಕೊಂಡೊಯ್ಯಲಾಯಿತು.
ಇದಕ್ಕೂ ಮುನ್ನ ಭಾನುವಾರರಂದು ಸಂಜೆ ಮೂಲದೇವರಿಗೆ ಗ್ರಾಮದ ಕೆರೆಯಲ್ಲಿ ಗಂಗ ಪೂಜೆ ಸಲ್ಲಿಸಿ ಅಭಿಷೇಕ, ಪ್ರಸಾದ ವಿನಿಯೋಗದ ನಂತರ ಹೆಬ್ಬಳಲು ಗ್ರಾಮಸ್ಥರಿಂದ ಕಳಸ ಪೂಜೆ ದೇವಸ್ಥಾನಕ್ಕೆ ತರಲಾಯಿತು.
ಮಹಿಳೆಯರು ದೇವರಿಗೆ ತಂಬಿಟ್ಟಿನ ಆರತಿ ಬೆಳಗಿ ಹರಕೆ ಪೂರೈಸಿದರು. ನೆರೆದಿದ್ದ ಎಲ್ಲರಿಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಉಯ್ಯಾಲೆ ಉತ್ಸವದ ನಂತರ ಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿಆರಂಭದ ದಿನ ಹಸಿರು ಕಂಬದ ಧ್ವಜಾರೋಹಣ ನೆರವೇರಿಸಿದ್ದು, ಹಸಿರು ಹೂವಿನ ಚಪ್ಪರ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಸಿ ರಾತ್ರಿ . ಶನಿವಾರ ಹತ್ತಿಮರದ ಮಣಿಪೀಠದ ಪೂಜೆ, ಕಳಸ ಸ್ಥಾಪನೆ, ಗಂಗೆಪೂಜೆ, ಗೋಪೂಜೆ ಮುಂತಾದ ಧಾರ್ಮಿಕ ವಿಧಾನಗಳನ್ನು ನಡೆಸಿದ್ದರು .ಭಾಗವಹಿಸಿದ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಜಾತ್ರೆಯ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಬೆಳಗಿನಿಂದಲೂ ಸಹಸ್ರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು. ರಾತ್ರಿ ವಿವಿಧ ಗ್ರಾಮ ದೇವರುಗಳ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ತಾಲೂಕಿನ ಮಟ್ಟದ ಅಧಿಕಾರಿಗಳು ಭಾಗವಹಿಸಿ ಇಂತಹ ಪುಣ್ಯಕ್ಷೇತ್ರದಲ್ಲಿ ನೆರೆದ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡುವ ಪುಣ್ಯದ ಕೆಲಸವನ್ನು ಮಾಡುತ್ತಿದ್ದೀರಾ ದೇವರು ತಮಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರು ನಾಗರಾಜು, ಮಹದೇವಸ್ವಾಮಿ,ಗ್ರಾಮ ಪಂಚಾಯತಿ ಸದಸ್ಯರಾದ ಶಿವಲಿಂಗಯ್ಯ, ದೇವಸ್ಥಾನದ ಯಜಮಾನರು ಶಿವಮೂರ್ತಿ, ಪಾಪಣ್ಣ, ಸಿದ್ದರಾಜು,ನಾಗಯ್ಯ, ಕೂಸಣ್ಣ, ಪ್ರಸನ್ನ,ಲೋಕೇಶ್, ಅಶೋಕ್ ಕುಮಾರ್, ಸಿದ್ದರಾಜು, ಹೊಣಕಾರ, ರಾಜೇಶ್, ರವಿ ಇತರರು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296