ಬೆಂಗಳೂರು: ಪಾಪಿ ತಂದೆಯೋರ್ವ (ಮಂತ್ರವಾದಿ) ಮಗುವನ್ನು ನಿಧಿಗಾಗಿ ಬಲಿ ಕೊಡಲು ಮುಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೆ ಆರ್ ಪುರಂ ನಲ್ಲಿ ಈ ಘಟನೆ ನಡೆದಿದೆ. ಸದ್ದಾಂ ಎಂಬಾತ ನಿಧಿಗಾಗಿ ಮಾಟ ಮಂತ್ರ ಮಾಡುತ್ತಿದ್ದನು.
ನಿಧಿ ಆಸೆಗಾಗಿ ಕುಟ್ಟಿ ಸೈತಾನ್ ಪೂಜೆಯಲ್ಲಿ ತನ್ನ ಮಗುವನ್ನು ಬಲಿ ಕೊಡಲು ಮುಂದಾಗಿದ್ದು, ಬಲಿ ನೀಡುವಂತೆ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ.
ಮಂತ್ರ ಪಠಿಸುತ್ತಾ ಸದ್ದಾಂ ತಡರಾತ್ರಿ ವಾಮಾಚಾರ ಅಭ್ಯಾಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಪತಿ ಸದ್ದಾಂ ಕಿರುಕುಳಕ್ಕೆ ಬೇಸತ್ತು ಪತ್ನಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q