ವಿಜಯನಗರ: ರಾಜ್ಯಾದ್ಯಂತ ಮಕರ ಸಂಕ್ರಾಂತಿ ಹಬ್ಬ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದಕ್ಷಣಿ ಕಾಶಿ ಹಂಪಿಯಲ್ಲಿ ಭಕ್ತ ಸಮೂಹವೇ ನೆರೆದು ಹಂಪಿಯ ತುಂಗಭದ್ರಾ ನದಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು.
ಪುಣ್ಯ ಸ್ನಾನದ ಬಳಿಕ, ಭಕ್ತರು ಶ್ರೀ ವಿರೂಪಾಕ್ಷ- ಪಂಪಾಂಬಿಕೆಯ ದರ್ಶನ ಪಡೆದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು.
ಕುಟುಂಬ ಸಮೇತ ಆಗಮಿಸಿ, ಹಂಪಿಯಲ್ಲಿ ವಾಸ್ತವ್ಯಹೂಡಿ ಬೆಳಗಿನ ಜಾವ ಪುಣ್ಯ ಸ್ನಾನ ಮಾಡಿದ ಭಕ್ತರು, ಶ್ರೀ ವಿರೂಪಾಕ್ಷನ ದರ್ಶನ ಪಡೆದರು. ಶ್ರೀ ವಿರೂಪಾಕ್ಷನ ದರ್ಶನ ಪಡೆದು ಬಳಿಕ ನಾನಾ ಸ್ಮಾರಕಗಳ ವೀಕ್ಷಣೆಗೆ ಜನರು ತೆರಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx