Author: admin

ಬೆಂಗಳೂರು: ಡಿಸೆಂಬರ್ 28ರಿಂದ ನೈಟ್ ಕರ್ಫ್ಯೂ ಜಾರಿಗೆ ಹೊಟೇಲ್ ಮಾಲಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಕೊರೊನಾ ಬಳಿಕ ಹೊಟೇಲ್ ಉದ್ಯಮ ಸಂಪೂರ್ಣವಾಗಿ ನೆಲ ಕಚ್ಚಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಈ ನಡುವೆ ನೈಟ್ ಕರ್ಫ್ಯೂ ನ್ಯಾಯ ಸಮ್ಮತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಹೊಟೇಲ್ ಗಳ ಮೇಲೆ ನಿರ್ಬಂಧ ಹಾಕಿರುವುದಕ್ಕೆ ಗ್ರಾಹಕರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ನೈಟ್ ಕೆಲಸ ಮುಗಿಸಿಕೊಂಡು ಬರುವವರಿಗೆ ಊಟದ ಸಮಸ್ಯೆಯಾಗುತ್ತೆ. ಸರ್ಕಾರದ ಈ ರೂಲ್ಸ್​ನಿಂದ ರಾತ್ರಿ 9ಗಂಟೆಯೊಳಗೆ ಊಟ ಮುಗಿಸಿಕೊಳ್ಳಬೇಕು. ಈ ನಿರ್ಧಾರದಿಂದ ಪ್ರಯೋಜನವೂ ಇದೆ, ಸಮಸ್ಯೆಯೂ ಆಗುತ್ತೆ ಎಂದು ಗ್ರಾಹಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸರ್ಕಾರ ಹೋಟೆಲ್ ಉದ್ಯಮದ ಸಮಸ್ಯೆ ಅರ್ಥಮಾಡಿಕೊಳ್ಳಬೇಕು. ನೈಟ್ ಕರ್ಫ್ಯೂನಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಕೊವಿಡ್ ನಿಯಂತ್ರಣದ ಹೆಸರಿನಲ್ಲಿ ನಾಳೆ ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಘೋಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ  ಓಲಾ, ಉಬರ್ ಚಾಲಕರು, ಫುಡ್ ಶಾಪ್ಸ್ ಮಾಲಿಕರು ಸಂಕಷ್ಟಕ್ಕೀಡಾಗಿದ್ದು, ನೈಟ್ ಕರ್ಫ್ಯೂ ಜಾರಿಯಾದರೆ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಹಾಗಾಗಿ ನೈಟ್ ಕರ್ಫ್ಯೂನಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ನಾವು 2 ವರ್ಷದಿಂದ ನಷ್ಟ ಅನುಭವಿಸಿದ್ದೇವೆ. ನಮಗೆ ರಾತ್ರಿ ವೇಳೆಯೇ ಹೆಚ್ಚು ಬಾಡಿಗೆಗಳು ಬರುವುದು. ನೈಟ್ ಕರ್ಫ್ಯೂ ಜಾರಿಯಾದರೆ ನಮಗೆ ಲಾಸ್ ಆಗುತ್ತದೆ. ಹೀಗಾಗಿ ದಯವಿಟ್ಟು ನೈಟ್ ಕರ್ಫ್ಯೂ ಜಾರಿ ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಓಲಾ, ಉಬರ್ ಚಾಲಕರು ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಬೀದಿಬದಿ ಫುಡ್ ಶಾಪ್ಸ್ ಮಾಲೀಕರು ಕೂಡ ನೈಟ್ ಕರ್ಫ್ಯೂವನ್ನು ವಿರೋಧಿಸಿದ್ದು, ರಾತ್ರಿ ವೇಳೆಯೇ ನಮ್ಮ ವ್ಯಾಪಾರ ವಹಿವಾಟು ನಡೆಯುವುದು. ನೈಟ್ ಕರ್ಫ್ಯೂ ಜಾರಿ ಮಾಡುವುದರಿಂದ ನಮಗೆ ನಷ್ಟವಾಗುತ್ತೆ. ರಾತ್ರಿ ವೇಳೆ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ನೈಟ್ ಕರ್ಫ್ಯೂ ಆದೇಶ ಹಿಂಪಡೆಯಬೇಕು ಎಂದು ಮನವಿ…

Read More

ಬೆಂಗಳೂರು: ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದು ನೀಡಿರುವ ಗಡುವು ಮುಗಿಯಲು ಇನ್ನು ಎರಡು ದಿನಗಳು ಮಾತ್ರವೇ ಬಾಕಿ ಇದೆ. ಡಿ.29ರೊಳಗೆ ಸರ್ಕಾರ ಯಾವುದೇ ನಿರ್ಧಾರ‌ ಕೈಗೊಳ್ಳದಿದ್ದರೆ ಕರ್ನಾಟಕ ಬಂದ್ ನಡೆಯುತ್ತದೆ. ಬಂದ್ ನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ವಾಟಾಳ್ ನಾಗರಾಜ್ ಖಚಿತ ಪಡಿಸಿದ್ದಾರೆ. ವಾಟಾಳ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ರಾಜ್ಯ ಬಂದ್ ಮಾಡಲಿದ್ದು, ಸರ್ಕಾರ ಮಾತ್ರ ವಾಟಾಳ್ ನಾಗರಾಜ್ ರನ್ನು ಇನ್ನೂ ಕೂಡ ಮಾತುಕತೆಗೆ ಆಹ್ವಾನಿಸಿಲ್ಲ. ಸದ್ಯ ವಾಟಾಳ್ ತಮ್ಮ ಬಂದ್ ಯಶಸ್ವಿಯಾಗಲೆಂದು ಪ್ರತಿ ದಿನ ಹೋರಾಟಕ್ಕೆ ಇಳಿದಿದ್ದಾರೆ. ಮೊನ್ನೆ ಫಿಲ್ಮ್ ಚೇಂಬರ್ ವಿರುದ್ಧ ಹೋರಾಟ ಮಾಡಿದರು. ನಿನ್ನೆ ಮಾಲ್ ಗಳಿಗೆ ತೆರಳಿ ಬಂದ್ ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಸದ್ಯ ಈಗ ಬಂದ್ ಗೆ ಬೇಕಾದ ಸಿದ್ಧತೆಗಳಲ್ಲಿ ಸಂಘಟನೆಗಳು ತೊಡಗಿಕೊಂಡಿವೆ. ನೈತಿಕ ಬೆಂಬಲ ಅನ್ನೋರಿಂದ…

Read More

ತುಮಕೂರು: ಯುವಕನೋರ್ವನ ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ತುಮಕೂರಿನ ಹುರುಳಿ ತೋಟದ ಸಮೀಪ ಅಮಾನಿಕೆರೆಯ ಅಂಗಳದಲ್ಲಿ ಭಾನುವಾರ ಮಧ್ಯಾಹ್ನ 2:30ರ ಸುಮಾರಿಗೆ ನಡೆದಿದೆ. ತುಮಕೂರಿನ ಎನ್.ಆರ್. ಕಾಲೋನಿಯ 25 ವರ್ಷ ವಯಸ್ಸಿನ ಮಂಜುನಾಥ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಈತ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು  ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವರದಿ: ರಾಜೇಶ್ ರಂಗನಾಥ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸಿರಾ: ತಾಲೂಕಿನ ಹುಲಿಕುಂಟೆ ಗೇಟ್ ನಿಂದ ವಾಜರಹಳ್ಳಿ ಗೇಟ್ ಸಂಪರ್ಕಿಸುವ ರಸ್ತೆ ಕಾಮಗಾರಿ ಆರಂಭಗೊಂಡು ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ ಹೀಗಾಗಿ ಜನ ಸಾಮಾನ್ಯರು ಈ ರಸ್ತೆಯಲ್ಲಿ ಪ್ರಯಾಣಿಸಲು ಹರಸಾಹಸ ಪಡುವಂತಾಗಿದೆ. ರಸ್ತೆ ಕಾಮಗಾರಿ ಆರಂಭಗೊಂಡ ವೇಳೆ ಇಲ್ಲಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದರು. ಅತೀ ಶೀಘ್ರವೇ ಸುಸಜ್ಜಿತ ರಸ್ತೆಯಾಗುತ್ತದೆ ಎನ್ನುವ ಭರವಸೆಯಿಂದಿದ್ದರು. ಆದರೆ, ಇದೀಗ ರಸ್ತೆ ಜಲ್ಲಿ ಕಲ್ಲುಗಳ ರಾಶಿಯಾಗಿದ್ದು, ಈ ರಸ್ತೆ ನರಕಕ್ಕೆ ದಾರಿ ಎಂಬಂತಿದೆ ಎನ್ನುವ ಆಕ್ರೋಶ್ ಮಾತುಗಳು ಕೇಳಿ ಬಂದಿದೆ. ಈ ರಸ್ತೆಯಲ್ಲಿ ಮಹಿಳೆಯರು ಮಕ್ಕಳು, ಹಿರಿಯ ನಾಗರಿಕರು ಎನ್ನದೇ ದಿನ ನಿತ್ಯ ಸಾರ್ವಜನಿಕರು ಪ್ರಯಾಣಿಸುತ್ತಿದ್ದಾರೆ. ಇವರ ಪಾಡು ಹೇಳತೀರದು. ಇದೀಗ ಈ ರಸ್ತೆ ಅವ್ಯವಸ್ಥೆಯಿಂದ ಬೇಸತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎಷ್ಟು ವರ್ಷ ಕಾಯಬೇಕು ಸ್ವಾಮಿ? ಎಂದು ಪ್ರಶ್ನಿಸಿದ್ದಾರೆ. ಇನ್ನೂ ಸ್ಥಳೀಯ ಶಾಸಕರಾದ ಡಾ.ಸಿ.ಎಂ.ರಾಜೇಶ್ ಗೌಡ ಅವರು ಈ ಬಗ್ಗೆ ಗಮನ ಹರಿಸಬೇಕು. ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ…

Read More

ತುಮಕೂರು: ಮೇಕೆದಾಟು ಪಾದಯಾತ್ರೆಯ ಲೋಗೋವನ್ನು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಬಿಡುಗಡೆಗೊಳಿಸಿದರು. ಇದೇ ವೇಳೆ ಪಾದಯಾತ್ರೆಯಲ್ಲಿ ಭಾಗವಹಿಸುವವರು ಕೂಡಲೇ MekedatuNammaHakku.org ವೆಬ್ ಸೈಟ್ ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಲು ಇದೇ ವೇಳೆ ಮನವಿ ಮಾಡಿದರು. ಈ ಐತಿಹಾಸಿಕ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಪಾದಯಾತ್ರೆಯಲ್ಲಿ ನೋಂದಣಿಯಾಗಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು ಜೊತೆಗೆ  ಪಾದಯಾತ್ರೆಯಲ್ಲಿ ನೋಂದಣಿಯಾಗಿ ಭಾಗವಹಿಸುವ ಎಲ್ಲರಿಗೂ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಪಾದಯಾತ್ರೆಯಲ್ಲಿ ನೋಂದಣಿಯಾಗಿ ಭಾಗವಹಿಸುವ ಎಲ್ಲರಿಗೂ ಟೀ ಶರ್ಟ್ ಹಾಗೂ ಟೋಪಿಯನ್ನು ನೀಡಲಾಗುವುದು.  ನೀವೂ ಸಹ ರಾಜ್ಯದ ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಈ ಹೋರಾಟದ ಭಾಗವಾಗಿ, ನೀರಿನ ಹಕ್ಕಿಗಾಗಿ ಮೊಳಗುತ್ತಿರುವ ಈ ಧ್ವನಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೇಳುವಷ್ಟು ಗಟ್ಟಿಯಾಗಿರಲಿ, ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಯನ್ನು ಶೀಘ್ರವೇ ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸೋಣ ಎಂದು ಕಾಂಗ್ರೆಸ್ ನಾಯಕರು ಕರೆ ನೀಡಿದರು. ಮೇಕೆದಾಟು ಯೋಜನೆಯ ಪ್ರಯೋಜನ ಏನು? ಬೆಂಗಳೂರು…

Read More

ತುರುವೇಕೆರೆ: ಕಲ್ಪತರು ನಾಡು ತುಮಕೂರು ಜಿಲ್ಲೆಯ, ತುರುವೇಕೆರೆ ತಾಲ್ಲೂಕಿನಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಗಳು ಎಲ್ಲೆಂದರಲ್ಲಿ ಗೋಚರಿಸುತ್ತಿದ್ದು, ತಾಲ್ಲೂಕಿನ ಶಾಸಕರಾದ ಮಸಾಲ ಜಯರಾಮ್ ರವರ ಭಾವಚಿತ್ರಗಳಿರುವ ಫ್ಲೆಕ್ಸ್ ಗಳು ತಾಲ್ಲೂಕಿನ ತುಂಬೆಲ್ಲಾ ರಾರಾಜಿಸುತ್ತಿವೆ. ತುರುವೇಕೆರೆ ಪಟ್ಟಣದ ತುಂಬೆಲ್ಲಾ ಎಗ್ಗಿಲ್ಲದೇ ಫ್ಲಕ್ಸ್ ಗಳು ಎದ್ದು ಕಾಣಿಸುತ್ತಿವೆ. ಈ ಹಿಂದೆಯೇ ಪಟ್ಟಣ ಪಂಚಾಯ್ತಿಯು ಫ್ಲಕ್ಸ್ ಬಳಕೆಗೆ ನಿಷೇಧ ಹೇರಿದ್ದರೂ ಇಲ್ಲಿನ ಜನಪ್ರತಿನಿಧಿಗಳು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡದೇ ಫ್ಲಕ್ಸ್ ಗಳನ್ನು ಪಟ್ಟಣದ ತುಂಬೆಲ್ಲಾ ಹಾಕಿಸಿದ್ದಾರೆ. ಪಟ್ಟಣ ಪಂಚಾಯ್ತಿಯು ಇವುಗಳನ್ನು ಕಂಡೂ ಕಾಣದಂತಿದೆ ಎನ್ನುವ ಮಾತುಗಳು ಆಕ್ರೋಶದ ಮಾತುಗಳು ಕೇಳಿ ಬಂದಿವೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದ್ದರೆ, ಇತ್ತ ತುರುವೇಕರೆಯಲ್ಲಿ ಮಾತ್ರ ಪ್ಲಾಸ್ಟಿಕ್ ಫ್ಲೆಕ್ಸ್ ಗಳು, ಬಣ್ಣದ ಪ್ಲಾಸ್ಟಿಕ್ ಬಂಟಿಕ್ಸ್ ಗಳು ರಾರಾಜಿತ್ತಿವೆ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ. ವರದಿ: ವೆಂಕಟೇಶ ಜೆ.ಎಸ್. ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಹೆಚ್.ಡಿ.ಕೋಟೆ/ ಸರಗೂರು: ಮೈಸೂರು ಜಿಲ್ಲೆಯ ಚರ್ಮ ರೋಗ ತಜ್ಞರ ಸಂಘದ ವತಿಯಿಂದ ಚರ್ಮ ರೋಗ ತಪಾಸಣೆ ಶಿಬಿರವನ್ನು ಭಾನುವಾರ ಹೆಚ್.ಡಿ.ಕೋಟೆ ತಾಲೂಕಿನ ಎನ್.ಬೆಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರನಹಾಡಿಯಲ್ಲಿ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದಯಾನಂದ್, ಡಾ.ನಂಜುಂಡ ಸ್ವಾಮಿ,  ಡಾ.ಬಂಗಾರು, ಡ.ಸುರೇಂದ್ರನಾಥ, ಡಾ.ಸತೀಶ್, ಡಾ.ನವೀನ್  ಹಾಗೂ ಕೆ.ಆರ್.ಆಸ್ಪತ್ರೆಯ ಇತರ ವೈದ್ಯರು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿ ಕುಮಾರ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಚರ್ಮ ರೋಗ ತಪಾಸಣೆ ನಡೆಸಿ ಎಲ್ಲರಿಗೂ ಔಷಧಿ, ಪೆನ್ನು, Ointments, Shampoo, ಪ್ರೋಟೀನ್ ಪೌಡರ್ ವಿತರಿಸಲಾಯಿತು. ಇದರ ಜೊತೆಗೆ ಹಿರಿಯರಿಗೆ ರಕ್ತದೊತ್ತಡ(BP) ಮತ್ತು ರಕ್ತ ಪರೀಕ್ಷೆ ಮಾಡಲಾಯಿತು. ಮಾರನಹಾಡಿ ಮತ್ತು ದಮ್ಮನಕಟ್ಟೆ ಹಾಡಿಯಲ್ಲಿ ಸುಮಾರು 250ರಿಂದ 300 ಜನರಿಗೆ ತಪಾಸಣೆ ನಡೆಸಿ ಸ್ಥಳದಲ್ಲೇ ಔಷಧಿಗಳನ್ನು ವಿತರಿಸಲಾಯಿತು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪರಿಶೆಯ ಕಳ್ಳೇಪುರಿಯಂತೆ ನಕಲಿ ಗೌರವ ಡಾಕ್ಟರೇಟ್ ಪದವಿಗಳನ್ನು ಮಾರುವ ಫೇಕ್ ಯೂನಿವರ್ಸಿಟಿಗಳು ಹುಟ್ಟಿಕೊಂಡಿವೆ. ಕರ್ನಾಟಕಾದ್ಯಂತ ಹಾಗೂ ಹೊರ ರಾಜ್ಯಗಳಲ್ಲಿಯೂ ಗೌರವ ಡಾಕ್ಟರೇಟ್ ಪದವಿಯನ್ನು ಮಾರುವ ದಂಧೆಯು ಅವ್ಯಾಹತವಾಗಿ ನಡೆಯುತ್ತಿದೆ. ಗೌಡಾ ಪದವಿ ನೀಡುವ  ಈ ಫೇಕ್ ಯೂನಿವರ್ಸಿಟಿಗಳಲ್ಲಿ ಕುಲಪತಿ, ಡೀನ್, ಪ್ರೊಫೆಸರ್‌, ರೀಸರ್ಚ್ ಸ್ಕಾಲರ್ಸ್, ಸ್ಟೂಡೆಂಟ್ಸ್ ಯಾವುದೂ ಇರುವುದಿಲ್ಲ. ಕುಲಪತಿ -ಶಿಕ್ಷಕ ವರ್ಗ- ವಿದ್ಯಾರ್ಥಿಗಳು – ಸಂಶೋಧಕರುಗಳೇ ಇಲ್ಲದಿರುವ ಇಂಡಿಯನ್ ವರ್ಚುಯಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಶನ್ ಸಂಸ್ಥೆ, ವರ್ಚುಯಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಹೆಸರಿನ ಫೇಕ್ ವಿಶ್ವವಿದ್ಯಾನಿಲಯಗಳು ಫೇಕ್ ‘ಗೌಡಾ’ ನೀಡುತ್ತಿವೆ. ದೊಡ್ಡ ಪ್ರಮಾಣದಲ್ಲಿ ಹಣಕಾಸಿನ  ದಂಧೆ ಇಲ್ಲಿ ನಡೆಯತ್ತಿದೆ. ಸರ್ಕಾರದಿಂದ ಅಂಗೀಕಾರ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಗಾಗಿ ನೋಂದಾಯಿಸಿ  ಸಂಶೋಧನೆ ನಡೆಸದಿರುವ ಅಥವಾ ಯಾವುದೇ ನಿರ್ದಿಷ್ಟ ಕ್ಷೇತ್ರದಲ್ಲಿ ಸಮಾಜಕ್ಕೆ ಗಣನೀಯ ಕೊಡುಗೆ ನೀಡದಿರುವ ಹಾದಿಬೀದಿಯ ಜನರೆಲ್ಲರಿಗೂ ರಮಾರುಮಿಯಾಗಿ ಡಾಕ್ಟರೇಟ್ ಪದವಿಯನ್ನು ಕೊಡುವ ಇಂತಹ ಫೇಕ್ ವಿವಿಗಳಲ್ಲಿ ಕಕಾಕಿಕೀ ತಿಳಿಯದಿರುವ ಅನಕ್ಷರಸ್ಥರು ಕೂಡಾ ಗೌಡಾ ಖರೀದಿಸುತ್ತಿದ್ದಾರೆ. ತುಮಕೂರು…

Read More

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 28ರಿಂದ  10 ದಿನಗಳವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್ ಕರ್ಫ್ಯೂ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಹೊಸ ವರ್ಷ ಆಚರಿಸುವಂತಿಲ್ಲ. ಸಭೆ ಸಮಾರಂಭಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.  ಅಲ್ಲದೇ ಹಗಲಿನಲ್ಲೂ ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಮಿತಿಗೊಳಿಸಲಾಗಿದೆ ಎಂದು ತಿಳಿಸಿದರು. ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲಿ 50:50 ನಿಯಮ ಜಾರಿಗೊಳಿಸಿದ ಕರ್ನಾಟಕ ಸರ್ಕಾರ,  ಸಿನಿಮಾ ಥಿಯೇಟರ್​ಗಳಿಗೆ ಸದ್ಯ ಈ ನಿಮಯ ಅನ್ವಯವಾಗುವುದಿಲ್ಲ ಎಂದು ಸುಧಾಕರ್ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More