ತಿಪಟೂರು: ಕೋವಿಡ್ ಮಹಾಮಾರಿಯಿಂದ ಮೃತಪಟ್ಟ ಕುಟುಂಬಗಳಿಗೆ ಮತ್ತು ಮಳೆಯಿಂದಾಗಿ ಮನೆಗಳನ್ನು ಕಳೆದು ಕೊಂಡವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರೂ.100000 ಪರಿಹಾರ ಹಾಗೂ ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದ ಸಾರ್ವಜನಿಕರಿಗೆ ಪರಿಹಾರದ ಹಣವನ್ನು ಅವರವರ ಬ್ಯಾಂಕುಗಳಿಗೆ ಹಣ ವರ್ಗಾವಣೆ ಮಾಡಿ ಸಂಬಂಧಿಕರಿಗೆ ಸಾಂತ್ವನದ ಪತ್ರವನ್ನು ನೀಡಲಾಯಿತು.
ಕೊವಿಡ್ ನಿಂದ ಮೃತಪಟ್ಟ ತಾಲೂಕಿನ 66 ಜನರ ಪೈಕಿ 34 ಮೃತರ ಸಂಬಂಧಿಕರಿಗೆ ಹಾಗೂ ಮನೆ ಕಳೆದು ಕೊಂಡವರಿಗೆ 104 ಜನರ ಪೈಕಿ 58 ಲಕ್ಷ ರೂಗಳ ಪರಿಹಾರ ಮೊತ್ತವನ್ನು ಅವರ ಬ್ಯಾಂಕಿಗೆ ವರ್ಗಾವಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಸರ್ಕಾರದಿಂದ ನೀಡಿದ ಪರಿಹಾರದ ಮೊತ್ತವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ನಗರಸಭೆ ಅಧ್ಯಕ್ಷ ರಾಮಮೋಹನ್ ಸದಸ್ಯ ಗಂಗಾಧರ್ ತಾಲೂಕು ತಹಸೀಲ್ದಾರ್ ಚಂದ್ರಶೇಖರ್ ಉಪ ತಹಸೀಲ್ದಾರ್ ಜಗನ್ನಾಥ್ ಇ.ಓ., ಸುದರ್ಶನ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಮುಖಂಡರು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ