Subscribe to Updates
Get the latest creative news from FooBar about art, design and business.
- 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
- ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ: ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ
- ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ
- ರಾಹುಲ್ ಗಾಂಧಿ ಪ್ರಧಾನಿಯಾಗಲಿ: ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ
- ಆಗಸ್ಟ್ 9ರಂದು ತಿಪಟೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆ
- ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
- ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ
- ಹೂ ಲೋಕ, ಭೂರಮೆಯ ರಥ : ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ ವಾಹ್..!
Author: admin
ನವದೆಹಲಿ: ಮುಂಬರುವ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಆಗಮಿಸಲಿದ್ದಾರೆ ಎನ್ನಲಾಗಿದೆ. ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯನ್ನು ಭಾರತ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭೇಟಿಯ ವೇಳೆ ಸುಬಿಯಾಂಟೋ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಲಿದ್ದಾರೆ. ಪ್ರತಿ ವರ್ಷ ಭಾರತವು ವಿಶ್ವ ನಾಯಕರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸುತ್ತದೆ. ಕಳೆದ ವರ್ಷ ಫ್ರೆಂಚ್ ಅಧ್ಯಕ್ಷ ಇವ್ಯಾನುಯೆಲ್ ವ್ಯಾಕ್ರನ್ ಮುಖ್ಯ ಅತಿಥಿಯಾಗಿದ್ದರು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್–ಸಿಸಿ ಅವರು 2023 ರಲ್ಲಿ ಈ ಸಂದರ್ಭವನ್ನು ಅಲಂಕರಿಸಿದರು. ಕೋವಿಡ್–19 ಸಾಂಕ್ರಾಮಿಕದ ದಷ್ಟಿಯಿಂದ 2021 ಮತ್ತು 2022 ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಯಾರು ಬಂದಿರಲಿಲ್ಲ. 2020 ರಲ್ಲಿ, ಆಗಿನ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಮುಂಬೈ: ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕಾಲಿಗೆ ಗಾಯವಾದ ಪರಿಣಾಮ ಪುಷ್ಪಾ ಶ್ರೀವಲ್ಲಿ, ರಶ್ಮಿಕಾ ಮಂದಣ್ಣ ಬೆಡ್ ರೆಸ್ಟ್ ಮಾಡುತ್ತಿದ್ದಾರೆ. ಇದೀಗ ಇನ್ ಸ್ಟಾದಲ್ಲಿ ಕಾಲಿನ ಗಾಯದ ಬಗ್ಗೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಜಿಮ್ ನಲ್ಲಿ ಗಾಯಗೊಂಡಿದ್ದೇನೆ. ಕೆಲ ವಾರ ಅಥವಾ ತಿಂಗಳು ವಿಶ್ರಾಂತಿಯಲ್ಲಿರುವುದಾಗಿ ರಶ್ಮಿಕಾ ತಿಳೀಸಿದ್ದಾರೆ. ಕಾಲಿನ ನೋವು ಗುಣವಾದ ತಕ್ಷಣ ಥಾಮ, ಸಿಕಂದರ್ ಮತ್ತು ಕುಬೇರ ಸೆಟ್‌ಗೆ ಮರಳುತ್ತೇನೆ. ಈ ವಿಳಂಬಕ್ಕೆ ಕ್ಷಮೆಕೋರುತ್ತೇನೆ ಎಂದು ರಶ್ಮಿಕಾ ತಿಳಿಸಿದ್ದಾರೆ. ರಶ್ಮಿಕಾ ಮುಂದಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಎ.ಆರ್. ಮುರುಗದಾಸ್ ನಿರ್ದೇಶನದ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಸಿಕಂದರ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಾಜಲ್ ಅಗರ್ವಾಲ್, ರಶ್ಮಿಕಾ, ಸತ್ಯರಾಜ್, ಶರ್ಮಾನ್ ಜೋಶಿ ಮತ್ತು ಪ್ರತೀಕ್ ಬಬ್ಬರ್ ನಟಿಸುತ್ತಿದ್ದು 2025 ರ ಈದ್ ಹಬ್ಬಕ್ಕೆ ಬಿಡುಗಡೆಯಾಗಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ವಿಜಯಪುರ: ನಿಮ್ಮ ತಂದೆಯ ಬಂಡವಾಳ ಬಯಲು ಮಾಡುತ್ತೇನೆಂದು ವಿಜಯೇಂದ್ರಗೆ ಪ್ರಿಯಾಂಕ್ ಖರ್ಗೆ ಬೆದರಿಕೆ ಹಾಕಿದ್ದರು, ಹೀಗಾಗಿ ಕಲಬುರಗಿ ಪ್ರತಿಭಟನೆಗೆ ವಿಜಯೇಂದ್ರ ಹೋಗಿಲ್ಲ ಎಂದು ಶನಿವಾರ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ಹಿತೈಷಿಗಳೇ ದೊಡ್ಡ ಮಟ್ಟದ ಹೋರಾಟ ಆಯೋಜನೆ ಮಾಡಿದ್ದರು. ಆದರೂ, ವಿಜಯೇಂದ್ರ ಈ ಹೋರಾಟಕ್ಕೆ ಯಾಕೆ ಹೋಗಲಿಲ್ಲ? ಗೈರಾಗಿದ್ದು ಯಾಕೆ? ಸುರಕ್ಷತೆಯ ಭಯವೇ? ಇದಕ್ಕೆ ವಿಜಯೇಂದ್ರನೇ ಉತ್ತರಿಸಬೇಕು. ವಿಜಯೇಂದ್ರಗೆ ನಿಮ್ಮ ತಂದೆಯ ಎಲ್ಲ ವಿಷಯಗಳನ್ನು ಹೊರ ತೆಗೆಯುತ್ತೇನೆಂದು ಪ್ರಿಯಾಂಕ್ ಖರ್ಗೆಯವರು ಧಮ್ಕಿ ಹಾಕಿದ್ದರು. ಕಲಬುರಗಿಯಲ್ಲಿ ನನ್ನ ವಿರುದ್ಧ ಪ್ರತಿಭಟನೆಗೆ ಬರಬೇಡಿ, ಬಂದರೆ ನಿಮ್ಮ ತಂದೆಯ ಬಂಡವಾಳ ಬಯಲು ಮಾಡುತ್ತೇನೆಂದು ವಿಜಯೇಂದ್ರಗೆ ಪ್ರಿಯಾಂಕ್ ಖರ್ಗೆ ಬೆದರಿಕೆ ಹಾಕಿದ್ದರು. ಈ ಭಯದ ಕಾರಣಕ್ಕೆ ವಿಜಯೇಂದ್ರ ಹೋಗಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್’ಗೆ ಒಳಗಾಗದ ನಾಲ್ವರನ್ನು ಗುರಿ ಮಾಡಲಾಗಿದೆ ಎಂದ ಅವರು, ನಾನು, ಸಿಟಿ.ರವಿ, ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್, ಪ್ರತಾಪ್…
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಉಪಟಳ ಮಿತಿ ಮೀರಿ ಹೋಗಿದೆ ಇಷ್ಟು ದಿನ ಕಾಡಾನೆ, ಕಾಡುಕೋಣ, ಹುಲಿ ದಾಳಿ ಅಂತ ಬೇಸತ್ತಿದ ಜನ ಇದೀಗ ಚಿರತೆಗೆ ಭಯಪಡುವಂತಾಗಿದೆ. ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಎರಡು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು ಸ್ಥಳೀಯರಲ್ಲಿ ಹಾಗೂ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ತುಮಕೂರು ಇವರ ವತಿಯಿಂದ ಚೊಚ್ಚಲ ಬಾರಿಗೆ ಕಲ್ಪತರು ನಗರಿ ತುಮಕೂರಿನಲ್ಲಿ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನವನ್ನು ನಡೆಸಲು ನಿಶ್ಚಯಿಸಿದ್ದು, ಈಗಾಗಲೇ ನಿರೀಕ್ಷೆಗೂ ಮೀರಿದ ಸಿದ್ಧತೆಗಳನ್ನ ಕೈಗೊಳ್ಳಲಾಗಿದ್ದು ಕಲ್ಪತರು ನಾಡಿನಲ್ಲಿ ನಡೆಯುವರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿ ನಡೆಯಬೇಕಿದೆ ಎಂದುಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ನಗರದಎಸ್ ಎಸ್ ಐಟಿಕಾಲೇಜುಕ್ಯಾಂಪಸ್ ಆವರಣದ ಸ್ಟೇಪ್ ಬಿಲ್ಡಿಂಗ್ ಸಭಾಂಗಣದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಕುರಿತಾಗಿತುಮಕೂರು ಜಿಲ್ಲಾ ಘಟಕದ ವಿವಿಧ ಉಪ ಸಮಿತಿಗಳ ಸಿದ್ಧತೆ ಮತ್ತು ಕಾರ್ಯವೈಕರಿಗಳ ಬಗ್ಗೆ ಚರ್ಚೆ ನಡೆಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು ಶ್ರೇಷ್ಠತೆಗಳಲ್ಲಿ ವಿಶೇಷತೆ ಎನಿಸಿರುವ ತುಮಕೂರು ಜಿಲ್ಲೆಯು ಶೈಕ್ಷಣಿಕ, ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಅದೇ ನಿಟ್ಟಿನಲ್ಲಿ ಈ ಬಾರಿ ಇಲ್ಲಿ ನಡೆಯುವ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವೂ ಕೂಡ ಇತಿಹಾಸದ ಮೈಲಿಗಲ್ಲು ಆಗಲಿದ್ದು ಅದಕ್ಕೆ ತಕ್ಕಂತಹ ಸಿದ್ಧತೆಗಳನ್ನು…
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ವಿವಾಹವೊಂದು ದಿಢೀರ್ ಆಗಿ ಸ್ಥಗಿತಗೊಂಡಿರುವ ಘಟನೆ ನಡೆದಿದ್ದು, ತಾಳಿ ಕಟ್ಟುವ ವೇಳೆ ವಧುವೇ ವಿವಾಹವನ್ನು ನಿಲ್ಲಿಸಿರುವ ವಿಡಿಯೋ ವೈರಲ್ ಆಗಿದೆ. ಮದುವೆ ಮನೆಗೆ ಮದುಮಗ ಕಂಠಪೂರ್ತಿ ಕುಡಿದು ಬಂದಿದ್ದು, ಆರತಿ ತಟ್ಟೆಯನ್ನು ಎಸೆದು ರಂಪಾಟ ಮಾಡಿದ್ದ. ತನ್ನ ಸ್ನೇಹಿತರೊಂದಿಗೆ ಜಗಳವಾಡಿ ರಂಪಾಟ ಮಾಡಿದ್ದ. ಈತನ ಜೊತೆಗೆ ಜೀವನ ಪೂರ್ತಿ ಬದುಕಬೇಕೇ? ಎನ್ನುವ ಪ್ರಶ್ನೆ ಎದ್ದಾಗಲೇ, ವಧು ತನ್ನ ಮದುವೆಯ ನಿರ್ಧಾರವನ್ನು ಬದಲಿಸಿಕೊಂಡಳು, ಮದುವೆಯನ್ನೇ ರದ್ದು ಮಾಡಿದ್ದಾಳೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮದುವೆಗೆ ನಿರಾಕರಿಸಿದ ವಧು ಬಂಧುಮಿತ್ರರಲ್ಲಿ ನನ್ನನ್ನು ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾಳೆ. ವರನ ಕಡೆಯವರು ಕ್ಷಮೆ ಕೇಳಿ ಸಂಧಾನಕ್ಕೆ ಯತ್ನಿಸಿದರು. ಆದರೆ ತನ್ನ ಭವಿಷ್ಯದ ದೃಷ್ಟಿಯಿಂದ ವಧು ಗಟ್ಟಿ ನಿರ್ಧಾರ ತೆಗೆದುಕೊಂಡಳು. ಆಕೆಯ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ಬೆಂಗಳೂರು: ಸಿಟಿ ರವಿ ಅವರಿಗೆ ಬೆದರಿಕೆ ಒಡ್ಡಲಾಗುತ್ತಿರುವ ಶಕ್ತಿಗಳು ಯಾವುದು ಎಂಬುದು ಸರ್ಕಾರ ಹಾಗೂ ಪೊಲೀಸರಿಗೆ ತಿಳಿದೆ. ಆದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಕಿಡಿಕಾರಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಮ್ಮ ಪಕ್ಷದ ಪ್ರಮುಖರಾದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ಮೇಲೆ ಪ್ರಜಾಪ್ರಭುತ್ವವನ್ನು ನಾಚಿಸುವ ರೀತಿಯಲ್ಲಿ ದೌರ್ಜನ್ಯ ಹಾಗೂ ಹಲ್ಲೆಗೆ ಯತ್ನ ನಡೆಯಿತು. ಅದರ ನಂತರವೂ ಅವರ ವಿರುದ್ಧ ನಿರಂತರ ಬೆದರಿಕೆ ಒಡ್ಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ನಿನ್ನೆ ಅವರಿಗೆ ಬೆದರಿಕೆ ಪತ್ರ ರವಾನೆಯಾಗಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಸಿ.ಟಿ.ರವಿ ಅವರನ್ನು ಗುರಿಯನ್ನಾಗಿಸಿಕೊಂಡಿರುವ ದುಷ್ಕರ್ಮಿಗಳು ಅವರ ವಿರುದ್ಧ ವ್ಯೂಹ ರಚಿಸಿರುವ ಸಾಧ್ಯತೆಯನ್ನು ಅವರಿಗೆ ಬಂದಿರುವ ಬೆದರಿಕೆಯ ಸಂದೇಶಗಳ ಹಿನ್ನೆಲೆಯಲ್ಲಿ ತಳ್ಳಿ ಹಾಕಲಾಗದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅವರಿಗೆ ರಕ್ಷಣೆ ಸಿಗುತ್ತದೆ ಎಂದು ನಿರೀಕ್ಷಿಸುವುದು ಮಾರ್ಜಾಲ ನ್ಯಾಯದಂತಾಗುತ್ತದೆ…
ಬೆಳಗಾವಿ: ಗಾಂಜಾ ವಿಚಾರಕ್ಕೆ ಸಹೋದರಿಬ್ಬರ ನಡುವೆ ನಡೆದ ಗಲಾಟೆ ತಮ್ಮನ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಸುಶಾಂತ ಸುಭಾಷ್ ಪಾಟೀಲ (20) ಮೃತಪಟ್ಟ ಯುವಕನಾಗಿದ್ದು, ಈತನ ಅಣ್ಣ ಓಂಕಾರ ಸುಭಾಷ ಪಾಟೀಲ (23) ಎಂಬಾತನಿಗೆ ಗಂಭೀರವಾಗಿ ಗಾಯವಾಗಿದೆ. ಸಹೋದರರಿಬ್ಬರೂ ಕೆಲ ವರ್ಷಗಳಿಂದ ಗಾಂಜಾ ಸೇವನೆ ಚಟ ಬೆಳೆಸಿಕೊಂಡಿದ್ದು, ಮತ್ತಿತನಲ್ಲಿ ಪೋಷಕರೊಂದಿಗೆ ಹಾಗೂ ಪರಸ್ಪರ ಜಗಳವಾಡುತ್ತಿದ್ದರು, ಶುಕ್ರವಾರ ಮನೆಕೆಲಸದ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ವೇಳೆ ನೂಕಾಟ–- ತಳ್ಳಾಟದಲ್ಲಿ ಮನೆಯ ಎರಡನೇ ಮಹಡಿಯಿಂದ ಇಬ್ಬರೂ ಕೆಳಕ್ಕೆ ಬಿದ್ದಿದ್ದು, ಸುಶಾಂತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಓಂಕಾರ್ ಪಾಟೀಲ್ ಅವರ ಕಾಲುಗಳು ಮತ್ತು ಒಂದು ಕೈ ಮುರಿದಿದ್ದು, ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ರೋಣ: ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಮಹೇಶಕುಮಾರ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಮಾರಂಭದಲ್ಲಿ ಹಲವಾರು ಪತ್ರಕರ್ತರು ಹಾಗೂ ಸ್ಥಳೀಯ ವರದಿಗಾರರು ಭಾಗವಹಿಸಿದ್ದರು. ಸಂಘದ ಚಟುವಟಿಕೆಗಳನ್ನು ಬಲಪಡಿಸಲು ಹಾಗೂ ಅದರ ವಿಸ್ತರಣೆಗೆ ಅನುಕೂಲವಾಗುವಂತೆ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಿದಾಗ, ಭಾಗವಹಿಸಿದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಮತ್ತು ಮುಂದಿನ ಹಂತಗಳನ್ನು ತಲುಪಲು ಹೆಚ್ಚಿನ ಸಹಕಾರವನ್ನು ಅವಶ್ಯಕತೆ ಎಂದು ಅಭಿಪ್ರಾಯಪಟ್ಟರು. ನೂತನ ಪದಾಧಿಕಾರಿಗಳು: ತಾಲೂಕು ಅಧ್ಯಕ್ಷ: ಅಂದಪ್ಪ ಮಾದರ ಉಪಾಧ್ಯಕ್ಷ: ಎಸ್.ವಿ. ಸಂಕನಗೌಡ ಪ್ರಧಾನ ಕಾರ್ಯದರ್ಶಿ: ಮಂಜುನಾಥ್ ಹೂವಿನಹಾಳ ಸಂಘಟನಾ ಕಾರ್ಯದರ್ಶಿ: ಕನಕಪ್ಪ ಕೊತಬಾಳ ಖಜಾಂಚಿ: ಶಿವರಾಜ್ ಹುಲ್ಲೂರು ಕಾರ್ಯಕಾರಿ ಸದಸ್ಯರು: ಲಿಂಗರಾಜ ತಳ್ಳಿಹಾಳ, ರಮೇಶ ನಂದಿ, ಅಭಿಷೇಕ ಕೊಪ್ಪದ, ಶರಣಪ್ಪ ಸಂಗನಾಳ, ಶಿವಯೋಗಪ್ಪ ಬಾವಿ, ಶರಣಪ್ಪಗೌಡ ಸಕ್ಕರಗೌಡ ಆಯ್ಕೆಯಾದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ಬೆಂಗಳೂರು: ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು, ಇದು ಕಡಿಮೆ ಜನಸಂಖ್ಯೆಯ ಧರ್ಮವಾಗಿದೆ, ಇದು ಸಂಸ್ಕೃತಿ , ಸಂಸ್ಕಾರ, ಶಾಂತಿ ಹಾಗೂ ಅಹಿಂಸಾ ಧರ್ಮವಾಗಿದ್ದು, ಇದರ ಮೌಲ್ಯಗಳು ಅಪಾರವಾಗಿವೆ, ಇದನ್ನು ಉಳಿಸಿ ,ಬೆಳೆಸಿ, ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕಾರ್ಯವಾಗ ಬೇಕಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕರ್ನಾಟಕ ಜೈನ್ ಅಸೋಸಿಯೇಷನ್ ನ ನೂತನ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ತಿಳಿಸಿದರು. ಅವರಿಂದು ಇಲ್ಲಿನ ಕರ್ನಾಟಕ ಜೈನ ಅಸೋಸಿಯೇಷನ್ ಭವನದಲ್ಲಿ 2024– 29 ರ ಅವಧಿಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಇದು ಚಾರಿತ್ರಿಕ ದಿನವಾಗಿದ್ದು ಚುನಾವಣಾಧಿಕಾರಿಗಳು ಯಾವುದೇ ಲೋಪವಾಗದೆ ಯಶಸ್ವಿಯಾಗಿ ಚುನಾವಣೆ ನಡೆಸಿದ್ದು ಸಂತಸ ತಂದಿದೆ ಎಂದರು. ಕರ್ನಾಟಕ ಜೈನ್ ಅಸೋಸಿಯೇಷನ್ ಹಿಂದಿನ ಘಟನೆಗಳನ್ನು ಮೆಲುಕು ಹಾಕಿದ ಆವರು, 1918ರಲ್ಲಿ ಮೈಸೂರಿನಲ್ಲಿ ಆರಂಭವಾದ ಸಂಸ್ಥೆ ಹಲವು ಏಳು -ಬೀಳುಗಳ ನಡುವೆ ಹಂತ – ಹಂತವಾಗಿ ಯಶಸ್ಸು ಕಾಣುತ್ತಿದೆ, 1918 ರಲ್ಲಿ…