ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರ ಪ್ರಚಾರಕ್ಕಾಗಿ, ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಸ್ತೂರು ಗ್ರಾಮಕ್ಕೆ ಆಗಮಿಸಿದ್ದರು. ತುಮಕೂರು ತಾಲೂಕಿನ ಕೆಸ್ತೂರು ಗ್ರಾಮಕ್ಕೆ ಆಗಮಿಸಿ ವಿ. ಸೋಮಣ್ಣ ಪರ ಮತಯಾಚಿಸಿದರು. ಯಡಿಯೂರಪ್ಪ ಅವರಿಗೆ ಸುರೇಶ್ ಗೌಡ, ಬೈರತಿ ಬಸವರಾಜು, ಸುಧಾಕರ್ ಲಾಲ್ ಸಾಥ್ ನೀಡಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, “ಎಲ್ಲಾ ಸಮಾಜದವರು ಸೇರಿ ಸೋಮಣ್ಣ ಅವರನ್ನ ಗೆಲ್ಲಿಸೋಕೆ ಬಂದಿದ್ದೀರಿ. ಸೋಮಣ್ಣ ಅವರು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ” ಎಂದು ಭವಿಷ್ಯ ನುಡಿದರು.
“ಸೋಮಣ್ಣ ಅವರು ಅಭಿವೃದ್ಧಿ ಮಾಡುವಂತವರು. ಪ್ರಧಾನಿ ಮೋದಿ ಹಾಗೂ ದೇವೇಗೌಡ್ರು ಆಶೀರ್ವಾದ ಮಾಡಿ ತುಮಕೂರು ಜಿಲ್ಲೆಯಲ್ಲಿ ನಿಲ್ಲೋಕೆ ಬಂದಿದ್ದಾರೆ. ಶಿವಕುಮಾರಸ್ವಾಮೀಜಿ ಅವರ ಕರ್ಮಭೂಮಿಗೆ ಬರೋದಕ್ಕೆ ಸಂತೋಷವಾಗಿದೆ ಎಂದರು. ಮೋದಿಯ ಕನಸಿನ ಕೂಸಾದ ಕೈಗಾರಿಕಾ ಕಾರಿಡಾರ್ ತುಮಕೂರಿಗೆ ನೀಡಿದ್ದಾರೆ. 7 ಸಾವಿರ ಕೋಟಿ ಹಣ ಇದಕ್ಕಾಗಿ ಬರಲಿದ್ದು, ಈ ಭಾಗ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದರು.
ತಿಪಟೂರು, ಚಿಕ್ಕನಾಯಕನಹಳ್ಳಿ ಭಾಗಕ್ಕೆ ಕುಡಿಯುವ ನೀರಿನ ಯೋಜನೆಯಾಗಿದೆ ಎಂದರು. ಸೋಮಣ್ಣ ಅವರಿಗೆ ದೇವೇಗೌಡ್ರ ಸಂಪೂರ್ಣ ಆಶೀರ್ವಾದ ಅವರ ಮೇಲೆ ಇದೆ. ದೇವೇಗೌಡ್ರು, ಮೋದಿ ನಿಕಟ ಸಂಪರ್ಕ ಹೇಗಿದೆ ನಿಮಗೆಲ್ಲಾ ಗೊತ್ತಿದೆ. ಸೋಮಣ್ಣ ೨ ಲಕ್ಷ ಮತಗಳ ಅಂತರದಿಂದ ಗೆಲ್ಲೋದು ನಿಶ್ಚಿತ ಎಂದರು.
‘ಸೋಮಣ್ಣ ಅಂದ್ರೆ ಅಭಿವೃದ್ಧಿ; ಅಭಿವೃದ್ಧಿ ಅಂದ್ರೆ ಸೋಮಣ್ಣ’. ನಾನು ಭಾಗ್ಯಲಕ್ಷ್ಮಿ, ಕಿಸಾನ್ ಸನ್ಮಾನ್ ಕೊಟ್ಟೆ. ಇದನ್ನ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಎಂದರು. ಅನೇಕ ಅನ್ಯಾಯ ಮಾಡಿರೋ ಕಾಂಗ್ರೆಸ್ ಓಟ್ ಕೊಡೋದು ಸಾಧ್ಯವಿಲ್ಲ. ಹಾಗಾಗಿ ಸೋಮಣ್ಣ ಅವರಿಗೆ ಓಟ್ ಕೊಟ್ಟು ಸೇವೆ ಮಾಡೋದಕ್ಕೆ ಅವಕಾಶ ಮಾಡಿಕೊಡಿ. ನಾನು ಬೆಂಗಳೂರಿಗೆ ಹೋಗಬೇಕಾಗಿರೋದರಿಂದ ಎಲ್ಲರಿಗೂ ವಂದಿಸಿ ಹೋಗ್ತಾ ಇದ್ದೀನಿ” ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296