ರಾಜ್ಯದಲ್ಲಿರುವ ಅಥವಾ ದೇಶದಲ್ಲಿರುವ ರೈತರು ಸರಕಾರದ ಯಾವುದೇ ಯೋಜನೆಯನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಮತ್ತು ಹೊಲದ ಪಾಣಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಇವೆರಡು ಇಲ್ಲದೆ ಸರಕಾರದ ಯಾವುದೇ ಸವಲತ್ತು ಮತ್ತು ಸೌಲಭ್ಯಗಳು ಅವರಿಗೆ ದೊರಕುವುದಿಲ್ಲ. ಇದರಿಂದಾಗಿ ಹಾಗೂ ಯತೇಚ್ಛವಾಗಿ ನಡೆಯುವ ಭೂ ಹಗರಣ ತಡೆಯಲು ಸರ್ಕಾರ ಹೊಸ ಆದೇಶ ಹೊರಡಿಸಿದ್ದು ಆಧಾರ್ ಕಾರ್ಡ್ಅನ್ನು ಪಹಣಿಗೆ(RTC) ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.
ಇಂದು ಆಸ್ತಿ, ಜಮೀನು ವಿಚಾರವಾಗಿ ಅನೇಕ ಮೋಸ, ವಂಚನೆಗಳು ನಡೆಯುತ್ತಿವೆ. ಮೃತಪಟ್ಟವರ ಹೆಸರಿನ ಪಾಣಿ ಪಡೆದು ಅನೇಕರು ಹಲವು ರೈತರನ್ನು ಯಾಮಾರಿಸುತ್ತಿದ್ದಾರೆ. ಸರಿಯಾದ ದಾಖಲೆ ಇಲ್ಲದೆ ಅನೇಕ ಭೂಗಳ್ಳರು ಹುಟ್ಟಿಕೊಂಡಿದ್ದಾರೆ. ಇದೆಲ್ಲದರ ನಿವಾರಣೆಗಾಗಿ ಸರ್ಕಾರ ಆಧಾರ್ ಕಾರ್ಡ್ ಅನ್ನು ಪಹಣಿಗೆ ಲಿಂಕ್ ಮಾಡುವುದು ಕಡ್ಡಾಯ ಎಂದು ಆದೇಶ ಹೊರಡಿಸಿದೆ.
ಆಧಾರ್ ಕಾರ್ಡಿಗೆ ಪಹಣಿಯನ್ನು ಲಿಂಕ್ ಮಾಡುವ ಯಾವುದೇ ವ್ಯಕ್ತಿಯು ನಾವು ಕೆಳಗೆ ಕೊಟ್ಟಿರುವ ಮೇಲೆ ಕ್ಲಿಕ್ ಮಾಡಬೇಕು.
ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಆಗಿರುವ ಮೊಬೈಲ್ ನಂಬರನ್ನು ಹಾಕಿ.
ಅದಾದ ಮೇಲೆ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬಂದಿರುತ್ತದೆ ಆ ಒಟಿಪಿಯನ್ನು ಖಾಲಿ ಇರುವ ಜಾಗದಲ್ಲಿ ಹಾಕಿ ಸಬ್ಮಿಟ್ ಮಾಡಿ.
ನಂತರ ನಿಮಗೆ ಭೂಮಿ ಸಿಟಿಜನ್ ಪೇಜ್ ಓಪನ್ ಆಗುತ್ತೆ.
ಅಲ್ಲಿ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್ ಅಂತ ಒಂದು ಆಪ್ಷನ್ ಇರುತ್ತೆ ಅಥವಾ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಸೀಡಿಂಗ್ ಅಂತ ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
ಅದಾದ ಮೇಲೆ ನಿಮ್ಮ ಆಧಾರ್ ಕಾರ್ಡ್ ಗೆ ಪಹಣಿ ಲಿಂಕ್ ಆಗುತ್ತದೆ ಎಂದರ್ಥ.
ಗ್ರಾಮಾಧಿಕಾರಿಗಳೇ ಮನೆ ಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕಾರ್ಯ ಮಾಡುತ್ತಾರೆ. ಸಾರ್ವಜನಿಕರೂ ಸಹ ತಮ್ಮ ಸಮೀಪದ ಕಂದಾಯ ಕಚೇರಿಗೆ ತೆರಳಿ ಆಧಾರ್ ಜೋಡಣೆ ಮಾಡಿಸಲು ಸಹ ಅವಕಾಶ ನೀಡಲಾಗಿದೆ. ಆಧಾರ್ ಸಂಖ್ಯೆ ಮತ್ತು ಫೋಟೋ ಜೋಡಣೆ ಆಗುವುದರಿಂದ ಜಮೀನು ಸುರಕ್ಷಿತವಾಗಿರುತ್ತದೆ. ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸುವುದು ತಪ್ಪುತ್ತದೆ. ಇದರಿಂದ ಅಮಾಯಕ ರೈತರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296