ಪ್ರಧಾನಿ ನರೇಂದ್ರ ಮೋದಿ ಇಂದು ಮಹಾರಾಷ್ಟ್ರ, ಗೋವಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಹಾರಾಷ್ಟ್ರದಲ್ಲಿ ಸುಮಾರು 75,000 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ-ಉದ್ಘಾಟನೆ ನೆರವೇರಿಸಲಿದ್ದಾರೆ. ಶಿರಡಿ ಸಂಪರ್ಕಿಸುವ ಬಹುನಿರೀಕ್ಷಿತ 701 ಕಿಮೀ. ನಾಗುರ-ಮುಂಬಯಿ ಎಕ್ಸ್‌ಪ್ರೆಸ್ ಉದ್ಘಾಟಿಸುತ್ತಾರೆ. ನಾಗುರ ಮೆಟ್ರೋ ಮೊದಲ ಹಂತ, ನಾಗುರ-ಬಿಲಾಸ್‌ಪುರ ವಂದೇ ಭಾರತ್, ನಾಗುರ ಏಮ್ಸ್‌ಗೆ ಚಾಲನೆ ನೀಡುತ್ತಾರೆ. ಜತೆಗೆ ಗೋವಾದ 2ನೇ ಏರ್‌ಪೋರ್ಟ್ ಮೊಪದಲ್ಲಿ ಉದ್ಘಾಟಿಸಲಿದ್ದಾರೆ.
ಉಭಯ ರಾಜ್ಯಗಳಲ್ಲಿ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಗೋವಾದ ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಈ ಏರ್‌ಪೋರ್ಟ್ ಅನ್ನು ಉನ್ನತ ದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿ ನಿರ್ಮಿಸಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.