ಸರಗೂರು: ತಾಲ್ಲೂಕಿನ ಕಬಿನಿ ಜಲಾಶಯದಿಂದ ನೀರು ನದಿಗೆ ಹೆಚ್ಚಳ ಮಾಡುವುದರಿಂದ ಹೊಳೆಯ ದಡದಲ್ಲಿ ಇರುವ ಗ್ರಾಮಗಳಲ್ಲಿ ಜಮೀನಿಗೆ ನೀರು ನುಗ್ಗಿದ್ದು, ರೈತರ ಬೆಳೆಗಳು ಮುಳುಗಿ ಹೋಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಮೀನು ಮತ್ತು ಗದ್ದೆಗಳು ಜಾಲವೃತಗೊಂಡು ರೈತರು ಬೆಳೆದ ಬೆಳೆ ಕೈಗೆ ಸಿಕ್ಕದಂತಾಗಿದೆ ಎಂದು ಕೊತ್ತೇಗಾಲ ಗ್ರಾಮದ ಶಿವಲಿಂಗಪ್ಪ ಎಂಬುವರು ಅಳಲು ತೋಡಿಕೊಂಡಿದ್ದಾರೆ.
ಕೊತ್ತೇಗಾಲ ಗ್ರಾಮದ ಶಿವಲಿಂಗಪ್ಪ ಎಂಬುವರ 10 ಎಕರೆ ಗದ್ದೆಯಲ್ಲಿ ಬೆಳೆದ ಭತ್ತ ಬೆಳೆದಿದ್ದು ಸಾವಿರಾರು ಹಣವನ್ನು ಖರ್ಚು ಮಾಡಿ ಬೆಳೆಯನ್ನು ಬೆಳೆದ ಫಸಲು ಇನ್ನೂ ವಾರದಲ್ಲೇ ಕಟಾವು ಮಾಡಬೇಕು ಸಮಯದಲ್ಲಿ ನೀರಿನಲ್ಲಿ ಜಲಾವೃತವಾಗಿ ಗದ್ದೆಯಲ್ಲ ನೀರು ತುಂಬಿಕೊಂಡು ಬೆಳೆಯಲ್ಲ ನೀರು ಪಾಲಾಗಿದೆ ಎಂದು ಆಗ್ರಹಿಸಿದರು.
ರೈತರ ಜಮೀನಿಗೆ ನೀರು ನುಗ್ಗಿದ್ದು ಭತ್ತ, ರಾಗಿ, ಚೆಂಡು ಮಲ್ಲಿಗೆ, ಕಬ್ಬು, ತೊಗರಿ ಬೆಳೆಗಳು ನೀರು ಪಾಲಾಗಿವೆ. ಪ್ರವಾಹ ಬಂದಾಗಲೆಲ್ಲ ರೈತರು ಇದೆ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ರೈತ ಶಿವಲಿಂಗಪ್ಪ ಒತ್ತಾಯಿಸಿದ್ದಾರೆ.
ಕಬಿನಿ ಜಲಾಶಯದ ಹೊಳೆಯ ಹತ್ತಿರದ ತುಂಬಸೋಗೆ ಸೇತುವೆ ಮುಳುಗುವ ಭೀತಿ ಇದೆ. ಈ ಸೇತುವೆ ಮೂಲಕ ಸರಗೂರಿಂದ ಕೋಟೆ ಮತು ಮೈಸೂರು ಕಡೆಗೆ ಹಲವು ವಾಹನಗಳು ತೆರಳುತ್ತಾರೆ. ಈಗ ಪ್ರವಾಹ ಹೆಚ್ಚಾಗಿದ್ದು ಸೇತುವೆ ಮುಳುಗಿದರೆ ರಸ್ತೆ ಸಂಪೂರ್ಣ ಬಂದ್ ಆಗಲಿದೆ. ಜನಪ್ರತಿನಿಧಿಗಳಿಗೆ ಸೇತುವೆಯನ್ನು ಎತ್ತರಕ್ಕೆ ನಿರ್ಮಾಣ ಮಾಡಿ ಎಂದು ತಿಳಿಸಿದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ಅಧಿಕಾರಿಗಳು ನೆರೆಹಾವಳಿ ಬಂದಾಗ ಮಾತ್ರ ಇತ್ತ ಕಡೆ ಗಮನಹಿಸುತ್ತಾರೆ. ನಮ್ಮ ಸಮಸ್ಯೆ ಬಗೆಹರಿಸಿ ಎಂದು ಈ ಭಾಗದ ರೈತರ ಆಗ್ರಹವಾಗಿದೆ.
ತಾಲ್ಲೂಕು ಆಡಳಿತ ಅಧಿಕಾರಿಗಳು ಪ್ರವಾಹ ಬಂದಾಗ ಮಾತ್ರ ಇತ್ತ ಕಡೆ ಗಮನಹರಿಸುತ್ತಾರೆ. ಜನರ ಸಮಸ್ಯೆ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ರೈತರ ನೊವು ಅಧಿಕಾರಿಗಳಿಗೆ ತಿಳಿಯುವುದಿಲ್ಲ. ಇತ್ತ ಕಡೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎನ್ನುತ್ತಾರೆ ಕೊತ್ತೇಗಾಲ ಗ್ರಾಮಸ್ಧರು ದೂರಿದ್ದರು.
ಜಮೀನಿಗೆ ನೀರು ಬಂದಿದ್ದರಿಂದ ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿವೆ, ಸಾವಿರಾರೂ ರೂ.ಖಚು ಮಾಡಿ ಬಿತ್ತನೆ ಮಾಡಿದ್ದು ಈಗ ಬೆಳೆ ಕೈಗೆ ಬರುವ ಸಮಯದಲ್ಲಿ ನದಿ ಪ್ರವಾಹಕ್ಕೆ ಸಿಲುಕಿ ಬೆಳೆಗಳು ಹಾನಿಯಾಗಿವೆ ಎನ್ನುತ್ತಾರೆ ರೈತರು.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ರೈತರ ನೆರವಿಗೆ ದಾವಿಸಿ ಸಮಸ್ಯೆ ಬಗೆಹರಿಸಬೇಕೆಂದು ಈ ಭಾಗದ ರೈತರ ಆಗ್ರಹವಾಗಿದೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296