ತಿಪಟೂರು: ತಿಪಟೂರು ಕಾಂಗ್ರೆಸ್ ಮುಖಂಡ ಲೋಕೇಶ್ ಅವರು, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನೂರಾರು ಬೆಂಬಲಿಗರೊಂದಿಗೆ ರಾಜೀನಾಮೆ ನೀಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಶಾಸಕ ಕೆ ಷಡಕ್ಷರಿ ಅವರನ್ನು ಶಾಸಕರನ್ನಾಗಿ ಮಾಡಿದವು.
ಆದರೆ ಶಾಸಕರ ಅಹಂಕಾರ ಧೋರಣೆ, ಕುಟುಂಬ ರಾಜಕೀಯ ತಾಲೂಕಿನಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ದಿಂದಾಗಿ, ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಬಂದರು ನಮ್ಮನ್ನು ಯಾರು ಸಂಪರ್ಕ ಮಾಡಲಿಲ್ಲ. ಇದಕ್ಕೆಲ್ಲ ಶಾಸಕರ ಒತ್ತಡವೇ ಕಾರಣ ಇನ್ನೆರಡು ದಿನ ಮುಖ್ಯಮಂತ್ರಿಗಳು ಬರುವ ಕಾರ್ಯಕ್ರಮವಿದ್ದರೂ ಸಹ ನಮ್ಮನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರು ಸಹ ಸಂಪರ್ಕ ಮಾಡಿಲ್ಲ.
ಎಸ್ ಪಿ ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಸುವಾಗ ತಿಪಟೂರಿನಿಂದ ನೂರು ಜನ ಕಾರ್ಯಕರ್ತರು ಸಹ ಹೋಗಿಲ್ಲ. ಶಾಸಕರು ಜನತೆಗೆ ಸರಿಯಾಗಿ ಸ್ಪಂಧಿಸುತ್ತಿಲ್ಲ. ತಿಪಟೂರು ನಗರದಲ್ಲಿ ದಿನೇ ದಿನೇ ಕಳ್ಳತನ ಹೆಚ್ಚುತಿದ್ದು, ಶಾಸಕರು ಇತ್ತ ಗಮನ ಕೊಡುತ್ತಿಲ್ಲ ಎಂದು ಆರೋಪಿಸಿದರು.
ನನ್ನ ಜೊತೆ ತಾಲೂಕಿನ ನಗರಸಭಾ ಸದಸ್ಯರು ಹಾಗೂ 61 ಜನ ಗ್ರಾಮ ಪಂಚಾಯಿತಿ ಸದಸ್ಯರು ರಾಜೀನಾಮೆ ನೀಡುತ್ತಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲಿ ಮಲ್ಲೇಶ್, ಸೊಪ್ಪು ಗಣೇಶ್, ವಿದ್ಯಾ, ಶಶಿಧರ್, ತರಕಾರಿ ಹರೀಶ್ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು
ವರದಿ: ಆನಂದ್ ತಿಪಟೂರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296