ಸಿಎಂ ರ್ಯಾಲಿಯಲ್ಲಿ ತಪ್ಪಿ ಹೋಗಿದ್ದ ಮಗುವನ್ನು ಪೊಲೀಸ್ ಇನ್ಸ್ ಸ್ಪೆಕ್ಟರ್ ಪೋಷಕರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ಹೊಸಹಳ್ಳಿ ಪೋಲೀಸ್ ಸ್ಟೇಷನ್ ನ ರಾವ್ ಗಣೇಶ್ ಮಗುವನ್ನ ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.
ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಸಿಎಂ ಸಿದ್ದರಾಮಯ್ಯನವರ ರ್ಯಾಲಿ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದರು. ಈ ವೇಳೆ ಭಾಗವಹಿಸಿದ್ದ ಪೋಷಕರ ಕೈಯಿಂದ 3 ವರ್ಷದ ಹೆಣ್ಣು ಮಗು ಅಲ್ಫಾ ತಪ್ಪಿಹೋಗಿತ್ತು.
ತಪ್ಪಿ ಹೋದ ಮಗು ಹೊಸಹಳ್ಳಿ ಪೋಲೀಸ್ ಸ್ಟೇಷನ್ ನ ಇನ್ಸ್ಸ್ಪೆಕ್ಟರ್ ರಾವ್ ಗಣೇಶ್ ಕಣ್ಣಿಗೆ ಬಿದ್ದಿತ್ತು. ಜನರ ನಡುವೆ ಕಣ್ಣೀರಿಡುತ್ತಿದ್ದ ಮಗುವನ್ನು ಗಣೇಶ್ ಕಂಡಿದ್ದಾರೆ. ಮಗುವಿಗೆ ಸರಿಯಾಗಿ ಮಾತು ಕೂಡ ಬರುತ್ತಿರಲಿಲ್ಲ. ತಕ್ಷಣವೇ ಮಗುವನ್ನು ಸಂತೈಸಿಕೊಂಡು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಬಳಿಕ ಮಗುವಿನ ಬಳಿ ಮಾಹಿತಿ ಕಲೆ ಹಾಕಿ, ರ್ಯಾಲಿ ಮುಗಿದ ನಂತರ ಪೋಷಕರಿಗೆ ಒಪ್ಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296