ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಧರ್ಮರಾಜ್ ಸೂರ್ಯವಂಶಿ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಕುಸುಮಾ ಮನೆಯೊಳಗೆ ಗೆರೆ ಎಳೆದು ಮನೆಯನ್ನು ಎರಡು ಭಾಗ ಮಾಡಿದ್ದಾಳೆ. ಮನೆ ಬಿಟ್ಟು ಹೋಗು ಎಂದು ಸೊಸೆಗೆ ದುಂಬಾಲು ಬಿದ್ದಿದ್ದ ಮಗ ತಾಂಡವ್ ಗೆ ಕುಸುಮಾ ಪಾಠ ಕಲಿಸಲು ಮುಂದಾಗಿದ್ಧಾಳೆ. ಹಬ್ಬದ ದಿನ ತಾನು ರುಚಿಯಾದ ಊಟ ಮಾಡಲು ತಾಂಡವ್ ಕೇಳಿದಷ್ಟು ಹಣ ಕೊಟ್ಟು ಸೆಲೆಬ್ರಿಟಿ ಶೆಫ್ ರೂಪಾಳನ್ನು ಮನೆಗೆ ಕರೆ ತರುತ್ತಾನೆ.
ತಾಂಡವ್ ನನಗೆ ಹೇಳಿದಂತೆ ಇಲ್ಲಿ ಏನೂ ಇಲ್ಲ, ಬೇಕಂತಲೇ ತಾಂಡವ್ ಭಾಗ್ಯಾಳಿಂದ ದೂರ ಇದ್ದಾನೆ. ಮಕ್ಕಳು, ಅಪ್ಪ ಅಮ್ಮನನ್ನೂ ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದು ತಿಳಿದ ನಂತರ ರೂಪಾ ಕೂಡಾ ತಾಂಡವ್ ಗೆ ಬುದ್ಧಿ ಕಲಿಸಲು ನಿರ್ಧರಿಸುತ್ತಾಳೆ. ಭಾಗ್ಯಾ ಕುಸುಮಾ ಬಳಿ ಬಂದು ಕ್ಷಮೆ ಕೇಳುತ್ತಾಳೆ. ನಿಮ್ಮ ಮಗ ನನ್ನ ಬಳಿ ಬಂದು ಸುಳ್ಳು ಹೇಳಿದರು. ಭಾಗ್ಯಾಳದ್ದೇ ಎಲ್ಲಾ ತಪ್ಪು ಎನ್ನುವಂತೆ ಆರೋಪ ಮಾಡಿದ್ದರು. ಆದರೆ ಈಗ ನನಗೆ ಸತ್ಯ ಏನೆಂದು ಗೊತ್ತಾಗಿದೆ. ಇನ್ಮುಂದೆ ನಾನು ನಿಮ್ಮ ಪರ ಇದ್ದೇನೆ ಎಂದು ಧೈರ್ಯ ಹೇಳುತ್ತಾಳೆ.
ಇತ್ತ ತಾಂಡವ್ ಗೆ ಕರೆ ಮಾಡುವ ಶ್ರೇಷ್ಠಾ ತಂದೆ ತಾಯಿ ಮದುವೆಗೆ ಮುನ್ನ ಜೊತೆಯಾಗಿ ಇರಬಾರದು ಎಂದು ಎಷ್ಟು ಹೇಳಿದರೂ ನಿಮ್ಮ ತಾಯಿ ಇನ್ನೂ ನನ್ನ ಮಗಳ ಮನೆಯಲ್ಲಿದ್ಧಾರೆ. ಆದಷ್ಟು ಬೇಗ ನಿಮ್ಮ ತಾಯಿಯನ್ನು ಮನೆಯಿಂದ ಹೊರ ಬರುವಂತೆ ಹೇಳು. ಮದುವೆ ದಿನಾಂಕ ಫಿಕ್ಸ್ ಆಗಿದೆ. ನಿನಗೆ ನನ್ನ ಮಗಳು ಬೇಕು ಎಂದರೆ ಬಂದು ಮದುವೆ ಮಾಡಿಕೋ ಎನ್ನುತ್ತಾರೆ.
ಮತ್ತೊಂದೆಡೆ ಭಾಗ್ಯಾ ಕಡೆಯ ಎಲ್ಲರೂ ಸಾಲಾಗಿ ಊಟಕ್ಕೆ ಕೂರುತ್ತಾರೆ. ಅವರನ್ನು ನೋಡಿ ತಾಂಡವ್ ಕೊಂಕು ಆಡುತ್ತಾನೆ. ಹೋ ಎಲ್ಲರೂ ಊಟಕ್ಕೆ ಕುಳಿತರಾ? ಹಬ್ಬ ಎಂದರೆ ಕನಿಷ್ಠ 5–6 ಐಟಮ್ ಆದ್ರೂ ಇರಬೇಕಲ್ಲವೇ. ನಮ್ಮ ಮನೆಯಲ್ಲಿ ರುಚಿ ರುಚಿಯಾದ ಅಡುಗೆ ತಯಾರಾಗಿದೆ ನಾನಂತೂ ಎಂಜಾಯ್ ಮಾಡುತ್ತೇನೆ ಎಂದು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಶುರು ಮಾಡುತ್ತಾನೆ. ಆದರೆ ರೂಪಾ ಬೇಕಂತಲೇ ಅಡುಗೆ ಹಾಳು ಮಾಡಿರುತ್ತಾಳೆ. ಅಡುಗೆ ರುಚಿ ಮಾಡಿದ ತಾಂಡವ್, ಏನು ಇಷ್ಟು ಕೆಟ್ಟದಾಗಿ ಅಡುಗೆ ಮಾಡಿದ್ದೀರ ಎಂದು ಕೇಳುತ್ತಾನೆ. ಹೌದು ನಾನು ಮಾಡುವುದೇ ಹೀಗೆ. ನಾನು ಮಾಡುವ ಅಡುಗೆ ಚೆನ್ನಾಗಿದೆಯೋ ಇಲ್ಲವೋ ಎಂದು ಯೂಟ್ಯೂಬ್ ನೋಡುವ ಜನರಿಗೆ ಹೇಗೆ ಗೊತ್ತಾಗುತ್ತದೆ. ಜನರಿಗೆ ಬಣ್ಣ ಬಣ್ಣದ ಪಾತ್ರೆಗಳು, ಒಳ್ಳೆ ವಿಡಿಯೋ ಇದ್ದರೆ ಸಾಕು ಎನ್ನುತ್ತಾಳೆ.
ಹಾಗಿದ್ರೆ ನೀವೂ ಇದೇ ಊಟ ತಿನ್ನುತ್ತೀರಾ ಎಂದು ತಾಂಡವ್ ಕೇಳುತ್ತಾನೆ. ಇಲ್ಲ ನನಗಾಗಿ ಅಡುಗೆಯವರು ಇದ್ದಾರೆ ಅವರು ತಯಾರಿಸಿದ ಊಟ ಮಾಡುತ್ತೇನೆ. ಈಗಲೂ ಅಷ್ಟೇ ನಾನು ಈ ಊಟ ಮಾಡುವುದಿಲ್ಲ. ಪಕ್ಕದ ಮನೆಯವರು ನನ್ನನ್ನು ಊಟಕ್ಕೆ ಕರೆದಿದ್ದಾರೆ ಎಂದು ಹೇಳಿ, ಗೆರೆ ದಾಟಿ ಭಾಗ್ಯಾ ಕಡೆ ಹೋಗಿ ಊಟಕ್ಕೆ ಕೂರುತ್ತಾಳೆ. ಅದುವರೆಗೂ ಭಾಗ್ಯಾಳನ್ನು ನೋಡಿ ಕೊಂಕು ಮಾಡುತ್ತಿದ್ದ ತಾಂಡವ್ ಗೆ ಅವಮಾನವಾದಂತೆ ಆಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296