nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯ

    September 5, 2026

    ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು

    September 5, 2026

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026
    Facebook Twitter Instagram
    ಟ್ರೆಂಡಿಂಗ್
    • ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯ
    • ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು
    • ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!
    • ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ
    • ಶ್ರೀ ಕರಿಯಮ್ಮ ದೇವಿ–ಶ್ರೀ ಬನಶಂಕರಿ ದೇವಿಯ ನೂತನ ದೇವಾಲಯ ಪ್ರವೇಶ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
    • ತುಮಕೂರು: ಪ್ರಜಾ ಸೇವಾ ಆಂದೋಲನಕ್ಕೆ ಸಿದ್ಧತೆ:  ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ರಿಂದ ಪರಿಶೀಲನೆ
    • ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
    • ತುಮಕೂರು:  ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ ಪ್ರಕಟ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಗುವಿನ ಸುರಕ್ಷತೆ ನಿರ್ಲಕ್ಷ್ಯಿಸಿದ ಶಾಲಾ ಆಡಳಿತ ಮಂಡಳಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಿದ ತಾಯಿ!
    ಸ್ಪೆಷಲ್ ನ್ಯೂಸ್ January 10, 2024

    ಮಗುವಿನ ಸುರಕ್ಷತೆ ನಿರ್ಲಕ್ಷ್ಯಿಸಿದ ಶಾಲಾ ಆಡಳಿತ ಮಂಡಳಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಿದ ತಾಯಿ!

    By adminJanuary 10, 2024No Comments2 Mins Read
    law
    • ಶಿವಕುಮಾರ್‌ ಮೇಷ್ಟ್ರುಮನೆ

     

    ತುಮಕೂರು/ಸ್ಪೆಷಲ್‌ ರಿಪೋರ್ಟ್: ತನ್ನ ಮಗುವಿನ ಸುರಕ್ಷತೆಯನ್ನು ನಿರ್ಲಕ್ಷ್ಯಿಸಿ, ಬೇಜವಾಬ್ದಾರಿಯಿಂದ ನಡೆದುಕೊಂಡು ಪ್ರತಿಷ್ಠಿತ ಶಾಲೆಯ ಆಡಳಿತ ಮಂಡಳಿಗೆ ಮಗುವಿನ ತಾಯಿ, ವೃತ್ತಿಯಲ್ಲಿ ವಕೀಲರಾಗಿರುವ ಹೆಚ್‌.ಎನ್‌. ಮಂಜುಳ ಅವರು ಕಾನೂನಿನ ರುಚಿ ತೋರಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಇದು ಅಂತಿಂಥ ನಿರ್ಲಕ್ಷ್ಯ ಅಲ್ಲ, ಪ್ರತಿದಿನವೂ ಒಂದೊಂದು ವಿಚಾರದಲ್ಲಿ ಮಕ್ಕಳನ್ನು ಅಪಾಯಕ್ಕೆ ಸಿಲುಕಿಸುವಂತಹ ಸಂದರ್ಭವನ್ನು ಶಾಲಾ ಆಡಳಿತ ಮಂಡಳಿ ಸೃಷ್ಟಿಸುತ್ತಿದ್ದು, ಇದರಿಂದಾಗಿ ರೋಸಿಹೋದ ಮಗುವಿನ ತಾಯಿ ಶಾಲಾ ಆಡಳಿತ ಮಂಡಳಿಗೆ ತಾಯಿ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಿದ್ದಾರೆ.

    ವೃತ್ತಿಯಲ್ಲಿ ವಕೀಲರಾಗಿರುವ ಹೆಚ್‌.ಎನ್‌. ಮಂಜುಳ ಅವರು ತಮ್ಮ ಮಗ ತುಷಾರ್‌ ಸಿಂಹನನ್ನು “ಚೈತನ್ಯ ಟೆಕ್ನೋ ಸ್ಕೂಲ್‌” ಗೆ 1ನೇ ತರಗತಿಗೆ ದಾಖಲಿಸುತ್ತಾರೆ. ಶಾಲೆಯು ತನ್ನ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತದೆ ಎಂದು ಅವರು ಬಲವಾಗಿ ನಂಬಿದ್ದರು.  ಹೀಗಾಗಿ 10 ಸಾವಿರ ರೂಪಾಯಿಗಳನ್ನು ಪಾವತಿಸಿ ಶಾಲೆಗೆ ದಾಖಲು ಮಾಡಿದ್ದರು.

    ಶಾಲೆಯ ಆವರಣದ ಹೊರಗಿದ್ದ ಮಗು!

    ಶಾಲೆ ಆರಂಭವಾದಾಗ ಮಗುವನ್ನು ಶಾಲಾ ಸಮಯಕ್ಕೆ ಶಾಲೆಯಲ್ಲಿ ಬಿಟ್ಟು, ಮಧ್ಯಾಹ್ನ 12 ಗಂಟೆಗೆ ಕರೆದುಕೊಂಡು ಹೋಗುವಂತೆ ಶಾಲಾ ಮುಖ್ಯಸ್ಥರು ತಿಳಿಸಿದ್ದರು. ಅದರಂತೆ ಮಂಜುಳ ಅವರು ಮಗುವನ್ನು ಕರೆದುಕೊಂಡು ಬರಲು ಶಾಲೆಗೆ ತೆರಳಿದಾಗ ಅವರಿಗೆ ಅಲ್ಲಿ ಆಘಾತ ಕಾದಿತ್ತು. ಮಗು ಶಾಲೆಯ ಆವರಣದ ಹೊರಗಡೆ ಯಾವುದೇ ರಕ್ಷಣೆ ಇಲ್ಲದಂತೆ ನಿಂತಿತ್ತು. ಇದನ್ನು ನೋಡಿ ಕಂಗಾಲಾದ ಅವರು ಕೂಡಲೇ ಶಾಲಾ ಸಿಬ್ಬಂದಿ ವರ್ಗವನ್ನು ವಿಚಾರಿಸಲು ನೋಡಿದಾಗ, ಅಲ್ಲಿ ಯಾರೂ ಸಹ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ… ಶಾಲಾ ಮುಖ್ಯಸ್ಥರು ಕೂಡ ಆ ಸಮಯದಲ್ಲಿ ಅಲ್ಲಿ ಇರಲಿಲ್ಲ. ನಂತರ ಮಗುವನ್ನು ಮನೆಗೆ ಕರೆದುಕೊಂಡು ಬಂದರು.

    2ನೇ ದಿನ ಮಗು ಯಾಕೆ ಬಂದಿಲ್ಲ ಅಂತ ಕೇಳಿದ್ರು?

    2ನೇ ದಿನ ಮಂಜುಳ ಅವರು ಮಧ್ಯಾಹ್ನ ಮಗುವನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದರು. ಮನೆಗೆ ಬಂದು ಸ್ವಲ್ಪ ಹೊತ್ತಿನಲ್ಲೇ ಅವರಿಗೆ ಶಾಲೆಯ ಸಿಬ್ಬಂದಿಯೊಬ್ಬರು ಕರೆ ಮಾಡಿ, “ನಿಮ್ಮ ಮಗು ಈ ದಿನ ಯಾಕೆ ಶಾಲೆಗೆ ಬಂದಿಲ್ಲ” ಎಂದು ಪ್ರಶ್ನಿಸಿದ್ದಾರೆ. ಸಿಬ್ಬಂದಿಯ ಪ್ರಶ್ನೆಯಿಂದ ಮಂಜುಳ ಅವರು ಅಚ್ಚರಿಗೀಡಾಗಿದ್ದಾರೆ. ಅಲ್ಲದೇ ಸಿಬ್ಬಂದಿಯ ಬೇಜವಾಬ್ದಾರಿಯ ಬಗ್ಗೆ ಅವರು ಪ್ರಶ್ನಿಸಿ, “ನಿಮ್ಮ ಬೇಜವಾಬ್ದಾರಿತನ ಎಷ್ಟಿದೆ,  ನಾನು ಈಗ ತಾನೆ ಮಗುವನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದೇನೆ. ನೀವು ಹೀಗೆನಾ ನಮ್ಮ ಮಕ್ಕಳನ್ನು ರಕ್ಷಣೆ ಮಾಡೋದು” ಎಂದು ಪ್ರಶ್ನಿಸಿದ್ದಾರೆ.

    3ನೇ ದಿನ ಶಾಲೆಯಲ್ಲಿ ಮಗುವೇ ಇಲ್ಲ!

    ಮೂರನೇ ದಿನ ಮಗುವನ್ನು ಕರೆದುಕೊಂಡು ಹೋಗಲು ತಾಯಿ ಮಂಜುಳ ಅವರು ತೆರಳಿದಾಗ ಅಲ್ಲಿ ತಮ್ಮ ಮಗುವೇ ಇರಲಿಲ್ಲ. ಇದರಿಂದ ತೀವ್ರ ಆತಂಕಕ್ಕೊಳಗಾದ ಅವರು ಮಗು ಎಲ್ಲಿ ಎಂದು ವಿಚಾರಿಸಿದಾಗ, ಮಗುವಿನ ಬಗ್ಗೆ ಯಾರೂ ಸಹ ಉತ್ತರ ನೀಡಲು ತಯಾರಿರಲಿಲ್ಲ, ಇದಾದ ಬಳಿಕ ಸ್ವಲ್ಪ ಹೊತ್ತಿನಲ್ಲಿ ಮಗುವನ್ನು ಬೇರೊಂದು ರೂಟ್‌ ನ ವಾಹನಕ್ಕೆ ಹತ್ತಿಸಿ ಕಳುಹಿಸಲಾಗಿದೆ ಎಂದು ಇನ್ನೊಬ್ಬ ಸಿಬ್ಬಂದಿ ಬಂದು ಹೇಳಿದ್ದಾರೆ.

    ನಂತರ ಸುಮಾರು 30 ನಿಮಿಷಗಳ ಕಾಲ ಸ್ಥಳದಲ್ಲಿ ಕಾಯುವಂತೆ ಮಾಡಿದ ಸಿಬ್ಬಂದಿ ಬಳಿಕ ಮಗುವನ್ನು ಕರೆತಂದು ಬಿಟ್ಟಿದ್ದಾರೆ.  ಇದರ ಬಗ್ಗೆ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದಾಗ, “ಇಲ್ಲಿ ಅತೀ ಹೆಚ್ಚು ಮಕ್ಕಳು ಇರೋದರಿಂದಾಗಿ ಇಂತಹ ಅವಘಡಗಳು ಇಲ್ಲಿ ಆಗಿಂದಾಗ್ಗೆ ಸಂಭವಿಸುತ್ತಿರುತ್ತವೆ”  ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ.

    ಕಾನೂನು ಸಮರಕ್ಕಿಳಿದ ತಾಯಿ!

    ಶಾಲಾ ಆಡಳಿತ ಮಂಡಳಿಯ ಬೇಜವಾಬ್ದಾರಿಯ ನಡೆಯಿಂದ ರೋಸಿಹೋದ ತಾಯಿ ಮಂಜುಳ ಕಾನೂನು ಹೋರಾಟಕ್ಕೆ ತೀರ್ಮಾನಿಸಿದರು. ಅಂತೆಯೇ, ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದು, ತನಗಾದ ಅನ್ಯಾಯಕ್ಕೆ ಪರಿಹಾರ ಹಾಗೂ ತಾನು ಕಟ್ಟಿದ ಶುಲ್ಕವನ್ನು ಪಾವಸ್‌ ಕೊಡಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದರು.

    ಈ ಬಗ್ಗೆ ಗ್ರಾಹಕರ ನ್ಯಾಯಾಲಯವು  ವಿಚಾರಣೆಯನ್ನು ನಡೆಸಿ, ದೂರುದಾರರು ಸಲ್ಲಿಸಿದ್ದ ಶುಲ್ಕವನ್ನು ವಾಪಸ್‌ ಕೊಡುವಂತೆ, ಹಾಗೂ ಪರಿಹಾರವಾಗಿ  8 ಸಾವಿರ ರೂಪಾಯಿ ಹಾಗೂ  ವ್ಯಾಜ್ಯ ಪರಿಹಾರ ಶುಲ್ಕವಾಗಿ 8 ಸಾವಿರ ರೂ.ಗಳನ್ನು  ನೀಡುವಂತೆ ಆದೇಶಿಸಿದೆ.  ಒಂದು ವೇಳೆ ಪರಿಹಾರವನ್ನು 45 ದಿನಗಳೊಳಗಾಗಿ ನೀಡದೇ, ಆದೇಶವನ್ನು ಪಾಲಿಸದೇ ಇದ್ದಲ್ಲಿ ದಿನಕ್ಕೆ 100 ರೂಪಾಯಿಯಂತೆ ದಂಡ ಪಾವತಿಸಬೇಕೆಂದು ಆದೇಶ ಮಾಡಿರುತ್ತದೆ.

    ದೂರುದಾರರ ಪರವಾಗಿ ವಕೀಲರಾದ ಎಂ.ಎಸ್.ಗಣೇಶ್‌, ಆರ್‌.ತಿಪ್ಪೆಸ್ವಾಮಿ, ಶಿವಕುಮಾರ್‌ ಮೇಷ್ಟ್ರುಮನೆ ವಾದ ಮಂಡಿಸಿದರು.

    admin
    • Website

    Related Posts

    ಶಾಂತಿ—ಕ್ರಾಂತಿ ರೀ ರಿಲೀಸ್ ಗೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ: ಸದ್ಯಕ್ಕಿಲ್ಲ ರೀ ರಿಲೀಸ್! | ಕಾರಣ ಏನು?

    August 14, 2026

    ‘ಚಂದ್ರಗಿರಿ’ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್!

    June 22, 2026

    ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು

    June 5, 2026

    Comments are closed.

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯ

    September 5, 2026

    ತುಮಕೂರು: ಸುಪ್ರೀಂ ಕೋರ್ಟ್ ಆದೇಶಂತೆ ನಗರಪಾಲಿಕೆ ಅಧಿಕಾರಿಗಳು ನಗರದಲ್ಲೇ ಫುಟ್‌ ಪಾತ್ ಅಂಗಡಿಗಳನ್ನು ತೆರವು ಮಾಡಿಸಿದ್ದಾರೆ. ಈ ಕ್ರಮದಿಂದ ನಗರದ…

    ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು

    September 5, 2026

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026

    ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ

    September 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.