ತುಮಕೂರು: ಸಹಕಾರ ಸಂಘ/ಸಹಕಾರ ಬ್ಯಾಂಕುಗಳ ಸದಸ್ಯರ ಆರೋಗ್ಯ ರಕ್ಷಣಾ ಹಿತದೃಷ್ಟಿಯಿಂದ ಸರ್ಕಾರದಿಂದ ಅನುಷ್ಟಾನಗೊಳಿಸಿರುವ ಯಶಸ್ವಿನಿ ಆರೋಗ್ಯ ಯೋಜನೆಯಡಿ ನೋಂದಾಯಿಸಿಕೊಳ್ಳಲು ಮಾರ್ಚ್ 31 ಕಡೆಯ ದಿನವಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಕಾರ ಸಂಘಗಳು/ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರುವ ಅರ್ಹ ಸದಸ್ಯರು ಸಂಬಂಧಿಸಿದ ಸಹಕಾರ ಸಂಘ/ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರನ್ನು ಸಂಪರ್ಕಿಸಿ ಯಶಸ್ವಿನಿ ಯೋಜನೆಯ ವಂತಿಕೆ ಮೊತ್ತವನ್ನು ಪಾವತಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ಪ.ಜಾತಿ ಹಾಗೂ ಪ.ಪಂಗಡಗಳಿಗೆ ಸೇರಿದ ಸದಸ್ಯರುಗಳಿಗೆ ವಂತಿಕೆ ಮೊತ್ತವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ.
ಅರ್ಹ ಸದಸ್ಯರು ಮಾರ್ಚ್ 31ರೊಳಗಾಗಿ ಯಶಸ್ವಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4