Subscribe to Updates
Get the latest creative news from FooBar about art, design and business.
- ಹಸಿರು ಶಾಲು ರೈತರಿಗೆ ನ್ಯಾಯ ಕೊಡಿಸುವ ಅಸ್ತ್ರ: ಇಂದುವಾಳು ಚಂದ್ರಶೇಖರ್
- ತುಮಕೂರು: ಜು.12: ಕರ್ನಾಟಕ ವಿಕಾಸ ರಂಗದಿಂದ ಶಾಸ್ತ್ರೀಯ ಸಂಗೀತೋತ್ಸವ
- ಮಂಗಳಮುಖಿ ವೇಷ ಧರಿಸಿ ದಂಧೆ ನಡೆಸ್ತಿದ್ದ ನಟೋರಿಯಸ್ ಪಿಂಪ್ ಪೊಲೀಸರ ವಶಕ್ಕೆ
- ಹೆಲ್ತ್ ಇನ್ಸ್’ಪೆಕ್ಟರ್ ನಿಗೂಢ ಸಾವು: ಅರೆಬರೆ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ, ಕೊಲೆ ಶಂಕೆ!
- ತುಮಕೂರು: ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ
- ಬುದ್ಧನ ಕಾರುಣ್ಯ ಅಳವಡಿಸಿಕೊಂಡವರು ಯಶಸ್ಸನ್ನು ಕಾಣುತ್ತಾರೆ: ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್
- ಪಿಓಎಸ್ ಮಾರಾಟ ವ್ಯವಸ್ಥೆ ಮುಂದುವರೆಸಿ: ಜಿಲ್ಲಾಧಿಕಾರಿಗೆ ಕೃಷಿ ಪರಿಕರ ಮಾರಾಟಗಾರರ ಸಂಘದಿಂದ ಮನವಿ
- ಸರಗೂರು: ಬಾಬು ಜಗಜೀವನ್ ರಾಮ್ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು: ಕುರ್ಣೇಗಾಲ ಬೆಟ್ಟಸ್ವಾಮಿ ಕರೆ
Author: admin
ಟಿಡಿಪಿ ಅಧ್ಯಕ್ಷ ಹಾಗೂ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ. ಆಂಧ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ಬಂಧನ ನಡೆದಿದೆ. ಇಂದು ಬೆಳಗ್ಗೆ ಅವರನ್ನು ಬಂಧಿಸಲಾಗಿದೆ. ಜಾಮೀನು ರಹಿತ ಸೆಕ್ಷನ್ ಗಳನ್ನು ವಿಧಿಸಲಾಗಿದೆ. 250 ಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗಿದೆ. ಬಂಧನದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚಂದ್ರಬಾಬು ನಾಯ್ಡು, ಬಂಧನದ ಬಗ್ಗೆ ನನಗೆ ಗೊತ್ತಿಲ್ಲ. ನಾಯ್ಡು ಅವರನ್ನು ಆಂಧ್ರದ ನಂತ್ಯಾಲ್ ನಲ್ಲಿ ಆಂಧ್ರ ಪೊಲೀಸರ ಸಿಐಡಿ ವಿಭಾಗ ಬಂಧಿಸಿದೆ. ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್ ವೇರ್ ಆಫ್ ಇಂಡಿಯಾ ಎಂಬ ಕಂಪನಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕೋಟಿ ಕೋಟಿ ವಂಚಿಸಿದ ಪ್ರಕರಣ ಇದಾಗಿದೆ. 2014ರಲ್ಲಿ ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಆಂಧ್ರ ಸರ್ಕಾರ ಈ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಉಭಯ ಪಕ್ಷಗಳ ವರಿಷ್ಠರ ಜೊತೆ ಮಾತುಕತೆ ನಡೆದಿದೆ. ನಮ್ಮ ವರಿಷ್ಠರ ಜೊತೆ ಜೆಡಿಎಸ್ ವರಿಷ್ಠರು ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ. ಜೆಡಿಎಸ್ ಗೆ ನಾಲ್ಕು ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆದಿದೆ. ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಮತ್ತಷ್ಟು ಶಕ್ತಿ ಬರಲಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 26 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಹುಬ್ಬಳ್ಳಿ: ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಜೆಡಿಎಸ್ ಮತ್ತು ಬಿಜೆಪಿಗೆ ಬಿಟ್ಟ ವಿಚಾರ. ಹಿಂದೆಯೂ ಮೈತ್ರಿ ಮಾಡಿಕೊಂಡಿದ್ದಾರೆ ಅಂದರು. ನಂತರ ಅದಕ್ಕೆ ಬ್ರೇಕ್ ಆಯ್ತು. ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ಪರಸ್ಪರ ಫೈಟ್ ಮಾಡಿದ್ದರು. ಈಗ ಮತ್ತೆ ಮೈತ್ರಿ ವಿಚಾರ ಮಾತಾಡುತ್ತಿದ್ದಾರೆ. ಅನುಕೂಲವಿದ್ದಾಗ ಮೈತ್ರಿ ಮಾಡಿಕೊಳ್ಳುವುದು, ಅನಾನುಕೂಲವಾದಾಗ ಮೈತ್ರಿಯಿಂದ ಹಿಂದೆ ಸರಿಯುವುದು. ಈ ರೀತಿ ಮಾಡಿದಾಗ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ ಆಯಾ ಪಕ್ಷಗಳ ಕ್ರೆಡಿಬಿಲಿಟಿ ಸಹ ಹೋಗುತ್ತೆ ಎಂದರು.
ರಾಯಚೂರು: ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ಸಂಬಂಧಿಸಿದಂತೆ ಮೊಘಲರು, ಔರಂಗಜೇಬ್ ಸೇರಿ ಅನೇಕರು ದಾಳಿ ಮಾಡಿದ್ದಾರೆ. ಅವರಿಂದಲೇ ನಮ್ಮ ಭಾರತವನ್ನು ಇಸ್ಲಾಮೀಕರಣ ಮಾಡಲಾಗಿಲ್ಲ. ಸನಾತನ ಧರ್ಮದ ಬಗ್ಗೆ ಮಾತಾಡಿದವರಿಗೆ ಕುಷ್ಠ ರೋಗ ಮತ್ತು ಏಡ್ಸ್ ಹತ್ತಿದೆ. ಯಾರೋ ಒಬ್ಬ ಸಚಿವ ಸನಾತನ ಧರ್ಮದ ಹುಟ್ಟು ಎಲ್ಲಿ ಅಂತಾನೆ. ಆ ಮಂತ್ರಿ ಯಾರಿಗೆ ಹುಟ್ಟಿದ್ದಾರೆ ಅವರಿಗೆ ಗೊತ್ತಿಲ್ಲ ಎಂದು ರಾಯಚೂರಿನಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವಾಗ್ದಾಳಿ ಮಾಡಿದರು.
ಹೆಚ್.ಡಿ.ಕೋಟೆ: ತಾಲ್ಲೂಕಿನ ಬೂದನೂರು ಗಣಿಶೆಡ್ಡು, ಕೆ.ಜಿ.ಹುಂಡಿ ಗ್ರಾಮಗಳಿಗೆ ನೂತನವಾಗಿ ಕೆಎಸ್ ಆರ್ ಟಿ ಸಿ ವತಿಯಿಂದ ಬಸ್ ಸಂಪರ್ಕವನ್ನು ಕಲ್ಪಿಸಲಾಯಿತು. ಗಣಿಶಡ್ಡು ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಟೇಪ್ ಕತ್ತರಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಹೆಚ್.ಡಿ.ಕೋಟೆ ಪೊಲೀಸ್ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ಹಾಗೂ ಘಟಕ ವ್ಯವಸ್ಥಾಪಕ ತ್ಯಾಗರಾಜು ಚಾಲನೆ ನೀಡಿದರು. ನಂತರ ಮಾತನಾಡಿದ ಹೆಚ್.ಡಿ.ಕೋಟೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ತ್ಯಾಗರಾಜು, ಬಹುದಿನಗಳಿಂದ ನಮ್ಮ ಗ್ರಾಮಕ್ಕೆ ಬಸ್ ಸಂಪರ್ಕವನ್ನು ಕಲ್ಪಿಸಿ ಕೊಡಿಎಂದು ಬೂದನೂರು ಗಣಿಶೆಡ್ಡು, ಕೆ.ಜಿ.ಹಳ್ಳಿ ಗ್ರಾಮಸ್ಥರು ಮನವಿ ಮಾಡಿದರು. ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಹಾಗೂ ನಮ್ಮ ಮೇಲಾಧಿಕಾರಿಗಳ ಸಹಕಾರದಿಂದ ಇಂದು ಸಂಪರ್ಕವನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು ಚಾಲಕ ಮತ್ತು ನಿರ್ವಾಹಕರ ಜೊತೆಯಲ್ಲಿ ಉತ್ತಮ ರೀತಿಯಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಜನಪ್ರತಿನಿಧಿಗಳು ಮತ್ತು ಮುಖಂಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ಘಟಕ ವ್ಯವಸ್ಥಾಪಕ ತ್ಯಾಗರಾಜ್ ರನ್ನು…
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ನಾನು ಹೇಳಿರುವ ಹೇಳಿಕೆ ಬಗ್ಗೆ ಮಾತನಾಡಿಲ್ಲ. ಬದಲಾಗಿ ಅವರು ಸನಾತನ ಧರ್ಮದ ವಿಚಾರವಾಗಿ ಮಾತನಾಡಿದ್ದಾರೆ ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸನಾತನ ಧರ್ಮದ ಬಗ್ಗೆ ಮಾತನಾಡಿಲ್ಲ. ಬೇರೆಯವರು ಏನು ವಿಶ್ಲೇಷಣೆ ಮಾಡುತ್ತಾರೆ ಅದಕ್ಕೆಲ್ಲ ಉತ್ತರ ಕೊಡಲ್ಲ. ನಾನು ಸಮಯ ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಎಂದರು. ಧರ್ಮದ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ ಅಷ್ಟೆ. ಯಾರು ಏನು ಬೇಕಾದರೂ ವಿಶ್ಲೇಷಣೆ ಮಾಡಲಿ. ಅವರು ಹಾಗೆ ಮಾತನಾಡುತ್ತಾರೆ, ಹೀಗೆ ಮಾತನಾಡುತ್ತಾರೆ ಅಂದರೆ ನಾನು ಉತ್ತರ ಕೊಡಲ್ಲ. ಮೋದಿ ಅವರು ನಾನು ಹೇಳಿರುವ ಹೇಳಿಕೆ ಬಗ್ಗೆ ಮಾತನಾಡಿಲ್ಲ. ಸನಾತನ ಧರ್ಮದ ವಿಚಾರವಾಗಿ ಮಾತನಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿಯವರು ಹೋರಾಟ ಮಾಡಲಿ. ನಾವು ಉತ್ತರ ಕೊಡುತ್ತೇವೆ. ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನ ಉತ್ತರ ಕೊಡುತ್ತಾರೆ. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ.…
ಖ್ಯಾತ ವ್ಯಂಗ್ಯ ಚಿತ್ರಕಾರ ಅಜಿತ್ ನೈನಾನ್ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಸಾವಿಗೆ ಹೃದಯಾಘಾತವೇ ಕಾರಣ ಎಂದು ಕುಟುಂಬದವರು ತಿಳಿಸಿದ್ದಾರೆ. ಇಂಡಿಯಾ ಟುಡೇ ಮ್ಯಾಗಜೀನ್ ನಲ್ಲಿನ ಕಾರ್ಟೂನ್ ಸರಣಿ ‘ಸೆಂಟ್ರೆಸ್ಟೇಜ್’ ಮತ್ತು ಟೈಮ್ಸ್ ಆಫ್ ಇಂಡಿಯಾದಲ್ಲಿ ‘ನಿನಾನ್ಸ್ ವರ್ಲ್ಡ್’ ಗಾಗಿ ಅವರು ಪ್ರಸಿದ್ಧರಾಗಿದ್ದರು. ಮಕ್ಕಳ ನಿಯತಕಾಲಿಕೆ ಟಾರ್ಗೆಟ್ ನಲ್ಲಿನ ‘ಡಿಟೆಕ್ಟಿವ್ ಮೂಚ್ ವಾಲಾ’ ಅವರ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಔಟ್ ಲುಕ್ ನಲ್ಲಿ ಕೆಲಸ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಎಲ್ಲಾ ಆವೃತ್ತಿಗಳಲ್ಲಿ ಅವರ ಕಾರ್ಟೂನ್ ಅಂಕಣಗಳು ಕಾಣಿಸಿಕೊಂಡವು. ಅವುಗಳೆಂದರೆ ಜಸ್ಟ್ ಲೈಕ್ ದಟ್ (ಡೈಲಿ), ಲೈಕ್ ದಟ್ ಓನ್ಲಿ (ಪೈವೀಕ್ಲಿ), ಸಿಇಒ ಟೂನ್ಸ್ (ಡೈಲಿ) ಮತ್ತು ಎಂಡ್ – ಕ್ರೆಸ್ಟ್ (ಸಾಪ್ತಾಹಿಕ). ಅವರು ಮೇ 15, 1955 ರಂದು ಹೈದರಾಬಾದ್ ನಲ್ಲಿ ಎ.ಎಮ್ ಮ್ಯಾಥ್ಯೂ ಮತ್ತು ಆನಿ ಮ್ಯಾಥ್ಯೂಗೆ ಜನಿಸಿದರು. ಇವರು ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಅಬು ಅಬ್ರಹಾಂ…
ಜೈಪುರದಲ್ಲಿ ಪಟಾಕಿ ಸದ್ದು ಕೇಳಿದ ವಿದೇಶಿ ಪ್ರವಾಸಿ ಹೋಟೆಲ್ ನ ಎರಡನೇ ಮಹಡಿಯಿಂದ ಜಿಗಿದಿದ್ದಾನೆ. ಜೈಪುರದ ಜವಾಹರ್ ವೃತ್ತದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. 33 ವರ್ಷದ ನಾರ್ವೇಜಿಯನ್ ಫಿನ್ ವೆಟೆಲಿನ್ ಅವರ ಒಂದು ಕೈ ಮತ್ತು ಎರಡೂ ಕಾಲುಗಳು ಮುರಿದಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಜೈಪುರ ತಲುಪಿದ ಅವರು ನ್ಯೂ ಏರ್ ಪೋರ್ಟ್ ರೆಸಿಡೆನ್ಸಿ ಹೋಟೆಲ್ ನಲ್ಲಿ ಕೊಠಡಿ ಕಾಯ್ದಿರಿಸಿದ್ದಾರೆ. ಅಂದು ರಾತ್ರಿ, ಜನ್ಮಾಷ್ಟಮಿ ಆಚರಣೆಯ ಅಂಗವಾಗಿ, ಅವರು ಹತ್ತಿರದ ದೇವಸ್ಥಾನದಲ್ಲಿ ಪಟಾಕಿ ಸಿಡಿಸುವುದನ್ನು ಕೇಳಿ ಎರಡನೇ ಮಹಡಿಯಿಂದ ಕೆಳಗೆ ಹಾರಿದರು. ಬಿದ್ದ ರಭಸಕ್ಕೆ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಪಟಾಕಿ ಸಿಡಿಸುವ ವೇಳೆ ನಿದ್ದೆಯಲ್ಲಿದ್ದ ಯುವಕ, ಕೊಠಡಿಯಲ್ಲಿ ಯಾರೋ ಗುಂಡು ಹಾರಿಸಿದ ಸದ್ದು ಕೇಳಿದ ಅನುಭವವಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು: ಬಹಳ ದೊಡ್ಡ ದೊಡ್ಡ ಆಶ್ವಾಸನೆ ಕೊಟ್ಟು ಸರ್ಕಾರ ಅಧಿಕಾರಕ್ಕೆ ಬಂತು. ಇವರು ಅಕ್ಕಿ ಕೊಡುತ್ತಿರುವುದು ನರೇಂದ್ರ ಮೋದಿ ಅವರು ಕೊಡುತ್ತಿರುವ ಅಕ್ಕಿ. ಕರ್ನಾಟಕದಲ್ಲಿ ಗೃಹಲಕ್ಷಿ ಯೋಜನೆ ಬರುವಂತಹ ದಿನಗಳಲ್ಲಿ ಕಾಂಗ್ರೆಸ್ ಗೆ ಮುಳುವಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದರು. ಬೆಂಗಳೂರಿನ ಹೊರ ವಲಯದ ಅಧಿಕಾರಿ 8 ಕೋಟಿ ಕೊಟ್ಟಿದ್ದಾರೆ. ಅವರು ಬೇಡ ಅಂತ ಹೋದರೇ ಅದೇ ಜಾಗಕ್ಕೆ 13 ಕೋಟಿ ಪಡೆದು ನೇಮಕ ಮಾಡಿದ್ದಾರೆ. ಕುಮಾರ ಕೃಪಾದಲ್ಲಿ ದಂಧೆ ನಡೆಯುತ್ತಿದೆ. ಇವತ್ತು ಯಾವುದೇ ಅಧಿಕಾರಿ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಸಣ್ಣಪುಟ್ಟ ವಿಚಾರಕ್ಕೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ನಿಮ್ಮ ನಿಷ್ಟೆ ಕಾನೂನಿಗೆ ಇರಬೇಕು. ಕಾವೇರಿ ನದಿ ನೀರಿನ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರಿಗೆ ನೀರು ಹರಿಸದೇ ತಮಿಳುನಾಡಿಗೆ ಹರಿಸಿದೆ. ಒಂದು ಕಾಳು ಅಕ್ಕಿಯನ್ನೂ ನೀವು ಕೊಟ್ಟಿಲ್ಲ, ನೀವು ನೀಚರು ಎಂದು ವಾಗ್ದಾಳಿಮಾಡಿದರು.
ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ 98 ಅಡಿಗೆ ಕುಸಿತವಾಗಿದೆ. ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ 12 ಟಿಎಂಸಿ ನೀರು ಖಾಲಿಯಾಗಿದೆ. ಜಲಾಶಯದ ಹಿನ್ನೀರು ಪ್ರದೇಶ ಬಹುತೇಕ ಬರಡು ಭೂಮಿಯಂತಾಗಿದೆ. ತಮಿಳುನಾಡಿಗೆ ಮತ್ತಷ್ಟು ನೀರು ಹರಿಸಿದರೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತದೆ. ಬೆಳೆಗೆ ನೀರಿಲ್ಲದೆ ಆತಂಕದಲ್ಲಿರುವ ರೈತರು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.