Subscribe to Updates
Get the latest creative news from FooBar about art, design and business.
- 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
- ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ: ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ
- ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ
- ರಾಹುಲ್ ಗಾಂಧಿ ಪ್ರಧಾನಿಯಾಗಲಿ: ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ
- ಆಗಸ್ಟ್ 9ರಂದು ತಿಪಟೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆ
- ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
- ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ
- ಹೂ ಲೋಕ, ಭೂರಮೆಯ ರಥ : ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ ವಾಹ್..!
Author: admin
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದು, ಪ್ರಸ್ತುತ ಜಿಲ್ಲೆಯ ನಗರ, ಪ್ರತಿ ತಾಲ್ಲೂಕು ಹಾಗೂ ಹೋಬಳಿ ಕೇಂದ್ರದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರಾಮುವಿ ಕಲಿಕಾರ್ಥಿ ಸಹಾಯ ಕೇಂದ್ರ(ಅಧ್ಯಯನ ಕೇಂದ್ರ)ಗಳನ್ನು ತೆರೆಯಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಪ್ರಥಮ ದರ್ಜೆ ಕಾಲೇಜುಗಳು ಜನವರಿ 18ರೊಳಗೆ ಕರಾಮುವಿಯ ಅಧಿಕೃತ ವೆಬ್ ಸೈಟ್ www.ksoumysuru.ac.in ಅಥವಾ https://ksouportal.com/reg_sc/StudyCentreRegistration.aspx ಮೂಲಕ ಅರ್ಜಿ ಸಲ್ಲಿಸಿ ಅರ್ಜಿಯ ಪ್ರತಿಯನ್ನು ಡೀನ್(ಅಧ್ಯಯನ ಕೇಂದ್ರ), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು–06 ಇವರಿಗೆ ಸಲ್ಲಿಸಬೇಕು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕರಾಮುವಿ ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಯಾವುದೇ ಶುಲ್ಕ ಪಾವತಿ ಮಾಡುವಂತಿಲ್ಲ. ಹೆಚ್ಚಿನ ಮಾಹಿತಿಗಾಗಿ ಕರಾಮುವಿ, ತುಮಕೂರು ಪ್ರಾದೇಶಿಕ ಕೇಂದ್ರ, ಟೂಡಾ ಲೇಔಟ್, ರಾಜೀವ್ಗಾಂಧಿ ನಗರ, ಗಂಗಸಂದ್ರ ಮುಖ್ಯರಸ್ತೆ, ಮೆಳೆಕೋಟೆ, ತುಮಕೂರು-572105 ಅಥವಾ ದೂ.ವಾ.ಸಂಖ್ಯೆ-0816-2955580, ಮೊ.ಸಂ.9844506629ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ನಿರ್ದೇಶಕ ಡಾ: ಲೋಕೇಶ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ…
ತುಮಕೂರು: ತೋಟಗಾರಿಕೆ ಇಲಾಖೆಯು ಜನವರಿ 26 ರಿಂದ 28ರವರೆಗೆ 3 ದಿನಗಳ ಕಾಲ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿರುವ ತೋಟಗಾರಿಕೆ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಸಾರ್ವಜನಿಕ ತೋಟ, ಸಂಸ್ಥೆಯ ತೋಟ, ಆಸ್ಪತ್ರೆ ತೋಟ, ಶಿಕ್ಷಣ ಸಂಸ್ಥೆಯ ತೋಟ, ಆಡಳಿತ ಕಚೇರಿ ತೋಟ, ಹೋಟೆಲ್ ತೋಟ, ಸಿನಿಮಾ ಥಿಯೇಟರ್ಗಳ ತೋಟ, ನರ್ಸಿಂಗ್ ಹೋಮ್ ತೋಟ, ಗುಲಾಬಿ ತೋಟ, ಔದ್ಯೋಗಿಕ ತೋಟ, ಅಥಿತಿ ಗೃಹಗಳ ತೋಟ, ಕ್ವಾಟ್ರಸ್ ತೋಟ, ಸಾರ್ವಜನಿಕ ಉದ್ಯಾನವನ, ಖಾಸಗಿ ತೋಟ, ಖಾಸಗಿ-ಸರ್ಕಾರಿ ಸಂಸ್ಥೆಗಳ/ ಮನೆಗಳ ಮುಂಭಾಗದ ಕೈತೋಟ, ಅಲಂಕಾರಿಕ ಉದ್ಯಾನವನಗಳ ತೋಟ, ಛಾವಣಿ ತೋಟ, ಮನೆಗಳ ಒಳಾಂಗಣ ಅಲಂಕಾರ ತೋಟ, ಕುಂಡದಲ್ಲಿ ಬೆಳೆಸಿದ ಅಲಂಕಾರಿಕ ಗಿಡಗಳು, ತರಕಾರಿಗಳು, ಹಣ್ಣುಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಹಾಗೂ ಖಾಸಗಿ ಸಂಸ್ಥೆಗಳಿಗೆ 50 ರೂ.ಗಳ ಅರ್ಜಿ ಶುಲ್ಕವನ್ನು ನಿಗಧಿಪಡಿಸಲಾಗಿದೆ. ಸರ್ಕಾರಿ ಸಂಸ್ಥೆಯವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು…
ತುಮಕೂರು: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ ಶಿಕ್ಷಣ ಇಲಾಖೆಯು ಖಾಸಗಿ/ಅನುದಾನಿತ/ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2024–25ನೇ ಸಾಲಿನ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕೆ ಅವಕಾಶ ಕಲ್ಪಿಸಿದ್ದು, ತುಮಕೂರು ತಾಲ್ಲೂಕಿನ ಖಾಸಗಿ ಶಾಲಾ ಆಡಳಿತ ಮಂಡಳಿಯವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜನವರಿ 14ರಂದು ಬೆಳಿಗ್ಗೆ 10:30 ಗಂಟೆಗೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ “ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಗುವುದು. ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರು/ಸಿಬ್ಬಂದಿ ವರ್ಗ, ವಿವಿಧ ಸಮುದಾಯದ ಮುಖಂಡರು, ಗಣ್ಯರು, ಕಲಾವಿದರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ತುಮಕೂರು: ಸಿರಿಧಾನ್ಯ ಕುರಿತು ಜನಾಂದೋಲನ ರೂಪದಲ್ಲಿ ಪ್ರಚಾರ ಕೈಗೊಂಡು ರಾಜ್ಯವನ್ನು ಸಿರಿಧಾನ್ಯಗಳಿಗೆ ಜಾಗತಿಕ ಕೇಂದ್ರವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2 ದಿನಗಳ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಒನಕೆಯಲ್ಲಿ ಭತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಿರಿಧಾನ್ಯಗಳು ಹೆಚ್ಚಿನ ರೋಗ ನಿರೋಧಕ ಶಕ್ತಿಯೊಂದಿಗೆ ಹೇರಳವಾದ ಪೋಷಕಾಂಶಗಳನ್ನು ಹೊಂದಿವೆ. ಸಿರಿಧಾನ್ಯ ಸೇವನೆಯಿಂದ ಆರೋಗ್ಯವರ್ಧನೆಯಾಗುವುದಲ್ಲದೆ ರೋಗ ಮುಕ್ತರಾಗಿ ಆಸ್ಪತ್ರೆಯಿಂದ ದೂರವಿರಬಹುದು ಎಂದು ತಿಳಿಸಿದರು. ತಾಯಂದಿರು ತಮ್ಮ ಮಕ್ಕಳಿಗೆ ಸಿರಿಧಾನ್ಯ ಪದಾರ್ಥಗಳ ಸೇವನೆಯ ಅಭ್ಯಾಸ ಮಾಡಿಸಬೇಕು. ನಿಧಾನವಾಗಿ ಜೀರ್ಣವಾಗಿ ದೇಹಕ್ಕೆ ಶಕ್ತಿವರ್ಧಕವಾಗಿ ಕೆಲಸ ಮಾಡುವ ಗುಣಧರ್ಮವನ್ನು ಹೊಂದಿರುವ ಸಿರಿಧಾನ್ಯಗಳನ್ನು ಜನರು ಹೆಚ್ಚಾಗಿ ಬಳಸಬೇಕು ಎಂದರಲ್ಲದೆ, ಜಿಲ್ಲೆಯು ಸಿರಿಧಾನ್ಯಗಳ ತವರೂರು ಎಂದೆನೆಸಿಕೊಂಡಿದೆ. ಜಿಲ್ಲೆಯ ಸುಮಾರು…
ತುಮಕೂರು:ತುಮಕೂರು ರನ್ನರ್ಸ್ ಅಸೋಸಿಯೇಶನ್ ವತಿಯಿಂದ ರಾಷ್ಟ್ರೀಯ ಯುವದಿನದ ಅಂಗವಾಗಿ ತುಮಕೂರು ಮ್ಯಾರಥಾನ್–2025ಅನ್ನು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಒಟ್ಟು 720 ಸ್ಪರ್ಧಾಳುಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ತುಮಕೂರು ಅರ್ಬನ್ ರೆಸಾರ್ಟ್ ಮಾಲೀಕರಾದ ಶ್ರೀಕಂಠಸ್ವಾಮಿ ಹಾಗೂ ಚನ್ನಬಸವ ಪ್ರಸಾದ್, ಸಿದ್ದಿ ಬಯೋ ಮಾಲೀಕರಾದ ರುದ್ರಪ್ರಕಾಶ್ ಹಾಗೂ ಆದರ್ಶ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮ್ಯಾರಥಾನ್ ಗೆ ಚಾಲನೆ ನೀಡಿದರು. 5,000 ಮೀ.ಓಟದ ಪುರುಷರ ವಿಭಾಗದಲ್ಲಿ ರಾಜೇಂದ್ರ ಪ್ರಸಾದ್ ಎಸ್. ಜವಳಿ, ವಿವೇಕ್ ಎನ್. ಹಾಗೂ ದೇವರಾಜ್ ಸಿಂಗ್ ಮೊದಲನೆಯ ಮೂರು ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಪೃಥ್ವಿ, ನವ್ಯಶ್ರೀ ಹಾಗೂ ಬೃಷ್ಟಿ ಪರಾಶರ್ ಮೊದಲ ಮೂರು ಬಹುಮಾನ ಪಡೆದರು. 10 ಸಾವಿರ ಮೀಟರ್ ಓಟದ ಪುರುಷರ ವಿಭಾಗದಲ್ಲಿ ಎಂ.ವೈ.ಸಂದೀಪ್ಕುಮಾರ್, ತೈಚಿಜಕಿಮಿ ಮತ್ತು ಸಾಯಿ ಮನೋಹರ್ ಮೊದಲ ಮೂರು ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿಆಲಿಯಾ ಶೇಕ್, ರಮ್ಯಾ ಎಸ್. ಹಾಗೂ ಕೆ.ಸಿ.ಮಧುರ ಮೊದಲ ಮೂರು ಬಹುಮಾನ ಪಡೆದರು. 21 ಸಾವಿರ ಮೀಟರ್ ಓಟದ ಪುರುಷರ ವಿಭಾಗದಲ್ಲಿಅವಧೇಶ್…
ಪಾವಗಡ: ತಾಲ್ಲೂಕಿನ ಸೇವಾ ಟ್ರಸ್ಟ್ ಮತ್ತು ಹೆಲ್ಪ್ ಸೊಸೈಟಿ ವತಿಯಿಂದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಯಿತು. ಈ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪವಿತ್ರ, ಎರಡನೇ ಬಹುಮಾನ, ಭಾರ್ಗವಿ ರಾಮ್, ಮೂರನೇ ಬಹುಮಾನ, ಮೋನಿಕಾ ನಾಲ್ಕನೇ ಬಹುಮಾನ, ಚಾಮುಂಡಿ, ಐದನೇ ಬಹುಮಾನ, ಶ್ರೀದೇವಿ, ಮತ್ತು ಸಮಾಧಾನಕರ ಬಹುಮಾನ, ಗಾಯತ್ರಿ, ಮತ್ತು ವಿಶೇಷವಾಗಿ ಗಂಡು ಮಕ್ಕಳಿಂದ ರಂಗೋಲಿ ಬಿಡಿಸಿದ ಕಾರ್ತಿಕ್ ರವರಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ವಿಜೇತರಿಗೆ ಮಾಜಿ ಪುರಸಭಾ ಅಧ್ಯಕ್ಷರಾದ ಮಾನಂ ವೆಂಕಟಸ್ವಾಮಿ ವಿಜೇತರಿಗೆ ಶುಭ ಹಾರೈಸಿ ಬಹುಮಾನ ನೀಡಿದರು. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ರಂಗರಾವ್ ವೈಸ್ ಪ್ರೆಸಿಡೆಂಟ್ ಕಮ್ಮವಾರಿ ಸಂಘ ಹೊಸದುರ್ಗ, ಕಮಲ್ ಬಾಬು ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷರು, ರೋಟರಿ ಅಧ್ಯಕ್ಷರಾದ ರಾಮಾಂಜಿ, ಶಶಿಕುಮಾರ್, ಸಂದೀಪ್, ವೆಂಕಟೇಶ್, ಪಾಂಡು, ಚಂದ್ರ ಮೌಳಿ, ರಾಮಚಂದ್ರ ದಾನ ಫೌಂಡೇಶನ್, ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕಾಣಿಕೆ ನೀಡಲಾಯಿತು, ಈ ಸ್ಪರ್ಧೆಯಲ್ಲಿ 37 ಮಹಿಳೆಯರು ಪಾಲ್ಗೊಂಡಿದ್ದರು, ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನಾಗರಾಜ್,…
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಕರ ಸಂಕ್ರಾಂತಿ ಮತ್ತು ಖಿಚಡಿ ಹಬ್ಬದಂದು ರಾಜ್ಯದ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ. ಇಂದು ಇಲ್ಲಿ ಬಿಡುಗಡೆ ಮಾಡಿದ ಶುಭಾಶಯ ಸಂದೇಶದಲ್ಲಿ, ಮಕರ ಸಂಕ್ರಾಂತಿಯ ವಿಶೇಷ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೂಪದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವು ನಮ್ಮ ದೇಶದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ. ಈ ವರ್ಷದ ಮಕರ ಸಂಕ್ರಾಂತಿ ಕೂಡ ಬಹಳ ಮಹತ್ವದ್ದಾಗಿದೆ ಏಕೆಂದರೆ ಮಹಾಕುಂಭ ಪ್ರಯಾಗರಾಜ್–2025 ರ ಮೊದಲ ಅಮೃತ ಸ್ನಾನವು ಈ ಹಬ್ಬದಂದು ಪೂರ್ಣಗೊಳ್ಳಲಿದೆ ಎಂದಿದ್ದಾರೆ. ಮಕರ ಸಂಕ್ರಾಂತಿಯನ್ನು ಭಾರತದಾದ್ಯಂತ ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತದೆ ಎಂದು ತಿಳಿದಿದೆ. ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇದನ್ನು ಖಿಚಡಿ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸಿ ಉತ್ತರಾಯಣನಾಗುತ್ತಾನೆ. ಉತ್ತರಾಯಣವನ್ನು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗಿದೆ ಎಂದರು. ಮಕರ ಸಂಕ್ರಾಂತಿಯಂದು ಸೂರ್ಯದೇವನ ರಾಶಿಚಕ್ರದ…
ತುಮಕೂರು : ರಾಜ್ಯ ಕಾಂಗ್ರೆಸ್ ನಲ್ಲಿ ಸ್ಪಷ್ಟವಾಗಿ ಹೇಳುತ್ತೇನೆ, ಯಾವುದೇ ರೀತಿಯ ಪವರ್ ಶೇರಿಂಗ್ ಬಗ್ಗೆ ಚರ್ಚೆ ಆಗುತ್ತಿಲ್ಲ ಅದರ ಅಗತ್ಯವೂ ಇಲ್ಲ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕೆಲವರು ಅನವಶ್ಯಕವಾಗಿ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾದ ಮಾತು. ಯಾವ್ದೆ ರೀತಿಯ ಚರ್ಚೆ ನಡೆಯುತ್ತಿಲ್ಲ ಎಂದರು. ಸಿಎಲ್ ಪಿ ಅಧಿವೇಶನದ ಸಂದರ್ಭದಲ್ಲಿ ನಡೆಯಲಿದೆ. ಕೆಲವು ಸಂದರ್ಭದಲ್ಲಿ ಸಿಎಲ್ ಪಿ ಸಭೆಯನ್ನು ಕೂಡ ಮಾಡುತ್ತೇವೆ. ಪಕ್ಷದ ನಾಯಕರು ಕರೆಯುತ್ತಾರೆ. ಈ ಬಾರಿ ಕರೆದಿರುವುದು ನನಗೆ ತಿಳಿದಿರುವ ಹಾಗೆ, ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದು, ಅದನ್ನು ಚರ್ಚೆ ಮಾಡಲು ಕರೆದಿದ್ದಾರೆ ಎಂದರು. ಜಾತಿ ಜನಗಣತಿ ವರದಿಯು ಬಂದಿದ್ದು ಅದನ್ನು ಮಂಡಿಸುವ ಬಗ್ಗೆ ಚರ್ಚಿಸಲು ಸಭೆ ಕರೆದಿರಬಹುದು. ಆದ್ರೆ ಇನ್ನೂ ಸಭೆಯ ಅಜೆಂಡಾ ಬಂದಿಲ್ಲ ಎಂದರು. ಸುರ್ಜೆವಾಲಾ ಬಂದಿದ್ದಾರೆ. ಸಿಎಲ್ ಪಿ ಸಭೆ ಹೋಗುತ್ತೇನೆ. ಎಲ್ಲಾ ಶಾಸಕರು ಸಭೆಗೆ ಬರುತ್ತಾರೆ ಎಂದರು. ಡಿನ್ನರ್ ಸಭೆ ಮುಂದೂಡಿದ್ದೇವೆ.…
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಮುಖ್ಯಮಂತ್ರಿ ಸ್ಥಾನವೂ ಖಾಲಿಯಿಲ್ಲ ಎಂದಿದ್ದಾರೆ. ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳು ಊಹಾಪೋಹಗಳನ್ನು ಹರಡುವ ಬದಲು ಸತ್ಯವನ್ನು ತೋರಿಸಬೇಕು. ಸ್ವತಃ ನಾನೇ ಸ್ಪಷ್ಟನೆ ನೀಡಿದರು, ಇನ್ನೂ ನಾಯಕತ್ವ ಬದಲಾವಣೆ ವಿಚಾರ ಸುದ್ದಿಯಾಗುತ್ತಿದೆ. ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿಯಿಲ್ಲ, ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಭೇಟಿ ನೀಡಿದ್ದು, ಕೆಪಿಸಿಸಿ, ಹಾಗೂ ಸಿಎಲ್ ಪಿ ಸಭೆ ಸೇರಿದಂತೆ ಪಕ್ಷದ ಸರಣಿ ಸಭೆಗಳು ನಡೆಯುತ್ತಿವೆ. ಸಭೆಗೆ ಸುರ್ಜೇವಾಲಾ ಕೂಡ ಭಾಗಿಯಾಗಿದ್ದಾರೆ. ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲಾ ಅವರು, ಬಿಜೆಪಿ ತನ್ನ ಆಂತರಿಕ ಸಮಸ್ಯೆಗಳನ್ನು ಮೊದಲು ಪರಿಹರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಒಗ್ಗಟ್ಟಾಗಿದೆ. ಸಿದ್ದರಾಮಯ್ಯ ಸಿಎಂ. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಅದನ್ನು ಪಕ್ಷದ ನಾಯಕತ್ವ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ತೆಗೆದುಕೊಳ್ಳುತ್ತಾರೆಂದು ಹೇಳಿದರು.…