Author: admin

ಪಾವಗಡ: ಮಧ್ಯಪ್ರದೇಶದ ಬುರ್ಹಾನ್ ಪುರ್ ದಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ್ , ಎ.ಪಿ.ಜೆ ಅಬ್ದುಲ್ ಕಲಾಂ ನ್ಯಾಷನಲ್ ಕೌನ್ಸಿಲ್ ಆಫ್ ಯಂಗ್ ಸೈಂಟಿಸ್ಟ್ , ರಾಮನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಮತ್ತು ಮ್ಯಾಕ್ರೋ ವಿಷನ್ ಅಕಾಡೆಮಿ ಬುರ್ಹಾನ್ ಪುರ ರವರ ಸಂಯುಕ್ತ ಆಶ್ರಯದಲ್ಲಿ ನಡೆದ 5 ನೇ ಭಾರತೀಯ ಸೈನ್ಸ್ ಟೆಕ್ನೋ ಫೆಸ್ಟಿವಲ್ ( BSTF )– 2025ನಲ್ಲಿ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನದ ವೈಯಕ್ತಿಕ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯ ಹತ್ತನೇ ತರಗತಿಯ ವಿಧ್ಯಾರ್ಥಿಯಾದ ಭರತ್.ಎಂ ತೃತೀಯ ಸ್ಥಾನವನ್ನು ಗಳಿಸಿದ್ದಾನೆ. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾರತದ ಪ್ರಖ್ಯಾತ ವಿಜ್ಞಾನಿಗಳಾದ ಡಾ.ಜೆ.ಜೆ.ರಾವಲ್, ಡಾ.ಬಿ.ಕೆ.ತ್ಯಾಗಿ, ಡಾ.ದಿಲೀಪ್ ಬಟ್ , ಡಾ.ಡಿ.ಕೆ.ಪಾಂಡೆ, ಡಾ.ಪುಲಕೇಷಿ ಪ್ರಜಾಪತಿ, ಡಾ.ಚಂದ್ರಮೌಳಿ ಜೋಷಿ, ಹಾಗೆಯೇ ಏಷ್ಯಾ ಖಂಡದ ಪ್ರತಿಷ್ಟಿತ ಕಾಲೇಜ್ ಆದ ಮ್ಯಾಕ್ರೋ ವಿಷನ್ ಅಕಾಡೆಮಿಯ ಸಂಸ್ಥಾಪಕರಾದ ಆನಂದ್ ಪ್ರಕಾಶ್ ಚೌಕ್ಷೆ, NCTS ನ ರಾಷ್ಟೀಯ ಕಾರ್ಯದರ್ಶಿ ಸಂದೀಪ್ ಪಾಟೀಲ್ ಮತ್ತು NCTS ನ…

Read More

ಚೆನ್ನೈ: ತಮಿಳುನಾಡಿನ ವಿಲ್ಲುಪುರಂನಿಂದ ಪುದುಚೇರಿಗೆ ಹೊರಟಿದ್ದ ಮೆಮು ಪ್ಯಾಸೆಂಜರ್ ರೈಲು ಹಳಿ ತಪ್ಪಿದ ಘಟನೆ ನಡೆದಿದ್ದು, ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಇಂದು ಬೆಳಿಗ್ಗೆ 5.25ರ ಸುಮಾರಿಗೆ ವಿಲ್ಲುಪುರಂ-ಪುದುಚೇರಿ ಮೆಮು ಪ್ಯಾಸೆಂಜರ್ ರೈಲು ಸುಮಾರು 500 ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ನಿಲ್ದಾಣದಿಂದ ಹೊರಟ ಕೆಲ ಸಮಯದ ನಂತರ ವಕ್ರರೇಖೆ ದಾಟುತ್ತಿದ್ದ ಸಂದರ್ಭ ರೈಲಿನ ಒಂದು ಭೋಗಿ ಹಳಿತಪ್ಪಿದೆ. ಇದನ್ನು ಗಮನಿಸಿದ ಲೊಕೊ ಪೈಲಟ್ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಹೀಗಾಗಿ ಅನಾಹುತ ತಪ್ಪಿದೆ. ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆಗೆ ಕಾರಣ ಏನೆಂಬುದು ತನಿಖೆ ಪೂರ್ಣಗೊಂಡ ಬಳಿಕವಷ್ಟೇ ತಿಳಿದು ಬರಬೇಕಿದೆ. ರೈಲು ಹಳಿ ತಪ್ಪಿದ ಕಾರಣ ವಿಲ್ಲುಪುರಂ ಮಾರ್ಗದಲ್ಲಿ ಬೆಳಿಗ್ಗೆ 8.30ರವರೆಗೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಬೆಂಗಳೂರು: ಎಲ್ಲಾ ಪಕ್ಷಗಳ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಮಕರ ಸಂಕ್ರಾಂತಿ ಗಿಫ್ಟ್ ನೀಡಿದ್ದು, ಶಾಸಕರಿಗೆ ತಲಾ 10 ಕೋಟಿ ಅನುದಾನ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಶಾಸಕರಿಗೆ ಅನುದಾನ ಬಿಡುಗಡೆಯ ಬಗ್ಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ಸಿಎಲ್ ಪಿ ಸಭೆಯಲ್ಲಿ ಶಾಸಕರಿಗೆ ಅನುದಾನವನ್ನು ನೀಡುವ ಘೋಷಣೆ ಮಾಡಿದ್ದಾರೆ. ಎಲ್ಲಾ ಪಕ್ಷದ ಶಾಸಕರಿಗೂ ತಲಾ 10 ಕೋಟಿ ಅನುದಾನವನ್ನು ನೀಡಿದ್ದೇವೆ. ಬಿಜೆಪಿ, ಜೆಡಿಎಸ್ ಶಾಸಕರಿಗೂ 10 ಕೋಟಿ ಅನುದಾನ ಕೊಡುತ್ತಿರುವುದಾಗಿ ಘೋಷಿಸಿದರು. ಸೋಮವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅನುದಾನ ಕೊರತೆ ಬಗ್ಗೆ ಪ್ರಸ್ತಾಪಮಾಡಿದರು. ಆಗ ಮಾತನಾಡಿದ ಸಿದ್ದರಾಮಯ್ಯ, ‘ಭಾನುವಾರವಷ್ಟೇ ಕಡತಕ್ಕೆ ಸಹಿ ಹಾಕಿದ್ದೇನೆ. ಕಾಂಗ್ರೆಸ್ ಶಾಸಕರು ಮಾತ್ರವಲ್ಲ ಎಲ್ಲಾ ಶಾಸಕರಿಗೂ ತಲಾ 10 ಕೋಟಿ ರು. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೆಲ ಶಾಸಕರು, 10 ಕೋಟಿ…

Read More

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಂಬಡಗಟ್ಟಿಯ ಸಮೀಪ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನಿನ ಎಲ್ 1 ಮತ್ತು ಎಲ್ 4 ಮೂಳೆ ಮುರಿತವಾಗಿದೆ. ಕುತ್ತಿಗೆಗೆ ಪೆಟ್ಟಿಗೆ ಬಿದ್ದಿದೆ. ಮೆದುಳು ಬಾವು ಬಂದಿದೆ. ಹೀಗಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸಲು ಹೋಗಿ ಕಾರು ಅಪಘಾತಕ್ಕೀಡಾಗಿದೆ. ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.ಬೆಳಗ್ಗೆ ಆರು ಘಂಟೆಯ ಸಮಯದಲ್ಲಿ ಕಾರು ಅಪಘಾತವಾಗಿದೆ. ಘಟನೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಗೂ ಗಾಯವಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸಿಎಲ್ ಪಿ ಸಭೆ ಮುಗಿಸಿ ನಿನ್ನೆ ತಡರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ…

Read More

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್– ಬಿಇಎಲ್ ಭಾರತದಾದ್ಯಂತ ತನ್ನ ಘಟಕಗಳಲ್ಲಿ ನೇಮಕ ಮಾಡಲು ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತರು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ. ನೇಮಕಾತಿ ಪ್ರಾಧಿಕಾರ: ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಹುದ್ದೆಯ ಹೆಸರು: ಪ್ರೊಬೇಷನರಿ ಇಂಜಿನಿಯರ್ ಗಳು (ಇಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್) ಒಟ್ಟು ಹುದ್ದೆಗಳ ಸಂಖ್ಯೆ: 350 ವೇತನ: 40,000- 1,40,000. (ಬೇಸಿಕ್ ಪೇ ಜತೆಗೆ ಡಿಎ, ಹೆಚ್ ಆರ್ ಎ, ಪ್ರಯಾಣ ಭತ್ಯೆ, ಕಾರ್ಯದಕ್ಷತೆ ಭತ್ಯೆ, ಮೆಡಿಕಲ್ ಪೇ, ಇತರೆ ಭತ್ಯೆ ನೀಡಲಾಗುತ್ತದೆ. ಹುದ್ದೆಗಳು ಮತ್ತು ಸಂಖ್ಯೆ: ಪ್ರೊಬೇಷನರಿ ಇಂಜಿನಿಯರ್ (ಇಲೆಕ್ಟ್ರಾನಿಕ್ಸ್) ಇನ್ ಇ–II ಗ್ರೇಡ್ ಹುದ್ದೆಗಳು: 200 ಪ್ರೊಬೇಷನರಿ ಇಂಜಿನಿಯರ್ (ಮೆಕ್ಯಾನಿಕಲ್) ಇನ್ ಇ–II ಗ್ರೇಡ್ : 150 ಒಟ್ಟು 350 ಹುದ್ದೆಗಳ ಪೈಕಿ ಸಾಮಾನ್ಯ ಅರ್ಹತೆಯವರಿಗೆ 143, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 35, ಒಬಿಸಿ ಎನ್ಸಿಎಲ್ ಅಭ್ಯರ್ಥಿಗಳಿಗೆ 94, ಎಸ್ಸಿ ಅಭ್ಯರ್ಥಿಗಳಿಗೆ 52, ಎಸ್ಟಿ ಅಭ್ಯರ್ಥಿಗಳಿಗೆ 26 ಹುದ್ದೆಗಳು ಮೀಸಲಿಡಲಾಗಿದೆ. ಅರ್ಹತೆಗಳು: *…

Read More

ಬಹಳ ಹಿಂದೆ ಚಂದ್ರಪ್ರಭ ಎಂಬ ಬಡವನಿದ್ದ, ಅವನು ಯಾವಾಗಲೂ ಸುಖಾಸುಮ್ಮನೆ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವಿದ್ದಿತು. ಯಾರು ಕರೆಯದಿದ್ದರೂ ತಾನೇ ಹೋಗಿ ತನ್ನ ಕೈಲಾದ ಸಹಾಯ ಮಾಡುತ್ತಿದ್ದ. ಅವನನ್ನು ಕೆಲಸದವರು ನೀನು ಯಾರಿಗೆ ಎಷ್ಟೇ ಸಹಾಯ ಮಾಡಿದರೂ, ನಿನ್ನನ್ನು ಯಾರೂ ಜ್ಞಾಪಿಸಿಕೊಳ್ಳುವುದಿಲ್ಲ. ಸುಮ್ಮನೆ ಏಕೆ ಎಲ್ಲರ ವಿಷಯದಲ್ಲಿ ಮೂಗು ತೂರಿಸುತ್ತೀಯ ನೀನು ಬಡವ ದೇವರು ಇಟ್ಟ ಹಾಗೆ ಇರಬೇಕು ಎಂದು ಹೇಳುತ್ತಿದ್ದರು. ಆಗ ಅಂತಹವರಿಗೆ ಅದು ಅವರ ಗುಣ ಇದು ನನ್ನ ಗುಣ ನಾನು ಜನ ಮೆಚ್ಚಲೆಂದು ಸಹಾಯ ಮಾಡುತ್ತಿಲ್ಲ ಎಂದು ಹೇಳುತ್ತಿದ್ದ. ಹೀಗೆಯೇ ಒಮ್ಮೆ ಅದೇ ಊರಿನ ಒಬ್ಬರು ಚಂದ್ರಪ್ರಭನಲ್ಲಿಗೆ ಬಂದು ಬಾವಿಗೆ ಹಗ್ಗ ಬಿದ್ದು ಹೋಗಿದೆ ಬಂದು ಸಹಾಯ ಮಾಡು ಸಂಭಾವನೆ ನೀಡುತ್ತೇವೆ ಎಂದಾಗ ಆಗಲೆಂದು ಬಂದು ಪಾತಾಳಗರಡಿಯ ಸಹಾಯದಿಂದ ಹಗ್ಗ ತೆಗೆದು ಕೊಟ್ಟು ಸಂಭಾವನೆ ಕೇಳಿದಾಗ ಅವರು ನೀನು ಎಷ್ಟೋ ಜನರಿಗೆ ಸಹಾಯಗಳನ್ನು ಉಚಿತವಾಗಿ ಮಾಡಿದ್ದೀಯ ಇದನ್ನೂ ಹಾಗೆ ಅಂದುಕೋ ಎಂದಾಗ ಸ್ವಲ್ಪ ಬೇಸರಗೊಂಡ ಚಂದ್ರಪ್ರಭ ಮರು…

Read More

ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಜಿಲ್ಲೆಯ ಭಾಗದಲ್ಲಿನ ಕಾಲುವೆ ನಿರ್ಮಾಣ ಕಾಮಗಾರಿಗೆ ಬುಕ್ಕಾಪಟ್ಟಣದಿಂದ ಚಿಂಕಾರದವರೆಗಿನ ವನ್ಯ ಜೀವಿ ಸಂರಕ್ಷಣಾ ಕ್ಷೇತ್ರದ 51.32 ಹೆಕ್ಟೇರ್ ಪ್ರದೇಶವನ್ನು ಬಳಸಿಕೊಳ್ಳಲು ಭಾರತ ಸರ್ಕಾರದ ಅರಣ್ಯ ಇಲಾಖೆ ಅನುಮೋದನೆಯನ್ನು ನೀಡಿ ಆದೇಶ ಹೊರಡಿಸಿದೆಯೆಂದು ತುಮಕೂರು ಲೋಕಸಭಾ ಸದಸ್ಯರು ಹಾಗೂ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣನವರು ತಿಳಿಸಿದ್ದಾರೆ. ಭಾರತ ಸರ್ಕಾರದ ಅರಣ್ಯ ಸಚಿವರ ಅಧ್ಯಕ್ಷತೆಯ ಸ್ಥಾಯಿ ಸಮಿತಿ, ರಾಷ್ಟ್ರೀಯ ವನ್ಯ ಜೀವಿ ಮಂಡಳಿ ದಿನಾಂಕ ಡಿ.21ರಂದು ನಡೆದ ಸಭೆಯಲ್ಲಿ ಈ ಬಗ್ಗೆ ಶಿಪಾರಸ್ಸು ಮಾಡಿತ್ತು. ಇದಕ್ಕನುಗುಣವಾಗಿ ಭಾರತ ಸರ್ಕಾರದ ಅರಣ್ಯ ಇಲಾಖೆ ಇಂದು ದಿನಾಂಕ ಜ.13ರಂದು ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಗೆ ಪತ್ರ ಮುಖೇನ ತಿಳಿಸಿ, ತುಮಕೂರು ಜಿಲ್ಲೆಯಲ್ಲಿನ ಬುಕ್ಕಾಪಟ್ಟಣದಿಂದ ಚಿಂಕಾರದವರೆಗಿನ ವನ್ಯ ಜೀವಿ ಸರಂಕ್ಷಣಾ ಕ್ಷೇತ್ರದ 51.32 ಹೆಕ್ಕೆರ್ ಪ್ರದೇಶವನ್ನು ಬಳಸಿಕೊಳ್ಳಲು ಅನುಮತಿ ನೀಡಿದೆಯೆಂದು ಕೇಂದ್ರ ಸಚಿವ ಸೋಮಣ್ಣನವರು ತಿಳಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿಯ ದಿಶೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವ…

Read More

ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇದೇ ತಿಂಗಳು 18 ಮತ್ತು 19ರಂದು ಕುಣಿಗಲ್‌ ರಸ್ತೆಯ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿಎಸ್‌ ಎಸ್ ಐ ಟಿ ಆವರಣದ ಮೈದಾನದಲ್ಲಿ ವೇದಿಕೆ ನಿರ್ಮಾಣಕ್ಕೆ ಇಂದು ಪೂಜೆ ಸಲ್ಲಿಸಲಾಯಿತು. ಇದೇ ತಿಂಗಳ ಜನವರಿ18ರಂದು ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಆಶಯದಂತೆ ಕಾರ್ಯಕ್ರಮ ಮೂಡಿ ಬರಲಿದೆ, ಇದೇ ದಿನ ಬೆಳಗ್ಗೆ 8 ರಿಂದ ಟೌನ್ ಹಾಲ್ ವೃತ್ತದಿಂದ ನಡೆಯಲಿರುವ ಪತ್ರಕರ್ತರ ಬೃಹತ್ ಮೆರವಣಿಗೆ ಐತಿಹಾಸಿಕವಾಗಲಿದ್ದು, ಎಲ್ಲಾ ಪತ್ರಕರ್ತರು ಶಿಸ್ತು ಸಂಯಮದಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರ್‌ ಅವರು ತಿಳಿಸಿದ್ದಾರೆ. ಕಾ.ನಿ.ಪ. ಜಿಲ್ಲಾಘಟಕದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್‌ ಅವರು ಮಾತನಾಡಿ, ಕಲ್ಪತರು ನಾಡಿನಲ್ಲಿ ಮೊದಲ ಬಾರಿಗೆ ನಡೆಯಲಿರುವ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನ ಇತಿಹಾಸ ನಿರ್ಮಾಣ…

Read More

ತುಮಕೂರು: ಗ್ರಾಮಾಂತರ ತಾಲ್ಲೂಕು ವ್ಯಾಪ್ತಿ ಬೆಳಗುಂಬ ಗ್ರಾಮದಲ್ಲಿ ಜನವರಿ 14 ರಿಂದ 16ರವರೆಗೆ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಜಯಂತಿ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಕೆಲವು ಕಿಡಿಗೇಡಿಗಳು ಭಂಗತರುವಂತಹ ಸಾಧ್ಯತೆ ಇರುವುದರಿಂದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ. ಈ ಆದೇಶವು ಜನವರಿ 14ರ ಬೆಳಿಗ್ಗೆ 6 ರಿಂದ 16ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನಿಷೇಧಾವಧಿಯಲ್ಲಿ ಬೆಳಗುಂಬ ಗ್ರಾಮದಲ್ಲಿರುವ ಲಿಕ್ಕರ್ ಮಾರ್ಟ್, ಸಿಎಲ್–2 ಸನ್ನದನ್ನು ಮುಚ್ಚಲು ಸೂಚನೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರವು ರೈತರಿಗೆ ಆಧುನಿಕ ಕುರಿ/ಮೇಕೆ ಸಾಕಾಣಿಕೆ ಕುರಿತು ಜನವರಿ 17 ಮತ್ತು 18ರಂದು ಬೆಳಿಗ್ಗೆ 10 ಗಂಟೆಗೆ ಉಚಿತ ತರಬೇತಿ ನೀಡಲು ಉದ್ದೇಶಿಸಿದ್ದು, ಆಸಕ್ತರು ನಿಗದಿಪಡಿಸಿದ ದಿನಾಂಕದಂದು ತರಬೇತಿಗೆ ಹಾಜರಾಗಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ. ತರಬೇತಿಯನ್ನು ಕುಣಿಗಲ್ ರಸ್ತೆಯಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ನೀಡಲಾಗುವುದು. ತರಬೇತಿಗೆ ಹಾಜರಾಗಲಿಚ್ಛಿಸುವವರು ಇತ್ತೀಚಿನ ತಮ್ಮ 2 ಪಾಸ್ಪೋರ್ಟ್ ಅಳತೆ ಭಾವಚಿತ್ರ, ರೈತರ ಫ್ರೂಟ್ ಐಡಿ ಸಂಖ್ಯೆ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ)ವನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶು ವೈದ್ಯಕೀಯ ಸಂಸ್ಥೆ/ ದೂರವಾಣಿ ಸಂಖ್ಯೆ 0816–2251214ನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More