Author: admin

ಪಾವಗಡ: ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀರಂಗಪುರ ತಾಂಡಾದಲ್ಲಿರುವ ಅಂಗನವಾಡಿ ಕೇಂದ್ರ ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ಮಾದರಿಯಾಗಿದ್ದು, ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ ಎನ್ನುವವರು ಅನುಪಯುಕ್ತ ಪ್ಲಾಸ್ಟಿಕ್ ಅನ್ನು ಬಳಸಿಕೊಂಡು ಆಕರ್ಷಕ ವಸ್ತುಗಳನ್ನು ತಯಾರಿಸಿದ್ದು ಮತ್ತು ಮಕ್ಕಳಿಗೆ ಉತ್ತಮ ವಾತಾವರಣವನ್ನು ಅಂಗನವಾಡಿಯಲ್ಲಿ ಕಲ್ಪಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಅಂಗನವಾಡಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ಮಕ್ಕಳಿಂದ ಕಲಿಕೆಯ ಪ್ರಗತಿ ವೀಕ್ಷಿಸಿ, ಸಾರ್ವಜನಿಕರಿಂದ ಗೃಹಲಕ್ಷ್ಮಿ ಹಣ ಪಾವತಿ ಬಗ್ಗೆ ಮಾಹಿತಿ ಪಡೆದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಚೇತನ್ ಕುಮಾರ್ ಎಂ.ಎನ್., ಸಿಡಿಪಿಒ ಡಿ.ಜಿ ಸುನೀತಾ, ಕಾರ್ಯ ಕರ್ತ ಸುಶೀಲಮ್ಮ, ಮೇಲ್ವಿಚಾರಣೆ ಭಾಗ್ಯಲಕ್ಷ್ಮಿ ಹಾಜರಿದ್ದರು. ಇದಕ್ಕೂ ಮೊದಲು ಅವರು ಪಟ್ಟಣದ ಬೀದಿ ಬದಿಯ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿಯಿಂದ ಸಾಲ ಸೌಲಭ್ಯ ವಿತರಣೆ ಮಾಡಿದ್ದು ಸೌಲಭ್ಯ ಪಡೆದಾ ಫಲಾನುಭವಿಗಳಿಂದ ಮಾಹಿತಿ ಪಡೆದರು, ನಂತರ ತಿರುಮಣಿಯ ಸೋಲಾರ್ ಪಾರ್ಕ್ ಗೆ ಭೇಟಿ ನೀಡಿ ಪರಿಶೀಲಿಸಿದ್ದು,…

Read More

ವಾಷಿಂಗ್ಟನ್:  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳುಗಳಿಂದ ಸಿಲುಕಿರುವ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್  ಮತ್ತು ಬುಜ್ ವಿಲ್ಮೋರ್ ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5.57ಕ್ಕೆ ಭೂಮಿಗೆ ತಲುಪಲಿದ್ದಾರೆ. ಫ್ಲೋರಿಡಾದ ಕಡಲ ತೀರದಲ್ಲಿ ಅವರು ಲ್ಯಾಂಡ್  ಆಗುವ ನಿರೀಕ್ಷೆಯಿದೆ. ನಾಸಾ ಮತ್ತು ಸ್ಪೇಸ್ ಎಕ್ಸ್ ಜಂಟಿ ಪ್ರಯತ್ನದ ಮೂಲಕ ವಾಪಸ್ ಕರೆ ತರುವ ಕಾರ್ಯಾಚರಣೆ ಇದಾಗಿದೆ ಎಂದು ನಾಸಾ ತಿಳಿಸಿದೆ. ಸುನಿತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಅವರನ್ನು ಭೂಮಿಗೆ ವಾಪಸ್ ಕರೆತರಲು ಸ್ಪೇಸ್‌ ಎಕ್ಸ್‌ ನಲ್ಲಿ ಫಾಲ್ಕನ್ 9 ರಾಕೆಟ್ ಅನ್ನು ಮಾ. 15ರಂದು ಉಡಾವಣೆ ಮಾಡಲಾಗಿತ್ತು. ಮಾ.16ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್‌ ಎಕ್ಸ್ ತಲುಪಿದ್ದು, ಸುನಿತಾ ವಿಲಿಯಮ್ಸ್ ಹಾಗೂ ಬುಜ್‌ ರನ್ನು ಭೂಮಿಗೆ ವಾಪಾಸ್ ಕರೆತರುವ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

2025 ಇಸವಿಯ ಮೊದಲ ಸೂರ್ಯಗ್ರಹಣ ಮಾರ್ಚ್ 29ರಂದು ಸಂಭವಿಸಲಿದೆ. ಆದ್ರೆ ಈ ಗ್ರಹಣವು ಭಾರತದಲ್ಲಿ ಕಾಣಿಸಲ್ಲ. ಗ್ರಹ ಅಥವಾ ಉಪಗ್ರಹದ ನೆರಳು ಭಾಗಶಃ ಅಥವಾ ಸಂಪೂರ್ಣ ಇನ್ನೊಂದರ ಮೇಲೆ ಬಿದ್ದಾಗ ಗ್ರಹಣ ನಡೆಯುತ್ತದೆ. ಸೂರ್ಯ, ಚಂದ್ರ ಮತ್ತು ಭೂಮಿ ಒಂದು ಸರಳ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ನಡೆಯುತ್ತದೆ. ಈ ಬಾರಿಯ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಏಷ್ಯಾ, ಆಫ್ರಿಕಾ, ಯುರೋಪ್, ಅಟ್ಲಾಂಟಿಕ್ ಸಾಗರ, ಅಮೆರಿಕ, ಸೈಬೇರಿಯಾ, ರಷ್ಯಾ, ಗ್ರೀನ್ಲ್ಯಾಂಡ್, ವೆಸ್ಟರ್ಟ್ ಯುರೋಪ್ ನಲ್ಲಿ ಈ ಗ್ರಹಣ ಕಾಣಿಸಿಕೊಳ್ಳಲಿದೆ. ಗ್ರಹಣ ಅನ್ನೋದು ಪ್ರಕೃತಿಯ ವಿಸ್ಮಯವಾಗಿದೆ. ಇದರಲ್ಲಿ ಯಾವುದೇ ಮೌಢ್ಯತೆಗಳನ್ನು ಆಚರಿಸದೇ ಸಾರ್ವಜನಿಕರು ವಿಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಕಲಬುರಗಿ: ನಗರದ ರಾಜಾಪುರ ಬಡಾವಣೆಯ ನಿವಾಸಿಯಾದ ರೇವಣಸಿದ್ದ ಅನ್ನೋ ಯುವಕನನ್ನು ಆತನ ಸ್ನೇಹಿತರೆ ಬರ್ಬರವಾಗಿ ಹತ್ಯೆ ನಡೆಸಿ ಪರಾರಿಯಾದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ರೇವಣಸಿದ್ದ ಆತನ ಸ್ನೇಹಿತರೊಂದಿಗೆ ಮನೆಯಿಂದ ಆಚೆ ಹೋಗಿ ವಾಪಸ್ ಬಂದಿದ್ದಾರೆ. ವಾಪಸ್ ಮನೆ ಬಳಿ ಬರ್ತಿದ್ದ ವೇಳೆ ಮನೆಯಿಂದ 50 ಅಡಿ ದೂರದಲ್ಲೇ ಆತನ ಸ್ನೇಹಿತರು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕೊಲೆಯಾದ ರೇವಣಸಿದ್ದ ಫೈನಾನ್ಸ್ ನಡೆಸುತ್ತಿದ್ದ, ಪ್ರತಿ ರಾತ್ರಿ 10 ಗಂಟೆಯೊಳಗೆ ಮಗ ಮನೆಗೆ ಬರುತ್ತಿದ್ದ ಆದ್ರೆ 12 ಆದರೂ ಬಾರದ ಹಿನ್ನೆಲೆ ಮಗನಿಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ನೇಹಿತರ ಜೊತೆಗೆ ಇದ್ದೇನೆ ಎಂದು ಕರೆ ಕಟ್ ಮಾಡಿದ್ದ. ಬಳಿಕ ಆತನ ಬೈಕ್ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಬಳಿ ಬಿಟ್ಟು ಉಳಿದ ಸ್ನೇಹಿತರ ಬೈಕ್ ನಲ್ಲಿ ಕರೆ ತಂದು, ಮನೆ ಹತ್ತಿರ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ವಾಕಿಂಗ್ ಗೆ ಬಂದವರು ಕೊಲೆ ದೃಶ್ಯವನ್ನು ಕಂಡು ಪೊಲೀಸರಿಗೆ ಮಾಹಿತಿ…

Read More

ಭುವನೇಶ್ವರ: ವ್ಯಕ್ತಿಯೊಬ್ಬ ತನಗೆ ಮೂರು ಬಾರಿ ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಮಯೂರ್ಭಂಜ್ ಜಿಲ್ಲೆಯ ಉದಲಾದಲ್ಲಿ ಈ ಘಟನೆ ನಡೆದಿದೆ. ಅಜಿತ್ ಕರ್ಮಾಕರ್ ಅವರಿಗೆ ಅವರ ಮನೆಯ ಆವರಣದಲ್ಲಿ ನಾಗರ ಹಾವು ಸುಮಾರು ಮೂರು ನಾಲ್ಕು ಬಾರಿ ಕಚ್ಚಿತ್ತು. ತಕ್ಷಣವೇ ಹಾವನ್ನು ಹೊಡೆದು ಕೊಂದ ಅವರು ಪ್ಲಾಸ್ಟಿಕ್ ಚೀಲದಲ್ಲಿ ಹಾವನ್ನು ತುಂಬಿಸಿ ನೇರವಾಗಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ. ವೈದ್ಯರು ಯಾವ ಹಾವು ಕಚ್ಚಿರುವುದು ಎಂದು ಕೇಳಿದರೆ ತೋರಿಸಲು ಈ ವ್ಯಕ್ತಿ ಹೀಗೆ ಮಾಡಿದ್ದಾರಂತೆ, ಆಸ್ಪತ್ರೆಯ ಡಾ. ರಾಜ್ಕುಮಾರ್ ನಾಯಕ್ ತಕ್ಷಣವೇ ಕಚ್ಚಿದ ಹಾವನ್ನು ಗುರುತಿಸಿ ಅಜಿತ್ ಕರ್ಮಾಕರ್ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ವ್ಯಕ್ತಿ ಹಾವನ್ನು ತನ್ನ ಜೊತೆಗೆ ಆಸ್ಪತ್ರೆಗೆ ತಂದಿರುವುದರಿಂದ ತ್ವರಿತವಾಗಿ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಯ್ತು ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…

Read More

ನಟ ದರ್ಶನ್ ಇನ್ ಸ್ಟಾಗ್ರಾಮ್ ನಲ್ಲಿ ಸುಮಲತಾ ಸೇರಿದಂತೆ ಕೆಲವೇ ಕೆಲವರನ್ನು ಫಾಲೋ ಮಾಡುತ್ತಿದ್ದರು. ಈ ಪೈಕಿ ಅಂಬರೀಷ್ ಕುಟುಂಬದ ಸುಮಲತಾ, ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಇದ್ದರು. ಎಲ್ಲರನ್ನೂ ದರ್ಶನ್ ಅನ್ ಫಾಲೋ ಮಾಡಿದ್ದರು, ಇದೀಗ ಸುಮಲತಾ ಮನೆಯ ಪ್ರಮುಖ ಕಾರ್ಯಕ್ರಮಕ್ಕೆ ದರ್ಶನ್ ಗೈರಾಗಿದ್ದಾರೆ. ಅಭಿಷೇಕ್ ಅಂಬರೀಷ್ ಮಗನಿಗೆ ನಾಮಕರಣ ಶಾಸ್ತ್ರ. ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಈ ಶಾಸ್ತ್ರ ನೆರವೇರಿತು. ಈ ಕಾರ್ಯಕ್ರಮಕ್ಕೆ ಸುದೀಪ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಆದರೆ ದರ್ಶನ್ ಮಾತ್ರ ಗೈರಾಗಿದ್ದರು. ಯಮ ಕರೆದರೆ ಅಮ್ಮನ ಒಂದು ಕೆಲಸ ಇದೆ ಮುಗಿಸಿ ಬರ್ತೀನಿ ಎಂದು ಹೇಳುತ್ತೇನೆ ಎಂದು ಒಂದು ಕಾಲದಲ್ಲಿ ನಟ ದರ್ಶನ್ ಹೇಳಿದ್ದರು. ಆದರೆ ತಾನು ಜೈಲು ಸೇರಿದ ವೇಳೆ ಯಾರೂ ಬೆನ್ನ ಹಿಂದೆ ನಿಲ್ಲಲಿಲ್ಲ ಎಂದು ಅವರು ನೊಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More

ಬೆಂಗಳೂರು: ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಮರಿಗೆ ಮಾತ್ರ ಮೀಸಲಾತಿ ನೀಡುವುದನ್ನು ವಿರೋಧಿಸುವುದಾಗಿ ಹೇಳಿರುವ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದರ ವಿರುದ್ಧ ಉಭಯ ಸದನಗಳಲ್ಲೂ  ಹೋರಾಡುವುದಾಗಿ ತಿಳಿಸಿದ್ದಾರೆ. ನಮ ಹೋರಾಟಕ್ಕೆ ಸರ್ಕಾರ ಬಗ್ಗದಿದ್ದರೆ ಜನರ ಮುಂದೆ ಈ ಹೋರಾಟವನ್ನು ಕೊಂಡೊಯ್ಯುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿ ಆಕೋಶ ಹೊರ ಹಾಕಿರುವ ಅವರು, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವಕ್ಕೆ ಬಿಜೆಪಿ ಸದಾ ಬದ್ಧವಾಗಿದೆ ಎಂದಿದ್ದಾರೆ. ಕಾಂಗ್ರೆಸ್‌‍ ಸರ್ಕಾರ ಮುಸ್ಲಿಮರಿಗೆ ಬಹುಪಾಲು ಇತರರಿಗೆ ಅಲ್ಪಪಾಲು ಎಂಬ ನೀತಿ ಅನುಸರಿಸಲು ಹೊರಟು ಕುವೆಂಪು ಅವರು ಕಲ್ಪಿಸಿದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ವಿಜಯಪುರ: ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಸಚಿವರ ಹೆಸರು ಶೀಘ್ರವೇ ವಿಧಾನಸಭೆಯಲ್ಲಿ ಬಹಿರಂಗ ಪಡಿಸುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ರನ್ಯಾ ಜೊತೆ ಯಾರೆಲ್ಲಾ ಸಂಬಂಧ ಹೊಂದಿದ್ದಾರೆ, ಅವರಿಗೆ ಯಾವ ರೀತಿಯ ಭದ್ರತೆ ಒದಗಿಸಲಾಗಿದೆ ಎಂಬುದನ್ನು ವಿಧಾನಸಭೆಯಲ್ಲಿ ಬಹಿರಂಗಪಡಿಸುತ್ತೇನೆ. ಅವರು ಚಿನ್ನವನ್ನು ಎಲ್ಲಿಂದ ಪಡೆದರು ಎಂಬುದು ಸೇರಿದಂತೆ ಎಲ್ಲಾ ಮಾಹಿತಿಯನ್ನು ನಾವು ಸಂಗ್ರಹಿಸಿದ್ದೇವೆ ಎಂದರು. ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಚಿವರ ಹೆಸರುಗಳನ್ನು ಬಹಿರಂಗಪಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ಒತ್ತಾಯಿಸುತ್ತಿದೆ. ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಹೇಳಿಕೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಚಿತ್ರದುರ್ಗ:  ಕುಡಿಯುವ ನೀರಿನ ವಿಚಾರಕ್ಕೆ ಜಗಳ ನಡೆದು ಮದುವೆಯೇ ಮುರಿದು ಬಿದ್ದ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಲಿಜ ಶ್ರೇಯ ಭವನದಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ಯುವತಿ ಹಾಗೂ ಜಗಳೂರು ಪಟ್ಟಣದ ಯುವಕನ ವಿವಾಹ ನಿಶ್ಚಯವಾಗಿತ್ತು. ವಧು ಹಾಗೂ ವರ ಇಬ್ಬರೂ ಇಂಜಿನಿಯರಿಂಗ್ ಪದವೀಧರರಾಗಿದ್ದು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ ಆರತಕ್ಷತೆ ಮುಗಿಸಿಕೊಂಡು ಊಟಕ್ಕೆ ಹೋದ ವರನ ಕಡೆಯ ಕೆಲವರಿಗೆ ಕುಡಿಯುವ ನೀರು ಸಿಕ್ಕಿಲ್ಲ. ಇದೇ ವಿಚಾರಕ್ಕೆ ವಧು ಹಾಗೂ ವರನ ಕಡೆಯವರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿತ್ತು. ವರನ ಕಡೆಯವರ ಜಗಳ ಕಂಡು ಚಿಂತೆಗೆ ಜಾರಿಗೆ ವಧು ನನಗೆ ಈ ಮದುವೆ ಬೇಡ ಎಂದು ನಿರಾಕರಿಸಿದ್ದಾಳೆ ಎನ್ನಲಾಗಿದೆ. ಮದುವೆ ಮುರಿದು ಬಿದ್ದ ಹಿನ್ನೆಲೆ ಸಂಬಂಧಿಕರು ಬಂದ ದಾರಿಯಲ್ಲೇ ವಾಪಸ್ ಆಗಿದ್ದಾರೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠಕ್ಕೆ ನವದಂಪತಿಗಳಾದ ಸಂಸದ ತೇಜಸ್ವಿ ಸೂರ್ಯ, ಶಿವಶ್ರೀ ಭೇಟಿ ನೀಡಿ ದೇವರ ಸನ್ನಿಧಿಯಲ್ಲಿ ಕೀರ್ತನೆ, ಸಂಗೀತ ಸೇವೆ ಸಲ್ಲಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದ ದಂಪತಿ ಕೀರ್ತನೆ, ಸಂಗೀತ ಸೇವೆ ಸಲ್ಲಿಸಿದರು. ಮದುವೆಯ ನಂತರ ತೇಜಸ್ವಿ ಸೂರ್ಯ ಅವರು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ . ಇಬ್ಬರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ದಂಪತಿಯಾಗಿದ್ದಾರೆ ಎಂದು ಇದೇ ವೇಳೆ ನವದಂಪತಿಗಳನ್ನು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಡಿ ಹೊಗಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More