Subscribe to Updates
Get the latest creative news from FooBar about art, design and business.
- ವಲಸೆಗೆ ಬ್ರೇಕ್; ‘ವಿಬಿ–ಜಿ ರಾಮ್-ಜಿ’ ಯೋಜನೆಯಿಂದ ಗ್ರಾಮದಲ್ಲೇ ಉದ್ಯೋಗದ ಭರವಸೆ
- ಬರಗಾಲಕ್ಕೆ ಹೆದರಿ ವಲಸೆ ಹೋಗಬೇಡಿ: ನಿಮ್ಮೂರಲ್ಲೇ ‘ವಿಬಿ–ಜಿ ರಾಮ್ ಜಿ’ ಕೆಲಸ ಮಾಡಿ: ಡಿಸಿ ಶಿಲ್ಪಾ ಶರ್ಮಾ
- ತ್ಯಾಜ್ಯವಲ್ಲ ಕರಟ, ರೈತರಿಗೆ ಬಂಪರ್ ಹಣ! ಕೊಬ್ಬರಿ ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಬೆಳೆಗಾರರ ಮೊಗದಲ್ಲಿ ಮಂದಹಾಸ
- ಬದುಕು ಉಜ್ವಲವಾಗಲು ಶಿಕ್ಷಣವೇ ಮುಖ್ಯ ಅಸ್ತ್ರ: ಶಾಸಕ ಕೆ.ಎನ್. ರಾಜಣ್ಣ ಕರೆ
- ಬಡವರ ಹಸಿವು ನೀಗಿಸುತ್ತಿರುವ ಕೊರಟಗೆರೆಯ ‘ದತ್ತು ಹೋಟೆಲ್’: ಕೇವಲ 40 ರೂಪಾಯಿಗೆ ಸೌದೆ ಒಲೆಯ ರುಚಿಕರ ಊಟ–ತಿಂಡಿ!
- ಬಡ ಮಕ್ಕಳಿಗೆ ಸಮವಸ್ತ್ರ ವಿತರಣೆ : ಹಳೆಯ ವಿದ್ಯಾರ್ಥಿನಿ ಕಾರ್ಯಕ್ಕೆ ಮೆಚ್ಚುಗೆ
- ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು
- ಸಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವರಿಗೆ ವಿ.ಸೋಮಣ್ಣ ಪತ್ರ
Author: admin
ಬೆಳಗಾವಿ: ತಾಲೂಕಿನ ಗ್ರಾಮಗಳಾದ ಕುರಿಹಾಳ, ಬೋಡಕೇನಹಟ್ಟಿ, ಅಲತಗಾ, ಗೌಂಡವಾಡ, ಗ್ರಾಮಗಳಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಅಧಿಕೃತ ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಪ್ರಚಾರ ಮಾಡಿದರು. ಮತದಾರರಿಗೆ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್ ದೇಶಕ್ಕಾಗಿ ಏನು ನೀಡಿದೆ ಎಂಬುದನ್ನು ಪ್ರಿಯಾಂಕ ಜಾರಕಿಹೊಳಿ ಮತದಾರರಿಗೆ ತಿಳಿಸಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರ ಇಲ್ಲಿನ ಯುವಕರಿಗೆ ಯುವತಿಯರಿಗೆ ಹೆಚ್ಚಿನ ಉದ್ಯೋಗವಕಾಶಗಳು ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾರ್ಯ ನಿರ್ವಹಿಸಲಿದ್ದೇವೆ. ಅಭಿವೃದ್ಧಿ ನಮ್ಮ ಮೂಲ ಮಂತ್ರವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ, ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಛತ್ರಪತಿ ಸಂಭಾಜಿ ಮಹಾರಾಜರ ಪೂಜೆ ಸಲ್ಲಿಸಿ ಅಭಿವಾದನ ಮಾಡಿದರು. ಕಾಂಗ್ರೆಸ್ ಮುಖಂಡ ಹಾಗೂ ಬಹುಜನ ಸಮಾಜದ ನಾಯಕರಾದ ಮಲ್ಲೇಶ್ ಚೌಗಲೆ ಮಾತನಾಡಿ, ಚಿಕ್ಕೋಡಿಯ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಯುವ ಹಾಗೂ ವಿದ್ಯಾವಂತ ಹಾಗೂ ಸಾಮಾಜಿಕ ಶಿಕ್ಷಣ ರಾಜಕೀಯ ಕ್ಷೇತ್ರಗಳಲ್ಲಿ, ತಮ್ಮ ಸಣ್ಣ ವಯಸ್ಸಿನಲ್ಲಿಯೇ ಅತಿ…
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14 ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಯಲಿದೆ. ಈ ಮೊದಲು ಏಪ್ರಿಲ್ 14 ರಂದು ದೇವನಹಳ್ಳಿಯಲ್ಲಿ ಸಮಾವೇಶ ನಿಗದಿಯಾಗಿತ್ತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಈ ಸಾರ್ವಜನಿಕ ಸಮಾವೇಶ ಇದೀಗ ಮಂಗಳೂರಿಗೆ ಸ್ಥಳಾಂತರಗೊಂಡಿರುವುದು ವಿಶೇಷವಾಗಿದೆ. ಕರ್ನಾಟಕದ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಜೊತೆ ಕಳೆದ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಂವಾದ ನಡೆಸಿದ್ದರು. ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀಡಿದ್ದರು. ಬೂತ್ ಮಟ್ಟದಲ್ಲಿ ಚುನಾವಣಾ ಪ್ರಚಾರ ಯಾವ ರೀತಿಯಲ್ಲಿ ಸಾಗುತ್ತಿದೆ ಎಂಬುದನ್ನು ವಿಚಾರಿಸಿದ್ದರು. ಇದೀಗ ಖುದ್ದು ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಕಾರ್ಯಕ್ಕೆ ವೇಗ ನೀಡಲಿದ್ದಾರೆ. ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಸಂಜೆ ಬೆಂಗಳೂರಿನಲ್ಲಿ ರೋಡ್ ಶೋದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 6ರಿಂದ 7 ಗಂಟೆಯವರೆಗೆ ಹೆಬ್ಬಾಳ-ಬ್ಯಾಟರಾಯನಪುರದಲ್ಲಿ ರೋಡ್ ಶೋ ನಡೆಯಲಿದೆ. ಏಪ್ರಿಲ್ 14ಕ್ಕೆ ಬೆಂಗಳೂರಿಗೆ…
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಕೇಜ್ರಿವಾಲ್ ಅವರ ಬಂಧನವು ಕಾನೂನಿಗೆ ವಿರುದ್ಧವಾಗಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಬಂಧನವನ್ನು ಕಾನೂನುಬಾಹಿರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಹೇಳಿದರು. ವೀಡಿಯೊ ಕಾನ್ಸರೆನ್ಸಿಂಗ್ ಮೂಲಕ ನನ್ನನ್ನು ಪ್ರಶ್ನಿಸಬಹುದಿತ್ತು ಎಂಬ ಕೇಜ್ರಿವಾಲ್ ಅವರ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಲಯವು “ತನಿಖೆಯನ್ನು ಹೇಗೆ ಮಾಡಬೇಕೆಂದು ಆರೋಪಿಗೆ ನಿರ್ಧರಿಸಲು ಅವಕಾಶವಿಲ್ಲ. ಆರೋಪಿಯ ಅನುಕೂಲಕ್ಕೆ ತಕ್ಕಂತೆ ವಿಚಾರಣೆ ನಡೆಯುವುದಿಲ್ಲ. ಈ ನ್ಯಾಯಾಲಯವು ಸಾರ್ವಜನಿಕರಿಗೊಂದು, ಸಾರ್ವಜನಿಕ ಸೇವಕರಿಗೆ ಒಂದು ರೀತಿಯಲ್ಲಿ ವಿಚಾರಣೆ ಮಾಡಲಾಗುವುದಿಲ್ಲ” ಎಂದು ಹೇಳಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಇಂದು ದ್ವಿತೀಯ ಪಿಯುಸಿ 2024 ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಲಿದ್ದು, 11 ಗಂಟೆಯ ನಂತರ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳು ವೀಕ್ಷಿಸಬಹುದು. ಫಲಿತಾಂಶ ಚೆಕ್ ಮಾಡುವ ರೀತಿ ಇಲ್ಲಿದೆ: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನೀಡಲಾದ ರಿಜಿಸ್ಟರ್ ನಂಬರ್/ರೋಲ್ ನಂಬರ್ ಬಳಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡುವ ವೆಬ್ಸೈಟ್‌ನಲ್ಲಿ ಫಲಿತಾಂಶ ಚೆಕ್ ಮಾಡಬಹುದು. ಚೆಕ್ ಮಾಡುವ ರೀತಿ ಇಲ್ಲಿದೆ: ವಿದ್ಯಾರ್ಥಿಗಳು ಮೊದಲಿಗೆ https://karresults.nic.in/ ಗೆ ಭೇಟಿ ನೀಡಿ, ನಂತರ ದ್ವಿತೀಯ ಪಿಯುಸಿ ರಿಸಲ್ಟ್ ಚೆಕ್ ಮಾಡುವ ಲಿಂಕ್ ಇರುತ್ತದೆ. ಅದಕ್ಕೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟರ್ ನಂಬರ್ ಹಾಕಬೇಕು. ಆವಾಗ ನಿಮ್ಮ ಫಲಿತಾಂಶ ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ನಕಲಿ ನೋಟ್ ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಡಾ.ಕೆ. ಆರ್ ಸಂಜಯ್ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 500 ರೂ. ಮುಖ ಬೆಲೆಯ 51 ಖೋಟಾ ನೋಟು ವಶಪಡಿಸಿಕೊಳ್ಳಲಾಗಿದೆ.ಈತ ಕ್ಯಾಬ್ ಡ್ರೈವರುಗಳನ್ನ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಎನ್ನಲಾಗಿದೆ. ದೂರುದಾರ ಚಂದ್ರಶೇಖರ್ ಎಂಬವರನ್ನು ಯಶವಂತಪುರದಲ್ಲಿ ಪಿಕ್ ಮಾಡಿ ಊಟಕ್ಕೆ ಕರೆದೊಯ್ದಿದ್ದ ಆರೋಪಿ. ಮಾಗಡಿ ರೋಡ್ ಹೌಸಿಂಗ್ ಬೋರ್ಡ್‌ನಲ್ಲಿ ಬಿ.ಎನ್.ಬಾರ್ ಅಂಡ್ ರೆಸ್ಟೊರೆಂಟ್ ಗೆ ಕರೆದುಕೊಂಡು ಹೋಗಿದ್ದ. ಬಾರ್ ಗೆ ಹೋದ ಬಳಿಕ ದೂರುದಾರರ ಬಳಿ 10 ಸಾವಿರ ಪೋನ್ ಪೇ ಮಾಡಿಸಿದ್ದ. ಬದಲಾಗಿ ತನ್ನ ಬಳಿ ಇದ್ದ 10 ಸಾವಿರದ 500 ರೂ. ನಕಲಿ ನೋಟನ್ನು ನೀಡಿದ್ದ. ಹಣ ನೀಡಿ ದೂರುದಾರನ ಮೊಬೈಲ್ ಪಡೆದುಕೊಂಡು ಎಸ್ಕೇಪ್ ಆಗಿದ್ದ. ಘಟನೆ ಬಳಿಕ ಮಾಗಡಿ ರೋಡ್ ಪೊಲೀಸ್ ಠಾಣೆಗೆ ಜರಿಪಿಟಿ ಚಂದ್ರಶೇಖರ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಚೆನ್ನೈ ಮೂಲದ ಆರೋಪಿಯನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ. ದೂರುದಾರ ಚಂದ್ರಶೇಖರ್ ಗೆ ನೀಡಿದ್ದ 21…
ನವದೆಹಲಿ: ಮದ್ಯನೀತಿ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಆರ್ ಎಸ್ ನಾಯಕಿ ಕೆ ಕವಿತಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಮತ್ತು ಸಾಕ್ಷ್ಯವನ್ನು ಹಾಳು ಮಾಡಲು ಪ್ರಯತ್ನಿಸಬಹುದು ಎನ್ನುವ ಕಾರಣಕ್ಕೆ ಅವರಿಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಭಾರತ ರಾಷ್ಟ್ರೀಯ ಸಮಿತಿ ನಾಯಕಿ ಹಾಗೂ ಕೆಸಿಆರ್ ಪುತ್ರಿ ಕೆ ಕವಿತಾ ನ್ಯಾಯಾಂಗ ಬಂಧನವನ್ನು ಏ.23 ರವರೆಗೆ ವಿಸ್ತರಿಸಲಾಗಿದೆ. ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದ್ದು, ಏ.23 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಮಾರ್ಚ್ 15, 2024 ರಂದು ಜಾರಿ ನಿರ್ದೇಶನಾಲಯವು ಅವರನ್ನು ಬಂಧಿಸಿತ್ತು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ಅವಧಿ ಮುಗಿದ ನಂತರ ಕವಿತಾ ಅವರನ್ನು ತಿಹಾರ್ ಜೈಲಿನಿಂದ ಕೋರ್ಟ್ ಗೆ ಕರೆತರಲಾಯಿತು. ಇಡಿ ನ್ಯಾಯಾಂಗ ಬಂಧನವನ್ನು 14 ದಿನಗಳ ಕಾಲ ವಿಸ್ತರಿಸುವಂತೆ ಕೋರಿ ಅರ್ಜಿ ಸಲ್ಲಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ…
ಔರಾದ್: ತಾಲೂಕಿನ ಹೆಡಗಾಪೂರ ಗ್ರಾಮದ ಶಿವಲಿಂಗೇಶ್ವರ ಸಂಸ್ಥಾನ ಮಠಕ್ಕೆ ಕೇದಾರಲಿಂಗ ದೇವರ ಪಟ್ಟಾಧಿಕಾರ ಕಾರ್ಯಕ್ರಮ ಏ. 15ರಂದು ಸಂಭ್ರಮದಿಂದ ನಡೆಯಲಿದೆ. ಸಮಾರಂಭದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ ಎಂದು ಹೆಡಗಾಪೂರ ಶ್ರೀಗಳಾದ ಶಿವಲಿಂಗ ಶಿವಾಚಾರ್ಯರು ಹೇಳಿದರು. ಸೋಮವಾರ ತಾಲೂಕಿನ ಹೆಡಗಾಪೂರ ಗ್ರಾಮದ ಶಿವಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಏ.8 ರಿಂದ 15ರವರೆಗೆ ನಡೆಯಲಿರುವ ಗುರುವಂದನಾ ಮತ್ತು ಗುರುಪಟ್ಟಾಧಿಕಾರ ಮಹೋತ್ಸವ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. 1961ರಲ್ಲಿ ನನಗೆ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರು ಕರೆತಂದು ಈ ಮಠಕ್ಕೆ ಪಟ್ಟಾಧಿಕಾರ ಮಾಡಿಸಿದ್ದಾರೆ. ಧರ್ಮದ ಆಚರಣೆ, ಭಕ್ತರಿಗೆ ಒಳ್ಳೆಯ ಮಾರ್ಗ ನೀಡುವ ಕೆಲಸ ಸಂಸ್ಥಾನ ಮಠ ಮಾಡಿಕೊಂಡು ಬಂದಿದೆ. ಈಗ ನನಗೆ ವಯಸ್ಸಾಗಿದೆ. ಆದ್ದರಿಂದ ಕೇದಾರಲಿಂಗ ದೇವರಿಗೆ ಪಟ್ಟಾಧಿಕಾರ ಮಾಡುತ್ತಿದ್ದೇವೆ. ತಂದೆ-ತಾಯಿ ಸಂಬಂಧ ತೊರೆದು, ಸಮಾಜವೇ ಅವರಿಗೆ ತಂದೆ-ತಾಯಿಯ ರೂಪದಲ್ಲಿ ಬೆನ್ನಿಗೆ ನಿಲ್ಲಬೇಕು. ಎಲ್ಲರ ಕರುಣೆ ಅವರೊಂದಿಗಿರಲಿ ಎಂದು ಹೇಳುತ್ತ ಕಣ್ಣೀರು ಹಾಕಿದರು. ಮಠದಲ್ಲಿ 50 ಮಕ್ಕಳ ವಸತಿ…
ಬೀದರ್: ಸರ್ಕಾರದಿಂದ ವಿತರಿಸಲಾದ 17 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಸಹಿತ ಇಬ್ಬರು ಆರೋಪಿಗಳನ್ನು ಬೀದರ್ ಜಿಲ್ಲೆಯ ಮಂಠಾಳ ಪೊಲೀಸ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಂಠಾಳಾ ಪೊಲೀಸ್ ಠಾಣೆಯ ಪಿ.ಎಸ್.ಐ. ರಾಜಕುಮಾರ ಹಾಗೂ ಆಹಾರ ನಿರೀಕ್ಷಕ ನಾಗರಾಜ ಪಾಟೀಲ್ ಇವರ ಸಮಕ್ಷಮದಲ್ಲಿ ದಾಳಿ ನಡೆಸಿ ಲಾರಿಯಲ್ಲಿದ್ದ 5,95,000 ರೂಪಾಯಿ 175 ಕ್ವಿಂಟಾಲ್ ಅಕ್ಕಿ, ಹಾಗೂ 12,00,000 ಮೌಲ್ಯದ ಲಾರಿ ಒಟ್ಟು 17,95,000 ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಂಠಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮನ್ನಳ್ಳಿ ಗ್ರಾಮದ ಹತ್ತಿರ ಎನ್.ಹೆಚ್-65 ಬಳಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಸೊತ್ತು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ವಿಜಯಪುರ: ಜಿಲ್ಲೆಯ ಕೊಲ್ಹಾರ ಬಳಿ ದೇವರ ಪಲ್ಲಕ್ಕಿಯೊಂದಿಗೆ ಕೃಷ್ಣಾ ನದಿಗೆ ಸ್ನಾನ ಮಾಡಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ನಡೆದಿದೆ. ಕಾರಜೋಳ ಗ್ರಾಮದ ಸುದೀಪ ದೊಡ್ಡಮನಿ (12), ಶ್ರೀಧರ ದೊಡ್ಡಮನಿ (10) ಮೃತ ಬಾಲಕರಾಗಿದ್ದಾರೆ. ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಲ್ಲಕ್ಕಿಯಲ್ಲಿ ದೇವಿಯ ವಿಗ್ರಹವನ್ನು ತೆಗೆದುಕೊಂಡು ಸ್ನಾನ ಮಾಡಿಸಲು ನದಿಗೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಹುಚ್ಚಮ್ಮ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಿ ವಿಗ್ರಹಗಳಿಗೆ ಸ್ನಾನ ಮಾಡಿಸಲು ನದಿಗೆ ಗ್ರಾಮಸ್ಥರು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಇಬ್ಬರು ಬಾಲಕರ ಮೃತದೇಹ ಹೊರತೆಗೆದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಶಿರಾ: ತಾಲೂಕಿನ ಅಮರಾಪುರ ರಸ್ತೆಯ ಬಡಕನಹಳ್ಳಿ ಕ್ರಾಸ್ ಬಳಿ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಜಿಂಕೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ. ಈ ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮಂಜುನಾಥ(35) ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ರಸ್ತೆಯಲ್ಲಿ ಹೋಗುವ ಮಾರ್ಗದಲ್ಲಿ ರಸ್ತೆ ದಾಟುತ್ತಿದ್ದ ಜಿಂಕೆಯು ವಾಹನಕ್ಕೆ ಅಡ್ಡ ಬಂದಿದ್ದು, ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಜಿಂಕೆಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಜಿಂಕೆ ಮೃತಪಟ್ಟಿದೆ. ವಿಷಯ ತಿಳಿದ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ನವನೀತ, ಪಶು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆಯು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296