ಹೈದರಾಬಾದ್ ನಲ್ಲಿ ಅಪ್ರಾಪ್ತ ವಯಸ್ಕ ಬಾಲಕರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸೆಗಿದ್ದು ಹಯಾತ್ ನಗರ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಕೆಲವೇ ದಿನಗಳ ಹಿಂದೆ ಸಂತ್ರಸ್ತೆಯ ಕುಟುಂಬದ ಗಮನಕ್ಕೆ ಬಂದಿದೆ.ಐವರು ಬಾಲಕರಲ್ಲಿ ಮೂವರು 10ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಇನ್ನಿಬ್ಬರು 9ನೇ ತರಗತಿ ಓದುತ್ತಿದ್ದಾರೆ, ಸಂತ್ರಸ್ತೆ 10ನೇ ತರಗತಿ ಓದುತ್ತಿದ್ದಾಳೆ ಎನ್ನಲಾಗಿದೆ.
ಬಾಲಕರು ಅಶ್ಲೀಲ ಚಿತ್ರಗಳ ಚಟಕ್ಕೆ ಬಿದ್ದಿದ್ದರು. ಇವರೆಲ್ಲರೂ ದಿನಗೂಲಿ ಕಾರ್ಮಿಕರ ಮಕ್ಕಳು.ಸಂತ್ರಸ್ತೆಗೆ ಆರೋಪಿಗಳ ಪರಿಚಯವಿದ್ದು, ಆಗಾಗ ಅವರೊಂದಿಗೆ ಆಕೆ ಸುತ್ತಾಡುತ್ತಿದ್ದಳು. ಇದನ್ನೇ ಬಂಡವಾಳವಾಗಿಸಿಕೊಂಡ ಆರೋಪಿಗಳು ಆಗಸ್ಟ್ ತಿಂಗಳಲ್ಲಿ 10 ದಿನಗಳ ಅವಧಿಯಲ್ಲಿ 2 ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕೃತ್ಯವನ್ನು 2 ಬಾರಿಯೂ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿಕೊಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುಡುಗರು ಸಂತ್ರಸ್ತೆಯ ಮನೆಯಲ್ಲಿ ಬೇರೆ ಯಾರೂ ಇಲ್ಲದ ವೇಳೆ 2 ಬಾರಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಮೊಬೈಲ್‌ನಲ್ಲಿ ವೀಡಿಯೊ ಮಾಡಿ ಬಾಲಕಿಗೆ ಬೆದರಿಸಿ 10 ದಿನಗಳ ಬಳಿಕ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾರೆ. ವಾಟ್ಸಾಪ್‌ನಲ್ಲಿ ಬಾಲಕರು ಈ ವೀಡಿಯೊವನ್ನು ಶೇರ್ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಪೋಷಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ಐವರು ಬಾಲಕರ ವಿರುದ್ಧ ದೂರು ನೀಡಿದ್ದಾರೆ. ಬಾಲಕರನ್ನು ಬಾಲಾಪರಾಧಿ ನ್ಯಾಯ ಮಂಡಳಿ ಎದುರು ಹಾಜರುಪಡಿಸಿದ್ದು, ಬಾಲಾಪರಾಧಿ ಗೃಹಕ್ಕೆ ಕಳಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy