Author: admin

ಕೇರಳ: ನಟಿ ಪ್ರಿಯಾಮಣಿಯವರು ದೇಗುಲವೊಂದಕ್ಕೆ ಭಕ್ತಿಯಿಂದ ಯಾಂತ್ರಿಕ ಆನೆಯೊಂದನ್ನು ಕೊಡುಗೆ ನೀಡಿದ್ದಾರೆ. ಪೀಪಲ್​ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ (PETA) ಎನ್​ಜಿಒ ಜತೆ ಸೇರಿಕೊಂಡು ಬಹುಭಾಷ ನಟಿ ಈ ಕೆಲಸ ಮಾಡಿದ್ದಾರೆ. ಕೊಚ್ಚಿಯಲ್ಲಿರುವ ಥ್ರಿಕ್ಕಾಯಿಲ್​ ಮಹಾದೇವ ದೇವಸ್ಥಾನಕ್ಕೆ ಈ ಕೊಡುಗೆ ನೀಡಿದ್ದು ಇದನ್ನು ನೋಡಿ ಭಕ್ತರು ಸಂತಸಗೊಂಡಿದ್ದಾರೆ. ಜೀವಂತ ಆನೆಗಳನ್ನು ಎಂದಿಗೂ ಹೊಂದಬಾರದು ಅಥವಾ ಬಾಡಿಗೆಗೆ ತೆಗೆದುಕೊಳ್ಳಬಾರದು ಎಂದು ದೇವಾಲಯದ ಆಡಳಿತ ಮಂಡಳಿ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ, ಪ್ರಿಯಾಮಣಿ ಅವರು ಯಾಂತ್ರಿಕ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಮೆಕಾನಿಕಲ್​ ಆನೆಗೆ ಮಹಾದೇವನ್​ ಎಂದು ಹೆಸರಿಡಲಾಗಿದೆ. ಸುರಕ್ಷಿತ ಮತ್ತು ಕ್ರೌರ್ಯ ಮುಕ್ತ ರೀತಿಯಲ್ಲಿ ದೇವಸ್ಥಾನದಲ್ಲಿ ಸಮಾರಂಭಗಳನ್ನು ನಡೆಸಲು ಈ ಯಾಂತ್ರಿಕ ಆನೆಯನ್ನು ಬಳಸಲಾಗುತ್ತದೆ ಎಂದು PETA ತಿಳಿಸಿದೆ. ಈ ರೀತಿಯ ಯಾಂತ್ರಿಕ ಆನೆಯನ್ನು ಕೇರಳದಲ್ಲಿ ಪರಿಚಯಿಸಿದ್ದು, ಇದು ಎರಡನೇ ಬಾರಿ. ದೇವಸ್ಥಾನದಲ್ಲಿ ಭಾನುವಾರ ಉದ್ಘಾಟನಾ ಸಮಾರಂಭ ನಡೆಯಿತು. ಈ ವೇಳೆ ಮಾಸ್ಟರ್ ವೇದಾರ್ಥ್ ರಾಮನ್ ಮತ್ತು ತಂಡದವರಿಂದ ಚೆಂಡ ಮೇಳ…

Read More

ತಮಿಳು ಮತ್ತು ಮಲಯಾಳಂ ನಟಿ ಅರುಂಧತಿ ನಾಯರ್ ಮಾರ್ಚ್ 14 ರಂದು ಅಪಘಾತಕ್ಕೀಡಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ನಟಿ ಅರುಂಧತಿ ನಾಯರ್  ಅವರನ್ನು ವೆಂಟಿಲೇಟರ್‌ ಮೇಲೆ ಇರಿಸಲಾಗಿದೆ ಎಂದು ಅವರ ಸಹೋದರಿ ಹೇಳಿಕೆ ನೀಡಿದ್ದಾರೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರುಂಧತಿ ನಾಯರ್‌ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ತಮಿಳುನಾಡಿನ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಲ್ಲಿ ಪ್ರಕಟವಾದ ಸುದ್ದಿಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕೆಂದು ನಾವು ಭಾವಿಸಿದ್ದೇವೆ. ಮೂರು ದಿನಗಳ ಹಿಂದೆ ನನ್ನ ಸಹೋದರಿ ಅರುಂಧತಿ ನಾಯರ್ ಅವರಿಗೆ ಅಪಘಾತವಾಗಿದ್ದು ನಿಜ. ಆಕೆ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆ. ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ನಟಿ ಅರುಂಧತಿ ಅವರ ಸಹೋದರಿ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಮಾಹಿತಿ ನೀಡಿದ್ದಾರೆ. ಕೋವಲಂ ಬೈಪಾಸ್‌ನಲ್ಲಿ ಈ ರಸ್ತೆ ಅಪಘಾತ ಸಂಭವಿಸಿದ್ದು, ಅರಂಧತಿ ಅವರ ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ. ತಮ್ಮ ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಮನೆಗೆ ಮರಳುತ್ತಿದ್ದ…

Read More

ದೊಡ್ಡಬಳ್ಳಾಪುರ: ತಾಲೂಕು ಕಾಡನೂರು ಗ್ರಾಮದ ಅಬ್ದುಲ್ ಗಫರ್ ಶರೀಫ್ ಎಂಬುವವರ ಜಮೀನಿನಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರದ ತುಂಡುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮರದ ತುಂಡುಗಳು ಸುಟ್ಟು ಭಸ್ಮವಾಗಿದ್ದು,  ಇದರ ಪಕ್ಕದಲ್ಲಿ ಇದ್ದ ಹುಣಸೆಹಣ್ಣಿನ ರಾಶಿ ಕೂಡ ಉರಿದು   ಭಸ್ಮವಾಗಿದ್ದು,  ತುಂಬು ಫಸಲಿನಿಂದ  ಮೈತುಂಬಿದ್ದ ಹುಣಸೆ ಮರವು ಕೂಡ ಸುಟ್ಟು ಹಾಳಾಗಿದೆ. ಈ ಬಗ್ಗೆ ಅಬ್ದುಲ್ ಗಫರ್ ಶರೀಫ್  ಮಾಧ್ಯಮದೊಂದಿಗೆ ಮಾತನಾಡಿ,  ನಾನು ಅನೇಕ ಕಾಯಿಲೆಗಳಿಂದ ಅನಾರೋಗ್ಯಪೀಡಿತನಾಗಿದ್ದು, ಎದ್ದು ಓಡಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೇನೆ. ಇದನ್ನು ಕಂಡ ಕಿಡಿಗೇಡಿಗಳು ಈ ರೀತಿಯ  ಹೀನ ಕೃತ್ಯ ಮಾಡಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಧ್ಯಮದ ಮೂಲಕ ಮನವಿ ಮಾಡುತ್ತೇನೆ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಪರಿಹಾರ ನೀಡುವಂತೆ  ಮನವಿ ಮಾಡಿದರು. ಅನಾರೋಗ್ಯ ಪೀಡಿತರಾಗಿ  ಯಾವುದೇ ರೀತಿಯ ಸಹಕಾರವಿಲ್ಲದ ಅಮಾಯಕರಾದ ಇಂಥ ರೈತರಿಗೆ ಸರ್ಕಾರ ಯಾವ ರೀತಿ ಸಹಕಾರ ಮಾಡುತ್ತದೆ…

Read More

ರಾಷ್ಟ್ರಧ್ವಜ ಹಾರಿಸದೇ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ರಾಷ್ಟ್ರಧ್ವಜ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಮಧುಗಿರಿ ಪುರಸಭೆಯ ಅಧಿಕಾರಿಗಳ ಮೇಲೆ ಕಾನೂನೂ ರೀತಿಯ ಕ್ರಮ ಜರುಗಿಸುವಂತೆ ಇಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಬಿ. ಕರಾಳೆ ಅವರಿಗೆ ಕಾಳಜಿ ಫೌಂಡೇಶನ್ ತುಮಕೂರು ಮತ್ತು ಕರ್ನಾಟಕ ರಣಧೀರರ ವೇದಿಕೆ ಕಾರ್ಯಕರ್ತರು ದೂರು ನೀಡಿದರು. ದಿನಾಂಕ :16/03/2024 ರ ಶನಿವಾರದಂದು ಮಧುಗಿರಿಯ ಪುರಸಭೆ ಕಾರ್ಯಾಲಯದ ಧ್ವಜಸ್ತಂಭ ರಾಷ್ಟ್ರಧ್ವಜ ಹಾರಿಸದೇ ಅಪಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಪುರಸಭೆ ಮ್ಯಾನೇಜರ್ ಗುರುಪ್ರಸಾದ್ ರಾಷ್ಟ್ರಧ್ವಜ ಹಾರಿಸಲು ನಮಗೆ ಯಾವುದೇ ಆದೇಶವಿಲ್ಲ ಹಾಗಾಗಿ ನಾನು ಧ್ವಜ ಹರಿಸಿಲ್ಲ ಎಂದು ಸಬೂಬು ಹೇಳಿದ್ದರು. ಈ ಸಂಬಂಧ ಹೋರಾಟಗಾರರು ಸರ್ಕಾರದ ಆದೇಶ ಪತ್ರ ಲಗತ್ತಿಸಿ ಅಪರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ಹೋರಾಟಗಾರರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ಬೆಂಗಳೂರು: ಬಿಜೆಪಿ-ಜೆಡಿಎಸ್ ‍ನವರು ಹಾಲು-ಜೇನಿನ ರೀತಿ ಕೆಲಸ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು. ಮೈತ್ರಿ ನಾಯಕರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಯಾವುದೇ ಕಾರಣಕ್ಕೂ ಮುರಿಯೋದಿಲ್ಲ. ಒಂದು ಸೀಟಿನ ವಿಚಾರದಲ್ಲಿ ಗೊಂದಲ ಇದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿ ಆಗುತ್ತದೆ. ಬಿಜೆಪಿ-ಜೆಡಿಎಸ್‍ನವರು ಹಾಲು-ಜೇನಿನ ರೀತಿ ಕೆಲಸ ಮಾಡುತ್ತೇವೆ. ಸಣ್ಣಪುಟ್ಟ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. 3 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ನಮ್ಮ ಹೈಕಮಾಂಡ್ ನಾಯಕರು ಕುಮಾರಸ್ವಾಮಿ ಜೊತೆ ಮಾತಾಡ್ತಾರೆ. ಎಷ್ಟು ಸೀಟು ಜೆಡಿಎಸ್‍ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಇಂದೇ ಬಹುತೇಕ ಅಂತಿಮ ಆಗುತ್ತದೆ. ಬಿಜೆಪಿ-ಜೆಡಿಎಸ್ ಸ್ಥಳೀಯವಾಗಿ ಹೊಂದಾಣಿಕೆ ಆಗಿದೆ. ಸೀಟು ಹಂಚಿಕೆ ಆದ ಮೇಲೆ ಎಲ್ಲಾ ಕಡೆ ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಓಡಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಜೆಡಿಎಸ್ 3 ಸೀಟು ಕೇಳಿದ್ದರು,…

Read More

ರಾಮನಗರ: ನಾವು ಯಾರಿಗೂ ವಿಷ ಹಾಕುವವರಲ್ಲ. ನಾನು ಎಲ್ಲರಿಗೂ ಒಳ್ಳೆಯದನ್ನ ಬಯಸುವವರು ಎಂದು ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ. ದೇವೇಗೌಡರ ಬದುಕಿಗೆ ವಿಷ ಹಾಕಿದ್ದೇ ಡಿ.ಕೆ.ಬ್ರದರ್ಸ್ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ವಾಗ್ದಾಳಿ ವಿಚಾರಕ್ಕೆ ಹಾರೋಹಳ್ಳಿಯಲ್ಲಿ ಪ್ರತಿಕ್ರಿಯಿಸಿದರು. ಅವರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ಆರೋಗ್ಯ ಚೆನ್ನಾಗಿಲ್ಲ ಅಂತ ಆಸ್ಪತ್ರೆಗೆ ಹೋಗ್ತಿದ್ದಾರೆ. ಆದಷ್ಟು ಬೇಗ ಆಸ್ಪತ್ರೆಯಿಂದ ಗುಣಮುಖರಾಗಿ ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಫ್ಯಾರ ಮಿಲಿಟರಿ ಕರೆಸಬೇಕೆಂಬ ವಿಚಾರ ಸಂಬಂಧ, ಯಾರನ್ನ ಬೇಕಾದ್ರೂ ಕರೆಸಲಿ. ಪ್ಯಾರ ಮಿಲಿಟರಿಯನ್ನೇ ಕರೆಸಲಿ, ಪ್ರಧಾನಿ ಮೋದಿಯನ್ನೇ ಕರೆಸಲಿ. ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ, ಕೂಲಿ ಕೇಳ್ತಿದ್ದೇನೆ. ನನಗೆ ಬಲವಂತ ಮಾಡುವ ಅವಶ್ಯಕತೆ ಇಲ್ಲ. ಅವರ ನಾಯಕರನ್ನ ಮೆಚ್ಚಿಸಲು ಸಿಪಿವೈ ಮಾಧ್ಯಮದ ಮುಂದೆ ಹೇಳ್ತಾರೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More

ನವದೆಹಲಿ:  MNS ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಅವರ ಮಗ ಅಮಿತ್ ಠಾಕ್ರೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಸೋಮವಾರ ದೆಹಲಿಗೆ ಆಗಮಿಸಿದ ರಾಜ್ ಠಾಕ್ರೆ ಅವರು ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರೊಂದಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂಕ್ಷಿಪ್ತವಾಗಿ ಮಾತನಾಡಿದ ರಾಜ್ ಠಾಕ್ರೆ, “ನನಗೆ ಯಾವುದೇ ಕಲ್ಪನೆ ಇಲ್ಲ … ನನಗೆ ಬರಲು ಮಾತ್ರ ಹೇಳಲಾಗಿದೆ … ನನಗೆ ಯಾವುದೇ ಸಭೆಗಳ ಬಗ್ಗೆ ಮಾಹಿತಿ ಇಲ್ಲ” ಎಂದು ಹೇಳಿದರು. ಎಂಎನ್‌ ಎಸ್ ಮುಖ್ಯ ವಕ್ತಾರ ಸಂದೀಪ್ ದೇಶಪಾಂಡೆ ಅವರು ಈ ಬೆಳವಣಿಗೆಗಳನ್ನು ದೃಢಪಡಿಸಿದ್ದು, “ರಾಜ್ ಠಾಕ್ರೆ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಪಕ್ಷ ಮತ್ತು ರಾಜ್ಯದ ಹಿತಾಸಕ್ತಿಯಿಂದ ಇರುತ್ತದೆ” ಎಂದು ಹೇಳಿದ್ದಾರೆ. ಎಂಎನ್‌ಎಸ್ – ಬಿಜೆಪಿ ಮೈತ್ರಿಗೆ ಗ್ರೀನ್ ಸಿಗ್ನಲ್…

Read More

ತುಮಕೂರು: ನಾನು ಹೊರಗಿನವನು ಎಂಬುದರಲ್ಲಿ ಅರ್ಥವಿಲ್ಲ. ತುಮಕೂರಿನ ಮೂಲ ಎಂದರೆ ಐದಾರು ಸಾವಿರ ಜನ ದೊರೆಯಬಹುದು. ಹಾಗೆ ನೋಡಿದರೆ ಬೆಂಗಳೂರಿಗೂ ನಾನು ಹೊರಗಿನವನು. ನನ್ನನ್ನು ಹೊರಗಿನವ ಎಂದು ಪ್ರಚಾರ ಮಾಡುತ್ತಿರುವ ನಾಯಕರಿಗೆ ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು, ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿ. ಸೋಮಣ್ಣ ಹೇಳಿದರು. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುಳ್ಳು ಹೇಳಿ ಹೋಗುವ ಜಾಯಮಾನ ನನ್ನದಲ್ಲ. ಇಂದು ಅನೇಕ ಜನ ಹಿಂದುಳಿದ ವರ್ಗಗಳ ನಾಯಕರು ನಮ್ಮೊಂದಿಗೆ ಕೈಜೋಡಿಸಿ ಇಲ್ಲಿಗೆ ಆಗಮಿಸಿದ್ದಾರೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ನಮ್ಮೆಲ್ಲರ ಮುಂದಿರುವ ಗುರಿ ಎಂದರು. 2047ಕ್ಕೆ ಈ ದೇಶವನ್ನು ವಿಶ್ವದ ನಂಬರ್ ಒನ್ ಅರ್ಥಿಕತೆ ಹೊಂದಿದ ದೇಶವನ್ನಾಗಿಸುವ ಗುರಿ ಹೊಂದಿದ್ದಾರೆ. ಅವರ ಕೈ ಬಲಪಡಿಸುವ ಕೆಲಸ ತುಮಕೂರಿನಿಂದಲೂ ಆಗಬೇಕೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜಿ.ಬಿ. ಜೋತಿಗಣೇಶ್, ಪಕ್ಷದ ಮುಖಂಡರಾದ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ಮಲ್ಲಸಂದ್ರ ಶಿವಣ್ಣ, ಪಂಚಾಕ್ಷರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಮ್ಮತುಮಕೂರಿನ ಕ್ಷಣ…

Read More

ಮಧುಗಿರಿ: ಪೂರ್ವಜನರ ಕಾಲದಿಂದ ಶವ ಹೂಳುತಿದ್ದ ಗ್ರಾಮದ ಸ್ಮಶಾನದ ಜಾಗವನ್ನು ತನ್ನೆದೆಂದು ವ್ಯಕ್ತಿಯೊಬ್ಬರು ಸ್ಮಶಾನದಲ್ಲಿದ್ದ ಗೋರಿಗಳನ್ನು ಜೆಸಿಬಿ ಯಂತ್ರ ಬಳಸಿ ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ. ತಾಲ್ಲೂಕಿನ ಐ.ಡಿ ಹಳ್ಳಿ ಹೋಬಳಿ ಚಿಕ್ಕದಾಳವಟ್ಟ ಗ್ರಾಪಂ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ, ನೂರಾರು ವರ್ಷಗಳಿಂದ ಪೂರ್ವಜರ ಅನುಮತಿ ಮೇರೆಗೆ ಗ್ರಾಮದ ಸರ್ವೆ ನಂ೪/೧ ರಲ್ಲಿ, ಸುಮಾರು ೧೦ ಗುಂಟೆ ಜಾಗದಲ್ಲಿ ತಲೆ ತಲಾಂತರಗಳಿಂದ ಅಂತ್ಯ ಸಂಸ್ಕಾರ ಮಾಡುತಿದ್ದು, ಮಲ್ಲಿಕಾರ್ಜುನ್ ಎಂಬ ವ್ಯಕ್ತಿ ಸದರಿ ಜಾಗ ತನ್ನೆದೆಂದು ಏಕಾಏಕಿ ಜೆಸಿಬಿ ಯಂತ್ರಗಳನ್ನು ಬಳಸಿ ೧೯ ಗೋರಿಗಳ ಧ್ವಂಸ ಮಾಡಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ಪ್ರತಿ ವರ್ಷ ಯುಗಾದಿ ಹಬ್ಬದ ಸಮೀಪದಲ್ಲಿ ಹಿರಿಯ ಸಮಾಧಿಗಳಿಗೆ ಸುಣ್ಣಬಣ್ಣ ಮಾಡಿಸಿ ಪೂಜೆ ಮಾಡುತಿದ್ದೇವು. ಆದರೆ, ಇದೀಗಾ ಸಮಾಧಿಗಳೇ ಇಲ್ಲದ ಕಾರಣ ಯಾರಿಗೆ ಪೂಜೆ ಸಲ್ಲಿಸಬೇಕು ಎಂದು ದಿಕ್ಕು ತೋಚದಂತಾಗಿದೆ” ಎಂದು ಗ್ರಾಮಸ್ಥರು ಸಮಾಧಿಗಳ ಕಲ್ಲುಗಳ ಮೇಲೆ ಗೋಳಾಡುತ್ತಾ ಕಣ್ಣಿರಿಟ್ಟ ಘಟನೆ ಮನಕಲುಕುವಂತಿತ್ತು. ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು…

Read More

ಆನೇಕಲ್​: ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ಪ್ರಿಯತಮೆಯನ್ನು ತನ್ನಿಂದ ದೂರ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹರ್ಷಿತ್ ನೇಣಿಗೆ ಶರಣಾದ ಪ್ರಿಯಕರನಾಗಿದ್ದಾನೆ. ಇಂದ್ರಕುಮಾರ್ ಮತ್ತು ರಾಧಾ ದಂಪತಿಗಳ ಪುತ್ರ ಹರ್ಷಿತ್, ತುಮಕೂರು ಮೂಲದ ಮೃದುಲ ಯಾನೆ ಮೇಘ ಎಂಬಾಕೆಯನ್ನು ಪ್ರೀತಿ ಮಾಡುತ್ತಿದ್ದ. ಆನೇಕಲ್ ಎಎಸ್ ಬಿ ಕಾಲೇಜಿನಲ್ಲಿ ಓದುವಾಗ ಪರಸ್ಪರ ಪ್ರೀತಿ ಹುಟ್ಟಿಕೊಂಡಿತ್ತು. ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಇವರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ತಂದೆ-ತಾಯಿ ಇಲ್ಲದ ಮೃದುಲ ಅತ್ತೆ ಮತ್ತು ಮಾವನ ಮನೆಯಲ್ಲಿ ವಾಸವಾಗಿದ್ದಳು. ಇವರ ಪ್ರೀತಿಯ ವಿಚಾರ ಯುವತಿಯ ಮನೆಗೆ ತಿಳಿದಿದ್ದು, ಯುವಕ ಹರ್ಷಿತ್‌ ಗೆ ನಿಂದಿಸಿ, ಯುವತಿಯ ಬಳಿ ಮಾತನಾಡದಂತೆ ಧಮಕಿ ಹಾಕಿದ್ದರು. ಯುವತಿಗೂ ಆಕೆಯ ಅತ್ತೆ ಮಾವ ನಿರ್ಬಂಧ ಹಾಕಿದ್ದರು. ಯುವತಿಯೂ ಇದರಿಂದ ಬೆದರಿ ಹರ್ಷಿತ್‌ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಹರ್ಷಿತ್​ ಕೈ ಕೊಯ್ದುಕೊಂಡು ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಯುವತಿ ಮೃದುಲ ಮೇಘ,…

Read More