ತುಮಕೂರು: ವಿದ್ಯಾರ್ಥಿನಿಯರ ಶಾಲಾ ಶೌಚಾಲಯದ ಮೇಲೆ ಕಲ್ಲು ತೂರಾಟ ಮಾಡಿದ್ದಲ್ಲದೆ ಪ್ರಶ್ನಿಸಿದ ವಿದ್ಯಾರ್ಥಿಯನ್ನು ಪುಂಡರ ಗುಂಪೊಂದು ಥಳಿಸಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಹುಳಿಯಾರು ನಿವಾಸಿಗಳಾದ ಮಹಬೂಬ್ ಷರಿಫ್, ಶಂಶುದ್ದೀನ್, ಇರ್ಫಾನ್, ಮುಬಾರಕ್, ಮುದಾಸೀರ್, ಯಾಸೀನ್ ಹಾಗೂ ತಾಝೀಮ್ ಕಲ್ಲು ತೂರಿ ಹಲ್ಲೆ ಮಾಡಿದ ಆರೋಪಿಗಳು.
ಇನ್ನು ಘಟನೆ ಸಂಬಂಧ ಪುಂಡರ ವಿರುದ್ಧ ದೂರು ದಾಖಲಾಗಿದ್ದು ಐವರನ್ನು ಬಂಧಿಸಲಾಗಿದೆ. ಉಳಿದಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4