Subscribe to Updates
Get the latest creative news from FooBar about art, design and business.
- ಅಮರ ಶಿಲ್ಪಿ ಜಕಣಾಚಾರಿ ಕಲಾಕೃತಿಗಳು ಅದ್ಭುತ: ಜಿ.ರವಿ
- ಬೀದರ್: ಸಂತಪೂರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; 11 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ, ಆಟೋ ವಶ
- ಫೆಲೋಶಿಪ್ ಗಾಗಿ ಅರ್ಜಿ ಆಹ್ವಾನ | ಜನವರಿ 9 ಕೊನೆಯದಿನ
- ಜ.4ರಂದು ಎತ್ತಿನಹೊಳೆಗೆ ಕೇಂದ್ರ ಅಡ್ಡಿ ವಿರುದ್ಧ ಸಭೆ: ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ
- ರುಡ್ ಸೆಟ್ ಸಂಸ್ಥೆ: ವಿವಿಧ ತರಬೇತಿಗೆ ಅರ್ಜಿ
- ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದ ಕಾಂಗ್ರೆಸ್: ಡಾ.ಇಂತಿಯಾಜ್ ಅಹಮದ್ ಅಭಿಮತ
- ಪದವೀಧರರ ಕ್ಷೇತ್ರ: ಕರಡು ಮತದಾರರ ಪಟ್ಟಿ ಸಿದ್ಧ | ಚಿರತೆ ಬಗ್ಗೆ ಸುಳ್ಳು ಮಾಹಿತಿಗೆ ಕಾನೂನು ಕ್ರಮ
- ಬುದ್ಧ, ಬಸವ, ಅಂಬೇಡ್ಕರ್ ಜಗತ್ತಿನ ಬೆಳಕು: ಶ್ರೀ ರುದ್ರಮುನಿ ಸ್ವಾಮೀಜಿ
Author: admin
ತುಮಕೂರು: ಬೇರೆಬೇರೆ ಭಾಷೆಗಳನ್ನು ಕಲಿತು ಅಲ್ಲಿ ಬಂದಿರುವ ಸಾಹಿತ್ಯದ ಅಧ್ಯಯನ ಮಾಡುವುದೇ ತೌಲನಿಕ ಅಧ್ಯಯನದ ಮೊದಲ ಮೆಟ್ಟಿಲು. ಬಹುಭಾಷಿಕ ಅಧ್ಯಯನ ಮಾದರಿ ಬೆಳೆಯಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬಹುಭಾಷಿಕ ವಿದ್ವತ್ತು ಕಡಿಮೆ ಆಗುತ್ತಿದೆ ಎಂದು ಮಹಾರಾಷ್ಟ್ರದ ಅಹಮದ್‌ನಗರ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಕಮಲಾಕರ ಭಟ್ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಅಲ್ಲಮಪ್ರಭು ಅಧ್ಯಯನ ಪೀಠವು ಇಂಗ್ಲಿಷ್ ಹಾಗೂ ಕನ್ನಡ ವಿಭಾಗಗಳ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕೀರ್ತಿನಾಥ ಕುರ್ತಕೋಟಿಯವರ ‘ಕರ್ಟೆಸಿ ಆಫ್ ಕ್ರಿಟಿಸಿಸಂ’ ಲೇಖನಗಳ ಸಂಕಲನದ ಅನುವಾದಿತ ಕೃತಿಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಹುಭಾಷಿಕ ಅಧ್ಯಯನದ ಮಾದರಿಯನ್ನು ತೋರಿಸಿಕೊಟ್ಟವರು ಕುರ್ತಕೋಟಿ. ಅವರಿಗೆ ಹಿಂದಿ, ಮರಾಠಿ, ಇಂಗ್ಲಿಷ್, ಕನ್ನಡ, ಸಂಸ್ಕೃತ, ಗುಜರಾತಿ ಮೊದಲಾದ ಭಾಷೆಗಳ ಸಾಹಿತ್ಯದ ಆಳವಾದ ಪರಿಚಯ ಇತ್ತು. ಇಂತಹ ವಿದ್ವತ್ತು ಈಗ ಕಡಿಮೆಯಾಗಿದೆ ಎಂದರು. ಯಾವ ಭಾಷೆಯೂ ಸ್ವಯಂಪೂರ್ಣ ಅಲ್ಲ. ಒಂದು ಭಾಷೆಗೆ ಇನ್ನೊಂದರೊಂದಿಗೆ ಅವಿನಾಭಾವ ಸಂಬಂಧ ಇರುತ್ತದೆ. ಪರಸ್ಪರ ಕೊಂಡುಕೊಳ್ಳುವಿಕೆಯಿಂದ ಅವು ಶ್ರೀಮಂತವಾಗುತ್ತವೆ. ಸಾಹಿತ್ಯ ಪರಂಪರೆಗಳು…
ತುಮಕೂರು: ಬೆಸ್ಕಾಂ ಶಿರಾ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಏಪ್ರಿಲ್ 7 ರಿಂದ 15ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಶಿರಾ ಟೌನ್ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಈ. ಶಾಂತರಾಜು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಇನ್ ಕ್ಯಾಪ್ ಹಾಗೂ ಶ್ರೀ ರಾಮ್ ಫಾರ್ಚೂನ್ ಸಂಸ್ಥೆಯ ಸಹಭಾಗಿತ್ವದಲ್ಲಿ ನೀರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಲುವಾಗಿ ಎಸ್.ಎಸ್.ಎಲ್.ಸಿ/ಪಿ.ಯು.ಸಿ/ ಯಾವುದೇ ಪದವಿ/ಡಿಪ್ಲೋಮಾ( ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಹಾಗೂ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್)/ಐ.ಟಿ.ಐ.(ಎಲೆಕ್ಟಾçನಿಕ್, ಮೆಕ್ಯಾನಿಕ್, ಫಿಟ್ಟರ್, ಎಲೆಕ್ಟ್ರೀಷಿಯನ್)ನಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಏಪ್ರಿಲ್ 8ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ. ಆಸಕ್ತರು ಸೋಮೇಶ್ವರಪುರಂ ವಾಸನ್ ಕಣ್ಣಿನ ಆಸ್ಪತ್ರೆ ಹತ್ತಿರದಲ್ಲಿರುವ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ಬಯೋಡೇಟಾದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಉದ್ಯೋಗ ಅಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816-2278488, ಮೊ.ಸಂ.9071021143/ 9513136642ನ್ನು ಸಂಪರ್ಕಿಸಬೇಕು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಪಾವಗಡ: ತಾಲ್ಲೂಕಿನ ಬಿಜೆಪಿ ಘಟಕದ ವತಿಯಿಂದ ಈ ದಿನ ರಾಜ್ಯ ಸರ್ಕಾರದ ಬೆಲೆ ಏರಿಕೆ ಕ್ರಮವನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ದಿನ ಬಳಕೆ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡುತ್ತಿದ್ದು ಇದರಿಂದ ಜನ ಸಾಮಾನ್ಯರಿಗೆ ತುಂಬಾ ತೊಂದರೆಯಾಗುತಿದೆ ಎಂದು ತಾಲ್ಲೂಕು ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿತು. ಬೆಲೆ ಏರಿಕೆ ಕ್ರಮವನ್ನು ಪರಿಶೀಲಿಸಿ ಕೂಡಲೇ ರದ್ದುಪಡಿಸಬೇಕು ಎಂದು ತಾಲ್ಲೂಕು ಆಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ನೀಡಲಾಯಿತು. ಈ ವೇಳೆ ಮಾತನಾಡಿದ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ದೊಡ್ಡಹಳ್ಳಿ ಅಶೋಕ್ ರವರು ರಾಜ್ಯಸರ್ಕಾರ ಇದೆ ರೀತಿ ಅಭಿವೃದ್ಧಿ ಮಾಡದೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿ ಮಾಡಿದರೆ ಜನರೆ ನಿಮಗೆ ಉತ್ತರ ಕೊಡುತ್ತಾರೆ. ಹಾಗಾಗಿ ಕೂಡಲೇ ಏರಿಕೆ ಮಾಡಿರುವ ವಿದ್ಯುತ್, ಹಾಲಿನ ಬೆಲೆ, ಡಿಸೇಲ್ , ಬಸ್ ಟಿಕೇಟ್ ದರ ಎಲ್ಲವನ್ನು ಕೂಡಲೇ ರದ್ದು ಮಾಡಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕಾಗಿ …
ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ನಲಿಗಾನಹಳ್ಳಿ ಗ್ರಾಮ ಪಂಚಾಯಿತಿಯ ಯಾರ ಪಾಳ್ಯ ಎನ್ನುವ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಒಂದು ವರ್ಷ ಕಳೆದರೂ ಇದುವರೆಗೂ ಅಧಿಕಾರಿಗಳು ಈ ಶುದ್ಧ ನೀರಿನ ಘಟಕವನ್ನು ರಿಪೇರಿ ಮಾಡಿಸುವುದಾಗಲಿ ಅಥವಾ ಪರ್ಯಾಯ ವ್ಯವಸ್ಥೆಯನ್ನಾಗಿ ಮಾಡದಿರುವುದು ಕಂಡು ಬಂದಿದೆ. ಎರ್ರಪಾಳ್ಯ ಗ್ರಾಮದ ನಾಗರಿಕರು ಶುದ್ಧ ಕುಡಿಯುವ ನೀರನ್ನು ತರಲು ಸುಮಾರು ಮೂರ್ನಾಲ್ಕು ಕಿಲೋಮೀಟರ್ ಗಳಷ್ಟು ದೂರ ನಡೆದುಕೊಂಡು ಇನ್ನೊಂದಷ್ಟು ಜನ ದ್ವಿಚಕ್ರ ವಾಹನಗಳ ಮೂಲಕ ಬಿಂದಿಗೆ ಮತ್ತು ಕ್ಯಾನುಗಳಲ್ಲಿ ನೀರು ತರುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸಂಬಂಧಪಟ್ಟ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳು ಸಮರ್ಪಕವಾಗಿ ಸಮಸ್ಯೆಯನ್ನು ಬಗೆಹರಿಸಬೇಕು, ಇಲ್ಲವಾದಲ್ಲಿ ಇಲ್ಲಿ ನಿರ್ಮಾಣ ಮಾಡಿರುವ ಶುದ್ಧಕುಡಿಯುವ ನೀರಿನ ಘಟಕವನ್ನು ತೆರವುಗೊಳಿಸಿ ಎಂದು ಗ್ರಾಮಸ್ಥರಾದ ವಿಜಯ್, ರಾಮಾಂಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ನಾಗರಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುವ ಆರೋಪ ಸಹ…
ಕೊರಟಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಸಂವಿಧಾನ ವಿರೋಧಿ ನಿಲುವು ಮತ್ತು ಓಲೈಕೆ ರಾಜಕಾರ್ಯದ ವಿರುದ್ಧ ಕೊರಟಗೆರೆ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು. ಪಟ್ಟಣದ ಎಸ್ ಎಸ್ ಆರ್ ವೃತ್ತದಿಂದ ಆರಂಭವಾಗಿ ತಾಲೂಕು ಕಚೇರಿ ವರೆಗೆ ನಡೆದ ಜಾಥಾ, ಘೋಷಣೆಗಳ ನಡುವೆ ಸಾಗಿದ್ದು, ನಂತರ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ರುದ್ರೇಶ್ ಮಾತನಾಡುತ್ತಾ, “ರಾಜ್ಯ ಸರ್ಕಾರ ದಲಿತರು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಡಿಮೆ ಮಾಡುವ ಮೂಲಕ, ಓಲೈಕೆ ರಾಜಕಾರಣ ನಡೆಸುತ್ತಿದೆ. ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಗೃಹ ಸಚಿವ ಪರಮೇಶ್ವರ್ ಮೌನ ವಹಿಸಿರುವುದು ದುರಂತ, ಗೃಹ ಸಚಿವರು ಎಲ್ಲಿದ್ದಾರೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಕಾಂಗ್ರೆಸ್ ನಾಯಕರ ಹೆಸರುಗಳಿರುವ ಡೆತ್ ನೋಟ್ ಕೂಡ ಬೆಳಕಿಗೆ ಬಂದಿದೆ, ಆದರೆ ಯಾವುದೇ ಎಫ್ ಐಆರ್ ದಾಖಲಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ಬಿ.ಹೆಚ್.ಅನಿಲ್ ಕುಮಾರ್ ಮಾತನಾಡಿ, “ಟಿಎಸ್…
ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಶ್ರೀ ಸಿದ್ದೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ನುರಿತ ರಂಗಭೂಮಿ ಕಲಾವಿದರಿಂದ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ವೇಣುಗೋಪಾಲ ಸ್ವಾಮಿ ಡ್ರಾಮಾ ಸೀನ್ಸ್ ಚಿಂತಾಮಣಿ ಇವರು ನಿರ್ಮಿಸಲಿರುವ ಜಗಜಗಿಸುವ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತವಾದ ಭವ್ಯ ವೇದಿಕೆಯಲ್ಲಿ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠ ಸಿದ್ದರಬೆಟ್ಟದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ಅಧ್ಯಕ್ಷತೆಯಲ್ಲಿ, ದಿನಾಂಕ : 07/04/2025 ರ ಸೋಮವಾರ ರಾತ್ರಿ 8 ಗಂಟೆಗೆ ಸರಿಯಾಗಿ ಕ್ಷೇತ್ರ ಪಾಲಕ ಶ್ರೀ ಸಿದ್ದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪೌರಾಣಿಕ ನಾಟಕವಾದ ವಿರಾಟ ಪರ್ವ ಅಥವಾ ಕೀಚಕನ ವಧೆ ಎಂಬ ನಾಟಕ ನಡೆಯಲಿದೆ. ಹಾರ್ಮೋನಿಯಂ ಮತ್ತು ಸಂಗೀತ ನಿರ್ದೇಶನವನ್ನು ಹಿರಿಯ ಕಲಾವಿದ ಕೃಷ್ಣಮೂರ್ತಪ್ಪರ ಪುತ್ರ ಜಯಸಿಂಹ ಮತ್ತು ಬೆಳ್ಳಿ ಕಿರೀಟ…
ಬೀದರ್: ಔರಾದ ತಾಲೂಕು ಮಾದಿಗ ಸಮುದಾಯ ವತಿಯಿಂದ ಇಂದು ಹಸಿರು ಕ್ರಾಂತಿಯ ಹರಿಕಾರರಾದ ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಆಚರಿಸಲಾಯಿತು. ಸಮಾಜದ ಮುಖಂಡರಾದ ಅಶೋಕ್ ದರ್ಬಾರ್, ಸುಧಾಕರ ಕೊಳ್ಳುರ, ಬಸವರಾಜ್ ಮಾಳಿಗೆ ಈ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಸುಧಾಕರ ಕೊಳ್ಳುರ, ಅಶೋಕ ದರಬಾರೆ, ಬಸವರಾಜ್ ಮಾಳ್ಗೆ, ಅನಿಲ್ ಹೋಳ್ಕರ್, ಸಂಜು ಮಾನಕಾರೆ, ರಾಜು, ಜೈವಂತ, ಸಿಮೋನ, ಕಾಶಿನಾಥ, ಸಂಜು, ದಯಾನಂದ, ಮಾರುತಿ, ಜಾನ್ಸನ್, ಕಮಲ್ ಹಾಸನ್, ಶಿವರಾಜ್, ಮುಂತಾದರೂ ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಬೀದರ್: ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ (ಚೌದ್ರಿ) ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಸ್ಪೃಶ್ಯತೆಯ ನಿವಾರಣಾ ಹೋರಾಟದ ಮುಂಚೂಣಿ ವಹಿಸಿದ ಧೀಮಂತ ನಾಯಕ ಶೋಷಿತರ ದಮನಿತರ ಧ್ವನಿ. ಹಸಿರು ಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನರಾಮ್ ಅವರ ಜನ್ಮದಿನದಂದು ಅವರಿಗೆ ಗೌರವದ ನಮನಗಳನ್ನು ಸಲ್ಲಿಸಲಾಯಿತು. ರವಿಕುಮಾರ್ ಮಲ್ಲಿಗೆ ಮಾತನಾಡಿ, ಡಾ.ಬಾಬು ಜಗಜೀವನರಾಮ್ ಸ್ವಾತಂತ್ರ್ಯ ಹೋರಾಟಗಾರರಾಗಿ, ಸ್ವಾತಂತ್ರ್ಯನಂತರ ಭಾರತ ಸರ್ಕಾರದ ಸಚಿವರಾಗಿ, ಉಪ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ನಾಯಕರು. ಕೃಷಿ ಸಚಿವರಾಗಿದ್ದಾಗ ಸುಧಾರಿತ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅನುಷ್ಠಾನಗೊಳಿಸಿ ಆಹಾರ ಧಾನ್ಯಗಳ ಕೊರತೆ ನೀಗಿಸಿದ ಹಸಿರುಕ್ರಾಂತಿಯ ಹರಿಕಾರ ಎನಿಸಿಕೊಂಡರು. ಅವರ ತತ್ವಾದರ್ಶಗಳು ವಿಚಾರಧಾರೆಗಳು ನಮಗೆಲ್ಲರಿಗೂ ದಾರಿದೀಪವಾಗಿವೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆತ್ಮಾರಾಮ್. ಗ್ರಾ.ಪಂ. ಸದಸ್ಯ ಕರಬಸಪ್ಪಾ ಸೊರಾಳೆ, ತುಳಸಿರಾಮ್ ಮಲ್ಲಿಗೆ, ಎಂ.ಡಿ.ನಯೂಮ್, ಮುನ್ನ ಸಾಹೇಬ್, ಜಾವಿದ್, ಆನಂದ್ ಸೋರಾಳೆ ಶಿವಕುಮಾರ, ಉಮಕಾಂತ್, ಕಮಲಾಕರ್ ಮಾಳೆಗೆ, ಪೌಲ್ ಧೋಳೆ, ಬಸವರಾಜ್,…
ಸ್ನೇಹ ಅನ್ನೋದನ್ನ ವಿವರಿಸಲು ಪದಗಳು ಸಾಲದು. ಸ್ನೇಹಿತರಿಗಾಗಿ ಪ್ರಾಣಕೊಟ್ಟವರೂ ಇತಿಹಾಸದಲ್ಲಿದ್ದಾರೆ. ಇದೀಗ ಸಾಮಾಜಿಕ ಜಾಲತಾಣವೊಂದರಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಸ್ನೇಹಿತನ ಮೃತದೇಹದ ಎದುರು ಕೊನೆಯ ಬಾರಿಗೆ ಪ್ರಾಣ ಸ್ನೇಹಿತ ಆತ್ಮೀಯತೆಯಿಂದ ಕಾಲ ಕಳೆದಿದ್ದಾನೆ. ಕಳೆದು ಹೋದ ಜೀವನದ ಕೊನೆಯ ಕ್ಷಣವನ್ನು ನೆನಪು ಮಾಡಿಕೊಂಡಿದ್ದಾನೆ. ಹೌದು..! ವೈರಲ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ಪ್ರಾಣ ಸ್ನೇಹಿತ ಮೃತಪಟ್ಟಾಗ ಆತನ ಮೃತದೇಹವನ್ನ ಅಂತ್ಯ ಕ್ರಿಯೆ ನಡೆಸುವ ಮುನ್ನ ಮೃತದೇಹಕ್ಕೆ ಮದ್ಯ ಕುಡಿಸಿ, ಸಿಗರೇಟ್ ಹೊತ್ತಿಸಿ ಸ್ನೇಹಿತ ತುಟಿಯ ಮೇಲೆ ಇಟ್ಟಿದ್ದಾನೆ. ಇದು ನನ್ನ ಜೊತೆಗಿನ ಕೊನೆಯ ಪಾರ್ಟಿ ಎಂದು ಸ್ನೇಹಿತ ಭಾವುಕನಾಗಿದ್ದಾನೆ. ಈ ವಿಡಿಯೋಗೆ ಸಾಕಷ್ಟು ಜನರು ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ನಿಜವಾದ ಸ್ನೇಹ ಎಂದರೆ ಇನ್ನು ಕೆಲವರು ಇದು ಸ್ನೇಹವಲ್ಲ ಮೂರ್ಖತನ ಎಂದಿದ್ದಾರೆ. ಪ್ರತಿ ದಿನವೂ ಜೊತೆಗೂಡುತ್ತಿದ್ದಾಗ ಒಂದು ಪೆಗ್ ಹಾಕಿ, ಸಿಗರೇಟ್ ಸೇದುತ್ತಿದ್ದ ಸ್ನೇಹಿತರ ಅಗಲಿಕೆ ಇದು. ಆತನ ಜೊತೆಗೆ ಕೊನೆಯ ಬಾರಿ ಮದ್ಯ ಸೇವಿಸುವ, ಸಿಗರೇಟು…