Subscribe to Updates
Get the latest creative news from FooBar about art, design and business.
- ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು
- ಸಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವರಿಗೆ ವಿ.ಸೋಮಣ್ಣ ಪತ್ರ
- ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಲವು: ಸಚಿವ ಜಿ. ಪರಮೇಶ್ವರ್
- ‘ಕರಾವಳಿ’ ಚಿತ್ರದ ವಿವಾದಕ್ಕೆ ಪ್ರೇಕ್ಷಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ನಟ ರಾಜ್ ಬಿ. ಶೆಟ್ಟಿ
- ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ, ಆ. 10 ಕೊನೆಯ ದಿನ
- ಬಿಡದಿ ಟೌನ್ ಶಿಪ್: ಅನಿತಾ ಕುಮಾರಸ್ವಾಮಿ, ನಿಖಿಲ್ ಗೆ ಸೇರಿದ 35 ಎಕರೆ ಭೂಮಿಗೂ ಅಂತಿಮ ಅಧಿಸೂಚನೆ!
- ತಿಪಟೂರು: ಲೋಕೇಶ್ವರ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ
- ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗಬೇಡಿ: ನಿಮ್ಮೂರಲ್ಲೇ ಕೆಲಸ ನೀಡಲಿದೆ ‘ವಿಬಿ-ಜಿ ರಾಮ್ ಜಿ’ ಯೋಜನೆ
Author: admin
ಮನೆಯಲ್ಲಿ ತುಳಸಿ ಗಿಡವನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಅದು ಬೇಗನೆ ಸಾಯುತ್ತದೆ ಎಂದು ಹಲವರ ದೂರು. ಹಾಗಾದರೆ ತುಳಸಿ ಗಿಡವನ್ನು ಹೇಗೆ ಕಾಳಜಿ ವಹಿಸಬೇಕು? ಬನ್ನಿ ತಿಳಿಯೋಣ. ಬಿಸಿಲಿನ ಸ್ಥಳವನ್ನು ಆರಿಸಿ – ತುಳಸಿ ಗಿಡವನ್ನು ನೆಡುವಾಗ, ನಿಮ್ಮ ಬಾಲ್ಕನಿಯಲ್ಲಿ ಅಥವಾ ಮನೆಯ ಉದ್ಯಾನದಲ್ಲಿ ಬಿಸಿಲಿನ ಸ್ಥಳವನ್ನು ಆಯ್ಕೆ ಮಾಡಿ. ಏಕೆಂದರೆ ಅದು ಸಂಪೂರ್ಣ ಸೂರ್ಯನ ಬೆಳಕಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಣ್ಣಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಏಕೆಂದರೆ ಇದು ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ನೀರು ಯಾವಾಗ ಹಾಕಬೇಕು? – ತುಳಸಿ ಸಸ್ಯವು ತೇವಾಂಶವುಳ್ಳ ಮಣ್ಣನ್ನು ಬೆಳೆಯಲು ಇಷ್ಟಪಡುತ್ತದೆ. ಆದರೆ ಅದಕ್ಕೆ ಹೆಚ್ಚು ನೀರನ್ನು ಸೇರಿಸಬೇಡಿ. ಏಕೆಂದರೆ ಇದು ಸುಲಭವಾಗಿ ಬೇರುಗಳು ಮತ್ತು ಕಾಂಡವನ್ನು ಕೊಳೆಯಲು ಕಾರಣವಾಗಬಹುದು. ಮೇಲಿನ ಮಣ್ಣು ಸ್ಪರ್ಶಕ್ಕೆ ಒಣಗಿದಾಗ ಸಸ್ಯಕ್ಕೆ ನೀರು ಹಾಕಿ ಮತ್ತು ಬಿಸಿಲಿನ ಸ್ಥಳದಲ್ಲಿದ್ದರೆ, ಪ್ರತಿದಿನ ನೀರು ಹಾಕಿ. ಎಲೆಗಳನ್ನು ಕೀಳುವುದು- ತುಳಸಿ ಎಲೆಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಜನರು ಅವುಗಳನ್ನು ಕೀಳಲು ಇಷ್ಟಪಡುವುದಿಲ್ಲ,…
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ರಂಗೇರಿದೆ. ದಿನದಿಂದ ದಿನಕ್ಕೆ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಈ ನಡುವೆ ನಾಮಪತ್ರಗಳ ಸ್ವೀಕೃತಿ ಕಾರ್ಯವು ಕೂಡ ಮುಗಿದು ಹೋಗಿದೆ. ಇದೀಗ ಅಚ್ಚರಿ ಎಂಬಂತೆ ಎಸ್ ಎಂ ಕೃಷ್ಣ ಹಾಗೂ ರಾಹುಲ್ ಗಾಂಧಿ ಅವರು ಬೆಂಗಳೂರಿಂದ ಕಣಕ್ಕಿಳಿದಿದ್ದಾರೆ ಎಂಬ ಸುದ್ದಿ ಬಂದಿದೆ. ಚುನಾವಣೆಯಲ್ಲಿ ಎದರಾಳಿಯನ್ನು ಮಣಿಸಲು ಹಲವು ತಂತ್ರಗಳು ನಡೆಯುತ್ತವೆ. ಅದರಲ್ಲಿ ಪ್ರಮುಖವಾದುದು ಎಂದರೆ ಎದುರಾಳಿಯ ಹೆಸರಿನ ಮತ್ತೊಬ್ಬ ಕ್ಯಾಂಡಿಡೇಟ್ ನನ್ನು ಅಕಾಡಕ್ಕೆ ಇಳಿಸುವುದು. ಹೌದು, ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಗ್ರಾಮಾಂತರದಿಂದ ಬಿಜೆಪಿ ಅಭ್ಯರ್ಥಿ ಸಿ ಎನ್ ಮಂಜುನಾಥ್ ವಿರುದ್ಧ ಅಪ್ಪ, ಅಮ್ಮ, ಊರು, ಜಿಲ್ಲೆ ಎಲ್ಲದೂ ಒಂದೇ ಆಗಿದ್ದ ಮತ್ತೊಬ್ಬ ಸಿಎನ್ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಅವರ ಅಣ್ಣನ ಹೆಸರಿನಂತೆ ಎಚ್ ಡಿ ರೇವಣ್ಣ ಎಂಬುವವರೂ ನಾಮಪತ್ರ ಸಲ್ಲಿಸಿದ್ದರು. ಇದೀಗ ಈ ಬೆನ್ನಲ್ಲೇ ರಾಜಕೀಯ ಪಕ್ಷಗಳ ನಾಯಕರ ಹೆಸರು ಇರುವ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು ಗಮನ…
ಲೈಂಗಿಕ ಕ್ರಿಯೆ ಅಥವಾ ಶಾರೀರಿಕ ಸಂಬಂಧವು ದಾಂಪತ್ಯ ಜೀವನದ ಒಂದು ಪ್ರಮುಖ ಭಾಗ. ಸಂಸಾರ ಸುಖಮಯವಾಗಿರಲು ಅಥವಾ ಹಾಳಾಗಲೂ ಇದೂ ಒಂದು ಕಾರಣ. ಇಂದಿನ ಆಹಾರ ಕ್ರಮದಿಂದಾಗಿ ಅನೇಕರಲ್ಲಿ ಲೈಂಗಿಕ ಸಾಮರ್ಥ್ಯ ಕಡಿಮೆ ಆಗಿದೆ. ಇದು ದಾಂಪತ್ಯದಲ್ಲಿ ಬಿರುಕು ಮೂಡಲು ಪ್ರಮುಖ ಕಾರಣ ಆಗಬಹುದು. ಆದರೆ ಅದರ ಬಗ್ಗೆ ಟೆನ್ಶನ್ ಬಿಡಿ. ಊಟ ಆದ ತಕ್ಷಣ ಇದೊಂದು ಇದನ್ನು ತಿಂದರೆ ನಿಮ್ಮ ಲೈಂಗಿಕ ಸಾಮರ್ಥ್ಯ ದುಪ್ಪಟ್ಟಾಗೋದು ಪಕ್ಕಾ!! ಊಟವಾದ ನೀವು ಏಲಕ್ಕಿ ತಿಂದರೆ ಎಲ್ಲಾ ರೀತಿಯಿಂದಲೂ ಅದು ನಿಮಗೆ ಲಾಭದಾಯಕ. ಏಲಕ್ಕಿ ಆಯುರ್ವೇದಿಕ್ ಗುಣಗಳನ್ನು ಹೊಂದಿರುವ ಮಸಾಲೆಯಾಗಿದ್ದು, ಇದು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ನೀವು ಲೈಂಗಿಕವಾಗಿಯೂ ಹೆಚ್ಚು ಸಾಮರ್ಥ್ಯ ಗಳಿಸಬಹದು. ಊಟದ ನಂತರ ಏಲಕ್ಕಿ ತಿನ್ನುವುದ್ರಿಂದ ಮುಖ್ಯವಾಗಿ ಆಹಾರ ಜೀರ್ಣವಾಗುತ್ತದೆ. ಏಲಕ್ಕಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಿಂದಾಗಿ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ರಾತ್ರಿ ಊಟದ ನಂತ್ರ ಏಲಕ್ಕಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ನಡೆದು ನಿದ್ರೆ ಬರುತ್ತದೆ. ಜೊತೆಗೆ…
ಕ್ರಿಮಿನಲ್ ಗಳಿಗೆ ಎಚ್ಚರಿಕೆ ನೀಡುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜದ ಭದ್ರತೆಗೆ ಯಾರೇ ಧಕ್ಕೆ ತಂದರೂ ಅವರ ‘ರಾಮ ನಾಮ ಸತ್ಯ’ (ಅಂತ್ಯ ಸಂಸ್ಕಾರ) ನಿಶ್ಚಿತ ಎಂದು ಹೇಳಿದ್ದಾರೆ. ಅವರು ಅಲಿಗಢದಲ್ಲಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಸತೀಶ್ ಕುಮಾರ್ ಗೌತಮ್ ಪರ ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಈ ರೀತಿ ಹೇಳಿದ್ದಾರೆ. ಹೆಣ್ಣುಮಕ್ಕಳು ಮತ್ತು ವ್ಯಾಪಾರಸ್ಥರು ಆತಂಕವಿಲ್ಲದೆ ರಾತ್ರಿಯಲ್ಲಿ ಹೊರಗೆ ಹೋಗಬಹುದು ಎಂದು ಯಾರೂ ಯೋಚಿಸಿರಲಿಲ್ಲ. ಹೆಣ್ಣುಮಕ್ಕಳು ಮತ್ತು ಉದ್ಯಮಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡಲು ನಾವು ‘ರಾಮ್ ನಾಮ್ ಸತ್ಯ’ ಖಾತ್ರಿಪಡಿಸುತ್ತೇವೆ. ನಾವು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾ ನಮ್ಮಜೀವನವನ್ನು ನಡೆಸುತ್ತೇವೆ. ರಾಮನಿಲ್ಲದೆ ಯಾವುದೂ ಸಾಧ್ಯವಿಲ್ಲ. ಆದರೆ ಯಾರಾದರೂ ಸಮಾಜದ ಭದ್ರತೆಗೆ ಧಕ್ಕೆ ತಂದರೆ ‘ರಾಮ ನಾಮ ಸತ್ಯ’ ಕೂಡ ನಿಶ್ಚಿತ” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 10 ವರ್ಷಗಳ ಹಿಂದೆ ಕಂಡ ಕನಸು ಈಗ ನನಸಾಗುತ್ತಿದೆ, ಮತ್ತು ಅದು ನಿಮ್ಮ ಮತದ ಮೌಲ್ಯದಿಂದ ನಡೆಯುತ್ತಿದೆ, ತಪ್ಪು ಮತವು ದೇಶವನ್ನು…
ಕಳೆದ 50 ವರ್ಷಗಳಲ್ಲೇ ಅತ್ಯಂತ ಸುದೀರ್ಘವಾದ ಸಂಪೂರ್ಣ ಸೂರ್ಯಗ್ರಹಣ ಇಂದು ಸಂಭವಿಸಿದೆ.ಅಮೆರಿಕ, ಕೆನಡಾ, ಮೆಕ್ಸಿಕೋ ಸೇರಿದಂತೆ ಉತ್ತರ ಅಮೆರಿಕಾದ ದೇಶಗಳಲ್ಲಿ ಗೋಚರಿಸುವ ಗ್ರಹಣ ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಗೋಚರಿಸುವುದಿಲ್ಲ. ಭಾರತೀಯ ಕಾಲಮಾನ ರಾತ್ರಿ 9.12ಕ್ಕೆ ಗ್ರಹಣ ಆರಂಭವಾಗಲಿದ್ದು, ನಾಳೆ ಬೆಳಗಿನ ಜಾವ 2.22ರವರೆಗೆ ಇರಲಿದೆ. ಒಟ್ಟು ಗ್ರಹಣದ ಅವಧಿ 4 ನಿಮಿಷ 27 ಸೆಕೆಂಡುಗಳು ಇರುತ್ತದೆ. ಸಂಪೂರ್ಣ ಗ್ರಹಣದ ಅವಧಿ 1 ನಿಮಿಷ 27 ಸೆಕೆಂಡುಗಳು. ನಾಸಾ ಸೇರಿದಂತೆ ಏಜೆನ್ಸಿಗಳು ಗ್ರಹಣವನ್ನು ನೇರ ಪ್ರಸಾರ ಮಾಡುತ್ತಿವೆ. ಚಂದ್ರನು ಸೂರ್ಯನನ್ನು ಮರೆಮಾಚುವ ಹಗಲಿನಲ್ಲಿಯೂ ಕತ್ತಲೆಯ ಅನುಭವವಾಗುತ್ತದೆ. ಸಂಪೂರ್ಣ ಸೂರ್ಯಗ್ರಹಣವನ್ನು NASA+, NASA TV ಮತ್ತು ಏಜೆನ್ಸಿಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಸಾರ ಮಾಡಲಾಗುತ್ತದೆ. U.S. ಬಾಹ್ಯಾಕಾಶ ಸಂಸ್ಥೆಯು ತನ್ನ ಯೂಟ್ಯೂಬ್ ಚಾನೆಲ್ ಮತ್ತು ನಾಸಾ ಟೆಲಿವಿಷನ್ ನ ಮಾಧ್ಯಮ ಚಾನೆಲ್ ನಲ್ಲಿ ಗ್ರಹಣದ ದೂರದರ್ಶಕ ತುಣುಕನ್ನು ಒದಗಿಸುತ್ತದೆ. ಸ್ಟ್ರೀಮಿಂಗ್ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ನಿರಂತರವಾಗಿ ಮೂರು ಗಂಟೆಗಳ…
ನಟಿ ಹರಿಪ್ರಿಯಾ ಹಲವು ಸಿನಿಮಾಗಳನ್ನು ನಟಿಸಿ ಖ್ಯಾತಿ ಪಡೆದಿದ್ದಾರೆ. 2020ರ ನಂತರ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಇದೆಲ್ಲದರ ನಡುವೆ ಅವರು ಹೊಸ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಖಾಸಗಿ ವಾಹಿನಿಯೊಂದು ಹಂಚಿಕೊಂಡಿರುವ ಪ್ರೊಮೋದಲ್ಲಿ ನಟಿ ಕಾಣಿಸಿಕೊಂಡಿದ್ದು, ಭಾರೀ ಕುತೂಹಲ ಮೂಡಿಸಿದೆ. ‘ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರ ಆಗಿ ಬರ್ತಿದ್ದಾರೆ ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಶೀಘ್ರದಲ್ಲಿ!’ ಎಂಬ ಕ್ಯಾಪ್ಷನ್ ನೊಂದಿಗೆ ಈ ಪ್ರೋಮೋ ಹಂಚಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಈ ಪ್ರೊಮೋದಲ್ಲಿ ನಟಿ ಹರಿಪ್ರಿಯಾ ಅವರು ಅಡ್ವೊಕೇಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ಅಭಿಮಾನಿಗಳು ‘ನಮ್ಮ ಹರಿಪ್ರಿಯಾ ಸೀರಿಯಲ್ ನಲ್ಲಿ ನಟಿಸ್ತಾರಾ ಎಂದ ಅಚ್ಚರಿ ವ್ಯಕ್ತವಾಗಿದೆ. ಪ್ರೊಮೋ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿಲ್ಲ. ಇದು ಧಾರಾವಾಹಿಯೋ ಅಥವಾ ರಿಯಾಟಿಲಿ ಶೋಗೆ ಸಂಬಂಧಿಸಿದ ಪ್ರೋಮೋ ಆಗಿರಬಹುದಾ ಎಂಬ ಅನುಮಾನ ಕೂಡ ಇದೆ. ಒಂದು ವೇಳೆ ಸೀರಿಯಲ್ ಆಗಿದ್ದರೆ, ಅದರಲ್ಲಿ…
ರಾಜ್ಯದ 223 ಬರ ಪೀಡಿತ ತಾಲೂಕುಗಳ 1ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಏ.11ರಿಂದ ಮೇ 28ರವರೆಗೆ ಒಟ್ಟು 41 ದಿನಗಳ ಕಾಲ ಮಧ್ಯಾಹ್ನ 12.30ರಿಂದ 2 ಗಂಟೆವರೆಗೆ ಊಟ ನೀಡಲಾಗುತ್ತದೆ. ಉಷ್ಣಾಂಶ ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಬೆಳಗ್ಗೆ 10 ಗಂಟೆಯಿಂದ 11.30 ಅವಧಿಯಲ್ಲಿ ವಿತರಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಶಾಲಾ ಮಕ್ಕಳ ಮಾಹಿತಿ ಅನುಗುಣವಾಗಿ ಬಿಸಿಯೂಟ ಸಿದ್ಧಪಡಿಸಿಬೇಕು ಎಂದು ತಿಳಿಸಲಾಗಿದೆ. ಬಿಸಿಯೂಟ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಮತ್ತು ಪಾಲಕರ ಗಮನಕ್ಕೆ ತಂದು ಬಿಸಿಯೂಟ ಸ್ವೀಕರಿಸುವ ಒಪ್ಪಿಗೆ ಪತ್ರ ಪಡೆಯಬೇಕು. ಬಿಸಿಯೂಟ ಕೇಂದ್ರಗಳಾಗಿ ಗುರುತಿಸಿದ ಶಾಲೆಯಲ್ಲಿ 250 ಕ್ಕಿಂತ ಹೆಚ್ಚು ಮಕ್ಕಳು ನಿರಂತರವಾಗಿ ಬಿಸಿಯೂಟ ಸ್ವೀಕರಿಸಲು ಹಾಜರಾಗುತ್ತಿದ್ದಲ್ಲಿ, ಅಂತಹ ಕೇಂದ್ರ ಶಾಲೆಗಳಿಗೆ ಮಾತ್ರ ಒಬ್ಬರು ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿಕ್ಷಣಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಮೇಲ್ವಿಚಾರಣೆಗಾಗಿ ಪ್ರತಿನಿತ್ಯ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಲಾಗಿದೆ.…
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳನ್ನು ಒಂದಿಲ್ಲೊಂದು ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತದೆ. ಇದರಿಂದ ಅವರ ಸಿನಿಮಾಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇತ್ತೀಚೆಗೆ ವಿಜಯ್ ದೇವರಕೊಂಡ ನಟನೆಯ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ಬಿಡುಗಡೆ ಆಗಿದ್ದು, ಆ ಚಿತ್ರಕ್ಕೂ ಟ್ರೋಲ್ ಕಾಟ ಎದುರಾಗಿದೆ. ಮೊದಲ ದಿನವೇ ಈ ಸಿನಿಮಾಗೆ ವಿಶ್ರ ಪ್ರತಿಕ್ರಿಯೆ ಸಿಕ್ಕಿತು. ಬಳಿಕ ಟ್ರೋಲ್ ಹೆಚ್ಚಾಯಿತು. ಅಂಥ ಟ್ರೋಲ್ ಮಂದಿಯ ವಿರುದ್ಧ ‘ದಿ ಫ್ಯಾನಿಲಿ ಸ್ಟಾರ್’ ಚಿತ್ರತಂಡ ತಿರುಗಿ ಬಿದ್ದಿದೆ. ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವರದಿ ಆಗಿದೆ. ವಿಜಯ್ ದೇವರಕೊಂಡರನ್ನು ಒಂದು ವರ್ಗದ ನೆಟ್ಟಿಗರು ದ್ವೇಷಿಸುತ್ತಾರೆ. ಇದರಿಂದಾಗಿ ಅವರ ಸಿನಿಮಾಗೆ ಪೆಟ್ಟು ಬಿದ್ದಿದೆ. ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾವನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದವರ ವಿರುದ್ಧ ಕಾನೂನಿನ ಮೂಲಕ ಹೋರಾಡಲು ಚಿತ್ರತಂಡ ನಿರ್ಧರಿಸಿದೆ. ವಿಜಯ್ ದೇವರಕೊಂಡ ಅವರ ಮ್ಯಾನೇಜರ್ ಹಾಗೂ ಅಭಿಮಾನಿ ಸಂಘದ ಅಧ್ಯಕ್ಷರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ದೂರಿನ ಜೊತೆಗೆ ಅನೇಕ ಸಾಕ್ಷಿಗಳನ್ನು ಒದಗಿಸಲಾಗಿದೆ.…
ಹಜ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮಾ.26ರಂದು ರಾತ್ರಿ ಮಕ್ಕಾ ಮದೀನಾಕ್ಕೆ ತೆರಳಿದ್ದರು. ಏ.6ರ ರಾತ್ರಿ ಮಕ್ಕಾ ಮದೀನಾ ಸಮೀಪ ವಿದೇಶದಲ್ಲಿ ಅಪಾಘಾತ ಸಂಭವಿಸಿದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಮೂವರು ದುರ್ಮರಣ ಹೊಂದಿದ್ದಾರೆ. ಫಯಾಜ್ ರೋಣ, ಪತ್ನಿ ಆಫ್ರಿನಾ ಬಾನು, ಅಣ್ಣನ ಮಗ ಆಯಾನ್ ರೋಣ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಧುಗಿರಿ: ಮಧುಗಿರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದ್ದಲ್ಲದೆ, ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ದಾಳಿ ನಡೆಸಿದ್ದು, ಮಾಲು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ. ಮಧುಗಿರಿ ಉಪ ವಿಭಾಗದ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯ ದೊಮ್ಮತಮರಿ ಗ್ರಾಮದಲ್ಲಿ ಭಾನುವಾರ ಮಧುಗಿರಿ ಉಪ ವಿಭಾಗದ ಡಿವೈಎಸ್ಪಿ ರಾಮಚಂದ್ರಪ್ಪ ಎನ್.ಬಿ. ಅವರೊಂದಿಗೆ ಪಾವಗಡ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲೋಕಸಭಾ ಚುನಾವಣೆಯ ಸಂಬಂಧ ಗಸ್ತಿನಲ್ಲಿದ್ದಾಗ ಅಕ್ರಮವಾಗಿ ಯಾವುದೇ ಪರವಾನಗಿ ಹೊಂದಿಲ್ಲದೆ ಮೂರು ಡ್ರಮ್ ಗಳಲ್ಲಿ ಎರಡು ಲಕ್ಷ ರೂ ಮೌಲ್ಯದ ಸುಮಾರು 400 ಲೀಟರ್ ಈಚಲು ಮರದ ಸೇಂದಿಯನ್ನು ಬೂಲೆರೋ ವಾಹನದಲ್ಲಿ (AP02TF1421) ಸೇಂದಿ ಸಾಗಾಟ ಮಾಡುತ್ತಿದ್ದ ಆರೋಪಿ ವೆಂಕಟಂಪಲ್ಲಿ ಗ್ರಾಮದ ರಾಮಾಂಜನೇಯಲು ಅಲಿಯಾಸ್ ರಾಮಾಂಜಿ ಬಿಲ್ ನರಸಪ್ಪ ಕರ್ನಾಟಕ ಗಡಿಭಾಗದ ಹಳ್ಳಿಗಳಲ್ಲಿ ಮಾರಾಟ ಮಾಡಲು ಸೇಂದಿ ಸಾಗಾಟ ಮಾಡುತ್ತಿರುವಾಗ ಮಾಲು ಸಮೇತ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಮಧುಗಿರಿ ವೃತ್ತ ವ್ಯಾಪ್ತಿಯಲ್ಲಿ ಶನಿವಾರದಂದು…