Author: admin

ಬಿರು ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ನಮ್ಮ ದೇಹದ ಎಲ್ಲಾ ಅಂಗವ್ಯವಸ್ಥೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನುಷ್ಯನ ದೇಹದ ಎರಡನೇ ಮೆದುಳು ಎಂದು ಕರೆಯಲ್ಪಡುವ ಕರುಳು ಸಹ ಇದಕ್ಕೆ ಹೊರತಾಗಿಲ್ಲ.! ಒಟ್ಟಾರೆ ಮನುಷ್ಯನ ಯೋಗಕ್ಷೇಮಕ್ಕೆ ಆರೋಗ್ಯಕರ ಕರುಳು ನಿರ್ಣಾಯಕವಾಗಿದೆ. ಅತಿಯಾದ ಶಾಖವು ಮನುಷ್ಯನ ಜೀವನದ ಸಮತೋಲನವನ್ನು ಅಡ್ಡಿಪಡಿಸುವ ಮೂಲಕ ಕರುಳಿನ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಕರುಳಿನಲ್ಲಿ ಟ್ರಿಲಿಯನ್ ಗಟ್ಟಲೆ ಸ್ನೇಹಿ ಬ್ಯಾಕ್ಟಿರಿಯಾ, ಶಿಲೀಂಧ್ರಗಳು ಮತ್ತು ಇತರ ಸೂಕ್ಷ್ಮಜೀವಿಗಳನ್ನು ಒಟ್ಟಾಗಿ ಕರುಳಿನ ಮೈಕ್ರೋಬಯೋಟಾ ಎಂದು ಕರೆಯಲಾಗುತ್ತದೆ.  ಇದು ಜೀರ್ಣಕ್ರಿಯೆ, ಹೀರಿಕೊಳ್ಳುವಿಕೆ ಮತ್ತು ಚಯಾಪಚಯ ಚಟುವಟಿಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಜೀವನ ವ್ಯವಸ್ಥೆ ಮತ್ತು ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕರುಳಿನ ಮೇಲೆ ಬಿಸಿಲಿನ ಪರಿಣಾಮ: *ನಿರ್ಜಲೀಕರಣ(ಡೀಹೈಡ್ರೇಶನ್): ಅತಿಯಾದ ಶಾಖದಿಂದಾಗಿ ದೇಹದಲ್ಲಿ ನಿರ್ಜಲೀಕರಣವು ಕರುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ, ಇದರಿಂದ ಕರುಳು ಉರಿಯೂತ ಮತ್ತು ಸೋಂಕಿಗೆ ಒಳಗಾಗುತ್ತದೆ. ಇದು ಕರುಳಿನ ವ್ಯವಸ್ಥೆ ಮೇಲೆ ಪರಿಣಾಮ…

Read More

ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಯೊಬ್ಬ ಅಶ್ವಿನಿ ಪುನೀತ್‌ ರಾಜಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ. ಅಲ್ಲದೆ ಇಂದು ಪೊಲೀಸ್ ಕಮೀಷನರ್ ಭೇಟಿಯಾಗಿ ದೂರು ನೀಡಲು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ಪೋಸ್ಟ್ ನಲ್ಲಿ ಆರ್‌ ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ ರಾಜಕುಮಾರ್‌ ಕಾರಣ ಎಂದು ದೂರಲಾಗಿದೆ. ಗಜಪಡೆ ಎಂಬ ಪೇಜ್ ಸೃಷ್ಟಿಸಿ ಅದರಲ್ಲಿ, ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಆರ್‌ ಸಿಬಿ ಸೋಲಿಗೆ ಕಾರಣ ಎಂದು ಹೇಳಲಾಗಿದೆ. ಈ ‘ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಅದನ್ನು ಬಿಟ್ಟು ಗಂಡ ಇಲ್ಲದವರನ್ನು ಕರೆದಿದ್ದಾರೆ. ಇದು ಆರ್‌ ಸಿಬಿ ಸೋಲಿಗೆ ಕಾರಣ’ ಎಂದು ಪೇಜ್ ‌ನಲ್ಲಿ ಬರೆಯಲಾಗಿದೆ. ಈ ಪೋಸ್ಟ್‌ ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪವರ್‌ ಸ್ಟಾರ್ ಅಪ್ಪು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗಷ್ಟೇ ಐಪಿಎಲ್ ಶುರುವಾಗಿದೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಇದ್ದ ಹೆಸರನ್ನು ಬದಲಾವಣೆ ಮಾಡಲು, ಆರ್ ಸಿಬಿ ಅನ್…

Read More

ಓಸಿ ಮಟ್ಕಾ ಆಡಿಸಲು ಅನುಮತಿಗೆ ಮಾಮೂಲಿ ರೂಪದಲ್ಲಿ ₹1 ಲಕ್ಷ ಲಂಚ ಪಡೆಯುತ್ತಿದ್ದ ಶಿವಮೊಗ್ಗದ ಸಿಇಎನ್ ಠಾಣೆಯ ಸಹಾಯಕ ಸಬ್ ಇನ್‌ ಸ್ಟೆಕ್ಟರ್ ಮೊಹಮ್ಮದ್ ರೆಹಮಾನ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ಶಿವಮೊಗ್ಗದ ಆರ್‌ ಎಂಎಲ್ ನಗರದ ನಿವಾಸಿ ರಫೀಕ್ ಎಂಬುವವರಿಗೆ ಮಾಮೂಲಿ ರೂಪದಲ್ಲಿ ಮಾಸಿಕ ₹1.20 ಲಕ್ಷ ಹಣ ಕೊಡುವಂತೆ ಮೊಹಮ್ಮದ್ ರೆಹಮಾನ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಲ್ಲಿ ₹ 1 ಲಕ್ಷ ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ರೆಹಮಾನ್ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವುದನ್ನು ಖಾತರಿಪಡಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ರೆಡ್‌ ಹ್ಯಾಂಡ್ ಆಗಿ ಹಿಡಿಯಲು ಸಿದ್ಧತೆ ನಡೆಸಿದ್ದರು. ಶಿವಮೊಗ್ಗದ ಲೋಕಾಯುಕ್ತ ಹಾಗೂ ಸ್ಥಳೀಯ ಪೊಲೀಸರು ಮೊಹಮ್ಮದ್ ರೆಹಮಾನ್ ಗೆ ಪರಿಚಯವಿದ್ದ ಕಾರಣ, ಚಿತ್ರದುರ್ಗದಿಂದ ಬಂದಿದ್ದ ಎಸ್ಪಿ ವಾಸುದೇವರಾಮ್ ನೇತೃತ್ವದ ಲೋಕಾಯುಕ್ತ ಪೊಲೀಸರು, ಪಂಚೆ-ಬನಿಯನ್ ತೊಟ್ಟು ಹಮಾಲಿಗಳ ವೇಷದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು ಎನ್ನಲಾಗಿದೆ. ಇಲ್ಲಿನ ಜಯನಗರ ಪೊಲೀಸ್ ಠಾಣೆ ಕಟ್ಟಡದಲ್ಲಿರುವ ಸಿಇಎನ್ ಠಾಣೆಯ…

Read More

ಸೂರ್ಯ ಗ್ರಹಣವು ಏಪ್ರಿಲ್ 8ಕ್ಕೆ ಜರುಗಲಿದೆ. ಅದಕ್ಕೆ ಎರಡು ದಿನಗಳ ಮೊದಲು 2024ರ ಏಪ್ರಿಲ್ 6ನೇ ತಾರೀಕು ಮಧ್ಯಾಹ್ನ 3.55ರಂದು ಶನಿ ಗ್ರಹವು ಗುರುವಿನ ನಕ್ಷತ್ರಪುಂಜವಾದ ಪೂರ್ವ ಭಾದ್ರಪದ ನಕ್ಷತ್ರವನ್ನು ಪ್ರವೇಶ ಮಾಡಲಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಆರು ರಾಶಿಗಳು ಮುಂದಿನ ಆರು ತಿಂಗಳ ಕಾಲ ಭಾರಿ ಪ್ರಯೋಜನಗಳನ್ನು ಪಡೆದುಕೊಳ್ಳಲಿವೆ. ಆ ಅದೃಷ್ಟವಂತ ಆರು ರಾಶಿಗಳ ಯಾವುದು ಅನ್ನುವುದನ್ನು ಇಲ್ಲಿ ನೀಡಿದ್ದೇವೆ ಓದಿ. ಧನು ರಾಶಿ: ಶನಿ ಸಂಚಾರದಿಂದ ಧನು ರಾಶಿಯವರಿಗೆ ಶುಭ ಫಲ ದೊರೆಯಲಿದೆ. ಉದ್ಯೋಗದಲ್ಲಿದ್ದವರಿಗೂ ಸಿಹಿ ಸುದ್ದಿ ದೊರೆಯಲಿದೆ. ಬಡ್ತಿ ಸಿಗುವ ಸಾಧ್ಯತೆ ಜಾಸ್ತಿಯೇ ಇದೆ. ಬಹು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ಇದ್ದಕ್ಕಿದ್ದಂತೆ ಪರಿಹಾರ ಕಾಣಲಿವೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಆದಾಯ ಗಳಿಕೆ ಹೆಚ್ಚಾಗಬಹುದು. ಮಕರ ರಾಶಿ: ಶನಿ ಸಂಚಾರ ವಿದ್ಯಮಾನದಿಂದಾಗಿ ಆರ್ಥಿಕ ಲಾಭ ಉಂಟಾಗಲಿದೆ. ಹೆಚ್ಚು ಆದಾಯ ಗಳಿಸುವ ಸಾಧ್ಯತೆ ಇದೆ. ಅಲ್ಲಿ ಇಲ್ಲಿ ಬಾಕಿ ಉಳಿದಿದ್ದ ಹಣ ವಾಪಸ್ ನಿಮ್ಮನ್ನು ಸೇರಲಿದೆ. ನೀವು ಅಂದುಕೊಂಡಿದ್ದ…

Read More

ದಿ ರೂಲ್ ಗಾಗಿ ದಿನೇ ದಿನೇ ಅಭಿಮಾನಿಗಳಲ್ಲಿ ಕಾತುರ ಹೆಚ್ಚುತ್ತಿದ್ದು ಈ ನಡುವೆ, ಚಿತ್ರತಂಡ ‘ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ’ ಅವರ‌ ಹುಟ್ಟುಹಬ್ಬದ ಪ್ರಯುಕ್ತ ಶ್ರೀವಲ್ಲಿ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ನಿರ್ಮಾಪಕರು ಚಿತ್ರದಿಂದ ಅವರ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದ್ದು ಪುಷ್ಪಾ 2 ತಂಡವು ನಟಿಗೆ ಶುಭ ಹಾರೈಸಿದ್ದಾರೆ. ಮೊದಲ ನೋಟದಲ್ಲಿ ರಶ್ಮಿಕಾ ಸುಂದರವಾದ ಸೀರೆಯಲ್ಲಿ ತನ್ನ ಅದ್ಭುತವಾದ ಸಂಪೂರ್ಣ ಸೊಬಗಿನಿಂದ ಕಂಗೊಳಿಸಿದ್ದಾರೆ. ಪುಷ್ಪ ದಿ ರೈಸ್ ‌ನಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಬಿರುಗಾಳಿ ಎಬ್ಬಿಸಿದ್ದಾರೆ. ಅವಳ ಸೊಬಗು ಮತ್ತು ಶೈಲಿಯಿಂದ ಹಿಡಿದು ಸಾಮಿ ಸಾಮಿಯಲ್ಲಿ ನೃತ್ಯ ಮಾಡುವವರೆಗೆ ಎಲ್ಲವೂ ಟ್ರೆಂಡ್ ಆಗಿದೆ. ಈಗ, ಪುಷ್ಪಾ 2: ದಿ ರೂಲ್ ನಲ್ಲಿ ‘ಶ್ರೀವಲ್ಲಿ’ ಆಗಿ ಮತ್ತೆ ದೊಡ್ಡ ಪರದೆಯ ಮೇಲೆ ಅವರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಮತ್ತು ಚಿತ್ರದ ಈ ಪೋಸ್ಟರ್ ಉತ್ಸಾಹವನ್ನು ಹೆಚ್ಚಿಸಿದೆ. ಪುಷ್ಪ 2: ದಿ…

Read More

NCERT: 11,12 ನೇ ತರಗತಿ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಕುರಿತು ಎನ್‌ ಸಿಇಆರ್‌ ಟಿ ಕೇಂದ್ರೀಯ ಪಠ್ಯದಿಂದ ಬಾಬ್ರಿ ಮಸೀದಿ, ಗುಜರಾತ್‌ ಹಿಂಸೆ ವಿಷಯವನ್ನು ತೆಗೆದಿದೆ. 11,12 ನೇ ತರಗತಿ ಪಠ್ಯಪುಸ್ತಕದಿಂದ ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸ, ಹಿಂದುತ್ವ ಸೇರಿ ಹಲವು ಅಂಶಗಳನ್ನು 2024-25 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎನ್‌ಸಿಆರ್‌ಟಿ ಬಿಟ್ಟಿದೆ. ಹಾಗೆನೇ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಸೇರಿಸಲಾಗಿದೆ. 370ನೇ ವಿಧಿ ರದ್ದು ಕುರಿತ ವಿಷಯ ಸೇರ್ಪಡೆ ಮಾಡಲಾಗಿರುವ ಕುರಿತು ವರದಿಯಾಗಿದೆ. ಸಮಾಜ ವಿಜ್ಞಾನ ಮತ್ತು ರಾಜಕೀಯ ವಿಜ್ಞಾ ಪುಸ್ತಕದಲ್ಲಿ ಬದಲಾವಣೆ ಮಾಡಿ ಪರಿಷ್ಕೃತ ಪಠ್ಯ ಪ್ರಕಟ ಮಾಡಲಾಗಿದೆ. ಈ ಕುರಿತು ಅಧಿಕೃತ ಹೇಳಿಕೆಯನ್ನು ನೀಡಿಲ್ಲವಾದರೂ ಬದಲಾವಣೆಯನ್ನು ವಾರ್ಷಿಕ ನವೀಕರಣದ ಪ್ರಕಾರ ಮಾಡಲಾಗಿದೆ. ಅಯೋಧ್ಯ ಬಾಬರಿ ಮಸೀದಿ ಧ್ವಂಸ, ಹಿಂದುತ್ವ ರಾಜಕೀಯ ವಿಷಯಗಳನ್ನು 11 ನೇ ತರಗತಿಯ ಅಧ್ಯಾಯ 8 ರಲ್ಲಿ ಬಿಡಲಾಗಿದೆ. ಗೋದ್ರಾ ನಂತರದ ಗಲಭೆಗಳ ಸಮಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಮರನ್ನು ಕೊಲೆ…

Read More

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಪ್ರಮುಖವಾಗಿರುವ ಯೋಜನೆ ‘ಗೃಹಲಕ್ಷ್ಮಿ ಯೋಜನೆ’. ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂ. ಹಣ ಜಮೆಯಾಗುತ್ತಿದೆ. ಆದರೆ ಇನ್ನು ಮುಂದೆ ಯಜಮಾನಿಯರಿಗೆ 2,000 ಬದಲು 3000 ಹಣ ಸಿಗುತ್ತದೆ ಎಂಬ ಸುದ್ದಿ ಒಂದು ಮುನ್ನಲೆಗೆ ಬಂದಿದೆ. ಹೌದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಘೋಷಣೆ ಮಾಡಿದ ಐದು ಗ್ಯಾರಂಟಿಗಳನ್ನು, ತಾನು ಅಧಿಕಾರ ಹಿಡಿಯುತ್ತಿದ್ದಂತೆ ಅನುಷ್ಠಾನಕ್ಕೆ ತೆಗೆದುಕೊಂಡು ಬಂದಿತ್ತು. ಈ ಎಲ್ಲಾ ಯೋಜನೆಗಳಿಗೆ ರಾಜ್ಯದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಈ ಬೆನ್ನಲ್ಲೇ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಕೂಡ ವಿವಿಧ ರೀತಿಯ ಭರವಸೆ ಮತ್ತು ಘೋಷಣೆ ಮತದಾರರನ್ನು ಸೆಳೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀಯರಿಗೆ 3000 ಹಣ ಸಿಗುತ್ತದೆ ಎಂದು ಹೇಳಲಾಗಿದೆ. ಇದೇ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಗೃಹಲಕ್ಷ್ಮಿ ಯೋಜನೆಯ ಹಣದ ಖರ್ಚು 56 ಸಾವಿರ ಕೋಟಿಯಷ್ಟು ಮಾಡಿ,…

Read More

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗುವ 2024-2025ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ್ದು, ಶಾಲೆಗಳ ಚಟುವಟಿಕೆಗಳು ಹಾಗೂ ರಜೆಗಳ ಮಾಹಿತಿಯನ್ನು ನೀಡಿದೆ. ಇಲಾಖೆಯು ಪ್ರಕಟಿಸಿರುವ ವೇಳಾಪಟ್ಟಿಯಲ್ಲಿ ಮೊದಲನೇ ಅವಧಿಯು 2024ರ ಮೇ 29 ರಿಂದ ಅಕ್ಟೋಬರ್ 2 ರವರೆಗೆ, ಎರಡನೇ ಅವಧಿಯು ಅಕ್ಟೋಬರ್‌ 21ರಿಂದ 2025ರ ಏಪ್ರಿಲ್‌ 10 ರವರೆಗೆ ಇರಲಿದೆ. ಇದರ ನಡುವೆ, ಅಕ್ಟೋಬರ್ 3 ರಿಂದ 20 ರವರೆಗೆ ದಸರಾ ರಜೆ, 2025ರ ಏ.11ರಿಂದ ಮೇ 28ರವರೆಗೆ ಬೇಸಿಗೆ ರಜೆಯನ್ನು ನಿಗದಿ ಮಾಡಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಅಲ್ಲದೆ ಒಟ್ಟು 244 ಶಾಲಾ ಕರ್ತವ್ಯದ ದಿನಗಳು ಇರಲಿದ್ದು, ಇದರಲ್ಲಿ ಪರೀಕ್ಷೆ ಮೌಲ್ಯಾಂಕನ ಕಾರ್ಯಕ್ಕೆ 26 ದಿನಗಳು, ಪಠ್ಯೇತರ ಚಟುವಟಿಕೆಗೆ 24 ದಿನಗಳು, ಮೌಲ್ಯಮಾಪನ, ಫಲಿತಾಂಶ ವಿಶ್ಲೇಷಣೆಗೆ 10 ದಿನ, ಶಾಲಾ ಸ್ಥಳೀಯ ರಜೆ 4 ದಿನ, ಬೋಧನಾ ಕಲಿಕೆಗೆ 180 ದಿನಗಳು ಎಂದು…

Read More

ಮುಂಬಯಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಎಂದು ಕರೆದ ಹಿಮಾಚಲದ ಮಂಡಿಯ ಬಿಜೆಪಿ ಲೋಕಸಭಾ ಅಭ್ಯರ್ಥಿ, ನಟಿ ಕಂಗನಾ ರನೌತ್ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ. ಟೈಮ್ಸ್ ನೌ ಶೃಂಗಸಭೆಯಲ್ಲಿ ನಿರೂಪಕಿ ನವಿಕಾ ಕುಮಾರ್ ಅವರು ಕಂಗನಾ ರನೌತ್ ಅವರನ್ನು ಸಂದರ್ಶಿಸಿದಾಗ ಅವರು ಈ ಹೇಳಿಕೆ ನೀಡಿದ್ದು, ಇದನ್ನು ಕಾಂಗ್ರೆಸ್ ನಾಯಕ ಬಿ.ವಿ. ಶ್ರೀನಿವಾಸ್, ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮತ್ತು ಇತರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಂಗನಾ ಅವರು ಹೇಳಿದ ತಪ್ಪನ್ನು ನವಿಕಾ ಕುಮಾರ್ ಸರಿಪಡಿಸಲು ಪ್ರಯತ್ನಿಸಿದರು, ಆದರೆ ರನೌತ್ ತಾವು ಹೇಳಿದ್ದೇ ಸರಿ ಎಂಬಂತೆ ವಾದಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಆರ್ಥಿಕ ನೀತಿಗಳು ಕರ್ನಾಟಕವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದ ಬಿಜೆಪಿ ನಾಯಕ ಸಿಟಿ ರವಿ, “ಕೇರಳದಂತೆಯೇ ನಾವು ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ” ಎಂದು ವಾಗ್ದಾಳಿ ನಡೆಸಿದ್ದಾರೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಿದ್ದರೆ ಕಾಶ್ಮೀರದಲ್ಲಿ ಮತ್ತೆ 370 ನೇ ವಿಧಿ ಹೇರುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ನಂತರ ಮತ್ತೆ ಸೈನಿಕರ ಮೇಲೆ ಕಲ್ಲು ತೂರಾಟ ಆರಂಭವಾಗುತ್ತದೆ. ಅವರು ಮತ್ತೆ ಬಾಬ್ರಿ ಮಾಡುತ್ತೇವೆ” ಎಂದು ಹೇಳಿದ್ದಾರೆ. ಮತ್ತೆ ಎಲ್ಲಾ ಯೋಜನೆಗಳು ಮುಗಿಯುತ್ತವೆ” ಎಂದು ಹೇಳಿದರು. “ಕಾಂಗ್ರೆಸ್ ಯಾವಾಗಲೂ ಸೈನಿಕರ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ. ಸೈನಿಕರ ಮೇಲೆ ಅನುಮಾನ ವ್ಯಕ್ತಪಡಿಸುವವರು ಯಾರು? ಅಂತಹವರ ಬಗ್ಗೆ ನಾವು ಏನು ಹೇಳುತ್ತೇವೆ? ಪುಲ್ವಾಮಾ ದಾಳಿಗೆ ಯಾರು ಹೊಣೆ ಎಂದು ನಮಗೆಲ್ಲರಿಗೂ ತಿಳಿದಿದೆ. ಸರ್ಜಿಕಲ್ ಸ್ಟ್ರೈಕ್ ನಿಂದ ಉಗ್ರರ ತರಬೇತಿ ಕೇಂದ್ರವನ್ನು ಧ್ವಂಸಗೊಳಿಸಲಾಯಿತು ಎಂಬುದು ನಮಗೆ ತಿಳಿದಿದೆ. ಪಾಕಿಸ್ತಾನ ಈ ವಿಚಾರಕ್ಕೆ ವಿಶ್ವಸಂಸ್ಥೆಯ ಮೊರೆ ಹೋಗಿತ್ತು.ಆಗಲೂ ಕಾಂಗ್ರೆಸ್‌ ಈ ವಿಚಾರದಲ್ಲಿ…

Read More