Subscribe to Updates
Get the latest creative news from FooBar about art, design and business.
- ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು
- ಸಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವರಿಗೆ ವಿ.ಸೋಮಣ್ಣ ಪತ್ರ
- ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಲವು: ಸಚಿವ ಜಿ. ಪರಮೇಶ್ವರ್
- ‘ಕರಾವಳಿ’ ಚಿತ್ರದ ವಿವಾದಕ್ಕೆ ಪ್ರೇಕ್ಷಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ನಟ ರಾಜ್ ಬಿ. ಶೆಟ್ಟಿ
- ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ, ಆ. 10 ಕೊನೆಯ ದಿನ
- ಬಿಡದಿ ಟೌನ್ ಶಿಪ್: ಅನಿತಾ ಕುಮಾರಸ್ವಾಮಿ, ನಿಖಿಲ್ ಗೆ ಸೇರಿದ 35 ಎಕರೆ ಭೂಮಿಗೂ ಅಂತಿಮ ಅಧಿಸೂಚನೆ!
- ತಿಪಟೂರು: ಲೋಕೇಶ್ವರ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ
- ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗಬೇಡಿ: ನಿಮ್ಮೂರಲ್ಲೇ ಕೆಲಸ ನೀಡಲಿದೆ ‘ವಿಬಿ-ಜಿ ರಾಮ್ ಜಿ’ ಯೋಜನೆ
Author: admin
ಜೈಪುರ: “ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಘನತೆ ಮತ್ತು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ” ಎಂದು ಆರೋಪಿಸಿರುವ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, “ವಿಪಕ್ಷಗಳ ನಾಯಕರನ್ನು ಬಿಜೆಪಿಗೆ ಸೇರುವಂತೆ ಒತ್ತಾಯಿಸಲು ವಿವಿಧ ತಂತ್ರಗಳನ್ನು ಬಳಸಲಾಗುತ್ತಿದೆ” ಎಂದು ಹೇಳಿದ್ದಾರೆ. ಪಕ್ಷದ ಚುನಾವಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ಕಳೆದ 10 ವರ್ಷಗಳಿಂದ ದೇಶವು ನಿರುದ್ಯೋಗ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಮತ್ತು ಅಸಮಾನತೆಯನ್ನೆ ಪ್ರೋತ್ಸಾಹಿಸುತ್ತಾ ಬಂದ ಸರ್ಕಾರ ಅಧಿಕಾರದಲ್ಲಿದೆ. ಇಂದು ನಮ್ಮ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ ಮತ್ತು ನಮ್ಮ ಸಂವಿಧಾನವನ್ನು ಬದಲಾಯಿಸಲು ಪಿತೂರಿ ನಡೆಸಲಾಗುತ್ತಿದೆ” ಎಂದು ಆರೋಪಿಸಿದರು. “ಸರ್ವಾಧಿಕಾರದ ಆಡಳಿತ ದೇಶದಲ್ಲಿದ್ದು, ನಾವೆಲ್ಲರೂ ಸೂಕ್ತ ಉತ್ತರ ನೀಡುತ್ತೇವೆ. ತಮ್ಮನ್ನು ತಾವು ಶ್ರೇಷ್ಠ ಎಂದು ಪರಿಗಣಿಸಿರುವ ಮೋದಿ ಅವರು ದೇಶದ ಘನತೆ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಹಾಳು ಮಾಡುತ್ತಿದ್ದಾರೆ” ಎಂದು ಸೋನಿಯಾ ಗಾಂಧಿ ಆರೋಪಿಸಿದರು. ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, “ದೆಹಲಿ…
ಬೆಳಗಾವಿ: ದೇಶದ ಜನತೆಗೆ ಮೋದಿ ಎಷ್ಟು ಗ್ಯಾರಂಟಿಗಳನ್ನು ನೀಡಿದ್ದಾರೆಂಬ ಪಟ್ಟಿ ಬಿಡುಗಡೆಗೊಳಿಸಬೇಕು. ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದರು. ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, “’ದೇಶಕ್ಕೆ, ದೇಶದ ಜನತೆಗೆ ನಾನೇ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಎಷ್ಟು ಗ್ಯಾರಂಟಿಗಳನ್ನು ನೀಡಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಿ” ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಟೀಕಿಸಿದ ಪ್ರಧಾನಿ ಮೋದಿ ಅವರು ಚುನಾವಣೆ ಗೆಲುವಿಗಾಗಿ ಪ್ರಚಾರ ಸಭೆಯಲ್ಲಿ ದೇಶಕ್ಕೆ, ದೇಶದ ಜನತೆಗೆ ನಾನೇ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಆದರೆ ಜನತೆಗೆ ಎಷ್ಟು ಗ್ಯಾರಂಟಿಗಳನ್ನು ನೀಡಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆಗೊಳಿಸಲಿ ಎಂದು ಆಗ್ರಹಿಸಿದರು. ಜನಕ್ಕೆ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಯೋಜನೆಗಳಿಗೂ ಹಣ ನೀಡುತ್ತಿದ್ದೇವೆ. ಕಾರಣ ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಬಿಜೆಪಿಯವರ ಆರೋಪ ಸುಳ್ಳು ಎಂದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದ ಅಣ್ಣಾಸಾಬ್ ಜೊಲ್ಲೆ ಬಗ್ಗೆ ಜನರಲ್ಲಿ…
ಪಾವಗಡ: ತಾಲೂಕಿನ ನಿಡಗಲ್ ಹೋಬಳಿ ದೇವರ ಬೆಟ್ಟ ಗ್ರಾಮದಲ್ಲಿ ವಾಸಿಸುತ್ತಿರುವ ತಂದೆ ತಾಯಿ ಇಲ್ಲದ ಬಡ ಕುಟುಂಬದ ಮೂವರು ಮಕ್ಕಳಿಗೆ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಮಕ್ಕಳ ತಂದೆ ತಾಯಿ ಅನಾರೋಗ್ಯದಿಂದ ಮರಣ ಹೊಂದಿದ್ದು ಸರಿಯಾಗಿ ಕಣ್ಣು ಕಾಣದೆ ಇರುವ ಅಜ್ಜಿಯ ಆಶ್ರಯದಲ್ಲಿ ಮಕ್ಕಳು ಬೆಳೆಯುತ್ತಿದ್ದಾರೆ. ಮೂರು ಮಕ್ಕಳಾದ ರಾಜೇಶ್ ಎಂಟನೇ ತರಗತಿ ಮನು ನಾಲ್ಕನೇ ತರಗತಿ ದರ್ಶನ್ ಒಂದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಇವರು ತೀರ ಬಡವರಾಗಿದ್ದಾರೆ. ಇವರು ವಾಸಿಸುವ ಮನೆಗೆ ಬಾಗಿಲು ಸಹ ಇಲ್ಲದಿರುವುದನ್ನು ಮನಗಂಡ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಅವರು ಮನೆಗೆ ಬಾಗಿಲನ್ನು ಆಳವಡಿಸಿಕೊಟ್ಟಿದ್ದಾರೆ. ಮಾತ್ರವಲ್ಲದೆ ಈ ವಿದ್ಯಾರ್ಥಿಗಳಿಗೆ ಪುಸ್ತಕ ಲೇಖನ ಸಾಮಗ್ರಿಗಳನ್ನು ಕೊಟ್ಟು ಅವರಿಗೆ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಈ ಬಡಕುಟುಂಬಕ್ಕೆ ಸಹಾಯ ಮಾಡಲು ಹೆಲ್ಪ್ ಸೊಸೈಟಿ ಪಾವಗಡ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಈ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಕುಟುಂಬ ನಿರ್ವಹಣೆಗೆ ಸಹಾಯ ಸಹಕಾರ ಮಾಡಲು ಮುಂದೆ ಬಂದಿದ್ದು, ನಮ್ಮ…
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್ ಹಲವು ತಿರುವುಗಳನ್ನು ಪಡೆದು ರಾಜಕೀಯ ನಾಯಕರ ಎಂಟ್ರಿಯೂ ಆಗಿತ್ತು, ಆದರೆ ಬೆಂಗಳೂರಿನ ನಗರಪೇಟೆಯಲ್ಲಿ ನಡೆದಿದ್ದ ಈ ಕೇಸ್ ಗೆ ಈಗ ಟ್ವಿಸ್ಟ್ ಸಿಕ್ಕಿದ್ದು, ಹಲ್ಲೆಗೊಳಗೊಳಗಾದ ಮುಖೇಶ್ ವಿರುದ್ದವೇ ಎಫ್ ಐಆರ್ ದಾಖಲಾಗಿದೆ. ಕೋರ್ಟ್ ನಿರ್ದೇಶನ ಮೇರೆಗೆ ಬಂಧನಕ್ಕೆ ಒಳಗಾದ ಸುಲೇಮಾನ್ ತಾಯಿ ನೀಡಿದ ದೂರಿನ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 506(ಕ್ರಿಮಿನಲ್ ಬೆದರಿಕೆ), 504(ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 323(ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ. ರಂಜಾನ್ ಇದ್ದರೂ ಭಕ್ತಿ ಗೀತೆ ಹಾಕಿ ಮುಖೇಶ್ ಕಿರಿಕ್ ಮಾಡುತ್ತಿದ್ದ. ಮಾರ್ಚ್ 17 ರಂದು ಸುಲೇಮಾನ್ ಸೇರಿ ಸ್ನೇಹಿತರು ಮುಖೇಶ್ ಗೆ ಪ್ರಶ್ನಿಸಿದ್ದರು. ಪವಿತ್ರ ರಂಜಾನ್ ಹಬ್ಬವಿದೆ, ಮೂರು ಸಾವಿರ ಮಂದಿ ಇದೇ ರಸ್ತೆಯಲ್ಲಿ ಪ್ರಾರ್ಥನೆಗೆ ಹೋಗುತ್ತಾರೆ. ಇಷ್ಟು ಸೌಂಡ್ ಇಟ್ಟು ಹಾಡುಗಳನ್ನು ಹಾಕುವುದು ಯಾಕೆ ಎಂದು ಕೇಳಿದ್ದರು ಎನ್ನಲಾಗಿದೆ. ಪ್ರಶ್ನೆ…
ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸನ್ನದ್ಧವಾಗುತ್ತಿದ್ದು, ಗಡಿಯಲ್ಲಿ ತಪ್ಪಿಸಿಕೊಳ್ಳುವ ಭಯೋತ್ಪಾದಕರನ್ನು ಕೊಲ್ಲಲು ಭಾರತವು ಪಾಕಿಸ್ತಾನವನ್ನು ಪ್ರವೇಶಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ವಿದೇಶಿ ನೆಲದಲ್ಲಿ ನೆಲೆಸಿರುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ವಿಶಾಲ ಯೋಜನೆಯ ಭಾಗವಾಗಿ, ಭಾರತ ಸರ್ಕಾರವು 2020 ರಿಂದ ಪಾಕಿಸ್ತಾನದಲ್ಲಿ ಸುಮಾರು 20 ಜನರನ್ನು ಕೊಂದಿದೆ ಎಂದು ಬ್ರಿಟನ್ ನ ಗಾರ್ಡಿಯನ್ ಪತ್ರಿಕೆ ವರದಿಯನ್ನು ಪ್ರಕಟಿಸಿದ ಒಂದು ದಿನದ ನಂತರ ಸಚಿವರ ಹೇಳಿಕೆ ಹೊರ ಬಂದಿವೆ. ವರದಿಯ ಕುರಿತು ಪ್ರತಿಕ್ರಿಯೆಗಾಗಿ ರಾಯಿಟರ್ಸ್ ಮಾಡಿದ ಮನವಿಗೆ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿರಲಿಲ್ಲ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಉಗ್ರರಿಗೆ ಆಶ್ರಯ ನೀಡುತ್ತಿರುವುದರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ. “ಭಾರತವು ಯಾವಾಗಲೂ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತದೆ. ಆದರೆ ಯಾರಾದರೂ ಭಾರತಕ್ಕೆ ಕೋಪದ ಕಣ್ಣುಗಳನ್ನು ಮತ್ತೆ ಮತ್ತೆ ತೋರಿಸಿದರೆ, ಭಾರತಕ್ಕೆ ಬಂದು ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದರೆ, ನಾವು ಅವರನ್ನು ಬಿಡುವುದಿಲ್ಲ” ಎಂದು ರಾಜನಾಥ್ ಸಿಂಗ್ ಹೇಳಿದರು. ಕಾಶ್ಮೀರದಲ್ಲಿ…
ಪ್ರಾಚೀನ ಜೈನ ವಿಗ್ರಹಗಳ ಹರಾಜಿಗೆ ಜೈನ ಸಮುದಾಯದಿಂದ ರಾಷ್ಟ್ರವ್ಯಾಪಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಈ ಹರಾಜು ಪ್ರಕ್ರಿಯೆಯಿಂದ ಮುಂಬೈ ಹರಾಜುದಾರ ಫಾರುಕ್ ಟೊಡ್ಡಿವಾಲಾ ಹಿಂದೆ ಸರಿದಿದ್ದಾರೆ. ಎಚ್ಚೆತ್ತ ಜೈನ ಸಮುದಾಯ ತಮ್ಮ ಪೂಜ್ಯ ತೀರ್ಥಂಕರರ ವಿಗ್ರಹಗಳನ್ನು ಹರಾಜು ಹಾಕದೇ ಅದನ್ನು ದೇವಾಲಯಗಳಲ್ಲಿ ಪೂಜೆಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ, ಹರಾಜುದಾರ ಫಾರುಕ್ ಟೊಡ್ಡಿವಾಲಾ ಅವರು, ಈ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದಾರೆ. ದೆಹಲಿ ಮೂಲದ ವಿಶ್ವ ಜೈನ್ ಸಂಘಟನೆಯು ಹರಾಜುದಾರ ಟೊಡ್ಡಿವಾಲಾ ವಿರುದ್ಧ ಸೈಬರ್ ಕ್ರೈಮ್‌ನಲ್ಲಿ ದೂರು ದಾಖಲಿಸಿದೆ. ಟೊಡ್ಡಿವಾಲಾ ಅವರು ಏಪ್ರಿಲ್ 16 ರಂದು ದಿ ತಾಜ್, ಕೊಲಾಬಾದಲ್ಲಿ ಹರಾಜಾಗಲಿರುವ ವಸ್ತುಗಳ ಬಗ್ಗೆ 180 ಲೇಖನಗಳ ಕ್ಯಾಟಲಾಗ್ ನ್ನು ಹಂಚಿಕೊಂಡಿದ್ದರು. ಇದಾದ ನಂತರ ವಿಶ್ವ ಜೈನ್ ಸಂಘಟನೆ ಪ್ರಕರಣ ದಾಖಲಿಸಿದೆ. ಈ ಕ್ಯಾಟಲಾಗ್‌ನಲ್ಲಿ 17 ಪುರಾತನ ದೇವಾಲಯಗಳು, ಮರಳು ಗಲ್ಲುಗಳು ಮತ್ತು ಜೈನ ತೀರ್ಥಂಕರರ ಬಲಿಪೀಠಗಳು ಮತ್ತು ಯಕ್ಷಿಣಿಗಳು ಸೇರಿವೆ. ಅವುಗಳಲ್ಲಿ ಕೆಲವು ಒಂಬತ್ತನೇ ಶತಮಾನಕ್ಕಿಂತಲೂ ಹಿಂದಿನದ್ದಾಗಿವೆ. ಜೈನ ವಿಗ್ರಹಗಳ…
ನಡು ರಸ್ತೆಯಲ್ಲಿ ಯುವಕರಿಬ್ಬರು ಸೇರಿ ರಾಡ್ ನಿಂದ ವ್ಯಕ್ತಿಗೆ ಮನಬಂದಂತೆ ಥಳಿಸಿದ, ಹಲ್ಲೆ ದೃಶ್ಯವೆಲ್ಲವೂ ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದರ ಡ್ಯಾಶ್ ಬೋರ್ಡ್‌ನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆಫೀಸ್ ನಲ್ಲಿ ಟಾರ್ಚರ್ ಕೊಟ್ಟ ಮೇಲಾಧಿಕಾರಿಗೆ ಸಿಬ್ಬಂದಿಯೇ ಸುಪಾರಿ ಕೊಟ್ಟು ಹೊಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ತನಿಖೆ ಕೈಗೊಂಡ ಹೆಣ್ಣೂರು ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಹಲ್ಲೆಗೊಳಗಾದ ಸುರೇಶ್ ಎಂಬಾತನಿಂದ ದೂರು ಪಡೆದು, ಹಲ್ಲೆ ನಡೆಸಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಮಾಶಂಕರ್, ವಿನೀಶ್, ಅನೀಶ್, ಮುತ್ತು ಹಾಗೂ ಸಂದೀಪ್ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಮಾ. 31 ರಂದು ಹೊರಮಾವುನಿಂದ ಹೆಣ್ಣೂರಿಗೆ ತೆರಳುವ ಮಾರ್ಗದಲ್ಲಿ ಸುರೇಶ್ ಹೋಗುತ್ತಿದ್ದಾಗ, ಬಲವಾದ ಆಯುಧದಿಂದ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಹಲ್ಲೆ ಮಾಡಿದ್ದ ದೃಶ್ಯವು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೊಲೀಸ್ ವಿಚಾರಣೆ ವೇಳೆ ಮೇಲಾಧಿಕಾರಿ ಆಗಿದ್ದ ಸುರೇಶ್ ತನ್ನ ಸಿಬ್ಬಂದಿಗೆ ಕೆಲಸದಲ್ಲಿ ಹೆಚ್ಚೆಚ್ಚು ಒತ್ತಡ ಕೊಟ್ಟಿದ್ದನಂತೆ. ಈ ಕಾರಣಕ್ಕೆ ಸಿಬ್ಬಂದಿಯಿಂದಲೇ ಸುರೇಶ್ ಹಲ್ಲೆಗೆ ಸುಪಾರಿ ಕೊಟ್ಟಿರುವುದು ತಿಳಿದು ಬಂದಿದೆ. ಬಂಧಿತರಾಗಿರುವ ಉಮಾಶಂಕರ್,…
ತುಮಕೂರು: ಪಿಸ್ತೂಲ್ ನಿಂದ ಶೂಟ್ ಮಾಡಿ, ಮನೆ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಎಜಾಜ್ ಮಿರ್ದಾಹ, ಸಹಿಬುಲ ಅನ್ಸಾರಿ ಎಂದು ಗುರುತಿಸಲಾಗಿದೆ. ಮಾರ್ಚ್ 26ರಂದು ಕುಣಿಗಲ್ ತಾಲೂಕಿನ ಉರ್ಕೆಹಳ್ಳಿ ಗ್ರಾಮದಲ್ಲಿ, ರಾಷ್ಟ್ರೀಯ ಹೆದ್ದಾರಿ ಗೆ ಹೊಂದಿಕೊಂಡಂತೆ ಇರುವ ಪುಷ್ಪಲತಾ ಎಂಬವರ ಮನೆಗೆ, ನೀರು ಕೇಳುವ ನೆಪದಲ್ಲಿ ಇಬ್ಬರು ಆರೋಪಿಗಳು ಬಂದಿದ್ದರು. ನೀರು ಕೊಡಲು ಮುಂದಾಗಿದ್ದ ವೇಳೆ ಮನೆಗೆ ನುಗ್ಗಿ ದರೋಡೆ ಮಾಡಲು ಇಬ್ಬರು ಯತ್ನಿಸಿದ್ದರು. ಅಲ್ಲದೆ ಪುಷ್ಪಲತಾ ಅವರ ತಂದೆ ಗಂಗಣ್ಣ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದರು. ಇದರಿಂದ ಗಂಗಣ್ಣ ಅವರ ಕಾಲಿಗೆ ಗಾಯವಾಗಿತ್ತು. ನಂತರ ಮನೆಯಲ್ಲಿದ್ದವರ ಕೂಗಾಟ ಚಿರಾಟ ಕೇಳಿ ಅಕ್ಕ ಪಕ್ಕದ ಮನೆಯವರು ಬರುವಷ್ಟರಲ್ಲಿ ಆರೋಪಿಗಳು ಮನೆಯಲ್ಲಿದ್ದ ಲಕ್ಷಾಂತರ ಹಣವನ್ನು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಇಬ್ಬರು ಜಾರ್ಖಂಡ್ ಮೂಲದವರಾಗಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೇ ಪೂರಕವಾಗಿ, ಜಿಲ್ಲೆಯಲ್ಲಿ 19 ಮಂದಿಯನ್ನು ಗಡಿಪಾರು ಮಾಡುವ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದ್ದಾರೆ. ಇದುವರೆಗೂ 50 ಮಂದಿ ಯನ್ನು ಗಡಿಪಾರು ಮಾಡಬೇಕೆಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಎಲ್ಲ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು ಅವರು ಇರುವಂತಹ ಪ್ರದೇಶಗಳಲ್ಲಿ ಶಾಂತಿಯುತ ಮತದಾನಕ್ಕೆ ಅಡ್ಡಿ ಉಂಟಾಗಬಹುದು ಎಂಬ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಗಡಿಪಾರು ಮಾಡಲಾಗಿರುವಂತಹ ವ್ಯಕ್ತಿಗಳ ಕುರಿತು ನಿರಂತರವಾಗಿ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಪರಿಶೀಲನೆಯನ್ನು ನಡೆಸುತ್ತಿರುತ್ತಾರೆ. ಅಕಸ್ಮಾತ್ ಅವರು ವಾಪಸ್ ಆ ಸ್ಥಳಗಳಿಗೆ ಬಂದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಿರಲಿ ಎಂಬ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ಬಿಜೆಪಿಯ ಶಾಸಕರಾದರೂ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ಳುತ್ತ ಸುದ್ದಿಯಾಗುವ, ಯಶವಂತಪುರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರು, ಇದೀಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಈ ಹಿಂದೆಯೂ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್, ಕೆಂಗೇರಿ ಉಪನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕರಿಸುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದರು. ಈ ಮೂಲಕ ಅವರು ನನ್ನ ಬೆಂಬಲ ಕಾಂಗ್ರೆಸ್’ಗೆ ಎಂದು ಘೋಷಿಸಿದ್ದಾರೆ. ಬಿಜೆಪಿ(BJP)ಯವರ ಕೈಯಲ್ಲಿ ಏನ್ ಮಾಡೋಕಾಗುತ್ತೋ ಮಾಡಿಕೊಳ್ಳಲಿ, ನಾನು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತೀನಿ ಎಂದು ಬಹಿರಂಗವಾಗಿಯೇ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಅದಲ್ಲದೇ ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ತೀವ್ರ ವಿರೋಧವನ್ನು ಕೂಡ ಎಸ್‌ಟಿ ಸೋಮಶೇಖರ್ ವ್ಯಕ್ತಪಡಿಸಿದ್ದು, ಜನರಿಂದ ಗೋಬ್ಯಾಕ್ ಅನಿಸಿಕೊಂಡು ಬಂದವರಿಗೆ ನಾವು ಸ್ವಾಗತ ಕೋರಬೇಕಾ ಎಂದು ಪ್ರಶ್ನಿಸಿದ್ದಾರೆ. ಸಭೆ ಬಳಿಕ ಮಾತಾಡಿದ ಎಸ್ ಟಿ ಎಸ್, ಬಿಜೆಪಿಯಿಂದ…