ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ಧರಣಿ ಮುಂದುವರಿಸಲಿದ್ದಾರೆ. ರೈತ ಮುಖಂಡರು ಹಾಗೂ ಕೇಂದ್ರ ಸಚಿವರ ನಡುವೆ ಇದು ನಾಲ್ಕನೇ ಸುತ್ತಿನ ಮಾತುಕತೆಯಾಗಿದೆ. ಪ್ರಸ್ತಾವನೆಗಳನ್ನು ಸರ್ಕಾರ ತಿರಸ್ಕರಿಸಿದೆ ಎಂದು ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಮಾಹಿತಿ ನೀಡಿದರು.
23 ಬೆಳೆಗಳಿಗೆ ಎಂಎಸ್ ಪಿ ಖಾತ್ರಿಪಡಿಸುವಂತೆ ಕೆಎಂಎಂ ಮುಖಂಡ ಸರ್ವಾನ್ ಸಿಂಗ್ ಪಂದಾರ್ ಒತ್ತಾಯಿಸಿದರು. 21ರವರೆಗೆ ರೈತರು ಶಂಭು ಗಡಿಯಲ್ಲಿಯೇ ಇರುತ್ತಾರೆ. ಸರ್ಕಾರದ ಉತ್ತರಕ್ಕಾಗಿ ಕಾಯುತ್ತೇವೆ. ರೈತರು ಕೂಡ ನಿರ್ಧಾರ ಕೈಗೊಳ್ಳದಿದ್ದರೆ ದೆಹಲಿಗೆ ಹೋಗುವುದಾಗಿ ಹೇಳಿದರು.
ರೈತರ ಆಂದೋಲನದ ನಂತರ ಹರಿಯಾಣ ಸರ್ಕಾರ ಇಂಟರ್ನೆಟ್ ನಿಷೇಧವನ್ನು ವಿಸ್ತರಿಸಿದೆ. ಫೆಬ್ರವರಿ 19 ರವರೆಗೆ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ SMS ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಅವಲೋಕಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹರಿಯಾಣ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿವಿಎಸ್ ಎನ್ ಪ್ರಸಾದ್ ಹೇಳಿದ್ದಾರೆ. ಅಂತರ್ಜಾಲ ಸೇವೆಗಳ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಿದ್ದು, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಅಪಾಯವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


