ದಾವಣಗೆರೆ: ಅರ್ಚಕರೊಬ್ಬರು ದೇವರಿಗೆ ವಿಚಿತ್ರ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಶಾಸಕ ಎಂಪಿ. ರೇಣುಕಾಚಾರ್ಯ ಕ್ಷೇತ್ರ ಹೊನ್ನಾಳಿ ತಾಲೂಕು ಕತ್ತಿಗೆ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ ವಿಚಿತ್ರ ಪೂಜೆಯಿಂದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೇಡರ ಕಣ್ಣಪ್ಪ ಶಿವನಿಗೆ ಒಂದು ಕಣ್ಣು ದಾನ ಕೊಟ್ಟು ಇನ್ನೊಂದು ಕಣ್ಣು ಕೊಡಲು ಶಿವಲಿಂಗದ ಮೇಲೆ ಕಾಲಿಡುವಂತೆ ಈ ಅರ್ಚಕ ಮಹೇಶ್ವರಯ್ಯ, ಆಂಜನೇಯ ಸ್ವಾಮೀ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುತ್ತಾರೆ.
ಅರ್ಚಕನ ಪೂಜೆ ವಿಧಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz