Author: admin

ಸರಗೂರು:  ತಾಲ್ಲೂಕಿನ ಹಾದನೂರು ಗ್ರಾಮದ ಗ್ರಾಮಸ್ಥರು ಆದಿ ಕರ್ನಾಟಕ ಸಮಾಜದಿಂದ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಅಂಬೇಡ್ಕರ್ ಹಬ್ಬ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅಂಬೇಡ್ಕರ್ ಪುತ್ಥಳಿ ಹೊತ್ತ ಜಾಥಾ ರಥಕ್ಕೆ ಚಾಲನೆ ನೀಡಲಾಯಿತು. ಸಮುದಾಯ ಭವನದಿಂದ ಹೊರಟ ಜಾಥಾವು ಹೆಡಿಯಾಲ ಮತ್ತು ಚಿಕ್ಕಬರಗಿ ರಸ್ತೆಯ ಮೂಲಕ ಸಂಚರಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ  ನಂತರ ಅದೇ ಮಾರ್ಗವಾಗಿ ಸಮುದಾಯ ಭವನದಲ್ಲಿ ಕೊನೆಗೊಂಡಿತು. ಜಾಥಾ ಹೊರಟ ಮಾರ್ಗ ಮಧ್ಯೆ ಯುವಕರು ಅಂಬೇಡ್ಕರ್ ಹಾಡುಗಳನ್ನು ಹೇಳಿಕೊಂಡು ನೃತೃ ಪ್ರದರ್ಶಿಸಿದರು. ಮಂಗಳವಾದ್ಯ, ಸತ್ತಿಗೆಯು ಮೆರವಣಿಗೆಯಲ್ಲಿ ಸಾಗಿತ್ತು. ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ  ದಿನ ದಲಿತರ ಬಂಧು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ಮೈಗೂಢಿಸಿಕೊಳ್ಳಬೇಕು. ವಿದ್ಯಾವಂತರಾಗಿ, ಹೆಚ್ಚು ಪುಸ್ತಕಗಳನ್ನು ಓದಬೇಕು. ಆ ಮೂಲಕ ಎಲ್ಲರೂ ಸಂಘಟನೆ-ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು…

Read More

ಬೆಂಗಳೂರು: ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ 150 ಪ್ಲಸ್ ಶಾಸಕ ಸ್ಥಾನ ಪಡೆಯಲು ಕಾರ್ಯತಂತ್ರ ರೂಪಿಸಲಾಗಿದೆ. ಮೂರು ತಂಡಗಳಲ್ಲಿ ಪಕ್ಷದ ಸಂಘಟನೆಗಾಗಿ ಪ್ರವಾಸವೂ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.  ಬೆಂಗಳೂರಿನ ಜಯನಗರದ ದಿ ಪ್ರೆಸಿಡೆಂಟ್ ಹೋಟೆಲ್‍ನ ಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸದ ವೇಳೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರಕಾರಗಳ ಸಾಧನೆಯ ಕುರಿತು ಜನರಿಗೆ ತಲುಪಿಸುವ ದೃಷ್ಟಿಯಿಂದ ರಾಜ್ಯದಿಂದ ಬೂತ್ ವರೆಗೆ ಸಭೆಗಳನ್ನು ನಡೆಸಲಾಗಿದೆ. ನಮ್ಮ ಸಂಘಟನೆಯನ್ನು ಸರ್ವಸ್ಪರ್ಶಿ- ಸರ್ವವ್ಯಾಪಿ ಮಾಡಲು ಶ್ರಮಿಸುತ್ತಿದ್ದೇವೆ. ಬೂತ್ ಕಮಿಟಿ, ಪೇಜ್ ಕಮಿಟಿ ಹೆಚ್ಚು ಸದೃಢಗೊಳಿಸಲಾಗುತ್ತಿದೆ ಎಂದು ವಿವರಿಸಿದರು. ಪ್ರತಿ ಪೇಜ್‍ಗೆ ಆರು ಜನರ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.  ಒಂದು ಮಂಡಲದಿಂದ ಇನ್ನೊಂದು ಮಂಡಲಕ್ಕೆ ತೆರಳಿ ಪೇಜ್ ಕಮಿಟಿ ಕಾರ್ಯದ ಪರಿಶೀಲನೆ ನಡೆದಿದೆ. ಬೂತ್ ಅಧ್ಯಕ್ಷರ ನಾಮಫಲಕ ಜೋಡಣೆ ದೇಶದಲ್ಲೇ ಮೊದಲ ಬಾರಿಗೆ ನಡೆದಿದ್ದು, ಶೇ.90ರಷ್ಟು…

Read More

ಕೊರಟಗೆರೆ:  ಮಾಜಿ ಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್ ಅವರು ಶನಿವಾರ ಕ್ಷೇತ್ರಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. * ಬೆಳಗ್ಗೆ 10 ಗಂಟೆಗೆ ಪುರವರ ಹೋಬಳಿಯ ಗೊಂದಿಹಳ್ಳಿ ಗ್ರಾಪಂ ವ್ಯಾಪ್ತಿಯ ತಿಮ್ಮಲಾಪುರ ತಾಂಡದಿಂದ ಗೊಲ್ಲರಹಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ, 40 ಲಕ್ಷ * ಬೆಳಗ್ಗೆ 10:30ಕ್ಕೆ ಗೊಂದಿಹಳ್ಳಿ ಗ್ರಾಮದಲ್ಲಿ ಪಶು ಆಸ್ಪತ್ರೆ ಉದ್ಘಾಟನೆ. * ಬೆಳಗ್ಗೆ 11:00 ಕ್ಕೆ ಗೊಂದಿಹಳ್ಳಿ ಗ್ರಾಪಂ ವ್ಯಾಪ್ತಿಯ ಚುಂಚೇನಹಳ್ಳಿ ಗ್ರಾಮದಲ್ಲಿ TSP ಯೋಜನೆಯಡಿಯಲ್ಲಿ ಸಿಸಿ ರಸ್ತೆ ಚರಂಡಿ ಉದ್ಘಾಟನೆ, 8 ಲಕ್ಷ * ಬೆಳಗ್ಗೆ 11:30 ಕ್ಕೆ ಪುರವರ ಗ್ರಾಪಂ ವ್ಯಾಪ್ತಿಯ ದೊಡ್ಡಹೊಸಹಳ್ಳಿ ಇಂದ ತಗ್ಗಿಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ. 48 ಲಕ್ಷ ರೂಪಾಯಿ. * ಬೆಳಗ್ಗೆ 12:00ಕ್ಕೆ ಬ್ಯಾಲ್ಯ ಗ್ರಾಮದಿಂದ ಹಂದ್ರಾಳುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿಪೂಜೆ. 40 ಲಕ್ಷ * 12:30ಕ್ಕೆ ಬ್ಯಾಲ್ಯ ಗ್ರಾಮದಿಂದ ಹನುಮಂತಪುರದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ.…

Read More

ತಿಪಟೂರು : ನಮ್ಮ ಪೂರ್ವಜರು ಜಾತ್ರೆ, ಉತ್ಸವ, ಹಬ್ಬ ಮೊದಲಾದ ಆಚರಣೆಗಳ ಮೂಲಕ ಸಂಘ ಜೀವನದ ಸಾಮರಸ್ಯಗಳನ್ನು, ಬಂಧು ಬಾಂದವರ ಬಾಂಧವ್ಯಗಳನ್ನು, ಸಂಸ್ಕøತಿ, ಆಚಾರ-ವಿಚಾರ, ಸುಖ, ಶಾಂತಿ, ನೆಮ್ಮದಿಯನ್ನು ಕಾಣುತ್ತಿದ್ದರು ಎಂದು ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀಚೌಡೇಶ್ವರಿ ದೇವಿ ದೇವಾಲಯದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀಚೌಡೇಶ್ವರಿ ದೇವಿ ದೇವಾಲಯ ಆವರಣದಲ್ಲಿ ಬುಧವಾರ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶ್ರೀಮಠ ಮತ್ತು ದಸರೀಘಟ್ಟ ಗ್ರಾಮಸ್ಥರು ಸಹಯೋಗದಲ್ಲಿ ನಡೆದ ರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು. ಸಂಸಾರದ ಸಾಗರದಲ್ಲಿ ಸಹ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು. ಜಗತ್ತಿನ ಸೃಷ್ಠಿಕರ್ತ ಪರಮಾತ್ಮನಾದ್ದರಿಂದ ಮನುಷ್ಯನಾದವನು ಧರ್ಮದಾನಗಳಿಂದ ಬದುಕಬೇಕು. ಮನುಷ್ಯನಲ್ಲಿ ಕಷ್ಟಕಾರ್ಪಣ್ಯಗಳು ದೂರವಾಗಲು ಭಗವಂತನ ನಾಮಸ್ಮರಣೆ ಅತಿಮುಖ್ಯವಾಗಿದೆ. ಹಿರಿಯರಲ್ಲಿ ಗೌರವ, ಗುರುಗಳಲ್ಲಿ ಭಕ್ತಿ ಭಾವಗಳನ್ನು ಬೆಳೆಸಿಕೊಂಡು ಇಳಿವಯಸ್ಸಿನ ತಂದೆ-ತಾಯಿಗಳಿಗೆ ಆಸರೆಯಾಗಿರುತ್ತಿದ್ದರು. ನಾಗರೀಕತೆ ಬೆಳೆದಂತೆ…

Read More

ತಿಪಟೂರು ಕಲ್ಪತರು ಇಂಜಿನಿಯರಿಂಗ್ ಸಭಾಂಗಣದಲ್ಲಿ ಅಂಬೇಡ್ಕರ್ ಅವರ ಜನ್ಮ ತಿಂಗಳ ಅಂಗವಾಗಿ ಅಂಬೇಡ್ಕರ್ ನಮನ ಎಂಬ ಕಾರ್ಯಕ್ರಮವನ್ನು ಏಪ್ರಿಲ್ 24 ಭಾನುವಾರದಂದು ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆ ಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷ ಶ್ರೀ ಬಿ ಶಶಿಧರ್ ಅವರು ತಿಳಿಸಿದರು . ಈ ಕಾರ್ಯಕ್ರಮದಲ್ಲಿ ಚಿಂತಕರು ಹಾಗೂ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ವಹಿಸಲಿದ್ದು, ಉಪನ್ಯಾಸವನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ನೀಡಲಿದ್ದು ,ಮುಖ್ಯ ಅತಿಥಿಗಳಾಗಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ಹಾಗೂ ಅನೇಕ ಚಿಂತಕರು ಹಾಗೂ ಜನಸ್ಪಂದನ ಅಧ್ಯಕ್ಷರು ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್ ರವರು ಈ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಚಿತ್ರದುರ್ಗ:  ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಅರಿಶಿನಗುಂಡಿ ಗ್ರಾಮದಲ್ಲಿ ಕಣಿವೆ ಮಾರಮ್ಮ ದೇವಿಯ ಜಾತ್ರೆ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಶೇಷಪ್ಪನಹಳ್ಳಿ , ಸುಬ್ಬರಾಯರ  ಸ್ವಾಮಿ, ಹಟ್ಟಿಲಕ್ಕಮ್ಮ ದೇವಿ , ಹುಳುವಿನಾಳ್ ಕರಿಯಮ್ಮ ದೇವಿ ದೇವರುಗಳ ಸಮ್ಮಖದಲ್ಲಿ ಅರಿಶಿನಗುಂಡಿಯ ಪ್ರಮುಖ ಬೀದಿಗಳಲ್ಲಿ ಶ್ರೀ ಕಣಿವೆ ಮಾರಮ್ಮ ದೇವಿಯ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಕಾಡುಗೊಲ್ಲ ಸಮುದಾಯದ ಮುಖಂಡರಾದ ಸಿ.ಬಿ. ಪಾಪಣ್ಣ, ಅರಿಶಿನಗುಂಡಿ ಪಬ್ಲಿಕ್ ಆ್ಯಪ್ ಶಿವಕುಮಾರ್,  ರಮೇಶ್ ಕುಮಾರಪ್ಪ, ನಾಗರಾಜ್ ಕಣುಮಪ್ಪ, ರಮೇಶ್, ತ್ಯಾರಪ್ಪ,ರಾಜಪ್ಪ, ಮಂಜುನಾಥ, ರಂಗನಾಥ, ಕಣುಮೇಶ್, ಕಾಳಪ್ಪ, ಸಿದ್ದಪ್ಪ ಕೋಡಪ್ಪ, ಕೆಂಚ್ಚಪ್ಪ ಸೇರಿದಂತೆ ಅರಿಶಿನಗುಂಡಿ , ಹಾಲ್ ಮಾದೇನಹಳ್ಳಿ, ಯಲ್ಲದಕೆರೆ.ಕೆ.ಕೆ ಹಟ್ಟಿ, ಚಿಕ್ಕಬ್ಯಾಲದಕೆರೆ ಗೋಕುಲನಗರ ಶೇಷಪ್ಪನಹಳ್ಳಿ , ಕಾಟಿಹಟ್ಟಿ. ಅಮ್ಮನಹಟ್ಟಿ ಜೆ.ಎಸ್.ಪುರ. ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಕಲ ಭಕ್ತರು ಸಹ ಅರಿಶಿನಗುಂಡಿ ಗ್ರಾಮದ ಕಣಿವೆ ಮಾರಮ್ಮ ದೇವಿ ಜಾತ್ರೆಗೆ ಆಗಮುಸಿ  ದೇವಿಯ ದರ್ಶನ…

Read More

ಸರಗೂರು:  ಸಕಾಲಕ್ಕೆ 10 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಕಛೇರಿಯಿಂದ ಸಾರ್ವಜನಿಕರ ಆಸ್ಪತ್ರೆವರೆಗೆ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಭಾಗಿಯಾಗಿ ಮೆರವಣಿಗೆ ಮೂಲಕ ಜಾಥಾ ನಡೆಸುವ ಮೂಲಕ ದಶಮಾನೋತ್ಸವ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ಚಲುವರಾಜು,  ಸಕಾಲ 10 ವರ್ಷ ಪೂರೈಸಿದ್ದು,  ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಶಮಾನೋತ್ಸವದ ಅಂಗವಾಗಿ ಜನರಿಗೆ ಸಕಾಲದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದು, ಎಲ್ಲಾ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಹಕಾರ ಪಡೆದು ಸಕಾಲ ಜಾಥಾ ಮತ್ತು ಮೆರವಣಿಗೆ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ತಿಳಿಸಿದರು. ಸಕಾಲ 2.0 ಅಡಿಯಲ್ಲಿ ಹೊಸ ಕಾರ್ಯಕ್ರಮ ಸಕಾಲ ಮೇಲ್ಮನವಿ ಕುರಿತು ಸಂದೇಶ: ಸಕಾಲದಡಿ ಅರ್ಜಿ ಸಲ್ಲಿಸಿದ ನಾಗರಿಕರ ಅರ್ಜಿಗಳು ವಿಲೇವಾರಿ ವಿಳಂಬವಾದಲ್ಲಿ ಅಥವಾ ತಿರಸ್ಕೃತವಾದಲ್ಲಿ ಮೇಲ್ಮನವಿ ಅವಕಾಶ ಲಭ್ಯವಿರುವ ಬಗ್ಗೆ ನಾಗರಿಕರಿಗೆ ಎಸ್ ಎಮ್ ಎಸ್ ಸಂದೇಶ ಕಳುಹಿಸಲ್ಪಡುತ್ತದೆ.ಸಕಾಲದಲ್ಲಿ ಮೇಲ್ಮನವಿ ಹೆಚ್ಚಿಸಲು ಈ ಕ್ರಮವನ್ನು ಜಾರಿಗೆ ತರಲಾಗಿದೆ. Tesz ನಲ್ಲಿ ಸಕಾಲ: ಸರ್ಕಾರ ದಿಂದ ನಾಗರಿಕರಿಗೆ…

Read More

ಹೋರಿ ಹಬ್ಬದಲ್ಲಿ ಯುವಕನೊಬ್ಬ ಹೋರಿಯ ತಿವಿತಕ್ಕೊಳಗಾಗಿ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಹೊಸಳ್ಳಿ ಗ್ರಾಮದ ನಿವಾಸಿ ಷಣ್ಮುಖ (22) ಎಂದು ಗುರುತಿಸಲಾಗಿದೆ. ಹಿರೇಕೆರೂರು ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಹೋರಿ ಹಬ್ಬ ನೋಡಲು ಬಂದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ರಾಜ್ಯಮಟ್ಟದ ಹೋರಿಗಳನ್ನು ಬೆದರಿಸುವ ಈ ಸ್ಪರ್ಧೆಗೆ ರಾಜ್ಯದ ಅನೇಕ ಕಡೆಗಳಿಂದ ಕೊಬ್ಬಿದ ಹೋರಿಗಳನ್ನು ತರಿಸಲಾಗಿತ್ತು. ಅಖಾಡದಲ್ಲಿ ಓಡುತ್ತಿದ್ದ ಹೋರಿಯನ್ನು ಷಣ್ಮುಖ ನೋಡುತ್ತಿದ್ದು, ಈ ಸಂದರ್ಭದಲ್ಲಿ ಹೋರಿಯೊಂದು ಈತನಿಗೆ ತಿವಿದಿದ್ದು, ಹೊರಿ ತಿವಿದ ರಭಸಕ್ಕೆ ಕೊಂಬು ಹೊಟ್ಟೆಗೇ ಹೊಕ್ಕಿದ್ದರಿಂದ ಸ್ಥಳದಲ್ಲೇ ಯುವಕ ಸಾವಿಗೀಡಾಗಿದ್ದಾನೆ. ಹಂಸಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು : ಬರೋಬರಿ 2 ಕೋಟಿ ಮೌಲ್ಯದ ಹೈಟೆಕ್ ಸರ್ಕಾರಿ ಶಾಲೆ ನಿರ್ಮಿಸಿ ತಾಯಿಯ ಶಾಲೆಯ ಋಣ ತೀರಿಸಿರುವ ಘಟನೆ ತುಮಕೂರಿನ ಹೊರವಲಯದ ಕೋರಾ ಎಂಬ ಗ್ರಾಮದಲ್ಲಿ ನಡೆದಿದೆ. ಸರ್ಕಾರಿ ಶಾಲೆ ಎಂದರೆ  ನಿರ್ಲಕ್ಯ ತೋರಿಸುವ ಜನರಿಗೆ ಈ ಶಾಲೆ ಮಾದರಿ ಶಾಲೆಯಾಗಿದೆ. ಇದು ಸರ್ಕಾರ ನಿರ್ಮಾಣ ಮಾಡಿದ ಶಾಲೆಯಲ್ಲ, ಬದಲಿಗೆ ತನ್ನ ತಾಯಿಗಾಗಿ ಉದ್ಯಮಿಯೊಬ್ಬರು ನಿರ್ಮಿಸಿದ ಕೊಡುಗೆ. ಈ ಶಾಲೆ ನಿರ್ಮಿಸಿದ ಉದ್ಯಮಿಯ ಹೆಸರು ಹರ್ಷ, ಮತ್ತು ಮಮತ ದಂಪತಿ.ಇವರು ಬೆಂಗಳೂರಿನಲ್ಲಿ ಖಾಸಗಿ ಉದ್ಯಮ ನಡೆಸುತ್ತಿರುವಾಗ ಒಮ್ಮೆ ಕೋರಾ ಮಾರ್ಗವಾಗಿ ಶಿರಾಗೆ ತೆರಳುತ್ತಿದ್ದಾಗ ತಾಯಿಯ ಊರು ಎಂಬ ಅಭಿಮಾನದಿಂದ ಕಾರು ನಿಲ್ಲಿಸಿ ಇಳಿದಿದ್ದೇ ಈ ಮಹತ್ಕಾರ್ಯಕ್ಕೆ ಕಾರಣವಾಯಿತು. ಊರ ಮೊಮ್ಮಗ ಹರ್ಷ ಈ ಊರಿಗೆ ಕಾಲಿಟ್ಟಾಗ ಹಳೇ ಶಾಲೆಯ ಭಾಗಶಃ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕೆಡವಲಾಗಿತ್ತು. ಇದನ್ನು ಗಮನಿಸಿದ ಹರ್ಷ ಅವರು ತಮ್ಮ ತಾಯಿಯ ನೆನಪಿಗಾಗಿ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿ ಕೊಡಲು ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳನ್ನು…

Read More

ಚಿತ್ರದುರ್ಗ: ಬಿಜೆಪಿಯು ವಾಮಮಾರ್ಗದಿಂದ ಸರ್ಕಾರ ರಚಿಸಿದ್ದು, ಇದೀಗ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯೂರು ತಾಲ್ಲೂಕಿನ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಿ.ಸಿ.ಪಾಪಣ್ಣ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭ ನಮ್ಮತುಮಕೂರು ಜೊತೆಗೆ ಮಾತನಾಡಿದ ಅವರು, ಬಿಜೆಪಿಯು ಎಂ ಎಲ್ ಎಗಳನ್ನು ಖರೀದಿಸುವ ಮೂಲಕ ವಾಮಮಾರ್ಗದಲ್ಲಿ ಸರ್ಕಾರ ರಚಿಸಿತು. 2008ರಲ್ಲಿಯೂ ವಾಮ ಮಾರ್ಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆ ಸಂದರ್ಭದಲ್ಲಿ 3 ಮುಖ್ಯಮಂತ್ರಿಗಳು ಆಡಳಿತ ನಡೆಸುವಂತಾಗಿತ್ತು ಎಂದರು. ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿಯವರು ಮಾಡಿರುವ ಸಾಧನೆ ಎಂದರೆ, ಅಕ್ರಮ ಗಣಿಗಾರಿಕೆ ಮಾಡಿ ಜೈಲಿಗೆ ಹೋಗಿರುವುದು ಎಂದರು. ಚುನಾವಣೆಗೆ ಹಣ ಹಾಕಿ ಅಧಿಕಾರ ಗಿಟ್ಟಿಸಿಕೊಳ್ಳುವುದು ಬಳಿಕ ವ್ಯಾಪಾರ ಮಾಡುವುದೇ ಬಿಜೆಪಿಯ ಉದ್ದೇಶವಾಗಿದೆ. ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು 40 % ಕಮಿಷನ್ ಕೇಳುವ ಮೂಲಕ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಕಾರಣರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಶ್ವರಪ್ಪನ ವಿರುದ್ಧ ಎಫ್ ಐಆರ್…

Read More