ಶಿವಮೊಗ್ಗ: ತಮ್ಮ ಹೆಣ ಕೂಡ ಬಿಜೆಪಿ ಪಕ್ಷಕ್ಕೆ ಹೋಗೋದಿಲ್ಲ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ತಿರುಗೇಟು ನೀಡುವ ಭರದಲ್ಲಿ ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಕೆ.ಎಸ್ ಈಶ್ವರಪ್ಪ, ‘ಜೀವಂತ ಸಿದ್ದರಾಮಯ್ಯನೇ ನಮಗೆ ಬೇಕಿಲ್ಲ, ಅವರ ಹೆಣ ತೆಗೆದುಕೊಂಡು ಏನು ಮಾಡೋಣ? ನಾಯಿಯೂ ಕೂಡ ಅವರ ಹೆಣ ಮೂಸಿ ನೋಡೋದಿಲ್ಲ ಎಂದು ಹೇಳಿದರು.
ಶಾಸಕ ಕೆ ಎಸ್ ಈಶ್ವರಪ್ಪ, ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರು ಒಂದು ಪಕ್ಷದ ಅಧ್ಯಕ್ಷರ ಬಗ್ಗೆ ಅಂಥ ಪದಗಳನ್ನು ಬಳಸುವುದು ಆವರ ಘನತೆಗೆ ಶೋಭೆ ನೀಡೋದಿಲ್ಲ. ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳುವುದು ಅವರ ಜವಾಬ್ದಾರಿ. ಮತ್ತೆ ಆಪದ ಬಳಕೆ ಮಾಡಿದರೇ ನಾವು ಆ ರೀತಿ ಉತ್ತರಿಸಬೇಕಾಗುತ್ತೆ ಎಂದರು .
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


