ತುಮಕೂರು: ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತ ಹಾಗೂ ವಿಜ್ಞಾನ ವಿಭಾಗದ ಸಂಯೋಗದೊಂದಿಗೆ ತುಮಕೂರು ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ಜಾಮ್ ಮತ್ತು ಐ.ಬಿ.ಪಿ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗಲು ವಿವಿಧ ಕಾಲೇಜು ಪದವಿ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದ ತುಮಕೂರು ವಿ.ವಿ. ಪರೀಕ್ಷಾಂಗದ ಉಪ ಕುಲಸಚಿವರಾದ ಡಾ.ನರಹರಿ ಎನ್. ಅವರು ಮಾತನಾಡಿ, ದೇಶದಲ್ಲಿ ಇಂದು ಒಂದು ಸರ್ಕಾರಿ ಉದ್ಯೋಗ ಪಡೆಯಲು ಹರಸಾಹಸ ಪಡುವಂತಾಗಿದೆ. ಜನಸಂಖ್ಯಾ ಸ್ಪೋಟದಿಂದ ಉದ್ಯೋಗಾಂಕ್ಷಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿರುವದರಿಂದ ಹಾಗೂ ಒಂದು ಹುದ್ದೆಗೆ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದಾಗ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಸಾಹಸದ ಕೆಲಸವಾಗಿದೆ. ಆದ್ದರಿಂದ ಸರ್ಕಾರಗಳು ವಿವಿಧ ಉದ್ಯೋಗ ಪಡೆಯಬಯಸುವವರಿಗಾಗಿ ಜಾಮ್ ಮತ್ತು ಐ.ಬಿ.ಪಿ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು ಇಂದು ಅನಿವಾರ್ಯವೂ ಆಗಿದೆ. ವಿವಿಧ ಕಾಲೇಜು ಪದವಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಈ ಕಾರ್ಯಾಗಾರವನ್ನು ಏರ್ಪಡಿಸಿರುವುದು ನನಗೆ ಸಂತಸ ತಂದಿದೆ. ವಿದ್ಯಾರ್ಥಿಗಳು ಇಂದಿನ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಪ್ರಾಂಶುಪಾಲರಾದ ವಸಂತ ಟಿ.ಡಿ. ಅವರು ಇಂದು ವಿದ್ಯಾರ್ಥಿಗಳು ಅತೀ ಹೆಚ್ಚು ಸಮಯವನ್ನು ನಿರಂತರ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ. ಕಾರಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣತೆ ಪಡೆದರೆ ಮಾತ್ರ ಉದ್ಯೋಗ ಪಡೆಯಬಹುದೆಂಬ ವಾಸ್ತವ ಸಂಗತಿಯನ್ನು ವಿದ್ಯಾರ್ಥಿಗಳು ನೆನಪಿಟ್ಟುಕೊಂಡು ಅಭ್ಯಾಸದಲ್ಲಿ ತೊಡಗಳು ಸಲಹೆ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾರ್ಯಕ್ರಮದ ಸಂಯೋಜಕರಾದ ಡಾ.ಯೋಗಿಶ್ ಎನ್. ಮಾತನಾಡಿ, ನಮ್ಮ ಕಾಲೇಜಿನಿಂದ ಏರ್ಪಡಿಸಿದ ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳು ಹಾಗೂ ಡಾ.ನರಹರಿ ಎನ್. ಅವರು ಇಂದು ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಜಾಮ್ ಮತ್ತು ಐ.ಬಿ.ಪಿ.ಎಸ್ ನಂತಹ ಬ್ಯಾಂಕ್ ಹಾಗೂ ಸರ್ಕಾರಿ ಅಧಿಕಾರಿ ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು, ಅವುಗಳ ಪಠ್ಯಕ್ರಮ, ಪರೀಕ್ಷಾ ಪದ್ದತಿ ಹಾಗೂ ಬೇಗ ಉತ್ತೀರ್ಣತೆ ಪಡೆಯಲು ಬೇಕಾದ ವಿವಿಧ ವೃತ್ತಿ ಕೌಶಲ್ಯಗಳನ್ನು ಡಾ.ನರಹರಿ ಅವರು ತಮಗೆ ಉಪನ್ಯಾಸದ ಮೂಲಕ ಅರಿವು ಮೂಡಿಸಲಿದ್ದಾರೆ. ಅವರ ಪಾಂಡಿತ್ಯದ ಲಾಭ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚಿಸಿದರು.
ವಿಜಯಲಕ್ಷ್ಮೀ ಬಿ.ಎನ್. ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರೊ.ರಜತ್ ಗಿರಿ ಡಿ.ಟಿ. ಅವರು ಸ್ವಾಗತಿಸಿದರು, ವಂದನಾರ್ಪಣೆಯನ್ನು ಸಿದ್ಧಲಿಂಗಸ್ವಾಮಿ ಆರ್. ಇವರು ವಂದಿಸಿದರು. ಕಾರ್ಯಕ್ರಮದಲ್ಲಿ ಜಗದೀಶ್ ಕೆ.ಸಿ., ಸುನಿತಾ ಎಂ.ಎಸ್. ಡಾ. ವೆಂಕಟರಮಣಪ್ಪ, ಡಾ.ಅನುಸೂಯಾ ಕೆ.ವಿ., ಚಿತ್ರಕಲಾ ಕಾಲೇಜು ಪ್ರಾಂಶುಪಾಲರಾದ ಸಿ.ಸಿ.ಬಾರಕೇರ, ಶ್ರೀರಂಗಸ್ವಾಮಿ ಆರ್., ಡಾ. ಸಂತೋಷ ನಾಗರಾಳ ಮುಂತಾದ ಅಧ್ಯಾಪಕರು ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಡಾ.ನರಹರಿ ಎನ್. ಹಾಗೂ ವಸಂತ ಟಿ.ಡಿ ಅವರನ್ನು ಗಣಿತ ಮತ್ತು ವಿಜ್ಞಾನ ವಿಭಾಗದ ಪರವಾಗಿ ಸನ್ಮಾನಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4