Author: admin

ಬೆಂಗಳೂರು: ಸೋಲಿನ ಭೀತಿಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ ಮತ್ತು ಸರ್ಕಾರದ ಸಚಿವರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿಯ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ‘ಕೆಲ ಬಿಜೆಪಿ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ಹೇಳಿದ ನಂತರ ಬೊಮ್ಮಾಯಿ ಈ ಹೇಳಿಕೆ ನೀಡಿದ್ದಾರೆ. ‘ಕಾಂಗ್ರೆಸ್ ಹದಗೆಟ್ಟ ಸ್ಥಿತಿಯಲ್ಲಿದೆ. ಅನುಭವಿ ಮತ್ತು ಹೊಸ ಮುಖಗಳಿಗೆ ಬಿಜೆಪಿ ಆದ್ಯತೆ ನೀಡುತ್ತಿದೆ. ಬಿಜೆಪಿಯಿಂದ ಮಾತ್ರ ಈ ರೀತಿಯ ನಿರ್ಧಾರ ಕೈಗೊಳ್ಳಲು ಸಾಧ್ಯ. ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಹೀಗಿಲ್ಲ, ಸಚಿವರಿಗೂ ಸೋಲಿನ ಭಯ ಕಾಡುತ್ತಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದವರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುವುದು ಡಿಸಿಎಂ ಡಿಕೆ ಶಿವಕುಮಾರ್‌ ಗೆ ಅಭ್ಯಾಸವಾಗಿದೆ. ಕಾಂಗ್ರೆಸ್‌ಗೆ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ’ ಎಂದು ಹೇಳಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿದೆ. ಯಡಿಯೂರಪ್ಪ…

Read More

ಬೆಂಗಳೂರು: ಬಿಜೆಪಿಯವರು ನಮಗೆ ಹಾಸನ, ಮಂಡ್ಯಮತ್ತು ಕೋಲಾರ ಬಿಟ್ಟುಕೊಟ್ಟಿದ್ದಾರೆ ಎಂದು ಜೆಡಿಎಸ್‌ ವರಿಷ್ಠ ಹೆಚ್‌.ಡಿ. ದೇವೇಗೌಡ ತಿಳಿಸಿದ್ದಾರೆ. ಬೆಂಗಳೂರಿನ ಜೆಡಿಎಸ್‌ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, 28 ಸ್ಥಾನಗಳ ಪೈಕಿ 25ರಲ್ಲಿ ಬಿಜೆಪಿ ಅಭ್ಯರ್ಥಿಗಳಿರಲಿದ್ದಾರೆ. ಮಂಜುನಾಥ್‌ ಅವರನ್ನು ಬಿಜೆಪಿಯಿಂದಲೇ ಕಣಕ್ಕಿಳಿಸೋಣ ಎಂದು ಅವರೇ ಒತ್ತಾಯಿಸಿದ್ದಕ್ಕೆ ಹೆಚ್‌ ಡಿ ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದರು. ಹೆಚ್‌ ಡಿಕೆ & ನಿಖಿಲ್ ಬಿಜೆಪಿ ಅಭ್ಯರ್ಥಿಗಳ ಪರವೂ ಪ್ರಚಾರ ನಡೆಸಲಿದ್ದಾರೆ ಎಂದಿದ್ದಾರೆ. ಇನ್ನು ಮಂಜುನಾಥ್ ಅವರ ಸ್ಪರ್ಧೆ ವಿಚಾರವಾಗಿ ಹಾಸನದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾವ್ಯಾರೂ ಅವರನ್ನ ರಾಜಕೀಯಕ್ಕೆ ತರೋ ಚಿಂತೆಯೇ ಇರಲಿಲ್ಲ. ಆದ್ರೆ ಬಿಜೆಪಿ ಹೈಕಮಾಂಡ್ ನಮ್ಮ ಮೇಲೆ ಒತ್ತಡ ಹೇರಿ, ಸ್ಪರ್ಧೆ ಮಾಡುವಂತೆ ಮನವೊಲಿಸಲು ಹೇಳಿತ್ತು ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಕೊರಟಗೆರೆ: ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿಯೇ ಎರಡು ಕೆ ಎಸ್ ಆರ್ ಟಿಸಿ ಬಸ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಸುಮಾರು 15ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಗೌರಿಬಿದನೂರು ನಿಂದ ತುಮಕೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್, ಕೊರಟಗೆರೆಯ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ತುಮಕೂರಿನಿಂದ ಪಾವಗಡ ಕಡೆ ಹೋಗುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾನೆಟ್ ಮೇಲೆ ಕುಳಿತು ನಿದ್ರೆ ಮಾಡುತ್ತಿದ್ದ ಮಹಿಳೆಯರಿಂದ ಈ ಅಪಘಾತ ಜರುಗಿದೆ ಎಂದು ಬಸ್ ಚಾಲಕ ಹೇಳಿದ್ದು, ಬಾನೆಟ್ ಮೇಲೆ ಕುಳಿತುಕೊಳ್ಳಬೇಡಿ ಹಿಂದೆ ಹೋಗಿ ಎಂದು ಹೇಳುವಷ್ಟರಲ್ಲಿ ಅಪಘಾತ ನಡೆದು ಹೋಗಿತ್ತು ಎಂದು ಹೇಳಿದ್ದಾರೆ. ಕೊರಟಗೆರೆಯ KSRTCಬಸ್ ನಿಲ್ದಾಣದಲ್ಲಿರುವ ಸಂಚಾರ ನಿಯಂತ್ರಣ ಸಿಬ್ಬಂದಿಯ ನಿರ್ಲಕ್ಷದಿಂದ ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬಸ್ ನಿಲ್ದಾಣದಲ್ಲಿ ಹೆಚ್ಚು ಬಸ್ ಗಳು ನಿಂತಾಗ ಹಿಂದೆ ಬರುವ ಬಸ್…

Read More

ಕೊರಟಗೆರೆ: ಪಟ್ಟಣದ ರಾಜೀವ್ ಭವನ ಅವರಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಪ್ರಚಾರ ಚಾಲನೆ ಕಾರ್ಯಕ್ರಮವನ್ನು ಸಚಿವರುಗಳಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಉದ್ಘಾಟಿಸಿದರು. ಕೊರಟಗೆರೆ ರಾಜ್ಯದ ಜನರು ಶೇ. 18 ರಷ್ಟು ಜಿಎಸ್ಟಿ ಮುಖಾಂತರ 4.5 ಲಕ್ಷ ಕೋಟಿ ತೆರಿಗೆ ಹಣವನ್ನು ಕೇಂದ್ರಕ್ಕೆ ಕಟ್ಟಿದರೆ ಅದರಲ್ಲಿ ಕೇಂದ್ರ ಸರ್ಕಾರ ನಮಗೆ ನೀಡುವುದು ಕೇವಲ 50 ಸಾವಿರ ಕೋಟಿ ಮಾತ್ರವಾಗಿದ್ದು ಉಳಿದ ಹಣವನ್ನು ಇತರ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು. ಅವರು ಕೊರಟಗೆರೆ ಪಟ್ಟಣದ ರಾಜೀವ ಭವನ ಆವರಣದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಗೆ ಚಾಲನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮೊದಲಿನಿಂದಲೂ ಅನ್ಯಾಯ ಮಾಡುತ್ತಿದ್ದು ರಾಜ್ಯದಲ್ಲಿ ಬರವು ಬೀಕರ ಪರಿಸ್ಥಿತಿ ಎದುರಿಸುತ್ತಿದ್ದು 236 ತಾಲೂಕು ಗಳ ಪೈಕಿ 226 ತಾಲೂಕುಗಳು ಬರ ಪೀಡಿತ ತಾಲೂಕುಗಳಾಗಿದ್ದು ಕೇಂದ್ರವು ಎಸ್.ಡಿ.ಆರ್.ಫೆ ನಿಂದ ಒಂದು ರೂ ಸಹ…

Read More

ಬೀದರ್: ಔರಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮಗುಚಿ ಬಿದ್ದ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಂದೆ ಮಗ ಅಪಾಯದಿಂದ ಪಾರಾಗಿದ್ದಾರೆ. ಬೀದರ ಜಿಲ್ಲಾ ಔರಾದ ತಾಲುಕಿನ ಚೌದ್ರಿ ಬೆಳಕುಣಿ ಗ್ರಾಮದ ನಿವಾಸಿ ದಸರಧ ಭರಾಡೆ, ಸಂದಿಪ ಭರಾಡೆ ಅಪಾಯದಿಂದ ಪಾರಾದವರಾಗಿದ್ದಾರೆ. ಜಿರ್ಗಾ ಕ್ರಾಸ್ ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಸಂತಪುರ ಪೋಲಿಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಇದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಡ ಮಕ್ಕಳ ಶಾಲೆ. ಕೊರಟಗೆರೆ ವಿಧಾನಸಭಾ ಕ್ಷೇತ್ರ ಕೋರ ಹೋಬಳಿಯ ಬೆಳಧರ ಗ್ರಾಮದ ಸರ್ಕಾರಿ ಶಾಲೆ ಇದೀಗ ಅಕ್ಷರಶಃ ಅನಾಥವಾಗಿದೆ. ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ, ಕೊರಟಗೆರೆ ಕ್ಷೇತ್ರದಲ್ಲೇ ಗೃಹ ಸಚಿವರಿದ್ದರೂ, ಅಧಿಕಾರಿಗಳು ಕಾನೂನಿಗೆ ಸರಿಯಾಗಿ ಕಾರ್ಯ ನಿರ್ವಹಿಸದೇ ಜಿಲ್ಲಾಡಳಿತಕ್ಕೆ ಕಳಂಕ ತರುತ್ತಿದ್ದಾರೆ. ಇಂತಹ ಅಧಿಕಾರಿಗಳು ಜಿಲ್ಲೆಯಲ್ಲಿದ್ದು ಏನು ಪ್ರಯೋಜನ? ಎಂದು ಪ್ರಶ್ನಿಸುವಂತಾಗಿದೆ. ಇಲ್ಲಿನ ಮಕ್ಕಳು ಪ್ರತಿದಿನ ಶಬ್ದ ಮಾಲಿನ್ಯದಿಂದ ಬಳಲುತ್ತಾ ಪಾಠ ಕೇಳುವ ಸ್ಥಿತಿ ಇಲ್ಲಿಯದ್ದಾಗಿದೆ. ಶಾಲೆಗೆ ಹೊಂದಿಕೊಂಡಂತಿರುವ ಕಲ್ಯಾಣ ಮಂಟಪದಲ್ಲಿ ವಾದ್ಯ ಮೇಳಗಳ ಗದ್ದಲದ ನಡುವೆ ಶಾಲೆಯ ಮಕ್ಕಳು ಇಲ್ಲಿ ಓದುವಂತಹ ದುಸ್ಥಿತಿ ಇಲ್ಲಿಯದ್ದಾಗಿದೆ. ಪರೀಕ್ಷೆಗಳು ನಡೆಯುತ್ತಿದ್ದರೂ, ಕಲ್ಯಾಣ ಮಂಟಪದ ವಾದ್ಯಗಳ ಸದ್ದಿಗೆ ಕಿರಿಕಿರಿ ಅನುಭವಿಸುತ್ತಾ ವಿದ್ಯಾರ್ಥಿಗಳು ಪಾಠ ಕೇಳುವಂತಿದೆ. ದಿನಾ ಸಾಯುವವರಿಗೆ ಅಳುವವರು ಯಾರು ಅನ್ನೋ ಗಾದೆ ಮಾತಿನಂತೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಶಾಲೆಗೆ ಹೇಳುವವರು ಕೇಳುವವರು ಯಾರೂ ಇಲ್ಲ ಎನ್ನುವಂತಾಗಿದೆ. ಬೆಳಧರ ಸರ್ಕಾರಿ…

Read More

ಸ್ಯಾಂಡಲ್ ​ವುಡ್​​ ನಟಿ ಸೌಂದರ್ಯ ಅವರನ್ನು ಸಿನಿಪ್ರೇಮಿಗಳು ಎಂದಿಗೂ ಮರೆಯೋದಕ್ಕೆ ಸಾಧ್ಯನೇ ಇಲ್ಲ. ಇವರ ಕಣ್ಣು ಕುಕ್ಕುವಂತಹ ಸುಂದರ ನೋಟ, ನಗು ಮತ್ತು ಮನಮೋಹಕ ಅಭಿನಯಕ್ಕೆ ಅಭಿಮಾನಿಗಳು ಫಿದಾ.. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ತನ್ನ ಅತ್ಯುತ್ತಮ ಅಭಿನಯದ ಮೂಲಕ ಅನೇಕ ಅಭಿಮಾನಿಗಳನ್ನು ಗಳಿಸಿದ್ದು, ಈ ನಟಿ ಸಿನಿಮಾಗೆ ಎಂಟ್ರಿ ಕೊಡಲು ಒಬ್ಬ ವ್ಯಕ್ತಿಯೇ ಕಾರಣ ಎಂದು ಹೇಳಿರುವ ಹಳೆ ವಿಡಿಯೋ ಇದೀಗ ವೈರಲ್​​ ಆಗಿದೆ. ಸೂಪರ್ ಸ್ಟಾರ್ ಕೃಷ್ಣ, ಅಮಿತಾಬ್ ಬಚ್ಚನ್, ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ಬಾಲಕೃಷ್ಣ, ರಜನಿಕಾಂತ್, ರವಿಚಂದ್ರನ್​, ವಿಷ್ಣುವರ್ಧನ್​ ಹೀಗೆ ಎಲ್ಲಾ ಭಾಷೆಗಳ ಸ್ಟಾರ್ ಹೀರೋಗಳು ಒಟ್ಟಿಗೆ ಕಾಣಿಸಿಕೊಂಡಿದ್ದರು. 2004ರಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿದ್ದ,ಈ ಘಟನೆಯಲ್ಲಿ ಸೌಂದರ್ಯಾ ಜತೆಗೆ ಆಕೆಯ ಸಹೋದರ ಅಮರ್ ಕೂಡ ದುರಂತ ಅಂತ್ಯ ಕಂಡಿದ್ದರು. ಸೌಂದರ್ಯಾ ಕೊನೆಯುಸಿರೆಳೆದು ಸುಮಾರು 20 ವರ್ಷಗಳೇ ಕಳೆದಿವೆ. ಸೌಂದರ್ಯಾಗೆ ಸಂಬಂಧಿಸಿದ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…

Read More

ಬೆಂಗಳೂರಿನ, ದ ಲಲಿತ್‌ ಅಶೋಕ್‌ ಹೋಟೆಲ್‌ ನಲ್ಲಿ ಯುವ ಸಾಧಕರನ್ನು ಗುರುತಿಸಿ ಗೌರವಿಸುವ ಜೀ ಕನ್ನಡ ವತಿಯಿಂದ “ಯುವರತ್ನ” ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ತಳಮಟ್ಟದಿಂದ ಬೆಳೆದು ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರುತಿಸುವ ಕಾರ್ಯಕ್ರಮವೇ ಯುವರತ್ನ. ಅದರಂತೆ 2023-24 ರ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ,  ಒಟ್ಟು 35 ಜನ ಯುವ ಸಾಧಕರು ಆಯ್ಕೆಯಾಗಿದ್ದರು. ಅವರೆಲ್ಲರನ್ನೂ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಗೌರವಿಸಿ “ಯುವರತ್ನ ಪ್ರಶಸ್ತಿ” ಪ್ರದಾನ ಮಾಡಲಾಯಿತು. ‘ಯುವರತ್ನ ಅವಾರ್ಡ್ಸ್’  ಕಾರ್ಯಕ್ರಮಕ್ಕೆ ಸಚಿವರಾದ ರಾಮಲಿಂಗರೆಡ್ಡಿ, ಚಲುವರಾಯಸ್ವಾಮೀ, ಸಂತೋಷ್‌ ಲಾಡ್‌ ಮತ್ತು ಶಿವರಾಜ್‌ ತಂಗಡಗಿ ಆಗಮಿಸಿದ್ದರು. ಇವರ ಜೊತೆಗೆ ಚಿತ್ರರಂಗದ ಗಣ್ಯರಾದ ನಿರ್ಮಾಪಕಿ ಅಶ್ವಿನಿ ಪುನೀತ್‌ರಾಜ್‌ಕುಮಾರ್‌, ನಟ ವಿಜಯರಾಘವೇಂದ್ರ , ಆಕ್ಷನ್ ಪ್ರಿನ್ಸ್ ಧೃವಸರ್ಜಾ ಹಾಗೂ ಕಾಟೇರ ಚಿತ್ರದ ನಾಯಕಿ ಆರಾಧನ ಯುವ ಸಾಧಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವರತ್ನ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಕೆಳಕಂಡಂತಿದೆ: 1 ಡಾ. ಮನೋಜ್ ಕುಮಾರ್ ಕೃಷ್ಣಪ್ಪ – ಇಟಾಚಿ ಸಂಸ್ಥೆಯ ಹೋಲ್…

Read More

ಅಧಿಕೃತವಾಗಿ 2-3 ದಿನಗಳಲ್ಲಿ ನಾನು ರಾಜಕೀಯಕ್ಕೆ ಸೇರ್ಪಡೆ ಆಗುತ್ತೇನೆ ಎಂದು ಹೃದ್ರೋಗ ತಜ್ಞ ಡಾ. ಮಂಜುನಾಥ್‌ ಹೇಳಿಕೆ ನೀಡಿದ್ದಾರೆ. ಮಾರ್ಚ್ 13 ರಂದು ಡಾಲರ್ಸ್‌ ಕಾಲೋನಿ ನಿವಾಸದಲ್ಲಿ ಯಡಿಯೂರಪ್ಪರನ್ನು ಭೇಟಿ ಮಾಡಿದ ಬಳಿಕ ಮಧ್ಯಮಗಳ ಜೊತೆ ಮಾತನಾಡಿ, ಮೋದಿ ಸರ್ಕಾರ ಸಾಧಕರಿಗೆ, ಪರಿಣಿತರಿಗೆ ಪ್ರೊತ್ಸಾಹ ಕೊಡುತ್ತಿದ್ದಾರೆ. ಹೀಗಾಗಿ ನಾನು ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಹೃದ್ರೋಗ ಕ್ಷೇತ್ರದಲ್ಲಿ ಕಾಂತ್ರಿಕಾರಕ ಕೆಲಸ ಮಾಡಿದ್ದೇವೆ. ಮೋದಿಗೆ ಹ್ರಾಟ್ರಿಕ್ ಎಲೆಕ್ಷನ್ ನಡೆಯುತ್ತಿದೆ. ಅವರ ನಾಯಕತ್ವದಲ್ಲಿ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಯಡಿಯೂರಪ್ಪ ಜೊತೆ ಮಾತಾಡಿದ್ದೇನೆ. ರಾಜಕೀಯದಲ್ಲೂ ನಾನು ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು. ಇಡೀ ನಾಡಿಗೆ ಗೊತ್ತಿರುವಂತೆ ಡಾ. ಮಂಜುನಾಥ್ ಲಕ್ಷಾಂತರ ಜನರ ಪ್ರಾಣ ಉಳಿಸಿದ್ಧಾರೆ. ಅವರು ಬಿಜೆಪಿ ಸೇರ್ಪಡೆ ಆಗಲಿದ್ದು, ಇಂತಹವರನ್ನ ಅವಿರೋಧವಾಗಿ ಗೆಲ್ಲಿಸಿಕೊಡಬೇಕಿತ್ತು. ಆದರೆ ಚುನಾವಣಾ ರಾಜಕೀಯ ಅನಿವಾರ್ಯ. ಅವರ ಪಕ್ಷ ಸೇರ್ಪಡೆ ಬಗ್ಗೆ ಮೋದಿ ಅವರಿಗೂ ಮಾಹಿತಿ ನೀಡಿದ್ದೆವು. ಅವರು ಕೂಡ ಬಹಳ ಸಂತೋಷಪಟ್ಟರು ಎಂದಿದ್ದಾರೆ. ನಮ್ಮತುಮಕೂರಿನ ಕ್ಷಣ…

Read More

ಬೆಂಗಳೂರು: ಸ್ನೇಹಿತೆಯನ್ನು ಬೀಳ್ಕೊಡಲು ನಕಲಿ ಟಿಕೆಟ್‍ನೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ್ದ ಯುವಕನನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಬಂಧಿಸಿರುವುದಾಗಿ ವರದಿ ತಿಳಿಸಿದೆ. ಜಾರ್ಖಂಡ್ ಮೂಲದ ಪ್ರಖರ್ ಶ್ರೀವಾಸ್ತವ(24 ವರ್ಷ) ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ಪ್ರಖರ್ ಶ್ರೀವಾಸ್ತವನ ಸ್ನೇಹಿತೆ ಬೆಂಗಳೂರಿನಿಂದ ಹೊಸದಿಲ್ಲಿಗೆ ವಿಮಾನ ಮೂಲಕ ಪ್ರಯಾಣ ಬೆಳೆಸಲು ನಗರದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಸ್ನೇಹಿತೆಯನ್ನು ಕಳುಹಿಸಲು ಪ್ರಖರ್ ಶ್ರೀವಾಸ್ತವ, ಪ್ರಯಾಣದ ನಕಲಿ ಟಿಕೆಟ್ ತಯಾರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ ಎನ್ನಲಾಗಿದೆ. ನಕಲಿ ಟಿಕೆಟ್ ತೋರಿಸಿ, ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ್ದಾನೆ. ಆದರೆ ವಿಮಾನದಲ್ಲಿ ಪ್ರಯಾಣಿಸದೆ, ಸ್ನೇಹಿತೆಯನ್ನು ಕಳುಹಿಸಿ ವಾಪಸ್ ಹಿಂತಿಗಿದ್ದಾನೆ. ಆಗ ಗೇಟ್ ನಂ.9ರ ಭದ್ರತಾ ಸಿಬ್ಬಂದಿ ಪ್ರಶ್ನಿಸಿದಾಗ, ನನಗೆ ತುರ್ತು ಕರೆ ಬಂದಿದೆ, ಹೀಗಾಗಿ ಮರಳಿ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಅನುಮಾನಗೊಂಡ ಭದ್ರತಾ ಸಿಬ್ಬಂದಿ ಪ್ರಖರ್ ನ ಪ್ರಯಾಣದ ಟಿಕೆಟ್ ಅನ್ನು ಮತ್ತೊಮ್ಮೆ ಪರಿಶೀಲಿಸಿದಾಗ ನಕಲಿ ಎಂಬುವುದು ತಿಳಿದು ಬಂದಿದೆ ಎನ್ನಲಾಗಿದೆ. ಕೂಡಲೆ ಪ್ರಖರ್ ಶ್ರೀವಾಸ್ತವನನ್ನು…

Read More