ಪಾವಗಡ: ಪಟ್ಟಣದ ಸ್ವಾಮಿ ವಿವೇಕಾನಂದ ಪಿ.ಯು. ಕಾಲೇಜಿನ ವಿದ್ಯಾರ್ಥಿ ಪ್ರಭಾಸ್ ಯಾದವ್ ವಿಜ್ಙಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯಲ್ಲಿ 579 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾನೆ.
ಕಲಾ ವಿಭಾಗದಲ್ಲಿ ರಜಿತಾ ಎನ್ 503 ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಸಮೀರಾ ಬೇಗಂ 566 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಉಳಿದಂತೆ ವಿಜ್ಞಾನ ವಿಭಾಗದಲ್ಲಿ ಅನುಷಾ ಆರ್ 565, ನಿಖಿಲ್ ಸಾಯಿ 565, ವಾಣಿಜ್ಯ ವಿಭಾಗದಲ್ಲಿ ಸಿಂಚನ 564, ರಕ್ಷಿತಾ 549 ಕಲಾ ವಿಭಾಗದಲ್ಲಿ ಶ್ವೇತಾ 493, ಶೋಭಾ 491 ಅಂಕಗಳನ್ನು ಪಡೆಯುವ ಮೂಲಕ ಕ್ರಮವಾಗಿ ಕಾಲೇಜಿನಲ್ಲಿ ಅತ್ಯುತ್ತಮ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿವೇಕಾನಂದ ಪಿಯು ಕಾಲೇಜಿಗೆ ಎಲ್ಲಾ ವಿಭಾಗಗಳಿಂದ ಶೇ. 82.46 ಫಲಿತಾಂಶ ಲಭ್ಯವಾಗಿದ್ದು ಉನ್ನತ ದರ್ಜೆ 27, ಪಸ್ಟ್ ಕ್ಲಾಸ್ 145, ಸೆಕೆಂಡ್ ಕ್ಲಾಸ್ 36, ಪಾಸ್ ಕ್ಲಾಸ್ 13 ಪಡೆದು ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿತಂದ ಪಿಯುಸಿಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ.ಜಿ. ವೆಂಕಟರಾಮಯ್ಯ, ಅಧ್ಯಕ್ಷೆ ಲಕ್ಷ್ಮೀ ವೆಂಕಟರಾಮಯ್ಯ, ಉಪಾಧ್ಯಕ್ಷ ಶಶಿಕಿರಣ್, ಕಾಲೇಜಿನ ಪ್ರಾಂಶುಪಾಲ ನಾಗೇಂದ್ರ, ಉಪ ಪ್ರಾಂಶುಪಾಲ ನಾಗರಾಜ್ ಹಾಗೂ ಉಪನ್ಯಾಸಕ ವರ್ಗ , ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296