ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಮಾಡಿ, ಠೇವಣಿ ಕಳೆದುಕೊಳ್ಳೋ ಬದಲು ಕಾಂಗ್ರೆಸ್ ಪಕ್ಷವು ಅಭ್ಯರ್ಥಿಯನ್ನ ವಾಪಾಸ್ ತೆಗೆದುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, “ನಾನು ಇಂತಹ ಹತ್ತಾರು ಸಭೆಗಳಲ್ಲಿ ಭಾಗವಹಿಸಿದ್ದೇನೆ ಆದ್ರೆ ಈ ಕಾರ್ಯಕ್ರಮ ನೋಡಿದ್ರೆ ಆಶ್ಚರ್ಯವಾಗ್ತಿದೆ ಎಂದರು. ಸಾವಿರಾರು ಸಂಖ್ಯೆಯಲ್ಲಿ ನೀವೆಲ್ಲರೂ ಸೇರಿದ್ದೀರಿ. ಈ ಜನಸ್ತೋಮವನ್ನ ನೋಡಿದ್ರೆ ಕಾಂಗ್ರೆಸ್ ನವರು ತಮ್ಮ ಅಭ್ಯರ್ಥಿಯನ್ನ ವಾಪಾಸ್ ತೆಗೆದುಕೊಳ್ಳಬೇಕು ಅನ್ನಿಸುತ್ತೆ” ಎಂದರು.
“ಸಹಸ್ರ ಸಂಖ್ಯೆಯಲ್ಲಿ ನೀವೆಲ್ಲಾ ಬಂದಿದ್ದೀರ. ನಾನು ಕಾಂಗ್ರೆಸ್ ಸರ್ಕಾರಕ್ಕೆ ಕೇಳೋಕೆ ಬಯಸುತ್ತೀನಿ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ 6 ಸಾವಿರ ಕೊಟ್ರೆ. ನಾನು 4 ಸಾವಿರ ರೂಪಾಯಿ ಕೊಡ್ತಿದ್ದೆ. ಅದನ್ನ ನೀವ್ಯಾಕೆ ನಿಲ್ಲಿಸಿದ್ರಿ ಉತ್ತರ ಕೊಡ್ತೀರಾ” ಎಂದರು.
“ಭಾಗ್ಯಲಕ್ಷ್ಮಿ ಯೋಜನೆಯನ್ನ ಯಾಕೆ ನಿಲ್ಲಿಸಿದ್ರಿ ಉತ್ತರ ಕೊಡ್ತೀರಾ. ಜನಪರ ಯೋಜನೆಗಳನ್ನ ನಿಲ್ಲಿಸಿರೋದನ್ನ ನೋಡಿದ್ರೆ ಸರ್ಕಾರ ಪಾಪರ್ ಆಗಿರೋದು ಗೊತ್ತಾಗ್ತಿದೆ. ಈ ಸರ್ಕಾರಕ್ಕೆ ಆಡಳಿತ ನಡೆಸೋ ನೈತಿಕತೆ ಇಲ್ಲ” ಎಂದರು.
“ವಿ. ಸೋಮಣ್ಣ ಅವರನ್ನ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ. ಜೆಡಿಎಸ್-ಬಿಜೆಪಿ ಪರವಾಗಿ ನಿಮಗೆ ಅಭಿನಂದನೆ ಸಲ್ಲಿಸ್ತೀನಿ” ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296