Subscribe to Updates
Get the latest creative news from FooBar about art, design and business.
- ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು
- ಸಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೋರಿ ನಾಗರಿಕ ವಿಮಾನಯಾನ ಸಚಿವರಿಗೆ ವಿ.ಸೋಮಣ್ಣ ಪತ್ರ
- ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಲವು: ಸಚಿವ ಜಿ. ಪರಮೇಶ್ವರ್
- ‘ಕರಾವಳಿ’ ಚಿತ್ರದ ವಿವಾದಕ್ಕೆ ಪ್ರೇಕ್ಷಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ನಟ ರಾಜ್ ಬಿ. ಶೆಟ್ಟಿ
- ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ, ಆ. 10 ಕೊನೆಯ ದಿನ
- ಬಿಡದಿ ಟೌನ್ ಶಿಪ್: ಅನಿತಾ ಕುಮಾರಸ್ವಾಮಿ, ನಿಖಿಲ್ ಗೆ ಸೇರಿದ 35 ಎಕರೆ ಭೂಮಿಗೂ ಅಂತಿಮ ಅಧಿಸೂಚನೆ!
- ತಿಪಟೂರು: ಲೋಕೇಶ್ವರ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ
- ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗಬೇಡಿ: ನಿಮ್ಮೂರಲ್ಲೇ ಕೆಲಸ ನೀಡಲಿದೆ ‘ವಿಬಿ-ಜಿ ರಾಮ್ ಜಿ’ ಯೋಜನೆ
Author: admin
ಬಹುಭಾಷಾ ನಟ ಪ್ರಕಾಶ್ ರಾಜ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ರಾಜಕೀಯ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸದಾ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುವ ನಟ ಇದೀಗ ಇದ್ದಕ್ಕಿದ್ದಂತೆ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಾಶ್ ರಾಜ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಎಕ್ಸ್ ನಲ್ಲಿ ಹರಿದಾಡುತ್ತಿತ್ತು. ಇದು ಒಂದು ರೀತಿ ರಾಜಕೀಯ ವಲಯದಲ್ಲಿ ಭಾರೀ ಗುಲ್ಲೆಬ್ಬಿಸಿಬಿಟ್ಟಿತು. ಕೇಂದ್ರ ಸರ್ಕಾರವನ್ನು ಆಗಾಗ ಟೀಕಿಸುತ್ತಲೇ ಮೋದಿಯವರ ವಿರುದ್ಧ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಟ ಇದೀಗ ಬಿಜೆಪಿಗೆ ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿ ಬಂದಾಗ ಎಂತವರಿಗೂ ಶಾಕ್ ಆಗೇ ಆಗುತ್ತದೆ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ನಡೆಯುತ್ತದೆ ಎನ್ನುವ ಕಾರಣಕ್ಕೆ ಎಲ್ಲರೂ ಇದ್ದರೂ ಇರಬಹುದು ಎಂದು ಸುಮ್ಮನಿದ್ದರು. ಈ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ, ಪ್ರಕಾಶ್ ರಾಜ್ ಮೌನ ಮುರಿದಿದ್ದಾರೆ. ಬಿಜೆಪಿ ಸೇರುತ್ತಾರೆ ಎನ್ನುವ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿರುವ…
ವಿವಾಹೇತರ ಸಂಬಂಧದ ಪ್ರೇಮಿ ಮತ್ತು ಮತ್ತು ಗಂಡ ಇಬ್ಬರೂ ಬೇಕು ಎಂದು ಮಹಿಳೆಯೊಬ್ಬಳು ವಿದ್ಯುತ್ ಕಂಬದ ಮೇಲೆ ಹತ್ತಿ ಕುಳಿತ ಘಟನೆ ಉತ್ತರ ಪ್ರದೇಶದ ಪಟ್ಟಣವೊಂದರಲ್ಲಿ ನಡೆದಿದೆ. ಗೋರಖ್ ಪುರದ ಪಿಪ್ರೈಚ್ ನಲ್ಲಿ 34 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು ತನ್ನ ವಿವಾಹೇತರ ಸಂಬಂಧದ ಬಗ್ಗೆ ಪತಿಗೆ ತಿಳಿದ ನಂತರ ವಿದ್ಯುತ್ ಕಂಬವನ್ನು ಹತ್ತುವ ಮೂಲಕ ರಾದ್ದಾಂತ ಸೃಷ್ಟಿಸಿದ್ದಾಳೆ. ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಳು. ಆದರೆ ಕ್ರಮೇಣ ಆಕೆಗೆ ಪಕ್ಕದ ಗ್ರಾಮದ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಈ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಕಳೆದ 7 ವರ್ಷಗಳಿಂದ ಪತಿಗೆ ತಿಳಿಯದಂತೆ ಇವರಿಬ್ಬರ ಪ್ರೇಮ ಪುರಾಣ ನಡೆಯುತ್ತಿತ್ತು. ಮಹಿಳೆಯ ಪತಿ ರಾಮ್ ಗೋವಿಂದ್ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಇವರಿಬ್ಬರ ಪ್ರೀತಿ ವಿಚಾರ ಪತಿಯ ಗಮನಕ್ಕೆ ಬಂದಿದೆ. ಹೀಗಾಗಿ ದಂಪತಿ ನಡುವೆ ವಾಗ್ವಾದ ನಡೆಯಿತು. ಅಲ್ಲದೇ ಪ್ರಿಯತಮನಿಗೂ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಬೇಕು ಮತ್ತು ಮನೆಯ ಆರ್ಥಿಕತೆಗೆ…
ದೇಗುಲದೊಳಗೆಯೇ ಆನೆಯೊಂದು ಮಾವುತನನ್ನು ತುಳಿದು ಕೊಂದ ಆಘಾತಕಾರಿ ಘಟನೆ ಕೇರಳದ ವೈಕೋಮ್ ನಲ್ಲಿ ನಡೆದಿದೆ. ಮೃತಪಟ್ಟ ಮಾವುತನನ್ನು ಅರವಿಂದ್(26) ಎಂದು ಗುರುತಿಸಲಾಗಿದ್ದು, ಈತ ಪುತ್ತುಪ್ಪಲ್ಲಿ ಮೂಲದ ನಿವಾಸಿ ಎನ್ನಲಾಗಿದೆ. ಅರವಿಂದ್ ಅವರು ಕುಂಜುಲಕ್ಷ್ಮಿಯ ಎರಡನೇ ಮಾವುತರಾಗಿ ಕಳೆದ ತಿಂಗಳಿನಿಂದ ಸೇವೆ ಆರಂಭಿಸಿದ್ದರು. ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ದೇವಸ್ಥಾನದ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕುಂಜುಲಕ್ಷ್ಮಿ ಎಂದು ಕರೆಯಲ್ಪಡುವ ಆನೆಯು ಸಾಂಪ್ರದಾಯಿಕ ಹಣೆಪಟ್ಟಿ ಇಡಲಾಗಿತ್ತು. ಇದೇ ಸಂದರ್ಭದಲ್ಲಿ ಏಕಾಏಕಿ ಕೋಪಗೊಂಡ ಆನೆಯು ತನ್ನ ಜೊತೆ ಇದ್ದ ಮಾವುತ ಅರವಿಂದ್‌ನನ್ನು ತುಳಿದಿದೆ. ಕೂಡಲೇ ದೇವಸ್ಥಾನದಲ್ಲಿದ್ದ ಸ್ಥಳೀಯರು ಸೇರಿ ಅರವಿಂದ್‌ನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ತಕ್ಷಣವೇ ವೈಕಂ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಪರಿಣಾಮ ಅರವಿಂದ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ…
ಗರ್ಭಿಣಿ ಮಹಿಳೆಯ ಹೆರಿಗೆಗೆ ನೆರವಾದ ರೈಲ್ವೇ ಸಿಬ್ಬಂದಿಯ ಮಾನವೀಯ ಸ್ಟೋರಿ ವರದಿಯಾಗಿದೆ. ಇಂತಹುದೇ ಘಟನೆಯೊಂದು LTT-ಪ್ರಯಾಗರಾಜ್ ದುರಂತೋ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ್ದು, ತುಂಬು ಗರ್ಭಿಣಿ ಮಹಿಳೆಯೋರ್ವರಿಗೆ ಪ್ರಯಾಣ ಸಮಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ, ಸಹಪ್ರಯಾಣಿಕರೊಂದಿಗೆ ಟಿಕೆಟ್ ಸಿಬ್ಬಂದಿಯೂ ಮಹಿಳೆಗೆ ನೆರವು ನೀಡಿದ ರೀತಿ ವಿಶೇಷವಾಗಿತ್ತು. ಟಿಕೆಟ್ ತಪಾಸಣಾ ತಂಡದಲ್ಲಿದ್ದ ಅಧಿಕಾರಿಗಳಾದ ನಂದ್ ಬಿಹಾರಿ ಮೀನಾ, ಅಲೋಕ್ ಶರ್ಮಾ, ರಾಜಕರಣ್ ಯಾದವ್ ಮತ್ತು ಇಂದ್ರ ಕುಮಾರ್ ಮೀನಾ, ಸಹಪ್ರಯಾಣಿಕರೊಂದಿಗೆ ಗರ್ಭಿಣಿ ಸ್ತ್ರೀಯ ಹೆರಿಗೆಗೆ ನೆರವಾಗುವ ಮೂಲಕ, ತಾಯಿ ಹಾಗೂ ನವಜಾತ ಶಿಶುವಿನ ಯೋಗಕ್ಷೇಮ ನೋಡಿಕೊಂಡಿದ್ದಾರೆ. ಪ್ರಯಾಣ ಸಮಯದಲ್ಲಿಯೇ ತುಂಬು ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಗೆ ಅಗತ್ಯವಿರುವ ಎಲ್ಲಾ ನೆರವು ಹಾಗೂ ಸೌಕರ್ಯಗಳನ್ನೊದಗಿಸಿ ರೈಲ್ವೇ ಸಿಬ್ಬಂದಿ ನೆಲದ ಮೇಲೆ ಮಲಗಿಸಿದ್ದಾರೆ. ಅಧಿಕಾರಿಗಳ ಸಮಯೋಚಿತ ಸಹಕಾರ ಹಾಗೂ ಸಹಪ್ರಯಾಣಿಕರ ನೆರವಿನಿಂದ ಮಹಿಳೆಗೆ ಸುರಕ್ಷಿತ ಹೆರಿಗೆಯನ್ನು ಮಾಡಲಾಯಿತು ಎಂದು ಮಹಿಳೆಯ ಕುಟುಂಬಸ್ಥರು ತಿಳಿಸಿದ್ದು, ಅನಿರೀಕ್ಷಿತ ಪರಿಸ್ಥಿತಿಯಲ್ಲೂ ತಂಡವು ಸಂಯೋಜಿತವಾಗಿ ಒಗ್ಗೂಡಿ ಕಷ್ಟದಲ್ಲಿರುವ ಮಹಿಳೆಗೆ ನೆರವಿನ ಹಸ್ತ…
ಸಾಮಾಜಿಕ ಜಾಲತಾಣ ವಿಚಿತ್ರ ಘಟನೆಗಳಿಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಈಗ ವೃದ್ಧನೊಬ್ಬ 34 ವರ್ಷದ ಮಹಿಳೆಯನ್ನು ಮದುವೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ. ಈ ಮದುವೆಯಲ್ಲಿ ವರನ ವಯಸ್ಸು 80 ಮತ್ತು ವಧುವಿನ ವಯಸ್ಸು 34. ಇಬ್ಬರ ಪ್ರೀತಿ ಹುಟ್ಟಿಕೊಂಡಿದ್ದೇ ಸಾಮಾಜಿಕ ಜಾಲತಾಣದಲ್ಲಿ ಎಂಬುದು ವಿಶೇಷ. ಮಧ್ಯಪ್ರದೇಶದ ಸುಸ್ನೇರ್ ಸಮೀಪದ ಮಗರಿಯಾ ಗ್ರಾಮದ ನಿವಾಸಿ ಬಲುರಾಮ್ ಬಗ್ರಿ ಅವರು ಮಹಾರಾಷ್ಟ್ರದ ಅಮರಾವತಿ ನಿವಾಸಿ ಶೀಲಾ ಇಂಗ್ಲೆ ಅವರನ್ನು ಏಪ್ರಿಲ್ 1 ರಂದು ವಿವಾಹವಾಗಿದ್ದಾರೆ. ಮೂಲತಃ ಮಧ್ಯಪ್ರದೇಶದ ಮಗರಿಯ ಗ್ರಾಮದಲ್ಲಿ ವಾಸಿಸುತ್ತಿದ್ದ ಬಾಲುರಾಮ್ ಅವರಿಗೆ ಈಗಾಗಲೇ ಒಂದು ಮದುವೆಯಾಗಿದ್ದು ಕೆಲ ವರ್ಷಗಳ ಹಿಂದೆ ಅವರ ಪತ್ನಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಳು. ಬಾಲುರಾಮ್ ಅವರಿಗೆ ಓರ್ವ ಪುತ್ರನಿದ್ದು ಮೂವರು ಪುತ್ರಿಯರಿದ್ದಾರೆ ಆದರೆ ಅವರೆಲ್ಲರೂ ಬೇರೆ ಬೇರೆಯಾಗಿ ವಾಸಮಾಡುತ್ತಿದ್ದಾರೆ ಹೆಂಡತಿಯನ್ನು ಕಳೆದುಕೊಂಡ ಬಳಿಕ ಬಾಲುರಾಮ್ ಗೆ ಒಂಟಿ ತನ ಕಾಡ ತೊಡಗಿದೆ ಇದರಿಂದ ಖಿನ್ನತೆಗೆ ಒಳಗಾಗಿದ್ದರು. ಈ ವೇಳೆ ಅರೋಗ್ಯ ವಿಚಾರಿಸಲು ಬಂದ ಬಾಲುರಾಮ್ ಅವರ ಸ್ನೇಹಿತನಾದ ವಿಷ್ಣು…
ಹಂದಿಯ ಮೂತ್ರಪಿಂಡವನ್ನು ಮನುಷ್ಯನಿಗೆ ಅಳವಡಿಸುವಲ್ಲಿ ಅಮೆರಿಕದ ಬೋಸ್ಟನ್ ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಹಂದಿಯ ಕಿಡ್ನಿ ಅಳವಡಿಕೆ ಬಳಿಕ ರೋಗಿ ಆರೋಗ್ಯವಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾನೆ ಎನ್ನಲಾಗಿದೆ. ವೇಮೌತ್ ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ ಗೆ ಹಂದಿ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಈ ಮೂಲಕ ಹಂದಿ ಮೂತ್ರಪಿಂಡ ಕಸಿ ಸ್ವೀಕರಿಸಿದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಮನೆಗೆ ತೆರಳಿದ್ದಾರೆ. ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ. ಈ ಹಿಂದೆಯೂ ವೈದ್ಯರು ಮಾನವನಿಗೆ ಪ್ರಾಣಿಗಳ ಎರಡು ಅಂಗಾಂಗ ಕಸಿಗಳನ್ನು ನಡೆಸಿದ್ದರು. ಇದರಲ್ಲಿ ತಳೀಯವಾಗಿ ಮಾರ್ಪಡಿಸಿದ ಹಂದಿಗಳ ಅಂಗಗಳನ್ನು ಮನುಷ್ಯರಿಗೆ ನೀಡಲಾಗಿದೆ. ಆದರೂ ಎರಡೂ ಪ್ರಕರಣಗಳು ವಿಫಲವಾಗಿದ್ದವು. ಈ ಎರಡು ಪ್ರಕರಣಗಳಲ್ಲಿ ತಳೀಯವಾಗಿ ಮಾರ್ಪಡಿಸಿದ ಹಂದಿಗಳ ಹೃದಯವನ್ನು ಮನುಷ್ಯರಿಗೆ ಅಳವಡಿಸಲಾಗಿತ್ತು, ಅದೂ ಕೂಡ ವಿಫಲವಾಗಿತ್ತು ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ಕಾನೂನುಬಾಹಿರಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ರೀಲ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರಿಗೆ, ನ್ಯಾಯಾಂಗವು ಜಾಮೀನು ನೀಡಿದೆ. ಹೌದು. 14 ದಿನಗಳ ನ್ಯಾಯಾಂಗ ಬಂಧನವನ್ನು ಕೋರ್ಟ್ ಸೋನು ಅವರಿಗೆ ವಿಧಿಸಿತ್ತು. ಇದೀಗ ಎಪ್ರಿಲ್ 4 ರಂದು ಜಾಮೀನು ಸಿಕ್ಕಿದೆ. ಪಿಡಿಜೆ ಕೋರ್ಟ್ ಸೋನು ಗೌಡ ಅವರಿಗೆ ಜಾಮೀನು ಮಂಜೂರು ಮಾಡಲು 1 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಲು ಕೋರ್ಟ್ ಒಪ್ಪಿಗೆ ನೀಡಿದೆ. ಈ ಎಲ್ಲಾ ಷರತ್ತುಗಳನ್ನು ಪಾಲಿಸಿದ ನಂತರ ಸೋನು ಶ್ರೀನಿವಾಸ ಗೌಡ ಅವರು ಬಿಡುಗಡೆಯಾಗಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮತ ಪ್ರಚಾರ ನೆಪದಲ್ಲಿ ಮೌಲ್ಯಮಾಪನ ಕೇಂದ್ರಕ್ಕೆ ರಾಜಕೀಯ ವ್ಯಕ್ತಿಗಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಿದೆ. ರಾಜಕೀಯ ವ್ಯಕ್ತಿಗಳು ಮೌಲ್ಯಮಾಪನ ಕೇಂದ್ರಕ್ಕೆ ಭೇಟಿ ನೀಡುವುದನ್ನು ಕಡ್ಡಾಯ ನಿಷೇಧಿಸಿದೆ. ಮೌಲ್ಯಮಾಪನ ಕೇಂದ್ರದ 200 ಮೀ. ಸುತ್ತಮುತ್ತ ನಿಷೇಧಿತ ಪ್ರದೇಶ ಆಗಿರುವುದರಿಂದ ಯಾವುದೇ ಪಕ್ಷಕ್ಕಾಗಲಿ ಅಥವಾ ಯಾವುದೇ ಸಂಘಟನೆ ವ್ಯಕ್ತಿಗಳಿಗಾಗಿ ಮೌಲ್ಯಮಾಪನ ಕೇಂದ್ರಕ್ಕೆ ಅವಕಾಶ ನೀಡುವಂತಿಲ್ಲ ಎಂದು ಮಂಡಳಿ ಸೂಚಿಸಿದೆ. ಅದಕ್ಕೂ ಮೊದಲು ಏ.7ರಂದು ಬೆಳಗ್ಗೆ 10ಕ್ಕೆ ಮೌಲ್ಯಮಾಪನ ಕೇಂದ್ರಕ್ಕೆ ವ್ಯವಸ್ಥಾಪಕರು ಹಾಜರಾಗಬೇಕು. ಏ.10ರಂದು ಜಂಟಿ ಮುಖ್ಯ ಮೌಲ್ಯಮಾಪಕರ ವೀಡಿಯೊ ಸಂವಾದ ನಡೆಸಬೇಕು. ಏ.12ರಂದು ಜಂಟಿ ಮುಖ್ಯ ಮೌಲ್ಯಮಾಪಕರು, ಏ.13ರಂದು ಉಪ ಮುಖ್ಯ ಮೌಲ್ಯಮಾಪಕರು, ಏ.15ರಂದು ಸಹಾಯಕ ಮೌಲ್ಯಮಾಪಕರು ಹಾಜರಾಗಬೇಕು ಎಂದು ಸೂಚನೆ ನೀಡಿದೆ. ಮೂಲಸೌಕರ್ಯ ಒದಗಿಸಿ ಜಿಲ್ಲಾ ಉಪ ನಿರ್ದೇಶಕರು ಮೌಲ್ಯಮಾಪಕ ರಿಗೆ ಕುಡಿಯುವ ನೀರಿನ…
ದೆಹಲಿಯಲ್ಲಿ ತಮಗೆ ಭೇಟಿ ನಿರಾಕರಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಬಲ್ ಈಶ್ವರಪ್ಪ, ‘ದೆಹಲಿಗೆ ಕರೆದಾಗ ಅವರಿಗೆ ಗೌರವಕೊಟ್ಟು ಹೋಗಿದ್ದೆನು. ಆದರೆ, ಅವರು ಭೇಟೆಯಾಗದೆ ನಾನು ಸ್ಪರ್ಧೆ ಮಾಡುವುದಕ್ಕೆ ಅಸ್ತು ಎಂಬ ಸಂದೇಶ ನೀಡಿದ್ದಾರೆ’ ಎಂದಿದ್ದಾರೆ. “ಅಮಿತ್ ಶಾ ಮನೆಯಲ್ಲಿ ಬುಧವಾರ ರಾತ್ರಿ ಅವರ ಭೇಟಿಗೆ ಸೂಚಿಸಲಾಗಿತ್ತು. ಕೊನೆಯ ಗಳಿಗೆಯಲ್ಲಿ ಭೇಟಿಯ ಅವಶ್ಯಕತೆ ಇಲ್ಲ ಎಂದು ಅಮಿತ್ ಶಾ ಹೇಳಿರುವುದಾಗಿ ಅವರ ಕಚೇರಿಯ ಸಿಬ್ಬಂದಿ ತಿಳಿಸಿದರು. ಅದರ ಅರ್ಥ ನೀನು ಶಿವಮೊಗ್ಗಕ್ಕೆ ವಾಪಸ್ ಹೋಗು, ಅಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಾ ಎಂಬುದೇ ಆಗಿತ್ತು. ಸ್ವತಃ ಪಕ್ಷದ ವರಿಷ್ಠರೇ ಸಂದೇಶವನ್ನು ಕೊಟ್ಟಿದ್ದಾರೆ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಅಮಿತ್ ಶಾ ಅವರು ನನಗೆ ಕರೆ ಮಾಡಿದಾಗ ನನ್ನ ಸ್ಪರ್ಧೆಯ ಸ್ಪಷ್ಟ ಉದ್ದೇಶ ಅವರಿಗೆ…
ಪಾವಗಡ: ರಾಜ್ಯದೆಲ್ಲೆಡೆ ಬಿಸಿಲಿನ ತಾಪ ನಿಟ್ಟುಸಿರು ಬಿಡಿಸುತ್ತಿದೆ. ಕೆರೆ ಕುಂಟೆಗಳು ಬತ್ತು ಹೋಗಿವೆ… ಇದೊಂದು ಕಡೆಯಾದ್ರೆ, ಇನ್ನೊಂದು ಕಡೆ ಲಕ್ಷಾಂತರ ಮೀನುಗಳು ಸತ್ತು ತೇಲುತ್ತಿವೆ. ಇದ್ದ ಅಲ್ಪ ಸ್ವಲ್ಪ ಕೊಳಕಾದ ನೀರಲ್ಲಿ ಅರೆ ಜೀವ ಹಿಡ್ಕೊಂಡು ವಿಲ ವಿಲ ಒದ್ದಾಡುತ್ತ ತನ್ನ ಕೊನೆ ಉಸಿರು ಚೆಲ್ಲುತ್ತಿವೆ. ಇಂತಹ ಮನಕಲುಕುವ ದೃಶ್ಯ ಕಂಡು ಬಂದಿದ್ದು ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕನ್ನಮೇಡಿ ಕೆರೆಯಲ್ಲಿ. 108 ಎಕರೆ ವಿಸ್ತೀರ್ಣ ಹೊಂದಿರುವ ಕನ್ನಮೇಡಿ ಕೆರೆ ತುಂಬಿದರೆ ಜನ ಜಾನುವಾರು ಜಲಚರಗಳಿಗೆ ಜೀವ ಜಲವಾಗಿರುತಿತ್ತು. ಆದರೆ, ಇಂದು ಬತ್ತಿ ಹೋದ ಕೆರೆಯಲ್ಲಿ ಇದ್ದ ಅಲ್ಪ ಸ್ವಲ್ಪ ನೀರಲ್ಲಿ, ಲಕ್ಷಾಂತರ ಮೀನುಗಳು ಉಸಿರುಗಟ್ಟಿ ಸಾಯುತ್ತಿರುವ ದೃಶ್ಯ ನಿಜಕ್ಕೂ ನೋಡೋರನ್ನು ಕರುಳು ಹಿಂಡುವಂತೆ ಮಾಡುತ್ತದೆ. ತಾಪದ ಹೆಚ್ಚಳ ಹೀಗೆ ಮುಂದುವರೆದರೆ, ಸಂಪೂರ್ಣ ನೀರು ಬತ್ತಿ ಹೋಗಿ ಇನ್ನೆರಡು ದಿನಗಳಲ್ಲಿ ಇದ್ದ ಬದ್ದ ಮೀನುಗಳು ಸಾಯೋದ್ರಲ್ಲಿ ಯಾವುದೇ ಸಂಶಯವಿಲ್ಲ.. ಕೇವಲ ಇದೊಂದೆ ಅಲ್ಲಾ, ಎಷ್ಟೋ ಜಾನುವಾರುಗಳು ಮೇವು ನೀರಿಲ್ಲದೆ ಬಿಸಿಲಿನ ತಾಪಕ್ಕೆ…