Subscribe to Updates
Get the latest creative news from FooBar about art, design and business.
- BPS: ಪದಾಧಿಕಾರಿಗಳ ಆಯ್ಕೆ, ಎಂಬಿಬಿಎಸ್ ವಿದ್ಯಾರ್ಥಿಗೆ ಸನ್ಮಾನ
- ಹಂಚೀಪುರ ಗ್ರಾ.ಪಂ.: ರಸ್ತೆ ಬದಿಯ ಗಿಡಗಂಟಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ
- ಸರಗೂರು | ಆರ್ ಎಸ್ ಎಸ್ ಬ್ಯಾನ್ ಗೆ ಡಿ ಎಸ್ ಎಸ್ ಒತ್ತಾಯ
- ತಿಪಟೂರು | ಸರಿಯಾಗಿ ಕಾರ್ಯನಿರ್ವಹಿಸದ ಸಂಚಾರ ಸಿಗ್ನಲ್ ಗಳು: ವಾಹನ ಚಾಲಕರಿಂದ ಆಕ್ರೋಶ
- ಕನಕದಾಸರು ಸಮಾಜದ ಓರೆಕೋರೆಗಳನ್ನು ತಿದ್ದಲು ಶ್ರಮಿಸಿದವರು: ಸಿ.ವಿ.ಕುಮಾರ್
- ಅವೈಜ್ಞಾನಿಕ ಸುತ್ತೋಲೆ ವಾಪಸ್ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಂಶುಪಾಲರ, ಉಪನ್ಯಾಸಕರ ಸಂಘ ಆಗ್ರಹ
- ತುಮಕೂರು | ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ
- ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ
Author: admin
ಬೆಂಗಳೂರು: ಕಾನೂನು ಬಾಹಿರವಾಗಿ ಇಲ್ಲವೇ ಬಲವಂತವಾಗಿ ಬಂದ್ ಬೆಂಬಲಿಸುವಂತೆ ಯಾರಾದರೂ ಒತ್ತಡ ಹಾಕಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್‍ನಲ್ಲಿ ಭಾಗವಹಿಸಬೇಕೆಂದು ಸಾರ್ವಜನಿಕರಿಗೆ ಯಾವುದೇ ಸಂಘಟನೆಗಳು ಒತ್ತಡ ಇಲ್ಲವೇ ಬಲವಂತ ಮಾಡುವಂತಿಲ್ಲ. ಹಾಗೊಂದು ವೇಳೆ ಕಂಡುಬಂದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.ಸತತ ಎರಡು ಲಾಕ್‍ಡೌನ್ ಜಾರಿಯಿಂದಾಗಿ ರೈತರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲರಿಗೂ ಆರ್ಥಿಕ ಹೊಡೆತ ಬಿದ್ದಿದೆ. ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಬಂದ್ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಬಂದ್‍ಗೆ ಕರೆ ಕೊಡುವ ಮುಖಂಡರು ಹತ್ತಾರು ಬಾರಿ ಯೋಚಿಸಬೇಕಿತ್ತು. ಬಂದ್ ಮಾಡುವುದರಿಂದಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.ರಾಜ್ಯದಲ್ಲಿ ಎಂಇಎಸ್‍ನ್ನು ನಿಷೇಧಿಸಲು ಕಾನೂನಿನ ತೊಡಕುಗಳಿವೆ. ಈಗಾಗಲೇ ಮುಖ್ಯಮಂತ್ರಿಯವರೇ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಎಂಇಎಸ್ ನಿಷೇಧವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.ಯಾವುದೇ ಒಂದು…
ಹಿರಿಯೂರು: ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಮಂಡಳಿಯು ಸೌಲಭ್ಯಗಳನ್ನು ಪಡೆಯಲು ಸಿ ಎಸ್ ಸಿ ( ಕಾಮನ್ ಸರ್ವಿಸ್ ಸೆಂಟರ್ ) ನ ಆನ್ ಲೈನ್ ನ ಮೂಲಕ ಮಧ್ಯವರ್ತಿಗಳ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್ ಗಳು ನೊಂದಣಿಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಹ ಇದರ ಬಗ್ಗೆ ತೀವ್ರವಾಗಿ ಗಮನ ನೀಡದೆ ಇರುವುದು ಬೇಸರದ ಸಂಗತಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಮಿಕರ ಘಟಕ ಹೇಳಿದೆ ಕಟ್ಟಡ ಕಾರ್ಮಿಕರ ಇಲಾಖೆ ದೊರೆಯುವ ಸೌಲಭ್ಯಗಳು ಯಾವುದು ಸಹ ನಿಜವಾದ ಕಟ್ಟಡ ಕಾರ್ಮಿಕರಿಗೆ ದೊರೆಯದ ರೀತಿಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚುತ್ತಿದ್ದರೂ ಸಹ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡದೆ ಇರುವುದು ಬೇಸಾರದ ವಿಷಯವಾಗಿದೆ ಎಂದು ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಶಿವಕುಮಾರ್ ವಿ ಅವರು ತಿಳಿಸಿದ್ದಾರೆ . ಸುಪ್ರಿಂ ಕೋರ್ಟ್ ಆದೇಶದಂತೆ ನಿಗದಿಪಡಿಸಿರುವಂತಹ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆಂದೇ ಇರುವಂತಹ ಸೆಸ್ ಹಣವನ್ನು ಅವರಿಗಾಗಿಯೇ ಬಳಸಬೇಕು,…
ಬೆಂಗಳೂರು: ನೆರೆಯ ತೆಲಂಗಾಣ ರಾಜ್ಯವು ಅನುಷ್ಠಾನಗೊಳಿಸಿರುವ ವಿಶ್ವದ ಅತಿ ದೊಡ್ಡ ಏತ ನೀರಾವರಿ ಯೋಜನೆ ಕಾಳೇಶ್ವರಂ ಯೋಜನೆಯನ್ನು ರಾಜ್ಯದ ಚಾಮರಾಜನಗರ ರೈತರು ಕಂಡು ಹರ್ಷ ವ್ಯಕ್ತಪಡಿಸಿದ್ದು, ಯೋಜನೆಯ ಜಾರಿಯಿಂದ ರೈತರಿಗೆ ಆಗಿರುವ ಅನುಕೂಲಗಳನ್ನು ಪರಾಮರ್ಶಿಸಿದರು. ಕಾಳೇಶ್ವರಂ ಯೋಜನಾ ಪ್ರದೇಶದ ಪ್ರವಾಸ ಕೈಗೊಂಡಿರುವ ರೈತರು 2014ರಲ್ಲಿ ಚಾಮರಾಜನಗರದಲ್ಲಿ ಮೆಘಾ ಇಂಜಿನಿಯರಿಂಗ್ ಅಂಡ್ ಇನಾಸ್ಟ್ರಕ್ಚರ್ ಸಂಸ್ಥೆಯು ಯಶಸ್ವಿಯಾಗಿ ಜಾರಿ ಮಾಡಿರುವ ಆಲಂಬೂರು ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆ ನೀರು ಅಭಿವೃದ್ಧಿ ಸಂರಕ್ಷಣಾ ಸಮಿತಿ ಸದಸ್ಯರುಗಳಾಗಿದ್ದು, ತೆಲಂಗಾಣದ ಕಾಳೇಶ್ವರಂ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು.ಚಾಮರಾಜನಗರದ ಆಲಂಬೂರ್ ಸಮೀಪ ಅನುಷ್ಠಾನಗೊಂಡಿರುವ ಕೆರೆ ತುಂಬಿಸುವ ಯೋಜನೆ ಯಶಸ್ವಿನಿಂದ ಲಾಭ ಪಡೆದುಕೊಂಡಿರುವ ಇಲ್ಲಿನ ರೈತರ ತಂಡವು ಕಾಳೇಶ್ವರಂ ಯೋಜನೆಯ ಮೇಡಿಗಡ್ಡ ಮತ್ತು ಭೂತಲದಲ್ಲಿ ನಿರ್ಮಾಣಗೊಂಡಿರುವ ಗಾಯಿತ್ರಿ ಪಂಪ್‍ಹೌಸ್ ಸೇರಿದಂತೆ ಯೋಜನೆಯ ಅಳತೆ- ಆಕಾರ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.ಯೋಜನೆ ಜಾರಿಯಿಂದ ಗುರುತ್ವಾಕರ್ಷಣ ದಿಕ್ಕಿಗೆ ಹರಿಯುತ್ತಿದ್ದ ಗೋದಾವರಿ ನದಿ ನೀರನ್ನು ತಂತ್ರಜ್ಞಾನದ ಸಮರ್ಥ ಅಳವಡಿಕೆ ಮೂಲಕ ಭೂತಲದ…
ಬೆಂಗಳೂರು: ದಕ್ಷಿಣಾ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಯೊಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಆನೇಕಲ್ ತಾಲೂಕಿನ ಬಳ್ಳೂರು ಅಪಾರ್ಟ್‍ಮೆಂಟ್ ನಿವಾಸಿಯೊಬ್ಬರಿಗೆ ಓಮಿಕ್ರಾನ್ ವಕ್ಕರಿಸಿರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಕಳೆದ 23ರಂದು ದಕ್ಷಿಣಾ ಆಫ್ರಿಕಾದಿಂದ ವಾಪಾಸ್ಸಾಗಿದ್ದ ಆತನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿತ್ತು. ವಿಮಾನ ನಿಲ್ದಾಣದಿಂದ ಆತ ನೇರವಾಗಿ ಬಳ್ಳೂರು ಅಪಾರ್ಟ್‍ಮೆಂಟ್‍ಗೆ ಆಗಮಿಸಿದ್ದ. ಅದರೆ, ಆತನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಆತನನ್ನು ಆರೋಗ್ಯ ಇಲಾಖೆ ಅಧಿಕಾರಿಗಳು 24ನೇ ತಾರೀಖು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಿದ್ದರು.ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಜೊತೆ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಎಲ್ಲರ ಸ್ವಾಬ್ ಪರೀಕ್ಷೆ ನಡೆಸಲಾಗಿದೆ. ಅದೃಷ್ಟವಶಾತ್ ಆತನೊಂದಿಗೆ ಸಂಪರ್ಕ ಹೊಂದಿದವರ ಎಲ್ಲ ವರದಿ ನೆಗಿಟಿವ್ ಬಂದಿರುವುದರಿಂದ ಜನ ನಿಟ್ಟುಸಿರುಬಿಡುವಂತಾಗಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಬಳ್ಳೂರು ಅಪಾರ್ಟ್‍ಮೆಂಟ್ ಬಳಿ ಬೀಡುಬಿಟ್ಟಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಸರಗೂರು: ನಾನು ಶಾಸಕನಾಗಿ ಆಯ್ಕೆಯಾದಗಿನಿಂದಲೂ ಕಾಡಂಚಿನ ಭಾಗದ ಗ್ರಾಮಗಳಿಗೆ ಹೆಚ್ಚಿನ ಅನುದಾನಗಳನ್ನು ತಂದು ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯ ವ್ಯಕ್ತಪಡಿಸಿದರು. ತಾಲ್ಲೂಕಿನ ಎಂ.ಸಿ.ತೊಳಲು ಗ್ರಾಮದ ಸಮೀಪ ನುಗು ಏತನೀರಾವರಿ ಯೋಜನೆ ಮೂಲಕ ಗುಡಕಟ್ಟೆ, ಬಾಲನಕಟ್ಟೆ, ಹತ್ತಿಕೆರೆಗಳಿಗೆ ನೀರು ತುಂಬಿಸುವ ಮತ್ತು ಗಿರಿಜನ ಹಾಗೂ ಸ್ಥಳೀಯರ ಜಮೀನುಗಳಿಗೆ ನೀರು ಒದಗಿಸುವ ಸುಮಾರು 9 ಕೋಟಿ ರೂ ಅನುಧಾನದ ಏತನೀರಾವರಿ ಯೋಜನೆ ಮತ್ತು ಮೊಳೆಯೂರು ಗ್ರಾಮದ ಸುಮಾರು 65 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ನನ್ನ ಅವಧಿಯಲ್ಲಿ ಮೂರು ವರ್ಷ ಮುಗಿದ ಬಳಿಕ ಮೊದಲ ಬಾರಿ ಶಾಶ್ವತವಾಗಿ ಉಳಿಯುವ ಒಂದು ಏತ ನೀರಾವರಿ ಯೋಜನೆಗೆ ಚಾಲನೆ ನೀಡಿರುವುದು ಸಂತಸದ ವಿಚಾರವಾಗಿದೆ. ಸಮಿಶ್ರ ಸರ್ಕಾರವಿದ್ದಾಗ ಸತತ ಪ್ರಯತ್ನ ಮಾಡಿ ಅನುದಾನಗಳನ್ನು ಹೆಚ್ಚಾಗಿ ತರುತ್ತಿದ್ದೆ ಆದರೆ ಈಗ ಬಿಜೆಪಿ ಸರ್ಕಾರ ಇರುವ ಕಾರಣ ಅನುದಾನದ…
ಡಿಸೆಂಬರ್ 24 ರಂದು ತೆರೆ ಕಂಡ ಗುರುಶಂಕರ್’ರವರ ನಿರ್ದೇಶನದ ಹಾಗೂ ಡಾಲಿ ಧನಂಜಯ್ ಅಭಿನಯದ ” ಬಡವ ರಾಸ್ಕಲ್ ” ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತುಂಬಾ ದಿನಗಳ ನಂತರ ಕನ್ನಡ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಕಾರಣ “ಬಡವ ರಾಸ್ಕಲ್ ” ಕೌಟುಂಬಿಕ ಹಾಗೂ ಮನರಂಜನಾ ಕಥಾಹಂದರವುಳ್ಳ ಈ ಚಿತ್ರ ಚಿಕ್ಕವರಿಂದ ಹಿಡಿದು ದೊಡ್ಡ ವಯಸ್ಸಿನ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗಿದೆ. ಈ ಯಶಸ್ಸನ್ನು ಆಚರಿಸಲೆಂದೇ ತುಮಕೂರು ಜಿಲ್ಲೆಯ ತುರುವೇಕೆರೆಯ ಪೂರ್ಣಿಮ ಚಿತ್ರಮಂದಿರಕ್ಕೆ ಆಗಮಿಸಿದ್ದ ” ಬಡವ ರಾಸ್ಕಲ್ ” ಚಿತ್ರದ ನಾಯಕ ನಟ ಡಾಲಿ ಧನಂಜಯ್’ ರವರನ್ನು ಅವರ ಅಭಿಮಾನಿಗಳು ಹೃತ್ಪೂರ್ವಕಾಗಿ ಬರಮಾಡಿಕೊಂಡರು. ನೋಡ ನೋಡುತ್ತಲೇ ಪೂರ್ಣಿಮ ಚಿತ್ರಮಂದಿರದ ಮುಂದಿರುವ ರಸ್ತೆ ತುಂಬೆಲ್ಲ ಜನ ಸಾಗರದಂತೆ ತುಂಬಿಕೊಂಡರು. ಅಭಿಮಾನಿಗಳನ್ನು ಮಾತನಾಡಿಸಿದ ಡಾಲಿ ನೃತ್ಯವನ್ನೂ ಸಹ ಮಾಡಿ ಚಿತ್ರದ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ವರದಿ: ವೆಂಕಟೇಶ ಜೆ.ಎಸ್. ( ವಿಕ್ಕಿ ) ಮಾಯಸಂದ್ರ…
ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿಯ ಹುಲಿಕುಂಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಹರಪ್ಪನ ಪಾಳ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪೌಷ್ಠಿಕ ಆಹಾರ ಮೇಳ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಹೀದಾ ಜಮ್ ಜಮ್ ರವರು ಮಾತನಾಡಿ, ಮಕ್ಕಳಲ್ಲಿ ಎಷ್ಟು ಪೋಷಕಾಂಶ ಅವಶ್ಯಕತೆ ಇರುತ್ತದೋ ಅಷ್ಟು ಅವರು ಚಟುವಟಿಕೆಯಿಂದ ಇರುತ್ತಾರೆ. ಬೆಳವಣಿಗೆ ಹೊಂದುತ್ತಿರುವ ಮಕ್ಕಳಿಗೆ ಪೋಷಕಾಂಶದ ಅಗತ್ಯ ಹೆಚ್ಚು ಇರುತ್ತದೆ. ಸಂಸ್ಕರಿಸಿದ ಆಹಾರ ಹೊರತು ಪಡಿಸಿ, ಪೌಷ್ಟಿಕತೆಯ ಹೆಚ್ಚಿನ ಆಹಾರವನ್ನು ಸೇವಿಸಲು ನಿಮ್ಮ ಮಗುವಿಗೆ ಉತ್ತೇಜನ ನೀಡುವುದರ ಮೂಲಕ ಅತ್ಯುತ್ತಮ ಆರೋಗ್ಯವನ್ನು ಉತ್ತೇಜಿಸುವ ಒಂದು ಸರಳ ಮಾರ್ಗವಾಗಿದೆ ಎಂದರು. ನಿಮ್ಮ ಮಗುವಿಗೆ ಪೌಷ್ಠಿಕಾಂಶ-ಸಮೃದ್ಧ, ಸಮತೋಲಿತ ಆಹಾರವನ್ನು ಒದಗಿಸುವುದು ಅವರ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಯನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಮತ್ತು ಪ್ರತಿಯಾಗಿ ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಹುಲಿಕುಂಟೆ ಗ್ರಾ.ಪಂ. ಅಧ್ಯಕ್ಷ ರಮೇಶ್, ಸದಸ್ಯ ಗಂಗಾಧರ್, ಆರೋಗ್ಯ ಇಲಾಖೆ ಸಿಬ್ಬಂದಿ ವರಲಕ್ಷ್ಮೀ, ಮೇಲ್ವಿಚಾರಕ ನಾಗರಾಜು, ಜ್ಞಾನ ವಿಕಾಸ…
ಕೊರಟಗೆರೆ: ಪಟ್ಟಣದ 3 ನೇ ವಾರ್ಡ್‌ನ ಮನೆಯೊಂದರಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಚಾಮರಾಜು ಬಿನ್ ಲೇ ನಾಗಪ್ಪ, ಕುಂಭಾರ ಬೀದಿ ಕೊರಟಗೆರೆ ಟೌನ್ ಇವರ ಮನೆಯಲ್ಲಿ 8.280 ಲೀ. ಅಕ್ರಮವಾಗಿ ಮಾರಾಟ ಮಾಡಲು ಶೇಖರಣೆ ಮಾಡಿದ ಮಧ್ಯವನ್ನು ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕಿ ಶ್ರೀಲತಾರವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕಿ ವೈಷ್ಣವಿ ಕುಲಕರ್ಣಿ ತಂಡ ಸ್ಥಳದಲ್ಲಿಯೇ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕಿ ವೈಷ್ಣವಿ ಕುಲಕರ್ಣಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನಮೊರಖಂಡಿ, ಮಂಜುಳ, ಮಧು ಇದ್ದರು. ವರದಿ: ಸಿದ್ದರಾಜು ಟಿ.ಹೆಚ್.ಕೊರಟಗೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವು ಸಹ ಅಯ್ಯಪ್ಪ ಸ್ವಾಮಿಯ ಭಕ್ತರಿಂದ ಮಂಡಳ ಪೂಜೆ ಪ್ರಯುಕ್ತವಾಗಿ ಅಯ್ಯಪ್ಪಸ್ವಾಮಿ ಭಕ್ತಾಧಿಗಳಿಂದ ವಿಶೇಷ ಪೂಜೆ ನಡೆಯಿತು. ಮಂಡಳ ಪೂಜೆಯಲ್ಲಿ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಡಿ.ಸುಧಾಕರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ದೇವಸ್ಥಾನದ ಗುರು ಸ್ವಾಮಿಗಳಾದ ಶ್ರೀ ಸದಾನಂದ ಸ್ವಾಮೀಜಿ ಯವರು ಮಾಜಿ ಶಾಸಕರು ಹಾಗೂ ಸಚಿವರಾಗಿದ್ದ ಡಿ.ಸುಧಾಕರ್ ರವರಿಗೆ ಶಾಲು ಹೊದಿಸಿ, ಸನ್ಮಾನಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್ , ಜ್ಞಾನೇಶ್ ಕುಮಾರ್ , ಶಿವಕುಮಾರ್, ಮಧು, ಲಕ್ಷ್ಮಿಕಾಂತ್ , ನಗರಸಭೆ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ಅಧ್ಯಕ್ಷೆ ಶಂಶದ್ ಉನ್ನಿಸಾ, ಸಾದತ್ ಉಲ್ಲಾ ಹಾಗೂ ತರಕಾರಿ ಚಂದ್ರಶೇಖರ್ ಬಾಬು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಹಾಗೂ ಅಯ್ಯಪ್ಪಸ್ವಾಮಿಯ ಭಕ್ತರು ಉಪಸ್ಥಿತರಿದ್ದರು. ವರದಿ: ಮುರುಳೀಧರನ್ ಆರ್., ಹಿರಿಯೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…
ತುಮಕೂರು: ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತಿಘಟ್ಟ ಗ್ರಾಮದ “ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ” ನೂತನ ಅಧ್ಯಕ್ಷರಾಗಿ ಆಯ್ಕೆಯಾದ “ನಟರಾಜು.ಎಸ್” ರವರನ್ನು ಅಭಿನಂದಿಸಲಾಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವನ್ನು ನಟರಾಜು.ಎಸ್ ಅವರು ತಮ್ಮ ಅಧ್ಯಕ್ಷತೆಯಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗುವಂತಾಗಲಿ ಎಂದು ಇದೇ ವೇಳೆ ಹಾರೈಸಲಾಯಿತು. ಈ ವೇಳೆ ಮತಿಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹೇಶ್, ಎಸ್.ಡಿ.ಎಂ.ಸಿ(ಜಿ.ಎಚ್.ಪಿ.ಎಸ್)ಯ ಅಧ್ಯಕ್ಷರಾದ ಚಂದ್ರಶೇಖರಯ್ಯ.ಎಸ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಿರಂಜರ್ ಮೂರ್ತಿ, ಜೈ ಕರ್ನಾಟಕ ವಾಹನ ಮಾಲೀಕರು ಮತ್ತು ಚಾಲಕರ ಸಂಘ (ರಿ) ರಕ್ತ ದಾನ ಜೀವ ದಾನ ಸಂಘದ ತುಮಕೂರು ಘಟಕದ ಜಿಲ್ಲಾಧ್ಯಕ್ಷರಾದ ಸುಬ್ಬು ಎನ್ ಮೂರ್ತಿ ಹಾಗೂ ಊರಿನ ಪ್ರಮುಖರು ಮತ್ತು ಆಜುಬಾಜಿನ ಗ್ರಾಮಸ್ಥರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy