ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿದ್ದಕ್ಕಾಗಿ ಜೈಲು ಸೇರಿದ್ದ ರಜತ್ ಕಿಶನ್ ಮತ್ತು ವಿನಯ್ ಗೌಡ ಜಾಮೀನು ಮೂಲಕ ರಿಲೀಸ್ ಆಗಿದ್ದಾರೆ. ಇವರಿಬ್ಬರ ಬಂಧನದಿಂದಾಗಿ ಕಳೆದ ವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಪ್ರಸಾರವಾಗಿರಲಿಲ್ಲ.
ಈ ವಾರ ಎಂದಿನಂತೆ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಪ್ರಸಾರವಾಗಲಿದೆ. ಆದ್ರೆ ಕಲರ್ಸ್ ಕನ್ನಡ ವಾಹಿನಿಯು ಹಂಚಿಕೊಂಡಿರುವ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಪ್ರಮೋದಲ್ಲಿ ರಜತ್ ಮಾತ್ರ ಕಾಣಿಸಿಕೊಂಡಿದ್ದು, ವಿನಯ್ ಗೌಡ ಕಾಣಿಸಿಕೊಂಡಿಲ್ಲ. ಹೀಗಾಗಿ ವೀಕ್ಷಕರು ಗೊಂದಲದಲ್ಲಿದ್ದಾರೆ.
ಈ ವಾರ ವಿನಯ್ ಗೌಡ ಶೋ ಬಂದಿಲ್ವಾ? ಮಚ್ಚು ರೀಲ್ಸ್, ಜೈಲು ಇದರಿಂದ ರಜತ್ ಸಹವಾಸ ಬಿಟ್ರಾ? ಹೀಗೆಲ್ಲ ವೀಕ್ಷಕರು ಕೇಳುತ್ತಿದ್ದಾರೆ. ಅಲ್ಲದೇ ತಡವಾಗಿ ವಿನಯ್ ಅವರ ಪ್ರೊಮೋ ರಿಲೀಸ್ ಆಗುತ್ತಾ ಅಂತ ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW