Author: admin

ಭಾರತದಲ್ಲಿ BBCಯ ನ್ಯೂಸ್ ರೂಮ್ ಮುಚ್ಚಲಾಗಿದೆ. ಪ್ರಕಟಣೆಯ ಪರವಾನಗಿಯನ್ನು ಭಾರತೀಯ ಉದ್ಯೋಗಿಗಳು ಸ್ಥಾಪಿಸಿದ ಖಾಸಗಿ ಲಿಮಿಟೆಡ್ ಕಂಪನಿಗೆ ವರ್ಗಾಯಿಸಲಾಯಿತು. ಆದಾಯ ತೆರಿಗೆ ಉಲ್ಲಂಘನೆಯ ವಿಚಾರಣೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವಾರದಿಂದ ಮಾಜಿ ಬಿಬಿಸಿ ಸಿಬ್ಬಂದಿ ‘ಸಾಮೂಹಿಕ ಸುದ್ದಿಮನೆಯನ್ನು ಪ್ರಾರಂಭಿಸಲಿದ್ದಾರೆ. ಭಾರತದಲ್ಲಿ BBC ಯ ಭವಿಷ್ಯದ ಕಾರ್ಯಾಚರಣೆಗಳು ಸಾಮೂಹಿಕ ಸುದ್ದಿಮನೆಯ ಮೂಲಕ ಇರುತ್ತದೆ. ಸಾಮೂಹಿಕ ನ್ಯೂಸ್‌ ರೂಮ್ ಕಂಪನಿಯಲ್ಲಿ 26% ಪಾಲನ್ನು ಪಡೆಯಲು BBC ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಮತ್ತೊಂದು ಸಂಸ್ಥೆಗೆ ಪ್ರಕಾಶನ ಪರವಾನಗಿಯನ್ನು ಹಸ್ತಾಂತರಿಸುವುದು ತನ್ನ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಮತ್ತು ಪತ್ರಿಕೋದ್ಯಮದಲ್ಲಿ ರಾಜಿಯಾಗುವುದಿಲ್ಲ ಎಂದು ಬಿಬಿಸಿ ಪ್ರತಿಕ್ರಿಯಿಸಿದೆ. ಕಲೆಕ್ಟಿವ್ ನ್ಯೂಸ್‌ ರೂಮ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೂಪಾ ಝಾ ಹೇಳಿದರು: “ಬಿಬಿಸಿಯು ಮತ್ತೊಂದು ಸಂಸ್ಥೆಗೆ ಪ್ರಕಾಶನ ಪರವಾನಗಿ ನೀಡಿರುವುದು ಇದೇ ಮೊದಲು ಮತ್ತು ಬಿಬಿಸಿ ಪತ್ರಿಕೋದ್ಯಮದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಬಿಬಿಸಿ ಇಂಡಿಯಾದಲ್ಲಿ ಹಿರಿಯ ಸುದ್ದಿ ಸಂಪಾದಕರಾಗಿದ್ದ ಝಾ ಅವರು ಕಲೆಕ್ಟಿವ್ ನ್ಯೂಸ್‌ ರೂಮ್ ನ…

Read More

ಲೋಕಸಭೆ ಚುನಾವಣೆ ಹಿನ್ನೆಲೆ ಮತದಾನದ ಮಹತ್ವ ಸಾರಲು ಜನಜಾಗೃತಿ ಮೂಡಿಸಲು ಕೆಎಂಎಫ್ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಹಾಲು, ಮೊಸರು, ಮಜ್ಜಿಗೆ, ಲಸ್ಸಿ ಪ್ಯಾಕೆಟ್ ಗಳ ಮೂಲಕವೂ ಮತದಾನದ ಮಹತ್ವ ಸಾರಲು ಕೆಎಂ ಎಫ್ ಮುಂದಾಗಿದೆ. ಚುನಾವಣೆಯಿಂದ ಚುನಾವಣೆಗೆ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆ, ಅದರಲ್ಲೂ ನಗರ ಪ್ರದೇಶದಲ್ಲಿ ಮತದಾನ ಮಾಡಲು ಮತದಾರರು ನಿರ್ಲಕ್ಷ್ಯ ತೋರುತ್ತಿದ್ದು, ಹೀಗಾಗಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಭಿನ್ನ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದೀಗ ಕೆಎಂಎಫ್ ನಿಂದ ಮತದಾನದ ಮಹತ್ವ ಸಾರಲು ಜನಜಾಗೃತಿ ಮೂಡಿಸುತ್ತಿದ್ದು, ನಂದಿನಿ ಹಾಲು,‌ ಮೊಸರು, ಮಜ್ಜಿಗೆ, ಲಸ್ಸಿ ಪ್ಯಾಕೆಟ್ ಗಳ ಮೇಲೆ ಮತದಾನ ಮಾಡುವಂತೆ ಜನಜಾಗೃತಿ ಮೂಡಿಸುವ ಸಂದೇಶ ಮುದ್ರಣ ಮಾಡಲಾಗುತ್ತಿದೆ. ಇದೇ ಏಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾವಣೆ ಮಾಡುವಂತೆ ಹಾಲು, ಮೊಸರು, ಮಜ್ಜಿಗೆ, ಲಸ್ಸಿ ಪೊಟ್ಟಣಗಳ ಮೇಲೆ ಮುದ್ರಿಸುವ ಮೂಲಕ ಸಂದೇಶ ರವಾನೆ ಮಾಡುತ್ತಿದೆ.  ಮತದಾನದ ಮಹತ್ವ ಸಾರಲು ಕೆಎಂಎಫ್ ಮಾಡಿರುವ ವಿನೂತನ…

Read More

ಸರಗೂರು: ತಾಲ್ಲೂಕಿನ ಪಟ್ಟಣದ ನಾಲ್ಕನೇ ವಾರ್ಡಿನ ನಿವಾಸಿಯಾದ ಪಟ್ಟಣ ಪಂಚಾಯತ್ ಸದಸ್ಯ ಎಸ್.ಎಲ್. ರಾಜಣ್ಣ(56) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಎಸ್.ಎಲ್.ರಾಜಣ್ಣ, ಗ್ರಾಮೀಣ ಭಾಗದ ವ್ಯಕ್ತಿಯಾಗಿದ್ದು, ಇವರು ದಲಿತ ಕುಟುಂಬದಿಂದ ಬಡತನದಿಂದ ಬೆಳೆದು ಬಂದಿದ್ದು, ರಾಜ್ಯ ಮಟ್ಟದಲ್ಲಿ ವಾಲಿಬಾಲ್ ಕ್ರೀಡಾಪಟುವಾಗಿದ್ದರು. ಇವರು ಮನೆಯಲ್ಲಿ ಕಡು ಬಡತನ ಇದ್ದ ಕಾರಣ ವಿದ್ಯಾಬ್ಯಾಸ ಅರ್ಧಕ್ಕೆ ನಿಲ್ಲಿಸಿ, ಪಟ್ಟಣದಲ್ಲಿ ಯುವ ಪೀಳಿಗೆ ಯುವಕರಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದರು. ಗ್ರಾಮೀಣದ ದಲಿತರ ಸಮುದಾಯದ ನೊಂದ ಜನರಿಗೆ ಆಶಾಕಿರಣವಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹಾಗೂ ರಾಜಕೀಯ ನಾಯಕರ ಜೊತೆ ಒಡನಾಟ ಹೊಂದಿದ್ದು, ರಾಜಕೀಯ ಜೀವನದಲ್ಲಿ ಸಕ್ರಿಯವಾಗಿದ್ದರು. ಇವರು ಧರ್ಮಪತ್ನಿ ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಪಟ್ಞಣದಲ್ಲಿ ಇವರನ್ನು ಕಳೆದುಕೊಂಡು ಜನರು ಶೋಕಭರಿತರಾಗಿದ್ದಾರೆ. ವರದಿ: ಹಾದನೂರು ಚಂದ್ರ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296  

Read More

ತುರುವೇಕೆರೆ: ಇದು ತುರುವೇಕೆರೆಯ ತಾಲೂಕು ಕೇಂದ್ರದಲ್ಲಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಅಧಿಕಾರಿಗಳು ನಿರ್ಲಕ್ಷತೆಯ ಕಥೆಯಾಗಿದೆ. ನಿಲ್ದಾಣದ ಒಳಗೆ ಇರುವ ಶೌಚಾಲಯದ ಮತ್ತು ಕೈ ತೊಳೆಯುವ ಜಾಗದಲ್ಲಿ ಅಳವಡಿಸಿರುವ ಪ್ಲಾಸ್ಟಿಕ್ ಪೈಪು ಒಡೆದು ಹೋಗಿ, ಸುಮಾರು ತಿಂಗಳುಗಳೇ ಕಳೆದರೂ ಇದನ್ನು ಸರಿಪಡಿಸುವ ಗೋಜಿಗೆ ಕೆ ಎಸ್ ಆರ್ ಟಿ ಸಿ ಯ ನಿಲ್ದಾಣ ಅಧಿಕಾರಿಗಳು ಇನ್ನೂ ಹೋಗಿಲ್ಲ. ಸಾರ್ವಜನಿಕರು ಈ ಬಗ್ಗೆ ಪ್ರಶ್ನೆ ಮಾಡಿದರೆ, “ಶೌಚಾಲಯವನ್ನು ಸ್ವಚ್ಛಗೊಳಿಸುವ ಕೆಲಸ ನಮ್ಮದಲ್ಲ.  ನಿಗಮವು ಗುತ್ತಿಗೆ ನೀಡಿದೆ.  ನೀವೇನಿದ್ದರೂ ಗುತ್ತಿಗೆದಾರರ ಬಳಿ ಕೇಳಿಕೊಳ್ಳಿ” ಎಂದು ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆ. ಶೌಚಾಲಯದ ಕಾವಲುಗಾರನ್ನು ವಿಚಾರಿಸಿದರೆ “ಗುತ್ತಿಗೆದಾರರನ್ನು ವಿಚಾರಿಸಿಕೊಳ್ಳಿ” ಎಂದು ಹೇಳುತ್ತಾರೆ. “ಇಲ್ಲಿ ದಿನನಿತ್ಯ ನೂರಾರು ಸಾರ್ವಜನಿಕರು ಪ್ರಯಾಣ ಮಾಡಲು ಈ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಒಡೆದು ಹೋಗಿರುವ ಪೈಪ್ ನಿಂದ ಶೌಚಾಲಯದಲ್ಲಿ ಬಳಸಿದ ಮಲಿನವಾದ ನೀರು ವಾಪಸ್ ಪೈಪಿನ ಮೂಲಕ ಬರುತ್ತದೆ. ಕೆಲವರು ಕೈ ತೊಳೆದು ಮತ್ತು ಬಾಯಿಯಿಂದ ಉಗಿದ ಪಾನ್…

Read More

ಇತ್ತೀಚೆಗೆ ಕ್ರಿಕೆಟರ್ ಎಂಎಸ್ ಧೋನಿಗೆ ಸಿನಿಮಾ ಮೇಲೆ ಪ್ರೀತಿ ಹೆಚ್ಚಾಗಿದ್ದು, ಟೀಂ ಇಂಡಿಯಾದಿಂದ ಹೊರ ಬಂದ ಬಳಿಕ, ಧೋನಿ ಎಂಟರ್ ​ಟೇನ್​ ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ಈ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಒಂದು ಸಿನಿಮಾ ಕೂಡ ನಿರ್ಮಾಣ ಆಗಿದೆ. ಶೀಘ್ರವೇ ಅವರ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಕನ್ನಡ ಸಿನಿಮಾ ಕೂಡ ಮೂಡಿ ಬರಲಿದೆ ಎಂದು ವರದಿ ತಿಳಿಸಿದೆ. ಧೋನಿ ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಹೊಸಬರಿಗೆ ಅವಕಾಶ ನೀಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಮೊದಲು ತಮಿಳು ಭಾಷೆಯಲ್ಲಿ ‘ಲೆಟ್ಸ್ ಗೆಟ್ ಮ್ಯಾರೀಡ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಥಿಯೇಟರ್​ ನಲ್ಲೇ ರಿಲೀಸ್ ಆಗಿತ್ತು. ಆದರೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಈಗ ಅವರು ಕನ್ನಡ ಚಿತ್ರರಂಗದತ್ತ ಒಲವು ತೋರಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಿದೆ. ‘ಕೆಜಿಎಫ್’, ‘ಕಾಂತಾರ’, ‘777 ಚಾರ್ಲಿ’, ‘ಕಾಟೇರ’ ರೀತಿಯ ಸಿನಿಮಾಗಳಿಂದ ಪರಭಾಷೆಯವರೂ ಕನ್ನಡ ಚಿತ್ರರಂಗದತ್ತ ಮುಖಮಾಡುವಂತೆ ಆಗಿದೆ. ಹೀಗಾಗಿ, ಪರಭಾಷೆಯ ನಿರ್ಮಾಪಕರು…

Read More

ವನ್ಯಜೀವಿ ಸಂರಕ್ಷಣೆ ವಿಷಯದಲ್ಲಿ ಜರ್ಮನಿ ಮತ್ತು ಬೋಟ್ಸ್ ವಾನ ದೇಶಗಳ ನಡುವಿನ ವಾಗ್ಯುದ್ದ ತಿಕ್ಕಾಟ ತೀವ್ರಗೊಂಡಿದ್ದು, ಜರ್ಮನಿಗೆ 20,000 ಆನೆಗಳ ಹಿಂಡನ್ನು ಕಳುಹಿಸುವುದಾಗಿ ಬೋಟ್ಸ್ ವಾನ ದೇಶದ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಬೋಟ್ಸ್ ವಾನ ಜಗತ್ತಿನಲ್ಲಿ ಅತ್ಯಧಿಕ ಆನೆಗಳ ಸಂತತಿ ಇರುವ ದೇಶವಾಗಿದೆ. ಆನೆದಂತ ಬೇಟೆ ಆಡುವವರನ್ನು ನಿಯಂತ್ರಿಸಬೇಕು ಎಂದು ಜರ್ಮನಿಯ ಪರಿಸರ ಸಚಿವೆ ಇತ್ತೀಚೆಗೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬೋಟ್ಸ್ ವಾನ ಅಧ್ಯಕ್ಷ ಮೊಗ್‍ ವಿಯೆಟ್ಸಿ ಮಸೀಸಿ, ಹೀಗೆ ಮಾಡಿದರೆ ದೇಶದಲ್ಲಿ ಆನೆಗಳ ಸಂತತಿ ಇನ್ನಷ್ಟು ಹೆಚ್ಚಬಹುದು. ಈಗಾಗಲೇ ಆನೆಗಳನ್ನು ನಿಯಂತ್ರಿಸಲು ನಾವು ಹೆಣಗುತ್ತಿದ್ದೇವೆ. ನಮಗೆ ಪಾಠ ಮಾಡುವ ಬದಲು ಜರ್ಮನಿ ಆನೆಗಳೊಂದಿಗೆ ಬದುಕಿ ತೋರಿಸಲಿ. ಅದಕ್ಕೆ ನಾವು 20,000 ಆನೆಗಳನ್ನು ಜರ್ಮನಿಗೆ ಕಳಿಸುತ್ತೇವೆ ಎಂದರು. ಮನುಷ್ಯ-ಪ್ರಾಣಿ ಸಂಘರ್ಷದ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬೋಟ್ಸ್ ವಾನದಲ್ಲಿ ಪ್ರತೀ ವರ್ಷ ನಿರ್ದಿಷ್ಟ ಪ್ರಮಾಣದಲ್ಲಿ ಆನೆಗಳ ಹತ್ಯೆಗೆ ಲೈಸೆನ್ಸ್ ನೀಡಲಾಗುತ್ತದೆ. ಬೋಟ್ಸ್ ವಾನದಲ್ಲಿ ಆನೆಗಳ ಹತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಜರ್ಮನಿಯ…

Read More

ದೆಹಲಿ: ಮಕ್ಕಳ ಕಳ್ಳಸಾಗಣೆ ಪ್ರಕರಣ ಸಂಬಂಧ ದೆಹಲಿಯ ಹಲವು ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಈ ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ತಿಳಿಸಿದೆ. ಬಂಧಿತರಲ್ಲಿ ಆಸ್ಪತ್ರೆಯ ವಾರ್ಡ್ ಬಾಯ್ ಸೇರಿದಂತೆ ಕೆಲವು ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ.  ದೆಹಲಿ-ಎನ್‌ ಸಿಆರ್‌ ನ ಹಲವೆಡೆ ಸಿಬಿಐ ದಾಳಿ ನಡೆಸಿತ್ತು. ದಾಳಿ ವೇಳೆ ಸಿಬಿಐ ತಂಡ ಕೇಶವಪುರಂನ ಮನೆಯೊಂದರಿಂದ 2 ನವಜಾತ ಶಿಶುಗಳನ್ನು ಮತ್ತು 8 ಮಕ್ಕಳನ್ನು ರಕ್ಷಿಸಿದೆ. ಸದ್ಯ ಸಿಬಿಐ ತಂಡ ಈ ಪ್ರಕರಣದಲ್ಲಿ ಮಕ್ಕಳನ್ನು ಮಾರಾಟ ಮಾಡಿದ ಮಹಿಳೆ ಹಾಗೂ ಖರೀದಿಸಿದ ವ್ಯಕ್ತಿಯ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಕೆಲವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಸಿಬಿಐ (CBI) ಮೂಲಗಳ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಸುಮಾರು 10 ಮಕ್ಕಳನ್ನು ಮಾರಾಟ ಮಾಡಲಾಗಿದೆ. ಈ ಗ್ಯಾಂಗ್ ನ ನಂಟುಗಳು ಹಲವು ರಾಜ್ಯಗಳಲ್ಲಿ ಹರಡಿಕೊಂಡಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಮಾಹಿತಿ ಪ್ರಕಾರ…

Read More

ಚುಣಾವಣಾ ಪ್ರಚಾರ ಮೆರವಣಿಗೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಸಿಎಂ ಮಾತನಾಡಿದ್ದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಸಾಕಷ್ಟು ಬಾರಿ ರಾಜಕೀಯ ನಾಯಕರು ಮಾತನಾಡುವಾಗ ಇಲ್ಲಾ, ಭಾಷಣ ಮಾಡುವಾಗ ಮಾತಿನ ಭರದಲ್ಲಿ ವಿರುದ್ಧವಾದ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗುವುದು ಸಾಮಾನ್ಯ. ಆದರೆ ಸಿದ್ದರಾಮಯ್ಯ ಈ ಹಿಂದೆ ಬಿಜೆಪಿಗೆ ಓಟ್ ಹಾಕಿ ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದರು. ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ತಮ್ಮ ಮಾತಿನ ಭರದಲ್ಲಿ ‘ಕಾಂಗ್ರೆಸ್ ಕೆಲಸ ಮಾಡಲ್ಲ, ನುಡಿದಂತೆ ನಡೆಯಲ್ಲ’ ಎಂದು ಹೇಳಿದ್ದಾರೆ. ಜಿಲ್ಲೆಯ ಮುಳಬಾಗಿಲಿನಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಗೌತಮ್​ ಪರ ಪ್ರಚಾರ ವೇಳೆ ಮಾತನಾಡಿದ ಸಿದ್ದರಾಮಯ್ಯ, “ಕಾಂಗ್ರೆಸ್ ನುಡಿದಂತೆ ನಡೆಯಲ್ಲ’ ಎಂದು ಹೇಳಿದ್ದಾರೆ. ಬಳಿಕ ಮತ್ತೆ ನುಡಿದಂತೆ ನಡೆದಿದ್ದೇವೆ” ಎಂದು ಸರಿಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಇನ್ನೂ ಮಾಸಿಲ್ಲ. ಆತನ ಸಾವು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆಯಾರೂ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೊಲೆ ಇರಬಹುದು ಅನ್ನುವುದು ಕೂಡ ಬಾಲಿವುಡ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಸುಶಾಂತ್ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅಂದು ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನು ನಟಿ ಅದಾ ಶರ್ಮಾ ಖರೀದಿಸಿದ್ದಾರೆ. ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್​ಮೆಂಟ್ ​ನಲ್ಲಿ ಸುಶಾಂತ್ ಸಿಂಗ್ ರಜಪೂತ್ ವಾಸ ಮಾಡುತ್ತಿದ್ದರು. 2020ರ ಜೂನ್ 14ರಂದು ಅವರು ಸಾವನ್ನಪ್ಪಿದ್ದರು. ಇದಾದ ಬಳಿಕ ಈ ಫ್ಲ್ಯಾಟ್ ಖಾಲಿಯೇ ಉಳಿದಿತ್ತು. ಯಾರೊಬ್ಬರೂ ಈ ಮನೆಯಲ್ಲಿ ಉಳಿದುಕೊಳ್ಳಲು ಕೂಡ ಮುಂದೆ ಬಂದಿರಲಿಲ್ಲ. ಹೀಗಾಗಿ, ಇದರ ಮಾಲೀಕರು ಈ ಅಪಾರ್ಟ್​ಮೆಂಟ್ ನ ಮಾರುವ ನಿರ್ಧಾರಕ್ಕೆ ಬಂದಿದ್ದರು. ನಂತರ ಅದಾ ಶರ್ಮಾ ಇದನ್ನು ಖರೀದಿ ಮಾಡಿದ್ದಾರೆ. ಯಾರಿಗೂ ಬೇಡವಾಗಿದ್ದ ಮನೆಯನ್ನು ಆದಾ ಶರ್ಮಾ ಖರೀದಿ ಮಾಡಿದ್ದೇಕೆ ಅನ್ನುವುದರ ಬಗ್ಗೆಯೇ ಇದೀಗ ಭಾರಿ ಚರ್ಚೆ…

Read More

ಲೋಕಸಭಾ ಚುನಾವಣಿ ಸಮೀಪಿಸುತ್ತಿದ್ದಂತೆ ಹಲವು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿವೆ. ಅಭಿಮಾನಿಯೊಬ್ಬ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಕಾಳಿ ಮಾತೆಗೆ ತನ್ನ ಬೆರಳನ್ನೇ ತುಂಡು ಮಾಡಿ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ. ಸೋನಾರವಾಡದ ಅರುಣ್ ವರ್ಣೇಕರ್ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ತನ್ನ ಎಡಗೈನ ಬೆರಳನ್ನೇ ಕಾಳಿ ಮಾತೆಗೆ ಅರ್ಪಿಸಿದ್ದಾರೆ ಎನ್ನಲಾಗಿದೆ. ಅರುಣ್ ಈಗಾಗಲೇ ಮೋದಿಗಾಗಿ ಗುಡಿಯನ್ನು ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಬೆರಳು ತುಂಡುಮಾಡಿಕೊಂಡು ರಕ್ತದಲ್ಲಿ “ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ”. “ಮೋದಿ ಬಾಬಾ ಪಿ.ಎಂ, 3 ಬಾರ್ 78ತಕ್ 378, 378+ ಮೇರಾ ಮೋದಿ ಬಾಬಾ ಸಬ್ಸೆ ಮಹಾನ್” ಎಂದು ಗೋಡೆ ಹಾಗೂ ಪೋಸ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಮೋದಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ರಕ್ತದಲ್ಲಿ ಕಾಳಿಗೆ ಹರಕೆ ಕಟ್ಟಿದ್ದರು ಎನ್ನಲಾಗಿದೆ. ಈ ಹಿಂದೆಯೂ ಬೆರಳು ಕೊಯ್ದುಕೊಂಡು ಮೋದಿ ಗೆಲುವಿಗಾಗಿ ಕಾಳಿ ಮಾತೆಗೆ ಹರಕೆ ನೀಡಿದ್ದರು. ಇದು…

Read More