Subscribe to Updates
Get the latest creative news from FooBar about art, design and business.
- ಮೇ 16ರಂದು ಚಿಕ್ಕನಾಯಕನಹಳ್ಳಿಯಲ್ಲಿ ‘ನಮಗೆ ಪ್ರೇರಣೆ ನಮ್ಮ ಮೇಷ್ಟ್ರು’ ಕಾರ್ಯಕ್ರಮ: ಶಿಕ್ಷಕರಿಗೆ ಗೌರವ ಸಮರ್ಪಣೆ
- ರಸಾಯನ ಹಂಚಿದಂತೆ ಎಸ್ಸಿ ಒಳಮೀಸಲು ಹಂಚಿಕೆ: ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ
- ಮೇ ಮಾಹೆಯಲ್ಲಿಯೇ 2 ತಿಂಗಳ ಪಡಿತರ ವಿತರಣೆ
- ತುಮಕೂರು: ಜಯನಗರದಲ್ಲಿ ಡ್ರಗ್ಸ್ ಮಾರಾಟ ಜಾಲ ಪತ್ತೆ; ಮೂವರ ಬಂಧನ
- ಮಾನಸಿಕ ಹಿಂಸೆ ನೀಡಿ ಮಹಿಳೆಯ ಗೃಹಬಂಧನ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಂತ್ರಸ್ತೆಯ ರಕ್ಷಣೆ
- ಬಸವಣ್ಣ ಯಾವುದೇ ಜಾತಿಗೆ ಸೀಮಿತವಲ್ಲ: ಕೊಟ್ಟೇಶ್ ಎಸ್.ಉಪ್ಪಾರ್
- ನೀಟ್ ಪರೀಕ್ಷೆ ವೈಫಲ್ಯಕ್ಕೆ ಕೇಂದ್ರವೇ ಹೊಣೆ: ತುಮಕೂರು ಸಂಸದರ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ ಯುವ ಕಾಂಗ್ರೆಸ್
- ತುಮಕೂರು: ಆನ್ಲೈನ್ ಔಷಧ ಮಾರಾಟ ವಿರೋಧಿಸಿ ಮೇ 20ರಂದು ಜಿಲ್ಲೆಯಾದ್ಯಂತ ಔಷಧ ಅಂಗಡಿಗಳ ಬಂದ್
Author: admin
ತುಮಕೂರು: ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಇಂದು ಧ್ವಜಾರೋಹಣ ನೆರವೇರಿಸಿದರು. ಮಠದಲ್ಲಿ ವ್ಯಾಸಂಗ ಮಾಡುತ್ತಿರುವ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿದ್ದಗಂಗಾ ಮಠದ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗಸ್ವಾಮೀಜಿ, ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ, ಜಿಲ್ಲಾಧಿಕಾರಿ ಶ್ರೀನಿವಾಸ್ ಮೂರ್ತಿ, ಜಿಲ್ಲಾವರಿಷ್ಟಾಧಿಕಾರಿ ರಾಹುಲ್ ಕುಮಾರ್ ಭಾಗಿಯಾಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಧಿಕಾರ ಸಿಕ್ಕಿದೆ ಎಂದು ಲೂಟಿ ಹೊಡೆಯುವುದಲ್ಲ. ಎಂದು ಹೆಚ್. ಡಿ. ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಕುಮಾರಸ್ವಾಮಿ, ಅಧಿಕಾರ ಸಿಕ್ಕಿದೆ ಎಂದು ಸ್ಟೇಚ್ಛಾಚಾರ ಪ್ರದರ್ಶನ ಮಾಡುವುದಲ್ಲ. ಚೆಲುವರಾಯಸ್ವಾಮಿ ಅವರು ರಾಜ್ಯದಲ್ಲಿ ಸಚಿವರಾಗಿದ್ದಾರೆ. ಲೂಟಿ ಮಾಡುವುದನ್ನು ಬಿಟ್ಟು ಜನರ ಸೇವೆ ಮಾಡಲಿ. ಅವರು ಪ್ರಾಮಾಣಿಕರಾದ್ರೆ, ರಾಜ್ಯಪಾಲರವರೆಗೂ ದೂರು ಹೋಗಿದ್ದೇಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನ್ನಾಡುವುದು ಬಹಳ ಇದೆ. ಎಲ್ಲವನ್ನೂ ಮಾತನ್ನಾಡುತ್ತೇನೆ. ಇಂದೇ ಎಲ್ಲಾ ಏಕೆ ಮಾತನ್ನಾಡಬೇಕು? ನಾಳೆ, ನಾಡಿದ್ದು ಮಾತನ್ನಾಡಲೇಬೇಕು. ನಿಮ್ಮ ಮುಂದೆಯೇ ತಾನೇ ಎಲ್ಲವನ್ನೂ ಹೇಳಬೇಕು. ಖಂಡಿತವಾಗಿ ಎಲ್ಲವನ್ನೂ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನ ಶಾಸಕಾಂಗ ಪಕ್ಷದ ನಾಯಕ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಿನ್ನೆ ತಡರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಬಳಿ ಮಾಧ್ಯಮಗಳ ಮುಂದೆ ಮಾತನಾಡಿದ ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನನ್ನ ನೋಡಿದ್ರೆ ಕಾಂಗ್ರೆಸ್…
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ನ್ಯಾಯಯುತವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ನೀಡಬೇಕು’ ಎಂದು ಆಯ್ಕೆಯಾದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. \ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭ್ಯರ್ಥಿಗಳು, ‘ಬಿಜೆಪಿ ಸರ್ಕಾರದಲ್ಲಿ ಪಿಎಸ್‌ಐ ಹಗರಣದ ತನಿಖೆ ದಾರಿ ತಪ್ಪಿತ್ತು. ಕಾಂಗ್ರೆಸ್ ಸರ್ಕಾರ ಹಗರಣದ ಮರು ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರೀಕ್ಷೆಯಲ್ಲಿ ಆಯ್ಕೆಯಾಗಿರುವ 490ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನ್ಯಾಯಾಂಗ ತನಿಖೆ ಹಾಗೂ ಮಂಪರು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು. ‘ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಕಾರಣ ಉನ್ನತ ಅಧಿಕಾರಿಗಳು ಮತ್ತು ಕೆಲ ಅಭ್ಯರ್ಥಿಗಳು ಜೈಲು ಪಾಲಾಗಿದ್ದಾರೆ. 135ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳು ಎಲ್ಲ ರೀತಿಯ ತನಿಖೆಗೆ ಸಹಕಾರ ನೀಡಲಿದ್ದಾರೆ. ಕೂಡಲೇ ಅವರಿಗೆ ನೇಮಕಾತಿ ಆದೇಶ ಪ್ರತ ನೀಡಬೇಕು’ ಎಂದು ಆಯ್ಕೆಯಾಗಿರುವ ಅಭ್ಯರ್ಥಿಗಳಾದ ಚಂದನ್, ಕಿರಣ್, ಪ್ರತಾಪ್, ರಚನಾ, ಶ್ರೀಕಾಂತ್ ನಾಯಕ್ ಹೇಳಿದರು.…
‘ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ವೈದ್ಯರು ಬಯಸುತ್ತಿಲ್ಲ. ಕನಿಷ್ಠ ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದ್ದೇವೆ’ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ಟಿ. ಬೇಗೂರು ಗ್ರಾಮದಲ್ಲಿ ಭಾನುವಾರ ನಡೆದ ಡಾ. ಬಿ. ರಮಣ ರಾವ್ ಅವರ ‘ವಿಲೇಜ್ ಕ್ಲಿನಿಕ್’ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಹೃದ್ರೋಗ ತಜ್ಞ ಡಾ. ಬಿ. ರಮಣ ರಾವ್ ಅವರನ್ನು ಸನ್ಮಾನಿಸಿ ಮಾತನಾಡಿದರು. ‘ಹಳ್ಳಿಗಳಲ್ಲಿ ಆರೋಗ್ಯ ಜಾಗೃತಿಯ ಅವಶ್ಯಕತೆಯಿದೆ. ಜಿಲ್ಲೆಗಳಲ್ಲಿ ಇರುವ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯಗಳನ್ನು ಪ್ರಾರಂಭಿಸಲು ನಮ್ಮ ಸರ್ಕಾರ ಅನುದಾನ ನೀಡಿದೆ’ ಎಂದು ವಿವರಿಸಿದರು. ‘ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ರಮಣ ರಾವ್ ಅವರ ಕಾರ್ಯ ಪದಗಳಿಗೆ ಮೀರಿದ್ದು. ಪ್ರತಿ ವರ್ಷ ವೈದ್ಯಕೀಯ ಪದವಿ ಪಡೆಯುವವರು ರಮಣ ರಾವ್ ಅವರಿಂದ ಸ್ಫೂರ್ತಿ ಪಡೆಯಬೇಕು’ ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದರಾದ…
ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ತೀವ್ರ ಹೃದಯಾಘಾತದಿಂದ ನಿಧನರಾದ ಬೆನ್ನಲ್ಲೇ, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಫುಲ್ ಆಗಿದೆ. ಇತ್ತೀಚೆಗೆ ಮಧ್ಯ ವಯಸ್ಕರಲ್ಲಿ ಹೃದಯಾಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿರುವ ಕಾರಣ, ಆಸ್ಪತ್ರೆಗೆ ಬಂದು ಸಾಮಾನ್ಯ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ಸ್ಪಂದನಾ ವಿಜಯ ರಾಘವೇಂದ್ರ ಅವರ ಸಾವು ಮಧ್ಯ ವಯಸ್ಸಿನ ಹೆಂಗಸರಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಆತಂಕ ಸೃಷ್ಟಿಸಿದ್ದು, ಮೇಲಿಂದ ಮೇಲೆ ಹೃದಯದ ತಪಾಸಣೆ ಮಾಡಿಸಿಕೊಳ್ಳಲು ಮಹಿಳೆಯರು ಮುಂದಾಗಿದ್ದಾರೆ. ಇನ್ನು ಕೆಲವರು ಆಸ್ಪತ್ರೆಗೂ ದಾಖಲಾಗಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
2024 ರ ಲೋಕಸಭಾ ಚುನಾವಣೆಗೆ ಹಾವೇರಿ ಗದಗ ಕ್ಷೇತ್ರದಿಂದ ನನ್ನ ಪುತ್ರ ಕೆ. ಇ. ಕಾಂತೇಶ್ ಕೂಡ ಪ್ರಬಲ ಆಕಾಂಕ್ಷಿ ಎಂದು ಮಾಜಿ ಉಪ-ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ. ಇಂದು ಲೋಕಸಭಾ ಚುನಾವಣೆಯ ತಯಾರಿ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ನನ್ನ ಪುತ್ರ ಕೆ. ಇ. ಕಾಂತೇಶ್ ಕೂಡ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿದ್ದಾನೆ. ಹಾಲಿ ಶಿವಮೊಗ್ಗ ಕ್ಷೇತ್ರ ಬಿ. ವೈ. ರಾಘವೇಂದ್ರ ಅವರು ಸಂಸದರಾಗಿದ್ದಾರೆ. ಅವರಿಗೆ ಶಿವಮೊಗ್ಗ ಕ್ಷೇತ್ರದ ಟಿಕೆಟ್ ನೀಡಲಾಗುವುದು. ಆದ್ರೆ, ಹಾವೇರಿ ಗದಗ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಅಂತಾ ಹೇಳಿದ್ದಾರೆ. ಹೀಗಾಗಿ, ನನ್ನ ಪುತ್ರ ಆ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯತ್ನ ಮಾಡುತ್ತಿದ್ದಾನೆ ಎಂದು ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಶೌಚಾಲಯ ನಿರ್ವಹಣೆಯನ್ನು ಹೊರ ಗುತ್ತಿಗೆಗೆ ನೀಡಲು ಯೋಜನೆ ರೂಪಿಸಿದೆ. ಸಾರ್ವಜನಿಕ ಶೌಚಾಲಯಗಳ ಬಗ್ಗೆ ನಿಗಾ ವಹಿಸದಿರುವ ಕುರಿತು ಕೆಲವು ದಿನಗಳ ಹಿಂದೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಸಾರ್ವಜನಿಕ ನೈರ್ಮಲ್ಯ ಮತ್ತು ಮೂಲ ಸೌಕರ್ಯಗಳನ್ನು ಬೆಂಗಳೂರು ನಗರದ ನಿವಾಸಿಗಳಿಗೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಮೂರು ವಾರಗಳ ಒಳಗೆ ಬಿಬಿಎಂಪಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್ ಹೇಳಿತ್ತು. 169 ಇ-ಶೌಚಾಲಯಗಳ ನಿರ್ವಹಣೆಯನ್ನು ಮೂರು ವರ್ಗಗಳವರೆಗೆ, 34 ಶೌಚಾಲಯಗಳ ನಿರ್ವಹಣೆಯನ್ನು ಎರಡು ವರ್ಷಗಳವರೆಗೆ ಹೊರ ಗುತ್ತಿಗೆ ನೀಡಲು ಬಿಬಿಪಿಎಂಪಿ ಯೋಜನೆ ರೂಪಿಸಿದೆ. ಖಾಸಗಿ ಏಜೆನ್ಸಿಗೆ ಬಿಬಿಎಂಪಿಯಿಂದಲೇ ನಿರ್ವಹಣಾ ವೆಚ್ಚವನ್ನು ನೀಡಲು ನಿರ್ಧರಿಸಿದೆ. ಶೌಚಾಲಯಗಳ ಮೇಲೆ ಯಾವುದೇ ಜಾಹೀರಾತು ಪ್ರಕಟಿಸುವ ಹಕ್ಕುಗಳನ್ನು ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೇ 90ರಷ್ಟು ಕೊರತೆ: ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಬೆಂಗಳೂರಿನಲ್ಲಿ ಕನಿಷ್ಠ 20,000 ಮೂತ್ರಾಲಯಗಳು ಮತ್ತು 15,000 ಸಾರ್ವಜನಿಕ ಶೌಚಾಲಯಗಳು ಇರಬೇಕು. ನಗರದಲ್ಲಿ…
ಬಿಎಂಟಿಸಿ ಬಸ್ ನಲ್ಲಿ ವಿದ್ಯಾರ್ಥಿನಿಯ ಮೇಲೆ ಹಾಡಹಗಲೇ ಕಂಡೆಕ್ಟರ್ ಹಾಗೂ ಇಬ್ಬರು ಪುರುಷ ಪ್ರಯಾಣಿಕರು ಕಿರುಕುಳ ನೀಡಿರುವ ಘಟನೆ ನಡೆದಿದೆ. 9 ನೇ ತರಗತಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ದೊಮ್ಮಲೂರಿನಿಂದ ರಿಚಂಡ್ ಸರ್ಕಲ್ ಗೆ ಪ್ರಯಾಣ ಮಾಡುತ್ತಿದಳು. ಶಕ್ತಿ ಯೋಜನೆಯಡಿ ಫ್ರೀ ಟಿಕೆಟ್ ಗೆ ಅಂತ ಆಧಾರ್ ಕಾರ್ಡ್ ತೋರಿಸಿದ್ದಾಳೆ. ಆದರೆ ಆಧಾರ್ ಕಾರ್ಡ್ ನಲ್ಲಿ ಹಿಂದಿ ಬರಹ ಇದ್ದಿದ್ದಕ್ಕೆ ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡುವಂತೆ ಕಂಡೆಕ್ಟರ್ ಹೇಳಿದ್ದಾರೆ. ವಿದ್ಯಾರ್ಥಿನಿ ದುಡ್ಡು ಕೊಟ್ಟು ಟಿಕೆಟ್ ಪಡೆದ್ರೂ, ವಿದ್ಯಾರ್ಥಿನಿಯ ಆಧಾರ್ ತೆಗೊಂಡು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರ ಮುಂದೆ ನಿಂದಿಸಿದ್ದಾನೆ. ಈ ವೇಳೆ ಬಸ್ಸಿನಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡ ಕಂಡೆಕ್ಟರ್ ಗೆ ಸಾಥ್ ನೀಡಿ, ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ. ಬಳಿಕ ವಿದ್ಯಾರ್ಥಿನಿಯನ್ನು ರಿಚ್ಯಂಡ್ ಸರ್ಕಲ್ ನಲ್ಲಿ ಇಳಿಸದೇ, ಕಾರ್ಪೋರೇಶನ್ ಸರ್ಕಲ್ ಬಳಿ ಇಳಿಸಿ ಹೋಗಿದ್ದಾರೆ. ಬಳಿಕ ಮನೆ ತಲುಪಿದ ವಿದ್ಯಾರ್ಥಿಯು ತನ್ನ ತಾಯಿ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಹಾಗಾಗಿ ತಾಯಿ ಕಂಡೆಕ್ಟರ್,…
ರಾಜ್ಯದ ಜನರು ಶಾಂತಿ, ಸಾಮರಸ್ಯ ಹಾಗೂ ಸೌಹಾರ್ದತೆಯಿಂದ ಬದುಕಬೇಕಾದರೆ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2022’ ಮತ್ತು ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು (ಮತಾಂತರ ನಿಷೇಧ) ಕಾಯ್ದೆ’ಯನ್ನು ಹಿಂಪಡೆಯಬಾರದು ಎಂದು ಮಠಾಧೀಶರು ನಿರ್ಣಯ ಕೈಗೊಂಡಿದ್ದಾರೆ. ವಿಶ್ವ ಹಿಂದೂ ಪರಿಷತ್ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಸಂತ ಸಮ್ಮೇಳನ’ದಲ್ಲಿ 10ಕ್ಕೂ ಅಧಿಕ ಮಠಾಧೀಶರು ಭಾಗವಹಿಸಿ, ಎರಡು ನಿರ್ಣಯಗಳನ್ನು ಕೈಗೊಂಡರು. ಮೇಲುಕೋಟೆ ಯತಿರಾಜ ಮಠದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಗೋ ಹತ್ಯೆ, ಮಂತಾಂತರ, ಲವ್ ಜಿಹಾದ್, ಹಿಂದೂ ಅವಿಭಕ್ತ ಕುಟುಂಬ ಪದ್ಧತಿ, ಪರಿಸರ, ಸಾಮರಸ್ಯ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಗೋಹತ್ಯೆ ನಿಷೇಧ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆದರೆ ಸಂತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ಈ ಕಾಯ್ದೆಗಳನ್ನು ವಾಪಸ್ ಪಡೆಯಬಾರದು. ಪರಮಾತ್ಮ ಜಿ. ಮಹಾರಾಜ್, ರಾಷ್ಟ್ರೀಯ ಸಂತ ಸಂಘದ ನಿರ್ದೇಶಕ ಗೋಕಾಕದ ಮಹಾಲಿಂಗೇಶ್ವರ ಮಠದ ರವಿಶಂಕರ ಶಿವಾಚಾರ್ಯ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪಾವಗಡ ವ್ಯಾಪ್ತಿಯ ಸಿ.ಕೆ.ಪುರ ವಲಯದ ಸಿ.ಕೆ.ಪುರ ಗ್ರಾಮದ ಮಸೀದಿಯಲ್ಲಿ ಇಂದು ಸ್ವಸಹಾಯ ಸಂಘದ ಸದಸ್ಯರನ್ನು ಒಗ್ಗೂಡಿಸಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭ ಮೇಲ್ವಿಚಾರಕರಾದ ಮನು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವರ್ಷದಲ್ಲಿ ಎರಡು ಬಾರಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಮಾಡಲಾಗುತ್ತದೆ. ಜಾತಿ ಧರ್ಮ ಭೇದವಿಲ್ಲದೆ ದೇವಸ್ಥಾನ ಮಸೀದಿ, ಚರ್ಚ್, ಬಸದಿ, ಕಲ್ಯಾಣಿ ಮುಂತಾದ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡಲಾಗುತ್ತದೆ. 2018ರಲ್ಲಿ ಧಾರ್ಮಿಕ ಸ್ವಚ್ಛತಾ ನಗರಿ ಎಂದು ರಾಷ್ಟ್ರ ಪ್ರಶಸ್ತಿ ಧರ್ಮಸ್ಥಳಕ್ಕೆ ದೊರೆತ ಜ್ಞಾಪಕಾರ್ಥವಾಗಿ ಈ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಮಾಡಲಾಗುತ್ತದೆ. ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ