ಲಕ್ನೋ: ಬೀದಿನಾಯಿಗಳು ಕಚ್ಚಿದ ಪರಿಣಾಮ 40 ವರ್ಷದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಲಕ್ನೋದ ಜಾನಕಿಪುರಂ ಎಕ್ಸ್ಟೆನ್ಷನ್ ಪ್ರದೇಶದಲ್ಲಿ ನಡೆದಿದೆ.
ಶ್ರೀಸ್ತಿ ಅಪಾರ್ಟ್ಮೆಂಟ್ ನಿವಾಸಿ ರಿಹಾನ್ನಾ ಆಸಿಫ್ ರಾತ್ರಿ 9 ಗಂಟೆಗೆ ತನ್ನ ಮಾವನೊಂದಿಗೆ ವಾಯುವಿಹಾರಕ್ಕೆ ತೆರಳಿದ್ದು, ಬಳಿಕ ಅಲ್ಲೇ ಇದ್ದ ಬೆಂಚಿನ ಮೇಲೆ ಕುಳಿತುಕೊಂಡಿದ್ದರು.
ಈ ವೇಳೆ ಸುಮಾರು 6 ನಾಯಿಗಳು ಅವರ ಮೇಲೆ ದಾಳಿ ನಡೆಸಿದ್ದು, ಈ ವೇಳೆ ನಾಯಿಗಳು ಮಹಿಳೆಯ ದೇಹದಿಂದ ಮಾಂಸವನ್ನು ಕಿತ್ತು ಹಾಕಲು ಪ್ರಯತ್ನಿಸಿದ್ದು, ತೀವ್ರವಾದ ದಾಳಿ ನಡೆಸಿದೆ. ಈ ವೇಳೆ ಮಹಿಳೆಯ ಮಾವ ಸ್ಥಳಕ್ಕೆ ಓಡಿ ಬಂದು ನಾಯಿಗಳನ್ನು ಸ್ಥಳದಿಂದ ಬೆದರಿಸಿ ಓಡಿಸಿ ಮಹಿಳೆಯನ್ನು ಕಾಪಾಡಿದ್ದಾರೆ.
ರಿಹಾನ್ನಾ ಎಂಬ ಮಹಿಳೆ ನಾಯಿಯಿಂದ ಕಡಿತಕ್ಕೊಳಗಾದ ಮಹಿಳೆಯಾಗಿದ್ದು, ತನ್ನ ಮಾವ ರಕ್ಷಣೆಗೆ ಬಾರದೇ ಇದ್ದಿದ್ದರೆ, ನಾಯಿಗಳು ನನ್ನನ್ನು ಕಚ್ಚಿ ಸಾಯಿಸುತ್ತಿದ್ದವು ಎಂದು ಮಹಿಳೆ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz