nammatumakuru

    Subscribe to Updates

    Get the latest creative news from FooBar about art, design and business.

    What's Hot

    ನೇಪಾಳಕ್ಕೆ ಪ್ರವಾಸ ಹೋಗಿದ್ದ ಶಿವಮೊಗ್ಗದ 6  ಮಂದಿ ಸುರಕ್ಷಿತ; ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಸ್

    August 28, 2026

    ವಸತಿ ರಹಿತರಿಗೆ ಗುಡ್‌ ನ್ಯೂಸ್‌: ಪ್ರತಿ ಜಿಲ್ಲೆಯಲ್ಲೂ 50,000 ನಿವೇಶನ; ಡಿಸೆಂಬರ್ ಒಳಗೆ 5 ಲಕ್ಷ ಪ್ಲಾಟ್‌ ಗಳ ವಿತರಣೆಗೆ ಸರ್ಕಾರದ ಸಿದ್ಧತೆ

    August 28, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026
    Facebook Twitter Instagram
    ಟ್ರೆಂಡಿಂಗ್
    • ನೇಪಾಳಕ್ಕೆ ಪ್ರವಾಸ ಹೋಗಿದ್ದ ಶಿವಮೊಗ್ಗದ 6  ಮಂದಿ ಸುರಕ್ಷಿತ; ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಸ್
    • ವಸತಿ ರಹಿತರಿಗೆ ಗುಡ್‌ ನ್ಯೂಸ್‌: ಪ್ರತಿ ಜಿಲ್ಲೆಯಲ್ಲೂ 50,000 ನಿವೇಶನ; ಡಿಸೆಂಬರ್ ಒಳಗೆ 5 ಲಕ್ಷ ಪ್ಲಾಟ್‌ ಗಳ ವಿತರಣೆಗೆ ಸರ್ಕಾರದ ಸಿದ್ಧತೆ
    • ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ
    • 175 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ: ಆರ್. ಅಶೋಕ್ ಆಗ್ರಹ
    • ತಂದೆ—ತಾಯಿ, ಅಕ್ಕ—ಭಾವನ ಸ್ಮರಣಾರ್ಥ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವಾರ್ಡ್ ನಿರ್ಮಿಸಿದ ಉದ್ಯಮಿ
    • ಬರಪೀಡಿತ ಪ್ರದೇಶ ಘೋಷಣೆ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆಗೆ ಚೇತನ್ ಸೊರಳ್ಳಿ ಅಭಿನಂದನೆ
    • ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ: ರೈತರ ಹಿತ ಹಾಗೂ ನೀರಿನ ಸಮರ್ಪಕ ನಿರ್ವಹಣೆಗೆ ಒತ್ತು
    • ಹಳ್ಳಿಮೈಸೂರು ಆಸ್ಪತ್ರೆ, ಬಸ್ ನಿಲ್ದಾಣಕ್ಕೆ ಸಂಸದ ಶ್ರೇಯಸ್ ಎಂ. ಪಟೇಲ್ ದಿಢೀರ್ ಭೇಟಿ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸ್ಥಳದಲ್ಲೇ ಖಡಕ್ ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಸಿದ್ದರಾಜು ಮನೆಗೆ ಕೊರಟಗೆರೆಯ ತಹಶೀಲ್ದಾರ್ ಭೇಟಿ
    ಕೊರಟಗೆರೆ February 22, 2023

    ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಸಿದ್ದರಾಜು ಮನೆಗೆ ಕೊರಟಗೆರೆಯ ತಹಶೀಲ್ದಾರ್ ಭೇಟಿ

    ಕೃಷಿ ಇಲಾಖೆ ವತಿಯಿಂದ ಸಿಗುವಂತಹ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಮೃತರ ಕುಟುಂಬಕ್ಕೆ ಒದಗಿಸಲಾಗುವುದು : ಸಹಾಯಕ ಕೃಷಿ ನಿರ್ದೇಶಕ ಹೆಚ್.ನಾಗರಾಜ
    By adminFebruary 22, 2023No Comments2 Mins Read
    koratagere

    ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂ ದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಬೆಂಡೋಣಿ ಗ್ರಾಮದ ಸಿದ್ದರಾಜು ಬಿ.ಎನ್ ಬಿನ್ ನರಸಿಂಹಯ್ಯ (45) ಎಂಬ ಬಡ ರೈತ ಸಾಲಬಾಧೆ ತಾಳಲಾರದೆ ತನ್ನದೇ ಜಮೀನಿನಲ್ಲಿ (ಸರ್ವೇ ನಂಬರ್ 22/2 ರಲ್ಲಿ) ಇರುವ ತುಗಲಿ ಮರಕ್ಕೆ ನೇಣು ಹಾಕಿಕೊಂಡು ಮೃತನಾಗಿದ್ದ ಘಟನೆ ಮಂಗಳವಾರ ನಡೆದಿತ್ತು.

    ಕೊರಟಗೆರೆ ಕೆನರಾ ಬ್ಯಾಂಕ್ ನಲ್ಲಿ ದಾಳಿಂಬೆ ಬೆಳೆ ಬೆಳೆಯುವ ಸಲುವಾಗಿ ಐದು ಲಕ್ಷ ಸಾಲ, ವಿ ಎಸ್ ಎಸ್ ಎನ್ ಬೆಂಡೋಣಿ ಶಾಖೆಯಲ್ಲಿ ಒಂದು ಲಕ್ಷ ಸಾಲ, ಖಾಸಗಿ ಫೈನಾನ್ಸ್ ಸಂಸ್ಥೆಯಾದ ಸಮಸ್ತ ಫೈನಾನ್ಸ್ ನಲ್ಲಿ ಹೈನುಗಾರಿಕೆಗಾಗಿ 70,000 ಸಾಲವನ್ನು ಮಾಡಿದ್ದರು ಮತ್ತು ಮಗನ ಚಿಕಿತ್ಸೆಗಾಗಿ ಸ್ಥಳೀಯ ಸಾರ್ವಜನಿಕರಲ್ಲಿ ಕೈ ಸಾಲವನ್ನು ಸಹ ಮಾಡಿ ಅತಿಯಾದ ಬಡ್ಡಿಯಿಂದ ಸಾಲವನ್ನು ತೀರಿಸಲಾಗದೆ ಕೊರಟಗೆರೆಯ ಕೆನರಾ ಬ್ಯಾಂಕ್ ಕಳುಹಿಸಿದ್ದ ಲೀಗಲ್ ನೋಟಿಸ್ ತನ್ನ ಜೇಬಿನಲ್ಲಿಯೇ ಇಟ್ಟುಕೊಂಡು ಮರಕ್ಕೆ ನೀನು ತೆಗೆದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು.

    ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಯನ್ನು ಮುಗಿಸಿ ಮೃತ ದುರ್ದೈವಿಯ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು.

    ಮೃತ ರೈತನ ಮನೆಗೆ ಕೊರಟಗೆರೆ ತಾಲ್ಲೂಕು ಆಡಳಿತ ಭೇಟಿ:

    ಅತಿಯಾದ ಬಡ್ಡಿಸಹಿತ ಸಾಲವನ್ನು ತೀರಿಸಲಾಗದೆ ಕೆನರಾ ಬ್ಯಾಂಕ್ ನಾ ಅಧಿಕಾರಿಗಳು ಕಳಿಸಿದ್ದ ಲೀಗಲ್ ನೋಟಿಸ್ ಅನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು ತನ್ನದೇ ಆದ ಜಮೀನಿನಲ್ಲಿ ತುಗಲಿ ಮರಕ್ಕೆ ನೇಣು ತೆಗೆದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ದುರ್ದೈವಿ ಸಿದ್ದರಾಜು ರವರ ಮನೆಗೆ ಕೊರಟಗೆರೆಯ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಮತ್ತು ಮತ್ತು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್ಚು ನಾಗರಾಜ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಸಿದ್ಧರಾಜು, ಗ್ರಾಮ ಲೆಕ್ಕಾಧಿಕಾರಿ ರಮೇಶ್, ಮತ್ತು ಗ್ರಾಮ ಸಹಾಯಕರುಗಳು ಭೇಟಿ ನೀಡಿ ಮೃತ ಸಿದ್ದರಾಜು ಕುಟುಂಬಸ್ಥರಿಗೆ ಧೈರ್ಯವನ್ನು ತುಂಬಿ ಸರ್ಕಾರದಿಂದ ಸಿಗುವಂತಹ ಎಲ್ಲಾ ಪರಿಹಾರಗಳನ್ನು ಕೊಡಿಸಲಾಗುವುದು ಎಂದು ತಿಳಿಸಿದರು.

    ನಂತರ ಮಾತನಾಡಿದ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ಸಿಗುವಂತಹ ಎಲ್ಲಾ ಪರಿಹಾರ ಮತ್ತು ಸವಲತ್ತುಗಳನ್ನು ಶೀಘ್ರದಲ್ಲಿಯೇ ಒದಗಿಸಲಾಗುವುದು ಹಾಗೂ ಮೃತನ ಹೆಂಡತಿಗೆ ವಿಧವಾ ವೇತನವನ್ನು ತುರ್ತಾಗಿ ನೀಡಲಾಗುವುದು ಮತ್ತು ಅಂಗವಿಕಲ ಮಗನಿಗೆ ಸರ್ಕಾರದಿಂದ ಸಿಗುವ ಮಾಶಾಸನವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳ ವರದಿಯನ್ನು ಪಡೆದು ನೀಡಲಾಗುವುದು ಎಂದು ತಿಳಿಸಿದರು.

    ನಂತರ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್ ನಾಗರಾಜ್  ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಬಡ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮೆಲ್ಲರಿಗೂ ಬೇಸರ ತಂದಿದೆ. ಕೃಷಿ ಇಲಾಖೆ ವತಿಯಿಂದ ಸಿಗುವಂತಹ ಪರಿಹಾರ ಮತ್ತು ಸವಲತ್ತುಗಳನ್ನು ಮೃತರ ಕುಟುಂಬಕ್ಕೆ ನೀಡಲು ಈಗಾಗಲೇ ತಯಾರಿ ನಡೆಸುತ್ತಿದ್ದೇವೆ ಕೇವಲ ಎರಡು ದಿನಗಳಲ್ಲಿ ಕೃಷಿ ಇಲಾಖೆ ನೀಡುವ ಟಾರ್ಪಲ್, ಪೈಪ್, ಸಹಾಯಧನ ಇತ್ಯಾದಿಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

    ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಕೊರಟಗೆರೆ: ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

    August 25, 2026

    ಕೊರಟಗೆರೆ: ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ; ಚುನಾವಣಾ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ಸೂಚನೆ

    August 25, 2026

    ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನ ದರ್ಶನಕ್ಕೆ ಆಗಮಿಸಿದ ಭಕ್ತಸಾಗರ

    August 22, 2026

    Comments are closed.

    Our Picks

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ನೇಪಾಳಕ್ಕೆ ಪ್ರವಾಸ ಹೋಗಿದ್ದ ಶಿವಮೊಗ್ಗದ 6  ಮಂದಿ ಸುರಕ್ಷಿತ; ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಸ್

    August 28, 2026

    ಶಿವಮೊಗ್ಗ: ನೇಪಾಳದಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಸಂಕಷ್ಟದ ಪರಿಸ್ಥಿತಿಯ ನಡುವೆಯೂ, ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗ ಜಿಲ್ಲೆಯ 6 ಜನ ಕನ್ನಡಿಗರು…

    ವಸತಿ ರಹಿತರಿಗೆ ಗುಡ್‌ ನ್ಯೂಸ್‌: ಪ್ರತಿ ಜಿಲ್ಲೆಯಲ್ಲೂ 50,000 ನಿವೇಶನ; ಡಿಸೆಂಬರ್ ಒಳಗೆ 5 ಲಕ್ಷ ಪ್ಲಾಟ್‌ ಗಳ ವಿತರಣೆಗೆ ಸರ್ಕಾರದ ಸಿದ್ಧತೆ

    August 28, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    175 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ: ಆರ್. ಅಶೋಕ್ ಆಗ್ರಹ

    August 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.