Subscribe to Updates
Get the latest creative news from FooBar about art, design and business.
- ಇ–ಪೌತಿ ಖಾತಾ ಆಂದೋಲನ–2 : ರೈತರಿಂದ ಅರ್ಜಿಗಳ ಸ್ವೀಕಾರ — ಬಾಕಿ ಆರ್ ಆರ್ ಟಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ
- ನೀಟ್ ಮರು ಪರೀಕ್ಷೆ ; ಕಟ್ಟುನಿಟ್ಟಿನ ಸಿದ್ಧತೆಗೆ ಎಡಿಸಿ ಸೂಚನೆ
- ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ
- ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ
- ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
- ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ
- ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು
- ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ
Author: admin
ಕೊರಟಗೆರೆ: ನಾಯಿ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ, ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಪಟ್ಟಣದ 4ನೇ ವಾರ್ಡ್, ಕಾವಲುಬೀಳು ಗ್ರಾಮದ ನಿವಾಸಿ ರಮೇಶ್ ಎಂಬುವರ ಸಾಕುನಾಯಿ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿತ್ತು, ಇದರಿಂದ ಸಾರ್ವಜನಿಕರು ಭಯಬೀತರಾಗಿದ್ದರು, ತಕ್ಷಣ ಅರಣ್ಯ ಇಲಾಖೆ ಸೂಕ್ತಕ್ರಮವಹಿಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 2 ವರ್ಷದ ಚಿರತೆ ಮರಿ ಬೋನಿಗೆ ಬಿದ್ದು ಘರ್ಜಿಸುತ್ತಿದ್ದು, ಪಟ್ಟಣದ ಜನತೆ ಚಿರತೆ ನೋಡಲು ದೌಡಾಯಿಸಿ ಮುಗಿಬಿದ್ದದ್ದು ಕಂಡು ಬಂದಿತು. ಹಿರೇಬೆಟ್ಟ ರಕ್ಷಿತ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಉಪಟಳ ಹೆಚ್ಚುಗುತ್ತಿರುವುದರ ಬಗ್ಗೆ ಗಮನಹರಿಸಿದ ಅರಣ್ಯ ಇಲಾಖೆ ತಕ್ಷಣ ಕ್ರಮವಹಿಸಿರುವುದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ವಿಷಯ ತಿಳಿದ ತಕ್ಷಣ ಡಿಆರ್ ಎಫ್ ಓ ದಿಲೀಪ್ ಸೇರಿದಂತೆ ಸಿಬ್ಬಂದಿಗಳ ಸ್ಥಳಕ್ಕೆ ಬಂದು ಚಿರತೆ ಬೇರೆಡೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ತುಮಕೂರು: ಜಿಲ್ಲೆಯ ಪ್ರಭಾವಿ ನಾಯಕ ರಾಜಣ್ಣ ಅವರಿಗೆ ಮತ್ತೆ ಮಂತ್ರಿ ಸ್ಥಾನ ಸಿಗುವ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ತುಮಕೂರಿಗೆ ಭೇಟಿ ನೀಡಿದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎನ್.ರಾಜಣ್ಣ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ರಾಜಣ್ಣ ಅವರ ಬಗ್ಗೆ ಆಡಿದ ಮಾತುಗಳು ಈಗ ಕುತೂಹಲ ಮೂಡಿಸಿವೆ. ರಾಜಣ್ಣ ಅವರಿಗೆ ಸಿಹಿ ಸುದ್ದಿ: ರಾಜಣ್ಣ ಅವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, “ರಾಜಣ್ಣ ಅವರ ಜೊತೆ ಯಾವಾಗಲೂ ಸಿಹಿ ಸುದ್ದಿಯೇ ಇರುತ್ತದೆ” ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಹೈಕಮಾಂಡ್ ಜೊತೆ ಚರ್ಚೆ: ರಾಜಣ್ಣ ಅವರಿಗೆ ತಮ್ಮ ಅವಧಿಯಲ್ಲೇ ಮಂತ್ರಿ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಈ ವಿಚಾರವಾಗಿ ನಾನು ಹೈಕಮಾಂಡ್ ನಾಯಕರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಊಟದ ವೈವಿಧ್ಯತೆ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಟಿ ಶೈಲಿಯ ಊಟದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ತಮಗೆ ಜ್ವರವಿದ್ದ ಕಾರಣ ಬಾಯಿ ಕೆಟ್ಟಿತ್ತು,…
ವೈ.ಎನ್.ಹೊಸಕೋಟೆ: ಹಣಕಾಸಿನ ವಿಚಾರದಲ್ಲಿ ಉಂಟಾದ ಕ್ಷುಲ್ಲಕ ಜಗಳದಿಂದ ಮಹಿಳೆಯ ಪ್ರಾಣಕ್ಕೆ ಕುತ್ತು ತಂದ ಘಟನೆ ಹೋಬಳಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಹನುಮಕ್ಕ (45) ಎಂಬಾಕೆ ತನ್ನ ಗಂಡ ಕಾಣೆಯಾಗಿದ್ದು, ಅಂದಿನಿಂದ ಚಿಕ್ಕಹಳ್ಳಿಯಲ್ಲಿ ಇಂದ್ರಬೆಟ್ಟ ಗ್ರಾಮದ ಚನ್ನಕೇಶವ (55) ಎಂಬುವರ ಜೊತೆ ವಾಸಿಸುತ್ತಿದ್ದರು. ಬುಧವಾರ ಸಂಜೆ ಇವರಿಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ತಲೆಗೆ ಬಿದ್ದಿರುವ ಕಟ್ಟಿಗೆ ಏಟಿನಿಂದ ಹನುಮಕ್ಕ ಸ್ಥಳದಲ್ಲೇ ಮರಣ ಹೊಂದಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಕೊಲೆ ಆರೋಪಿ ಸೆರೆಗೆ ಕ್ರಮಕೈಗೊಳ್ಳಲಾಗಿದೆ. ನಮ್ಮತುಮಕೂರಿನಕ್ಷಣಕ್ಷಣದಸುದ್ದಿಗಳನ್ನುನಿರಂತರವಾಗಿಪಡೆಯಲುನಿಮ್ಮವಾಟ್ಸಾಪ್ಗ್ರೂಪ್ಗೆ 8123382149 ಸಂಖ್ಯೆಯನ್ನುಸೇರಿಸಿ. ಗ್ರೂಪ್ಗೆಜಾಯಿನ್ಆಗಿ: https://chat.whatsapp.com/ISmeQjik4LbG9KvWhKlbCC
ಕುಣಿಗಲ್/ಕೆ.ಜಿ.ದೇವಪಟ್ಟಣ: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಜಿ. ದೇವಪಟ್ಟಣದ (ಹಂಗರಹಳ್ಳಿ) ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ ನಾಳೆ (ಜನವರಿ 17) ಅದ್ದೂರಿ ‘ವರ್ಧಂತಿ ಮಹೋತ್ಸವ’ ಜರುಗಲಿದ್ದು, ಕಾರ್ಯಕ್ರಮದ ಅಂಗವಾಗಿ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಆಶೀರ್ವಾದ ಪಡೆಯಲಾಗಿದೆ. ಶೃಂಗೇರಿ ಶ್ರೀಗಳ ಅನುಗ್ರಹ: ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಪ್ರಯುಕ್ತ, ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ ಶ್ರೀ ಬಾಲ ಮಂಜುನಾಥ ಸ್ವಾಮೀಜಿರವರು ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರಿಗೆ ಆಮಂತ್ರಣ ಪತ್ರಿಕೆ ಸಮರ್ಪಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಗದ್ಗುರುಗಳು ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರಿಗೆ ಶ್ರೀ ಮಠದ ವತಿಯಿಂದ ಪವಿತ್ರ ವಸ್ತ್ರವನ್ನು ಸಮರ್ಪಣೆ ಮಾಡಿ, ಕಾರ್ಯಕ್ರಮ ಯಶಸ್ವಿಯಾಗಲೆಂದು ಹರಸಿದರು. ಧಾರ್ಮಿಕ ಕಾರ್ಯಕ್ರಮಗಳ ವಿವರ: ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ ಜ. 07 ರಿಂದ ಜ. 17 ರವರೆಗೆ ಪ್ರತಿದಿನ…
ತುಮಕೂರು: ವ್ಯಕ್ತಿಯೊಬ್ಬರನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಶಿರಾ ತಾಲ್ಲೂಕಿನ ಮಾರನಗೆರೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನಿತಿನ್ ತುಳಸಿರಾಮ್ (40) ಎಂದು ಗುರುತಿಸಲಾಗಿದೆ. ನಿತಿನ್ ತುಳಸಿರಾಮ್ ಅವರ ಪತ್ನಿ ಯಶೋಧ ಅವರ ಮೊದಲ ಗಂಡನ ಮಗ ಹರೀಶ್ ಕೊಲೆಗೈದಿರುವ ಆರೋಪಿ. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಾಚಿ ಸಾಗರ್ ಘಡ್ ಗ್ರಾಮದ ನಿತಿನ್ ಶಿರಾ ತಾಲ್ಲೂಕಿನ ಮಾರನಗೆರೆಯಲ್ಲಿ ಮೂರು ವರ್ಷಗಳಿಂದ ಇದ್ದಿಲು ಸುಡುವ ಕೆಲಸ ಮಾಡಿಕೊಂಡಿದ್ದರು. ನಿತಿನ್ ಯಶೋಧ ಎಂಬುವವರನ್ನು ಎರಡನೇ ಮದುವೆಯಾಗಿದ್ದರು. ಯಶೋಧ ಮೊದಲ ಗಂಡ ರಾಮ್ ವಸಂತ್ ನಾಯ್ಕ ಮೃತಪಟ್ಟ ನಂತರ ಎರಡನೇ ಮದುವೆಯಾಗಿದ್ದು, ಮೊದಲ ಗಂಡನಿಂದ ನರೇಶ್ ಮತ್ತು ಹರೀಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ರೇಷನ್ ವಿಚಾರವಾಗಿ ಜಗಳ ಪ್ರಾರಂಭವಾಗಿ ಹೊಡೆದಾಟದ ಹಂತಕ್ಕೆ ಹೋಗಿದೆ. ಆಗ ಯಶೋದಳ ಮೊದಲ ಗಂಡನ ಮಗ ಹರೀಶ್ ನಮ್ಮ ತಂದೆ ಸತ್ತ ನಂತರ ತಾಯಿಯನ್ನು ಕರೆದುಕೊಂಡು ಬಂದು ಮದುವೆಯಾಗಿದ್ದಲ್ಲದೆ, ಹೊಡೆಯುತ್ತೀಯಾ ಎಂದು ನಿತಿನ್ ಮೇಲೆ ಜಗಳ ತೆಗೆದು ತಕ್ಷಣ ಕೊಡಲಿಯಿಂದ ಹೊಟ್ಟೆಯ ಭಾಗಕ್ಕೆ…
ತುಮಕೂರು: ಮಹಾನಗರಪಾಲಿಕೆಯ 2026–27ನೇ ಸಾಲಿನ ಆಯವ್ಯಯವನ್ನು ಸಿದ್ಧಪಡಿಸುವ ಕುರಿತು ಸಲಹೆ ಸೂಚನೆ ನೀಡಲು ಜನವರಿ 20ರಂದು ಬೆಳಗ್ಗೆ 11.30 ಗಂಟೆಗೆ ಮಹಾನಗರಪಾಲಿಕೆ ಹೊಸ ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಸಭೆಗೆ ಮಹಾನಗರಪಾಲಿಕೆ ವ್ಯಾಪ್ತಿಯ ಸಂಘ ಸಂಸ್ಥೆಗಳ ಪದಾಧಿಕಾರಿ, ಹೋಟೆಲ್ ಅಸೋಸಿಯೇಷನ್, ಛತ್ರಗಳ ಮಾಲೀಕರ ಸಂಘ, ಸಿನಿಮಾ ಮಂದಿರಗಳ ಮಾಲೀಕರ ಸಂಘ, ಶಿಕ್ಷಣ ಸಂಸ್ಥೆಯ ಸಂಘ, ನರ್ಸಿಂಗ್ ಹೋಮ್ಸ್ ಸಂಘಗಳ ಪದಾಧಿಕಾರಿಗಳು, ವಕೀಲರ ಅಸೋಸಿಯೇಷನ್, ನಾಗರಿಕ ಹಿತರಕ್ಷಣಾ ಸೇವಾ ಸಮಿತಿ, ಸರ್ಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಅಮೂಲ್ಯವಾದ ಸಲಹೆಗಳನ್ನು ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನಕ್ಷಣಕ್ಷಣದಸುದ್ದಿಗಳನ್ನುನಿರಂತರವಾಗಿಪಡೆಯಲುನಿಮ್ಮವಾಟ್ಸಾಪ್ಗ್ರೂಪ್ಗೆ 8123382149 ಸಂಖ್ಯೆಯನ್ನುಸೇರಿಸಿ. ಗ್ರೂಪ್ಗೆಜಾಯಿನ್ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಶಾಮಿಯಾನ ಮತ್ತು ಫ್ಲವರ್ ಡೆಕೋರೇಷನ್ ಅಂಗಡಿಯ ಮಾಲೀಕನಿಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದ ಪ್ರಕರಣವನ್ನು ಭೇದಿಸಿರುವ ಜಿಲ್ಲೆಯ ಪೊಲೀಸರು ನಾಲ್ವರು ಅಂತರಾಜ್ಯ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಕೆ.ವಿ.ಅಶೋಕ್ ಅವರು ತಮಿಳುನಾಡಿನ ಹೊಸೂರು ಬತ್ತಲಪಲ್ಲಿಯ ಸತೀಶ್ ಕುಮಾರ್ (40), ಸೇಲಂ ತಾಲೂಕಿನ ಕಡತ್ತೂರು ಗ್ರಾಮದ ಕೇಶವನ್ (43), ಸೋಲಂದಡಿ ತಾಲೂಕಿನ ದಿಂಡಲೋನ ಕವಿತೇಶ್ವರನ್ ಹಾಗೂ ದಿಂಡಗಲ್ ಜಿಲ್ಲೆಯ ಅರುಣ್ ಪ್ರಶಾಂತ್ (26) ಎಂಬುವರೇ ಬಂಧಿತ ಆರೋಪಿಗಳಾಗಿದ್ದು, ತಿಪಟೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿ, ಸಿರಾ, ಹಂದನಕೆರೆ, ತುಮಕೂರಿನ ಜಯನಗರ ಪೊಲೀಸರು ಹಾಗೂ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳ ಸಹಕಾರದೊಂದಿಗೆ ಆರೋಪಿಗಳನ್ನು ಸೆರೆಹಿಡಿದಿರುವುದಾಗಿ ತಿಳಿಸಿದರು. ಕೊಲೆಯಾದ ಮಂಜುನಾಥ್ ಅವರ ಸಹೋದರ, ಕೃತ್ಯ ನಡೆದ ದಿನ ರಾತ್ರಿಯೇ ಹುಳಿಯಾರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಅಡಿಷನಲ್ ಎಸ್ಪಿಗಳಾದ ಪುರುಷೋತ್ತಮ್, ಗೋಪಾಲ್…
ಬೆಂಗಳೂರು: ಸಿಲಿಕಾನ್ ಸಿಟಿಯ ಜನನಿಬಿಡ ರಸ್ತೆಯೊಂದರಲ್ಲಿ ಭೀಕರ ಘಟನೆಯೊಂದು ಸಂಭವಿಸಿದ್ದು, 55 ವರ್ಷದ ಮಹಿಳೆಯನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಘಟನೆಯ ವಿವರ: ಕೊಲೆಯಾದ ಮಹಿಳೆಯನ್ನು ದ್ರಾಕ್ಷಾಯಿಣಿ (55) ಎಂದು ಗುರುತಿಸಲಾಗಿದೆ. ಈ ಘಟನೆಯು ಬೆಂಗಳೂರು ಉತ್ತರದ ಕುದುರೆಗೆರೆ ಗ್ರಾಮದ ಬಳಿ ನಡೆದಿದೆ. ದ್ರಾಕ್ಷಾಯಿಣಿ ಅವರು ತಮ್ಮ ಮೊಮ್ಮಗನ ಶಾಲೆಗೆ ಮಧ್ಯಾಹ್ನದ ಊಟವನ್ನು ನೀಡಿ ವಾಪಸ್ ಮನೆಗೆ ಮರಳುತ್ತಿದ್ದಾಗ ಈ ದಾಳಿ ನಡೆದಿದೆ. ನಡೆದಿದ್ದೇನು? ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿ, ಏಕಾಏಕಿ ಆಕೆಯನ್ನು ಅಡ್ಡಗಟ್ಟಿದ್ದಾನೆ. ಯಾವುದೇ ಮುನ್ಸೂಚನೆ ಇಲ್ಲದೆ ಮಚ್ಚಿನಿಂದ ಆಕೆಯ ಕತ್ತಿನ ಭಾಗಕ್ಕೆ ಬಲವಾಗಿ ಏಟು ನೀಡಿದ್ದಾನೆ. ದಾಳಿಯ ತೀವ್ರತೆಗೆ ಮಹಿಳೆ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಮಚ್ಚನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕುಟುಂಬದ ಶಂಕೆ: ಈ ಕೊಲೆಯು ಪೂರ್ವಯೋಜಿತ ಎಂದು ಹೇಳಲಾಗುತ್ತಿದೆ. ಮೃತ ಮಹಿಳೆಯ ಕುಟುಂಬದವರು ತಮ್ಮ ಸಂಬಂಧಿಕರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯನ್ನು…
ಧಾರವಾಡ: ಪತ್ನಿಯ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಯೊಬ್ಬರು ಜೈಲಿನ ಆವರಣದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಮೃತರ ವಿವರ: ಮೃತರನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಬಸಾಪುರ ಗ್ರಾಮದ ಈಶ್ವರಪ್ಪ ಪೂಜಾರ್ ಎಂದು ಗುರುತಿಸಲಾಗಿದೆ. ಪತ್ನಿಯ ಕೊಲೆ ಪ್ರಕರಣದಲ್ಲಿ ಈತನಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಕಳೆದ ಏಳು ವರ್ಷಗಳಿಂದ ಈಶ್ವರಪ್ಪ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಘಟನೆ ಹಿನ್ನೆಲೆ: ಜೈಲಿನ ಆವರಣದಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಈಶ್ವರಪ್ಪ ನೇಣು ಬಿಗಿದುಕೊಂಡಿದ್ದಾರೆ. ಕೆಲಸ ಮುಗಿದ ನಂತರ ಎಲ್ಲ ಕೈದಿಗಳು ತಮ್ಮ ಸೆಲ್‌ಗಳಿಗೆ ಮರಳಿದ್ದರು. ಆದರೆ, ಈಶ್ವರಪ್ಪ ಹಿಂದಿರುಗಿರಲಿಲ್ಲ. ಇದರಿಂದ ಅನುಮಾನಗೊಂಡ ಜೈಲು ಸಿಬ್ಬಂದಿ ಹುಡುಕಾಟ ನಡೆಸಿದಾಗ, ನಿರ್ಮಾಣ ಹಂತದ ಕಟ್ಟಡದಲ್ಲಿ ಹಗ್ಗದ ಸಹಾಯದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತನಿಖೆ ಮತ್ತು ಕ್ರಮ: ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಧಾರವಾಡ ಉಪನಗರ ಪೊಲೀಸ್…
ಬೆಂಗಳೂರು: ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರೊಂದಿಗಿನ ಭೇಟಿಯ ಬಗ್ಗೆ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೆರೆ ಎಳೆದಿದ್ದಾರೆ. “ನನ್ನ ಮತ್ತು ರಾಹುಲ್ ಗಾಂಧಿ ಅವರ ಭೇಟಿಯ ಬಗ್ಗೆ ಯಾರೂ ಹೆಚ್ಚಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಉಂಟಾದ ಕುತೂಹಲಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಪಕ್ಷದ ನಾಯಕರನ್ನು ಭೇಟಿಯಾಗುವುದು ಮತ್ತು ರಾಜಕೀಯ ವಿಚಾರಗಳನ್ನು ಚರ್ಚಿಸುವುದು ಒಂದು ಸಾಮಾನ್ಯ ಪ್ರಕ್ರಿಯೆ. ನಮ್ಮ ನಡುವೆ ನಡೆದ ಚರ್ಚೆಯ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ಅದು ನಮಗೆ ಸಂಬಂಧಿಸಿದ ವಿಚಾರ ಎಂದು ತಿಳಿಸಿದರು. ಮತ್ತೆ ಗೂಡಾರ್ಥದ ಪೋಸ್ಟ್: ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ. “ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆಗಳು ವಿಫಲವಾಗುವುದಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ. ಈ ಮಾತುಗಳು ರಾಜ್ಯ ರಾಜಕೀಯದಲ್ಲಿ, ವಿಶೇಷವಾಗಿ ಮುಖ್ಯಮಂತ್ರಿ ಸ್ಥಾನದ ಪೈಪೋಟಿಯ ಹಿನ್ನೆಲೆಯಲ್ಲಿ ಹಲವು…