Author: admin

ತುಮಕೂರು : ಮನುಸ್ಮೃತಿಯ ಸಂಕೋಲೆಯ ಆಚೆಗೆ ಸಮಾಜದ ಒಳಿತಿಗಾಗಿ ದುಡಿದ ಸಾವಿತ್ರಿ ಬಾಯಿ ಫುಲೆ ಅವರ ಚಿಂತನೆ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಸಾಕಷ್ಟು ಕಷ್ಟಗಳ ನಡುವೆ ಅನಕ್ಷರಸ್ಥ ಮಹಿಳೆಯರಿಗಾಗಿ ಶಾಲೆಯನ್ನು ನಡೆಸಿದರು. ಸಮಾಜದ ಕಿರುಕುಳ ಎದುರಿಸಿ ಶಾಲೆಯನ್ನು ನಡೆಸುವ ಮೂಲಕ ಶೋಷಿತ ಸಮುದಾಯಕ್ಕೆ ಅಕ್ಷರವನ್ನು ಕಲಿಸಿದ ಮಹಾನ್ ಚೇತನ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ–ಎಸ್ಟಿ ನೌಕರರ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಜನ್ಮಾದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಮಹಿಳೆಯರು ಎಲ್ಲ ಸಮಾಜದಲ್ಲಿಯೂ ಶೋಷಿತರೇ, ಬ್ರಾಹ್ಮಣ ಸಮುದಾಯದಲ್ಲಿ ಮಹಿಳೆಯರ ಶೋಷಣೆ ಶೋಚನೀಯವಾಗಿದೆ. ಶೂದ್ರ ಸಮಾಜದ ಮಹಿಳೆಯರ ಸ್ಥಿತಿ ಇದ್ದಿದ್ದರಲ್ಲಿ ಉತ್ತಮವಾಗಿದೆ. ದುಡಿದು ತಿನ್ನುವುದಕ್ಕಾಗಿ ಮನೆಯಿಂದ ಹೊರ ಬರುವಂತ ಪರಿಸ್ಥಿತಿ ಇತ್ತು. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚಿದೆ ಎಂದರು. ಇಂದು ಮೂಢ ನಂಬಿಕೆ, ಅಂಧಶ್ರದ್ಧೆ ಪಾಲಿಸುವವರಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಿದೆ. ಅದರಲ್ಲಿ…

Read More

ವಿಜಯನಗರ: ರಾಜ್ಯಾದ್ಯಂತ ಮಕರ ಸಂಕ್ರಾಂತಿ ಹಬ್ಬ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದಕ್ಷಣಿ ಕಾಶಿ ಹಂಪಿಯಲ್ಲಿ ಭಕ್ತ ಸಮೂಹವೇ ನೆರೆದು ಹಂಪಿಯ ತುಂಗಭದ್ರಾ ನದಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು. ಪುಣ್ಯ ಸ್ನಾನದ ಬಳಿಕ, ಭಕ್ತರು ಶ್ರೀ ವಿರೂಪಾಕ್ಷ- ಪಂಪಾಂಬಿಕೆಯ ದರ್ಶನ ಪಡೆದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಕುಟುಂಬ ಸಮೇತ ಆಗಮಿಸಿ, ಹಂಪಿಯಲ್ಲಿ ವಾಸ್ತವ್ಯಹೂಡಿ ಬೆಳಗಿನ ಜಾವ ಪುಣ್ಯ ಸ್ನಾನ ಮಾಡಿದ ಭಕ್ತರು, ಶ್ರೀ ವಿರೂಪಾಕ್ಷನ ದರ್ಶನ ಪಡೆದರು. ಶ್ರೀ ವಿರೂಪಾಕ್ಷನ ದರ್ಶನ ಪಡೆದು ಬಳಿಕ ನಾನಾ ಸ್ಮಾರಕಗಳ ವೀಕ್ಷಣೆಗೆ ಜನರು ತೆರಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಬೆಂಗಳೂರು: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕನೊಬ್ಬ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊಯ್ಸಳ ನಗರದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡು ನೇಪಾಳಿ ಕುಟುಂಬ ಇಲ್ಲೇ ನೆಲೆಸಿದೆ. ಸೆಕ್ಯೂರಿಟಿ ಗಾರ್ಡ್ ದಂಪತಿಗೆ 6 ವರ್ಷದ ಮಗಳಿದ್ದಳು. ಆಕೆ ಕಟ್ಟಡದ ಸಮೀಪದಲ್ಲೇ ಆಟವಾಡಿಕೊಂಡಿದ್ದಳು. ನಿನ್ನೆ ಸಂಜೆ ಪೋಷಕರು ಹೊರಗೆ ಹೋಗಿದ್ದರು. ಹಾಗಾಗಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಈ ಸಮಯವನ್ನು ನೋಡಿಕೊಂಡಿದ್ದ ಆರೋಪಿ ಮನೆಗೆ ನುಗ್ಗಿ ಬಾಲಕಿಯನ್ನು ಪುಸಲಾಯಿಸಿ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಕಿರುಚದಂತೆ ಬಾಲಕಿಯ ಬಾಯಿಯನ್ನು ಮುಚ್ಚಿದ್ದರಿಂದ ಆಕೆ ಉಸಿರುಗಟ್ಟಿ ನರಳಿ ನರಳಿ ಪ್ರಾಣಬಿಟ್ಟಿದ್ದಾಳೆ. ವಿಷಯ ತಿಳಿದು ರಾಮಮೂರ್ತಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಕಿಯ ತಂದೆಯಿಂದ ಮಾಹಿತಿ ಪಡೆದು ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ, ಕಾಮುಕನಿಗಾಗಿ ಶೋಧ ಕೈಗೊಂಡು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಿಹಾರ ಮೂಲದ ಅಭಿಷೇಕ್ ಕುಮಾರ್ (25)…

Read More

ತೆಲಂಗಾಣ: ಇಬ್ಬರು ಪತ್ನಿಯರಿದ್ದರೂ ತನ್ನ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಇಬ್ಬರು ಪತ್ನಿಯರು ಸೇರಿ ಮರ್ಮಾಂಗಕ್ಕೆ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದೆ. ಜಿಲ್ಲೆಯ ಚಿವ್ವೆನ್ಲಾ ತಾಲ್ಲೂಕಿನ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿರುವ 43 ವರ್ಷದ ವ್ಯಕ್ತಿ ಹಲವು ವರ್ಷಗಳ ಹಿಂದೆ ನಲ್ಗೊಂಡ ಜಿಲ್ಲೆಯ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಗಂಡು ಮಗು ಬೇಕು ಎನ್ನುವ ನೆಪದಲ್ಲಿ ತನ್ನ ಮೊದಲ ಪತ್ನಿಯ ತಂಗಿಯನ್ನೂ ಈತನೇ ವಿವಾಹವಾಗಿದ್ದ. ಆಕೆಗೆ ಗಂಡು ಮಗು ಜನಿಸಿದ್ದು, ಎಲ್ಲರೂ ಒಂದೇ ಕುಟುಂಬದಲ್ಲಿ ಜೊತೆಯಾಗಿ ವಾಸವಿದ್ದರು. ಕೆಲವು ತಿಂಗಳ ಹಿಂದೆ ತನ್ನ ಮೊದಲ ಪತ್ನಿಯ ಕಿರಿ ಮಗಳು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಹಿರಿ ಮಗಳು ಹೈದರಾಬಾದ್ ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಕಿರಿ ಮಗಳ ಸಾವಿನ ನಂತರ ಆರೋಪಿ ಮದ್ಯದ ಚಟಕ್ಕೆ ದಾಸನಾಗಿದ್ದ. ಅಂದಿನಿಂದ ಆತನ ನಡವಳಿಕೆ ಬದಲಾಗುತ್ತಾ ಸಾಗಿದೆ.…

Read More

ಸರಗೂರು : ಸಂತರ ವಿಚಾರ ಹಾಗೂ ಸಾಧನೆಗಳನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡು ಯುವ ಪೀಳಿಗೆಗೆ ಪರಿಚಯಸಲು ಮುಂದಾಗಬೇಕು ಎಂದು ಭೋವಿ ಸಮಾಜದ ತಾಲ್ಲೂಕು ಅಧ್ಯಕ್ಷ ಹಾಗೂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಹೇಳಿದರು. ತಾಲೂಕಿನ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು 853 ನೇ ಸಿದ್ದರಾಮೇಶ್ವರ ಜಯಂತಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರ ಪೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಶಿವಯೋಗಿ ಸಿದ್ಧರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳು ಮಾತ್ರ ಲಭಿಸಿವೆ. ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶಿವಯೋಗಿಗಳು ಶ್ರೇಷ್ಠ ವಚನಕಾರರಾಗಿದ್ದಾರೆ. ಬಸವಣ್ಣನವರು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದರು. ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು ಎಂದರು. ಆಧ್ಯಾತ್ಮ ಪರಂಪರೆ ಹೊಂದಿರುವ ದೇಶದಲ್ಲಿ ದಿವ್ಯಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ನಾಗೇಂದ್ರ ಮಾತನಾಡಿ, 12ನೇ ಶತಮಾನದಲ್ಲಿನ…

Read More

ನಾಡಿನ ಸಮಸ್ತ ಜನತೆಗೆ ಪವಿತ್ರ ಸಂಕ್ರಾಂತಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಬೀದರ್ ಕ.ರಾ.ಆ.ನೀ.ಸಂಘ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೈಜನಾಥ ಚನ್ನಶೆಟ್ಟಿ ಶುಭ ಹಾರೈಸಿದ್ದಾರೆ. ಮಕರ ಸಂಕ್ರಾಂತಿ ಸೂರ್ಯನ ಬೆಂಕಿಯಲ್ಲಿ ನಿಮ್ಮ ಕಷ್ಟಗಳೆಲ್ಲ ಸುಟ್ಟು ಭಸ್ಮವಾಗಿ, ಸುಖ ಸಂಪತ್ತು ಸಂತೋಷದ ಬೆಳಕು ನಿಮ್ಮ ಮನೆಮನವನ್ನು ಬೆಳಗಲಿ , ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ಅವರು ಶುಭ ಹಾರೈಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಕಾರ್ಯ ನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘದ ರಾಜ್ಯಾಧ್ಯಕ್ಷರಾದ ಶಶಿಕಾಂತ ಕಾಂಬಳೆ ಅವರು ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ನೇಸರನು ತನ್ನ ಪಥವ ಬದಲಿಸುತಿರಲು, ಮಾಗಿಯ ಚಳಿ ಮಾಯವಾಗುತಿರಲು, ತನು ಮನದಲಿ ಹೊಸ ಚೈತನ್ಯ ಮೂಡಲಿ, ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡಲಿ. ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ ಎಂದು ಹಾರೈಸಿದ್ದಾರೆ. ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ. ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ ಎಂದು ಶುಭ ಹಾರೈಸಿದ್ದಾರೆ. ಕಬ್ಬಿನ ಸಿಹಿ ಎಳ್ಳು ಬೆಲ್ಲದ ರುಚಿ ಗೆಣಸು ಕಡಲೆಯ ಸಾರ ದಂತ ಸಮೃದ್ಧ ಜೀವನ ನಿಮ್ಮದಾಗಲಿ. ಇಡೀ ವರ್ಷ ನೀವು…

Read More

ಬೆಂಗಳೂರು: ಜೈ ಬಾಪು– ಜೈ ಭೀಮ್– ಜೈ ಸಂವಿಧಾನದ ಐತಿಹಾಸಿಕ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸೋಣ. ಜನವರಿ 21ರ ಬೆಳಗಾವಿಯ ಚಾರಿತ್ರಿಕ ಸಮಾವೇಶಕ್ಕೆ ಎಲ್ಲರೂ ಜೊತೆಯಾಗಿ ಮುನ್ನಡೆಯೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಜನವರಿ 21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮ ಮತ್ತು ಜೈ ಬಾಪು– ಜೈ ಭೀಮ್ — ಜೈ ಸಂವಿಧಾನ ಅಭಿಯಾನದ ಬೃಹತ್ ಸಮಾವೇಶದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನದ ಬಗ್ಗೆ ಗೌರವ ಇರುವ ಎಲ್ಲರಿಗೂ ಸಮಾವೇಶಕ್ಕೆ ಸ್ವಾಗತ. ಆರ್ ಎಸ್ ಎಸ್‌ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ದೇಶಕ್ಕೆ ದ್ರೋಹ ಬಗೆದ ಚರಿತ್ರೆಯನ್ನು ಹೊಂದಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಹೋರಾಟ, ತ್ಯಾಗ, ಬಲಿದಾನಗಳಿಂದ ಕಟ್ಟಿದ್ದಾಗಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತಮ್ಮ ಪಾಲಿಗೆ ಒದಗಿ ಬಂದಿದ್ದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್…

Read More

ಜೋಧ್ಪುರ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ರಾಜಸ್ಥಾನ ಹೈಕೋರ್ಟ್ ಮಂಗಳವಾರ ಮಾರ್ಚ್ 31ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 2013ರ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಮತ್ತು ಚಿಕಿತ್ಸೆಯ ಅಗತ್ಯವನ್ನು ಗಮನಿಸಿದ ಸುಪ್ರೀಂ ಕೋರ್ಟ್ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಮಾರ್ಚ್ 31ರವರೆಗೆ ಅಸಾರಾಂ ಅವರಿಗೆ ಜನವರಿ 7ರಂದು ಮಧ್ಯಂತರ ಜಾಮೀನು ನೀಡಿತ್ತು. ಅದಾದ ವಾರದ ನಂತರ ಮತ್ತೊಮ್ಮೆ ಮಧ್ಯಂತರ ಜಾಮೀನು ಸಿಕ್ಕಿದೆ. ವೈದ್ಯಕೀಯ ಕಾರಣಗಳಿಗಾಗಿ ಸರ್ವೋಚ್ಚ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದ ಕೂಡಲೇ, ಅಸಾರಾಂ ಪರ ವಕೀಲರು ಹೈಕೋರ್ಟ್ನಲ್ಲಿ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದರು. ಅರ್ಜಿಯ ಸ್ವರೂಪವು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದಂತೆಯೇ ಇದೆ ಎಂದು ಪರಿಗಣಿಸಿದ ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ತಾ ಮತ್ತು ವಿನೀತ್ ಕುಮಾರ್ ಮಾಥುರ್ ಅವರಿದ್ದ ವಿಭಾಗೀಯ ಪೀಠವು, ಆಸಾರಾಂಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…

Read More

ಬೀದರ್: ಜಿಲ್ಲೆಯ ಔರಾದ ತಾಲೂಕಿನ ಏಕಲಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ನೇಮಕ ಮಾಡಲಾಗಿದೆ. ಏಕಲಾರ ಗ್ರಾಮದ ಬಾಬುರಾವ್ ತಂದೆ ಮಾಧುರಾವ್ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಕೊಳ್ಳುರ ಗ್ರಾಮದ ಪ್ರಕಾಶ್ ತಂದೆ ಶರಣಪ್ಪ ದೆಗಲವಾಡೆ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನೂತನ ನಿರ್ದೇಶಕರುಗಳಾದ ಚಂದ್ರಕಾಂತ್, ಪ್ರಕಾಶ್ ಶಿವರಾಜ್, ಸುಭಾಷ್, ಶರಣಪ್ಪ, ದೇವಿದಾಸ್, ಎಂ.ಡಿ.ಮುಲ್ತಾನಿ, ನಾಗಭೂಷಣ್, ಸುಲೋಚನಾ, ಮಂಗಳಾದೇವಿ, ಮುಖಂಡರಾದ ಶಿವಶಂಕರ ಮಣಿಗೆಪೂರೆ, ಸುಧಾಕರ ಕೊಳ್ಳುರ, ಸೂರ್ಯಕಾಂತ್ ಮಗ್ಗೆ, ಕಾಶಿನಾಥ ದಾಬಡೆ, ಗಣಪತಿ ರಾವ್, ಮುಂತಾದವರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More