Subscribe to Updates
Get the latest creative news from FooBar about art, design and business.
- ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು
- ಸಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವರಿಗೆ ವಿ.ಸೋಮಣ್ಣ ಪತ್ರ
- ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಲವು: ಸಚಿವ ಜಿ. ಪರಮೇಶ್ವರ್
- ‘ಕರಾವಳಿ’ ಚಿತ್ರದ ವಿವಾದಕ್ಕೆ ಪ್ರೇಕ್ಷಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ನಟ ರಾಜ್ ಬಿ. ಶೆಟ್ಟಿ
- ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ, ಆ. 10 ಕೊನೆಯ ದಿನ
- ಬಿಡದಿ ಟೌನ್ ಶಿಪ್: ಅನಿತಾ ಕುಮಾರಸ್ವಾಮಿ, ನಿಖಿಲ್ ಗೆ ಸೇರಿದ 35 ಎಕರೆ ಭೂಮಿಗೂ ಅಂತಿಮ ಅಧಿಸೂಚನೆ!
- ತಿಪಟೂರು: ಲೋಕೇಶ್ವರ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ
- ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗಬೇಡಿ: ನಿಮ್ಮೂರಲ್ಲೇ ಕೆಲಸ ನೀಡಲಿದೆ ‘ವಿಬಿ-ಜಿ ರಾಮ್ ಜಿ’ ಯೋಜನೆ
Author: admin
ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ. ಸೋಮಣ್ಣ ಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ಬಣಗಳ ನಡುವೆ ಮಾರಾಮಾರಿ ನಡೆದಿದೆ. ತುಮಕೂರಿನ ತಿಪಟೂರಿನ ನೊಣವಿನಕೆರೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಪ್ರಚಾರದ ವೇಳೆ ಜೆಡಿಎಸ್ ಬಣಗಳ ನಡುವೆ ಮಾರಾಮಾರಿ ನಡೆಯಿತು. ನೊಣವಿನಕೆರೆಯಲ್ಲಿ ಸೋಮಣ್ಣ ಪ್ರಚಾರ ನಡೆಸುತ್ತಿದ್ದಾಗ ಜೆಡಿಎಸ್ ಮುಖಂಡ ರಾಕೇಶ್ ಗೌಡ ಸೇರಿದಂತೆ, ಅನೇಕ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಗುಂಪು ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರಚಾರ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು. ರಾಕೇಶ್ ಗೌಡ ಗುಂಪು ಹಾಗೂ ಕೆ.ಟಿ. ಶಾಂತಕುಮಾರ್ ಗುಂಪುಗಳ ನಡುವೆ ಭಾರೀ ವಾಗ್ವಾದ ಜಗಳ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಅಭ್ಯರ್ಥಿ ವಿ. ಸೋಮಣ್ಣ ಪರಿಸ್ಥಿತಿ ತಿಳಿಗೊಳಿಸಿದರು. ಇನ್ನೂ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ ಗೊಂದಲಕ್ಕೆ ಕಾರಣವಾಯಿತು. ಜೆಡಿಎಸ್ ಗುಂಪುಗಳ ನಡುವೆ ಬಣ ರಾಜಕೀಯ ಬೂದಿ ಮುಚ್ಚಿದ…
ತುಮಕೂರು: ಅಶ್ವಿನಿ ಪುನೀತ್ ರಾಜಕುಮಾರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಇಂದು ಗೃಹ ಸಚಿವ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಸಚಿವ ಪರಮೇಶ್ವರ್ ಅವರಿಗೆ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳು ಮನವಿ ಪತ್ರ ಸಲ್ಲಿಸಿದ್ದರು. ಕೂಡಲೇ ಅವರ ಮನವಿಗೆ ಸ್ಪಂದಿಸಿದ ಸಚಿವ ಪರಮೇಶ್ವರ್ ಈ ಕುರಿತಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಕೃತ್ಯವೆಸಗಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆನೀಡಲಾಗುವುದು ಎಂದು ಸಚಿವ ಪರಮೇಶ್ವರ್ ಭರವಸೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬಳ್ಳಾರಿ: ‘ಬಳ್ಳಾರಿ ಡಿವೈಎಸ್ ಪಿ ಚಂದ್ರಕಾಂತ ನಂದ ರೆಡ್ಡಿ ಮತ್ತು ಬ್ರೂಸ್ ಪೇಟೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎನ್ ಸಿಂಧೂರ್ ಖಚಿತ ಮಾಹಿತಿ ಆಧರಿಸಿ ನಗರದ ಕಂಬಳಿ ಬಜಾರ್ ನ ಹೇಮಾ ಜ್ಯುವೆಲರ್ಸ್ ಮಾಲೀಕರಾದ ನರೇಶ್ ಸೋನಿ ಎಂಬವರ ಮನೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಹಣ, ಆಭರಣ ಸಿಕ್ಕವು’ ಎಂದು ಎಸ್ ಪಿ ಹೇಳಿದರು. ‘ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ದಾಖಲೆ ಇಲ್ಲದ ₹5.60 ಕೋಟಿ ಹಣ ಪತ್ತೆಯಾಗಿದ್ದು, ಜೊತೆಗೆ, ₹1.4 ಕೋಟಿ ಮೌಲ್ಯದ 3 ಕೆ.ಜಿ ಚಿನ್ನ, ₹42 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಮತ್ತು ಗಟ್ಟಿಗಳು ಪತ್ತೆಯಾಗಿವೆ. ಇದೆಲ್ಲದರ ಒಟ್ಟು ಮೌಲ್ಯ ₹7.5 ಕೋಟಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ. ‘ಈಗ ಸಿಕ್ಕಿರುವ ಹಣ ಮತ್ತು ಆಭರಣ ಚುನಾವಣೆಯಲ್ಲಿ ಹಂಚಲು ಸಂಗ್ರಹಿಸಿಟ್ಟಿದ್ದೋ, ಹವಾಲದಿಂದ ಬಂದದ್ದೋ ಅಥವಾ ನರೇಶ್ ಸೋನಿ ಅವರ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದ್ದೋ ಖಚಿತವಾಗಿಲ್ಲ.…
ಲೋಕಸಭೆ ಚುನಾವಣೆ 2024: ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್‌ಎಂ) ಅಭ್ಯರ್ಥಿ ಕಿನ್ನರ ಮಹಾಮಂಡಲೇಶ್ವರ ಹಿಮಾಂಗಿ ಸಖಿ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ 2024 ರಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಅವರ ಹಕ್ಕುಗಳು ಮತ್ತು ಗೌರವವನ್ನು ನೀಡಲು ಹಿಮಂಗಿ ಸಖಿ ಅವರು ಕಣಕ್ಕೆ ಇಳಿದಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, 2024 ರಲ್ಲಿ 48,044 ತೃತೀಯ ಲಿಂಗ ಮತದಾರರು ECI ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಸಂಖ್ಯೆ 2019 ರಲ್ಲಿ 39,683 ರಿಂದ ಹೆಚ್ಚಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಅವರಿಗೆ ಚುನಾವಣಾ ಟಿಕೆಟ್ ನೀಡಿದೆ. 5 ಭಾಷೆಗಳಲ್ಲಿ ಭಗವತ್ ಕಥಾವನ್ನು ಹೇಳುವ ಹಿಮಾಂಗಿ ಅವರು ಏಪ್ರಿಲ್ 10 ರೊಳಗೆ ವಾರಾಣಸಿಗೆ ಬರಲಿದ್ದಾರೆ. ಹಿಮಾಂಗಿ ಅವರೇ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಿಷಿ ಕುಮಾರ್…
ಕಾಮಕಸ್ತೂರಿ ಬೀಜ ಹಾಗೂ ದಾಲ್ಟಿನ್ನಿ ನೀರು ಸೇವಿಸೋದ್ರಿಂದ ತೂಕ ಇಳಿಕೆ ಸಾಧ್ಯ! ದಾಲ್ಟಿನ್ನಿ ನೀರಿನಲ್ಲಿ ಸಬ್ಬಾ ಬೀಜಗಳು ಅಥವಾ ಕಾಮಕಸ್ತೂರಿ ಬೀಜಗಳನ್ನು ನೆನೆಸಿಟ್ಟು ಸೇವಿಸುವುದರಿಂದ ತೂಕ ಇಳಿಕೆಯ ಪ್ರಯತ್ನಗಳು ಶೀಘ್ರವೇ ಫಲಕೊಡುತ್ತವೆ. ಇವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ದೇಹಕ್ಕೆ ನೀರಿನಂಶ, ಆಂಟಿ ಆಕ್ಸಿಡೆಂಟುಗಳು, ಖನಿಜಗಳು ಹಾಗೂ ಇತರ ಪೋಷಕಾಂಶಗಳನ್ನೂ ನೀಡುತ್ತವೆ. ಈ ನೀರನ್ನು ಮುಂಜಾನೆಯ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ತೂಕ ಇಳಿಕೆಯ ಪ್ರಯತ್ನಗಳಿಗೆ ಗರಿಷ್ಟ ಪ್ರಯೋಜನ ಲಭಿಸುತ್ತದೆ. ಮಾನಸಿಕ ಆರೋಗ್ಯಕ್ಕೂ ಬಾಳೆಹಣ್ಣು ಮದ್ದು.! ಬಾಳೆಹಣ್ಣು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೊಟ್ಯಾಶಿಯಂ ಮತ್ತು ಡೋಪಮೈನ್ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಪ್ರತಿ ದಿನ ನಿಯಮಿತವಾಗಿ ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಮುಟ್ಟಿನ ಸಮಯದಲ್ಲಿ ಮಹಿಳೆಯರು ಎದುರಿಸುವ ನೋವಿಗೆ ಬಾಳೆಹಣ್ಣು ಕೂಡ ಪರಿಣಾಮಕಾರಿಯಾಗಿದೆ. ಇದು ಹೊಟ್ಟೆ ನೋವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಮಲಗುವ ಮುನ್ನ ಪ್ರತಿದಿನ ಬಾಳೆಹಣ್ಣು ತಿನ್ನುವುದು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೂ ಪರಿಹಾರವಾಗಿದೆ. ನಮ್ಮತುಮಕೂರಿನ ಕ್ಷಣ…
ಆಂಧ್ರಪ್ರದೇಶದಲ್ಲಿ ತಂದೆ 18 ತಿಂಗಳ ಹೆಣ್ಣು ಮಗುವಿಗೆ ವಿಷ ನೀಡಿ ಕೊಂದಿದ್ದಾರೆ. ಕಪ್ಪು ಬಣ್ಣದಿಂದಾಗಿ ಮಗುವಿಗೆ ವಿಷ ನೀಡಿದ್ದಾನೆ. ಘಟನೆಯಲ್ಲಿ ತಂದೆ ಮಹೇಶ್ ವಿರುದ್ಧ ಕರೆಂಪೂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮಗುವಿಗೆ ಪ್ರಸಾದದಲ್ಲಿ ವಿಷ ಕುಡಿಸಿದ್ದಾನೆ. ಮಾರ್ಚ್ 31 ರಂದು ಮನೆಯಲ್ಲಿ ಅಕ್ಷಯ ಎಂಬ 18 ತಿಂಗಳ ಮಗು ದುರ್ಬಲ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಗುವಿನ ಮೂಗಿನಿಂದ ರಕ್ತಸ್ರಾವವಾಗಿತ್ತು. ನಂತರ ಮನೆಯವರು ಮಗುವನ್ನು ಕರೆಂಪುಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು ಆದರೆ ಮಗು ಸಾವನ್ನಪ್ಪಿದೆ. ವಿಷವನ್ನು ಬಚ್ಚಿಟ್ಟ ಮಹೇಶ್, ಮಗುವಿಗೆ ಅನಾರೋಗ್ಯವಿದೆ ಎಂದು ಹೇಳುವಂತೆ ಪತ್ನಿಗೆ ಒತ್ತಾಯಿಸಿದ್ದಾನೆ. ಮಗು ಕಪ್ಪಾಗಿ ಹುಟ್ಟಿದೆ ಎಂಬ ಕಾರಣಕ್ಕೆ ಮಹೇಶ್ ಪತ್ನಿಗೆ ನಿತ್ಯ ಥಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವನ್ನು ನೋಡಿಕೊಳ್ಳಲು ಅವರಿಗೆ ಅವಕಾಶ ನೀಡಲಿಲ್ಲ. ವಿಷ ಸೇವಿಸಿ ಮಗು ಸಾವನ್ನಪ್ಪಿದ್ದು, ಪೊಲೀಸರು ತನಿಖೆ ಆರಂಭಿಸುವ ಮುನ್ನವೇ ಮಗುವನ್ನು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಸಾವಿನ ಬಗ್ಗೆ ಅನುಮಾನಗೊಂಡ ಮಹೇಶ್ ಅವರ ಪತ್ನಿ…
ರಾಜಕೀಯ ದ್ವೇಷದಿಂದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಚಾಕು ಇರಿದ ಪ್ರಕರಣ ಕುಣಿಗಲ್ ತಾಲ್ಲೂಕಿನ ನಡೇಮಾವಿನಪುರದಲ್ಲಿ ನಡೆದಿದೆ. ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆಗೆ ತೆರಳಿದ್ದಕ್ಕೆ ಚಾಕು ಇರಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವೆಂಕಟಗೌಡನಪಾಳ್ಯದ ಕೀರ್ತಿ ಹಲ್ಲೆಗೊಳಗಾದ ಕಾಂಗ್ರೆಸ್ ಮುಖಂಡ ಎಂದು ತಿಳಿದು ಬಂದಿದೆ. ಚಂದ್ರ, ಜಗದೀಶ್ ಹಾಗೂ ಸುನೀಲ್ ಎಂಬ ಮೂವರು, ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆಗೆ ಯಾಕೆ ತೆರಳಿದ್ದೆ ಎಂದು ಕೀರ್ತಿಯವರ ಬಳಿ ಜಗಳ ಆರಂಭಿಸಿದ್ದಾರೆ. ಬಳಿಕ ಮೂವರು ಸೇರಿ ಕೀರ್ತಿ ಮೇಲೆ ಚಾಕು, ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚಾಕು ಇರಿತದಿಂದ ಗಾಯಗೊಂಡ ಕೀರ್ತಿಯನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕರ್ತವ್ಯ ನಿರತ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನ ಹುಸೇನಿ ಹಾಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 10ನೇ ಬೆಟಾಲಿಯನ್ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಮಹೆಬೂಬ್ ನಗರದ ನಾಗರ್ ಕರ್ನೂಲ್ ಜಿಲ್ಲೆ ಅಚಂ ಪೇಟ್ ಮಂಡಲದ ಲಕ್ಷ್ಮೀಪುರ ಗ್ರಾಮದ ಬಾಲೇಶ್ವರ್(48) ಆತ್ಮಹತ್ಯೆಗೈದಿರುವ ಅಧಿಕಾರಿ. ಬಾಳೇಶ್ವರ ತಮ್ಮ ಕರ್ತವ್ಯದ ಭಾಗವಾಗಿ ಮಹಬೂಬ್‌ನಗರ 10ನೇ ಬೆಟಾಲಿಯನ್ ನಿಂದ ಪಟಬಸ್ತಿಗೆ ಬಂದಿದ್ದರು. ಜಮುನಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಿಸರ್ವ್ ಎಸ್ ಐ ಬಾಳೇಶ್ವರ್ ಅವರು ಆರು ತಿಂಗಳ ಕಾಲ ಹಳೇ ಟೌನ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಎರಡೇ ದಿನಕ್ಕೆ ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ದಕ್ಷಿಣ ವಲಯ ಡಿಸಿಪಿ ಸಾಯಿ ಚೈತನ್ಯ ಮತ್ತು ಚಾರ್ಮಿನಾರ್ ಎಸಿಪಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಶವಾಗಾರಕ್ಕೆ ರವಾನಿಸಲಾಗಿದೆ. ಪತ್ನಿ ಮತ್ತು ಮಕ್ಕಳು ಅನಾಥರಾಗಿದ್ದಾರೆ. ನಮ್ಮತುಮಕೂರಿನ…
ರಾಜ್ಯದಲ್ಲಿ ಕಳೆದ ಆರ್ಥಿಕ ವರ್ಷದ ಅಂದರೆ 2023-24ರಲ್ಲಿ ಅತಿಹೆಚ್ಚು ಗಳಿಕೆ ಕಂಡ ಮುಜರಾಯಿ ಇಲಾಖೆಯ ದೇವಾಲಯಗಳ ಮಾಹಿತಿಯನ್ನು ಇಲಾಖೆಯ ಆಯುಕ್ತರು ಬಿಡುಗಡೆಗೊಳಿಸಿದ್ದಾರೆ. ಅದರಂತೆಯೇ, ಕುಕ್ಕೆ ಸುಬ್ರಮಣ್ಯ ದೇವಾಲಯ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ. ಸತತವಾಗಿ ಹದಿಮೂರು ವರ್ಷವೂ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕಿನ ಪ್ರಸಿದ್ದ ನಾಗರಾಧಾನೆಯ ಸನ್ನಿಧಿ ಕುಕ್ಕೆ ಸುಬ್ರಮಣ್ಯ ದೇವಾಲಯವು ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಾಲಯವಿದೆ. 2022-23ಕ್ಕೆ ಹೋಲಿಸಿದರೆ ಕುಕ್ಕೆ ದೇವಾಲಯದ ಆದಾಯವು 26 ಕೋಟಿ ಹೆಚ್ಚಾಗಿದೆ. ಕುಕ್ಕೆ ದೇವಾಲಯಕ್ಕೆ ಗುತ್ತಿಗೆ ಆಧಾರದ, ತೋಟದ ಉತ್ಪನ್ನಗಳು, ಕಟ್ಟಡಗಳ ಬಾಡಿಗೆ, ಅನುದಾನ, ವಸತಿಗೃಹ ಮುಂತಾದವುಗಳಿಂದಲೂ ಆದಾಯ ಬರುತ್ತಿದೆ. ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಪೂಜೆ ನೆರವೇರಿಸಲು ದೇಶದೆಲ್ಲಡೆಯಿಂದ ಭಕ್ತರು ಬರುತ್ತಾರೆ. ಎರಡು ಅಥವಾ ಮೂರು ಪಾಳಿಯಲ್ಲಿ ಈ ಪೂಜೆಯನ್ನು ದೇವಸ್ಥಾನ ನಡೆಸುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ರಜಾದಿನಗಳು, ವಾರಂತ್ಯಕ್ಕೆ ಹೊಂದಿಕೊಂಡು ಬಂದಿದ್ದರಿಂದ, ಕುಕ್ಕೆ ಸೇರಿದಂತೆ ದೇವಾಲಯಗಳಲ್ಲಿ ವಿಪರೀತ…
ಬೆಣ್ಣೆ ನಗರಿ, ಶಿಕ್ಷಣ ನಗರಿ ಎಂದೆಲ್ಲ ಪ್ರಖ್ಯಾತಿ ಹೊಂದಿರುವ ದಾವಣಗೆರೆ ನಗರದಲ್ಲಿ ಶ್ರೀಮಂತರು, ಮಧ್ಯಮ ವರ್ಗದವರು, ಬಡವರು ಮತ್ತು ಕಡುಬಡವರಂತಹ ಲಕ್ಷಾಂತರ ಜನರು ವಾಸ ಮಾಡುತ್ತಿದ್ದಾರೆ. ಇಂತಹ ದಾವಣಗೆರೆಯ ಶಾಮನೂರು ಕೆಳ ಸೇತುವೆಯನ್ನೇ ಸೂರು ಮಾಡಿಕೊಂಡು ಪುಟ್ಟ ನಾಯಿಮರಿಯೊಂದಿಗೆ ವಾಸವಿದ್ದ ವಯೋವೃದ್ಧೆಯನ್ನು ರಕ್ಷಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಮಹಿಳಾ ರಕ್ಷಣಾಲಯಕ್ಕೆ ಕಳುಹಿಸಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಮಾನವೀಯತೆ ಮೆರೆದಿದ್ದಾರೆ. ನ್ಯಾಯಾಧೀಶರು ಪ್ರತಿದಿನ ವಸತಿಗೆ ಹಿಂದಿನ ನ್ಯಾಯಾಲಯಕ್ಕೆ ಸಂಚರಿಸುವ ದಾರಿಯಲ್ಲಿ ಮಳೆ, ಗಾಳಿ ಮತ್ತು ಧೂಳಿನ ನಡುವೆ ವಾಸವಿದ್ದ ಈ ವಯೋವೃದ್ಧೆಯನ್ನು ಗಮನಿಸಿದ್ದಾರೆ. ತಮ್ಮ ಇಲಾಖೆಯ ಇನ್ನೋರ್ವ ನ್ಯಾಯಾಧೀಶರಾದ ಮಹಾವೀರ ಕರೆಣ್ಣನವರ ಇವರೊಂದಿಗೆ ಸೇರಿ ವೃದ್ಧೆಯ ಬದುಕಿಗೆ ಆಸರೆ ಆಗಿದ್ದಾರೆ. ಮೊದಮೊದಲು ತೀವ್ರ ಪ್ರತಿರೋಧ, ಆಕ್ರೋಶ, ಕೌಟುಂಬಿಕವಾಗಿ ತನ್ನ ಮೇಲಾದ ಆಕ್ರಮಣಗಳನ್ನು ಅಸ್ಪಷ್ಟವಾಗಿ ಹೇಳುತ್ತಿದ್ದ ಆ ವಯೋವೃದ್ಧೆ, ಉಂಡ ಸಂಕಟಗಳ ಕಾರಣಕ್ಕೋ ಏನೋ ತನ್ನೆದುರಿಗೆ ನಿಂತು ತನ್ನನ್ನು ವಿಚಾರಿಸುತ್ತಿದ್ದ ನ್ಯಾಯಾಧೀಶರ ಮೇಲೆಯೇ ಹರಿಹಾಯ್ದಿದ್ದರು ಎನ್ನಲಾಗಿದೆ. ಆದರೂ ಸಹ, ಸಹನೆ…