ತುಮಕೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜಿಲ್ಲೆಯ ಗುಬ್ಬಿ ತಾಲ್ಲೂಕು ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮದ ಬಳಿ ನೂತನವಾಗಿ ನಿರ್ಮಾಣ ಮಾಡುವ 110/11ಕೆವಿ ಉಪಸ್ಥಾವರಕ್ಕೆ ಮಾರ್ಚ್ 7 ಅಥವಾ ತದನಂತರ ಹಾಲಿ ಇರುವ 110ಕೆವಿ ನಿಟ್ಟೂರು–ಕೆ.ಜಿ.ಟೆಂಪಲ್ ಏಕಮುಖ ವಿದ್ಯುತ್ ಮಾರ್ಗದಿಂದ 5.771 ಕಿಮೀ ಉದ್ದದ ದ್ವಿಮುಖ ಗೋಪುರಗಳ ಮೇಲೆ ಲಿಲೋ ವಿದ್ಯುತ್ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಲಾಗುವುದು.
ಸಾರ್ವಜನಿಕರು ಈ ಉಪಸ್ಥಾವರದ ಗೋಪುರವನ್ನು ಹತ್ತುವುದು, ಲೋಹದ ತಂತಿ, ಹಸಿರು ಬಳ್ಳಿ, ಕೊಂಬೆ, ಮತ್ತಿತರ ವಸ್ತುಗಳನ್ನು ಪ್ರಸರಣ ಮಾರ್ಗಕ್ಕೆ ಎಸೆಯುವುದು, ದನ–ಕರು ಮತ್ತಿತರ ಜಾನುವಾರುಗಳನ್ನು ವಿದ್ಯುತ್ ಗೋಪುರಕ್ಕೆ ಕಟ್ಟುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ನಿರ್ಬಂಧಿತ ಚಟುವಟಿಕೆಗಳನ್ನು ನಡೆಸಿ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ನಿಗಮವು ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗಿರುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.
ಈ ಪ್ರಸರಣ ಮಾರ್ಗವು ಜಿಲ್ಲೆಯ ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಸುರಿಗೇನಹಳ್ಳಿ ಕಾವಲ್, ಕೊನೆಮಾದೇನಹಳ್ಳಿ, ಕಟ್ಟಿಗೇನಹಳ್ಳಿ ಮತ್ತು ಜಿ. ಹೊಸಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಹಾದುಹೋಗಿದೆ ಎಂದು ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4